ಡಾ. ಜಿ. ಎಸ್. ಶಿವರುದ್ರಪ್ಪ ಪ್ರತಿಷ್ಠಾನ, ಮತ್ತು ಮುಂಬಯಿನಲ್ಲಿ ಅವರ ಸಾಹಿತ್ಯ ಕುರಿತು ಆಯೋಜಿಸಿದ ವಿಚಾರ ಸಂಕಿರಣ !
ಡಾ. ಜಿ. ಎಸ್. ಶಿವರುದ್ರಪ್ಪ ಪ್ರತಿಷ್ಠಾನ !
ನನ್ನ ಒಂದು ಬ್ಲಾಗ್ ನಲ್ಲಿ ಎಲ್ಲಾ ಚಿತ್ರಗಳನ್ನೂ ಸೇರಿಸಿದ್ದೇನೆ :
ಹೆಚ್ಚಿನ ವಿವರಗಳಿಗೆ ನನ್ನ ಬ್ಲಾಗಿನ ಕೊಂಡಿ :
https://itislikethissite.wordpress.com/2020/02/17/%e0%b2%b0%e0%b2%be%e0%b2%b7%e0%b3%8d%e0%b2%9f%e0%b3%8d%e0%b2%b0%e0%b2%95%e0%b2%b5%e0%b2%bf-%e0%b2%a1%e0%b2%be-%e0%b2%9c%e0%b2%bf-%e0%b2%8e%e0%b2%b8%e0%b3%8d-%e0%b2%8e%e0%b2%b8%e0%b3%8d-%e0%b2%aa/
ಬೆಂಗಳೂರಿನ ಡಾ. ಜಿ. ಎಸ್. ಶಿವರುದ್ರಪ್ಪ ಪ್ರತಿಷ್ಠಾನ, ಮುಂಬಯಿನ ಮೈಸೂರು ಅಸೋಸಿಯೇಷನ್ ನಲ್ಲಿ ಅವರ ಸಾಹಿತ್ಯ ಕುರಿತು ಆಯೋಜಿಸಿದ ವಿಚಾರ ಸಂಕಿರಣ :
೧೮, ಬುಧವಾರ, ಫೆಬ್ರವರಿ, ೨೦೨೦.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮುಂಬಯಿನಗರದ ವಿಜ್ಞಾನಿ, ಮತ್ತು ಹಿರಿಯ ಸಾಹಿತಿ, ಡಾ. ವ್ಯಾಸರಾವ್ ನಿಂಜೂರ್ ನೆರವೇರಿಸಿದರು. ಡಾ. ಜಿ. ಎಸ್ ಎಸ್ ರವರ ಜೊತೆ ಭೇಟಿಮಾಡಿದ ಸಂದರ್ಭಗಳು ಕಡಿಮೆ. ಆದರೂ ಒಂದು ಸಂದರ್ಭ ಇನ್ನೂ ತಮಗೆ ನೆನೆಪಿರುವುದಾಗಿ ಹೇಳಿದರು. ಸರಳ ಸಜ್ಜನಿಕೆಯ ಡಾ. ಜಿ.ಎಸೆಸ್ ರವರನ್ನು ತಮ್ಮ 'ಗೋಕುಲ ವಾಣಿ' ಪತ್ರಿಕೆಗೆ ಲೇಖನ ಬರೆದುಕೊಡಿ, ಎಂದು ಬಿನ್ನವಿಸಿಕೊಂಡಾಗ ನಯವಾಗಿಯೇ ಇಲ್ಲವೆಂದು ಹೇಳಿದ ವಿಚಾರ ನೆನೆಯುತ್ತಾ ನಂತರ ಅವರನ್ನು ಒತ್ತಾಯಿಸಿ ಬರೆಸಿಕೊಂಡ ವಿಷಯವನ್ನು ಪ್ರಸ್ತಾಪಿಸಿದರು.
ಮೈಸೂರು ಅಸೋಸಿಯೇಷನ್ ನ ಅಧ್ಯಕ್ಷೆ ಶ್ರೀಮತಿ ಕಮಲಾ ಕಾಂತರಾಜು, ಡಾ. ಜಿ. ಎಸ್ ಎಸ್ ಅವರ ಭಾವಗೀತೆಗಳು ತಮಗೆ ಆಪ್ತವೆಂದು ತಿಳಿಸಿದರು. ಆಳವಾದ ಸಾಹಿತ್ಯ ಜ್ಞಾನ ವಿಲ್ಲದವರೂ ಆ ಗೀತೆಗಳ ಸವಿಯನ್ನು ಅನುಭವಿಸಲು ಸಾಧ್ಯವೆಂದು ಹೇಳಿದರು.
ಪ್ರತಿಷ್ಠಾನದ ಅಧ್ಯಕ್ಷ ಡಾ. ಸಿದ್ಧರಾಮಯ್ಯ :
ಡಾ. ಸಿದ್ಧರಾಮಯ್ಯನವರು ವ್ಯಾಪಕವಾದ ಲೋಕಜ್ಞಾನವನ್ನು ಲೋಕದೃಷ್ಟಿಯನ್ನು ಒಳಗೆ ತಂದುಕೊಂಡಂತೆ ಈ ನೆಲವನ್ನು ತೀವ್ರವಾಗಿ ಪ್ರೀತಿಸುವ ಹಾಗು ಕಟ್ಟುವಂತಹ ಪ್ರಜ್ಞೆ ಅವರ ಕಾವ್ಯಗಳಲ್ಲಿ ಎದ್ದು ಕಾಣುತ್ತದೆ ಎಂದರು. ಕುವೆಂಪು ಅವರ ಕಾವ್ಯಗಳನ್ನು ಅವಲೋಕಿಸಿದರೆ, ಒಂದು ಚಿಕ್ಕ ಭಾವಗೀತೆಯಿಂದ ಹಿಡಿದು ಮಹಾಕಾವ್ಯದವರೆಗೆ ಅದರ ವಿಸ್ತರಣೆಗಳನ್ನು ನಾವು ಕಾಣುತ್ತಾ ಹೋಗುತ್ತೇವೆ. ಕುವೆಂಪು ಶಿಷ್ಯರಾದ ಡಾ. ಶಿವರುದ್ರಪ್ಪನವರು ಇದಕ್ಕೆ ಹೊರತಲ್ಲ. ಉಡುಗಣ ವೇಷ್ಟಿತ ಚಂದ್ರ ಸುಶೋಭಿತ ಎನ್ನುವ ಹೊತ್ತಿನೊಳಗಿನ ಆಕಾಶಗಾಮಿಯಾಗಿ ತೋರಿದರೂ ಈ ಮಣ್ಣ ಕಣ-ಕಣಗಳಲ್ಲಿ ಆ ಹೊರಳುತ್ತಿರುವ ಸಹಚಾರಿಗಳನ್ನು ಮರೆಯಲು ಸಾಧ್ಯವಿಲ್ಲ ಈ ಸಮೃದ್ಧದ ಒಳಗೆ ಬದುಕನ್ನು ಕಂಡವರು. ಅವರು ಕೊಡುವ ಪ್ರತಿಮೆಗಳನ್ನು ನೋಡಿದಾಗ ವ್ಯಕ್ತ. ಮಧ್ಯದೊಳಗೆ ಮರದ ಪ್ರತಿಮೆಯನ್ನು ಕೊಡುತ್ತಾ ಹೋಗುತ್ತಾರೆ. "ಬೀಜದಲ್ಲಿ ಮರವು ಮಲಗಿರುವ ಹಾಗೆ " ಬೇರು, ಚಿಗುರು, ಕಾಂಡ, ಹೂವು ಹಣ್ಣು ಸಮಕೃತಿಯೊಳಗೆ ಮರವನ್ನು ಹೇಗೆ ಪರಿಭಾವಿಸಲು ಸಾಧ್ಯವೋ ಹಾಗೆಯೇ ಬದುಕೂ ಸಹಿತ. ಮುಂದೆ ಬದುಕನ್ನು ಸವಿಯಬೇಕಾದರೆ, ಮರಕುಟಕ ಹಕ್ಕಿಯಂತೆ ಬದುಕನ್ನು ಮುರಿಯುವುದಲ್ಲ ಮರದಲ್ಲಿರುವ ಹಣ್ಣನ್ನು ತಿಂದು ಸವಿಯಬೇಕು ಇಂತಹ ಪ್ರಜ್ಞಾ ಭಾವವನ್ನು ನಾವು ಬದುಕಿನಲ್ಲಿ ಮತ್ತು ನಾವು ಜೀವಿಸುತ್ತಿರುವ ಈ ಭೂಮಿಯಲ್ಲಿ ಕಾಣಬೇಕು. ಮನುಷ್ಯ ಕೇಂದ್ರಿತ ದೃಷ್ಟಿಯ ಜೊತೆಗೆ ನಿಸರ್ಗ ಧರ್ಮವನ್ನೂ ಅವರ ಕಾವ್ಯಗಳಲ್ಲಿ ಕಾಣಬಹುದು.
ಜಿ. ಎಸ್. ಎಸ್, ತಮ್ಮನ್ನು ಯಾವುದೇ ಧರ್ಮ ಪಂಥಗಳ ಪರಿಧಿಯಲ್ಲಿ ಸೀಮಿತಗೊಳಿಸಿಕೊಳ್ಳದೆ ತಮ್ಮ ಎಲ್ಲಾ ವಿಶ್ಲೇಷಣೆಗಳನ್ನು ಜೀವಕೇಂದ್ರಿತ ದೃಷ್ಟಿಯ ಬೆಳಕಿನಲ್ಲಿ ಕಾಣುತ್ತಾರೆ. ತಮ್ಮ ವಿಮರ್ಶೆ ಕೇವಲ ತಾತ್ವಿಕ ನೆಲೆಯಲ್ಲಿರದೆ, ಪ್ರಸ್ತುತ ಸನ್ನಿವೇಶದಲ್ಲಿರುವ ಸವಾಲುಗಳು, ಸಂಕಷ್ಟಗಳು ಮತ್ತೆಲ್ಲವನ್ನು ಮುಖಾಮುಖಿಯಾಗಿ ತಮ್ಮ ಸಾಹಿತ್ಯದಲ್ಲೂ ಕನ್ನಡ ಪರಂಪರೆಯ ದಾರಿಯನ್ನು ಗುರುತಿಸುತ್ತಾ ಹೋಗುತ್ತಾರೆ.
ಡಾ. ರಘುನಾಥ್ :
ಮುಂಬಯಿನಗರದ ಕವಿ, ಡಾ ರಘುನಾಥ್ ತಮ್ಮ ಸುದೀರ್ಘವಾದ ಪ್ರಬಂಧದಲ್ಲಿ ಕನ್ನಡ ಸಾಹಿತ್ಯದ ಪ್ರಮುಖ ನೆಲೆ ಪ್ರೇರಣೆಗಳನ್ನು ವಿಶ್ಲೇಷಿಸುತ್ತಾ ಜಿ. ಎಸ್ ಎಸ್ ರವರ ಕನ್ನಡ ಸಾಹಿತ್ಯ ಸಮೀಕ್ಷೆ ವಿಸ್ತಾರವಾದ ಒಳನೋಟಗಳನ್ನು ದರ್ಶಾಯಿಸುತ್ತದೆ ಎಂದರು. ಡಾ. ಜಿ. ಎಸ್ ಎಸ್ ರವರ ಸೃಜನಶೀಲಾ ಸಾಹಿತ್ಯಕ್ಕೆ ಹೇಗೆ ಮಹತ್ವದ ಸ್ಥಾನವಿದೆಯೋ ಅದೇ ರೀತಿ ಅವರ ಸೃಜನೇತರ ಕೃತಿಗಳಿಗೂ ಮಹತ್ವವಿದೆ ಎಂದರು.
ಡಾ. ಕವಿತಾ ರೈ :
ಜಿ. ಎಸ್ ಎಸ್ ರವರ ಸಾಹಿತ್ಯ ವಿಚಾರವಂತಿಕೆಯ ಸಾಹಿತ್ಯವೆಂದು ಅಭಿಪ್ರಾಯಪಟ್ಟರು ಸಾಮಾನ್ಯವಾಗಿ ಕವಿತೆಗಳು ಪ್ರಕೃತಿಯ ಬೆಡಗಿನಿಂದ ಆರಂಭವಾದರೂ ನಂತರ ಸಮಾಜಮುಖಿಯಾಗಿ ಕೊನೆಯಲ್ಲಿ ದರ್ಶನವನ್ನು ಸಾರುತ್ತವೆ. ಅವೆಲ್ಲಾ ಅದ್ಭುತ ಮತ್ತು ವಿಸ್ಮಯವನ್ನು ಮೂಡಿಸುವಲ್ಲಿ ಕೆಲಸಮಾಡುತ್ತವೆ.
ಡಾ. ಕೆ. ವೈ ನಾರಾಯಣ ಸ್ವಾಮಿ :
ಜಿ. ಎಸ್ ಎಸ್ ರವರ
೨ ಮುಖ್ಯವಾದ ಆಯಾಮಗಳನ್ನು ಗುರುತಿಸುತ್ತಾರೆ.
೧. ಅವರ ಕಾವ್ಯದೊಳಗಿನ ಜೀವ ಸಮೃದ್ಧವಾದ ಪ್ರಕೃತಿ
೨. ಮನುಷ್ಯ ಕೇಂದ್ರಿತ ವಾದ ಸಮಾಜ.
ಈ ಮುಖ್ಯವಾದ ಧಾರೆಗಳನ್ನು ಹೇಗೆ ಜಿ. ಎಸ್ ಎಸ್ ರವರ ಸಾಹಿತ್ಯ, ಜೀವ ಸಮೃದ್ಧ ಕೃತಿಯ ಜೊತೆ ಕರಗುತ್ತಾ, ಕರಗಿಸುತ್ತಾ ಸಾಗುತ್ತದೆ ಮತ್ತು ಅವರ ಸಾಹಿತ್ಯದಲ್ಲಿ ವ್ಯಕ್ತವಾಗುವ ಮಾನವ ಕೇಂದ್ರಿತ ಸಮಾಜದ ಬಗ್ಗೆ ವ್ಯವಸ್ಥೆಗಳ ಬಗ್ಗೆ ಪರಸ್ಪರ ಸಂಬಂಧಗಳ ನಡುವೆ ಎದ್ದು ನಿಲ್ಲುವ ಗೋಡೆಗಳ ಬಗ್ಗೆ ಗಮನಹರಿಸಿದರು ಹಾಗೆ ಮುಂದೆ ಸಾಗಿ, ಅವರು ಜಿ.ಎಸ್ ಎಸ್ ರನ್ನು ಅವರೊಬ್ಬ ಕಣ್ಣೀರಿನ ಕವಿಯೆಂದು ಬಣ್ಣಿಸಿದರು. ಮನುಷ್ಯ ಕೇಂದ್ರಿತ ಕಾವ್ಯದಲ್ಲಿ ಮಾತು ಕತ್ತರಿಸಿ ಹೋಗಿರುವ ಒಂದು ಸ್ಥಿತಿಯನ್ನು ಜಿ.ಎಸ್ ಎಸ್ ತಮ್ಮ ಕಾವ್ಯಗಳಲ್ಲಿ ಅನುಭವಿಸುತ್ತಿದ್ದರು ಎಂದು ನುಡಿದರು.
ಈ ಗೋಷ್ಠಿಯ ಅಧ್ಯಕ್ಷತೆ :
ಡಾ. ಎಸ್ ಆರ್. ವಿಜಯಶಂಕರ್
ಜಿ. ಎಸ್ ಎಸ್ ರವರ ವಿಶೇಷತೆಯನ್ನು ಗುರುತಿಸುತ್ತಾ ಸಮಕಾಲೀನ ತತ್ವ,ಹಾಗು ಹೊಸ ಅನ್ವಯಿಕ ನೆಲೆಗಳು ಅವುಗಳಲ್ಲಿ ಭಾವಪಜ್ಞೆಯ ಜೊತೆಗೆ ವಿಚಾರ ಪ್ರಜ್ನೆಗೂ ವಿಶೇಷ ಮಹತ್ವವಿದೆ.
ಡಾ. ತಾರಿಣಿ ಶುಭದಾಯಿನಿ :
ಜಿ. ಎಸ್ ಎಸ್ ರವರ ಕಾವ್ಯ ಚಿಂತನೆ ಮತ್ತು ವಿಮರ್ಶೆಯನ್ನು ಜೊತೆಜೊತೆಯಾಗಿ ಸಮನ್ವಯಿಸಿದರು . ಅವರು ಕನ್ನಡ ಮೀಮಾಂಸೆಯ ಚೌಕಟ್ಟನ್ನು ರಚಿಸಲು ಬೇಕಾದ ಮೂಲಭೂತ ಮೂಲ ಅಂಶಗಳನ್ನು ತಮ್ಮ ಕೃತಿಗಳಲ್ಲಿ ತಂದರು. ಕಾವ್ಯದ ರಚನೆಯನ್ನು ಪ್ರಶ್ನಿಸುತ್ತಾ ಅದಕ್ಕೆ ಉತ್ತರವನ್ನು ತಾವೇ ಒದಗಿಸುತ್ತಾ ಕಾವ್ಯವನ್ನು ವಿಶ್ಲೇಸುತ್ತಾ ಹೋಗುವುದನ್ನು ನೋಡಬಹುದು ಎಂದು ಹೇಳಿದರು
ಬಿ ಎಂ ಪುಟ್ಟಯ್ಯ :
ಜಿ. ಎಸ್ ಎಸ್ ಅವರ ವಿಮರ್ಶೆಯನ್ನು ಬೌದ್ಧಿಕ ಚಟುವಟಿಕೆಯಾಗಿ ಕಂಡರು. ಜಿ. ಎಸ್ ಎಸ್ ಅವರು, ಪರಂಪರೆ ಮತ್ತು ಆಧುನಿಕತೆಗೆ ಸಮಾನ ಪ್ರಾಮುಖ್ಯತೆಯನ್ನು ಕೊಟ್ಟಿದ್ದಾರೆ. ಅವರ ವಿಮರ್ಶೆಯನ್ನು ಅಖಂಡತೆ, ಸಮಗ್ರತೆ, ಪ್ರಾಮಾಣಿಕತೆ, ಹಾಗು ನಿರ್ದಾಕ್ಷಿಣ್ಯತೆಗಳ ನೆಲೆಗಳಲ್ಲಿ ವಿಂಗಡಿಸಿ ಅಧ್ಯಯನ ನಡೆಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಗೋಷ್ಠಿಯ ಅಧ್ಯಕ್ಷತೆ : ಡಾ. ಚಂದ್ರಶೇಖರ ತಾಳ್ಯ :
ಕನ್ನಡ ಅಧ್ಯಯನಕ್ಕೆ ಒಂದು ಹೊಸ ಆಯಾಮ ನೀಡಿದ್ದಾರೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಲನಶೀಲತೆಯನ್ನು ಮೈಗೂಡಿಸಿಕೊಂಡಿದ್ದ ಶಿವರುದ್ರಪ್ಪನವರು ಚಳುವಳಿಗಗಳ ಬಗ್ಗೆ ತಮ್ಮ ಸಹಾನುಭೂತಿಯನ್ನು ಬರವಣಿಗೆಗಳ ಮೂಲಕ ವ್ಯಕ್ತಪಡಿಸಿದ್ದಾರೆ ಎಂದು ನುಡಿದರು.
ಗೋಷ್ಠಿಯ ಅಧ್ಯಕ್ಷತೆ : ಡಾ. ಚಂದ್ರಶೇಖರ ತಾಳ್ಯ :
ಕನ್ನಡ ಅಧ್ಯಯನಕ್ಕೆ ಒಂದು ಹೊಸ ಆಯಾಮ ನೀಡಿದ್ದಾರೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಲನಶೀಲತೆಯನ್ನು ಮೈಗೂಡಿಸಿಕೊಂಡಿದ್ದ ಶಿವರುದ್ರಪ್ಪನವರು ಚಳುವಳಿಗಗಳ ಬಗ್ಗೆ ತಮ್ಮ ಸಹಾನುಭೂತಿಯನ್ನು ಬರವಣಿಗೆಗಳ ಮೂಲಕ ವ್ಯಕ್ತಪಡಿಸಿದ್ದಾರೆ ಎಂದು ನುಡಿದರು.
ಸಮಾರೋಪ ಭಾಷಣ :
ಅಧ್ಯಕ್ಷರು : ಶ್ರೀ. ಕೆ. ಮಂಜುನಾಥಯ್ಯನವರು
ಡಾ. ಕೆ. ಮರುಳುಸಿದ್ದಪ್ಪನವರು ಜಿ. ಎಸ್ ಎಸ್ ಅವರನ್ನು ನವೋದಯ ಕವಿಎಂದೇ ಪ್ರಮುಖವಾಗಿ ಗುರುತಿಸಲಾಗುತ್ತಿದೆ. ತಮ್ಮನ್ನು ಯಾವ ಪಂಥಗಳ ಗೋಜಿಗೆ ಕಟ್ಟಿಹಾಕಿಕೊಳ್ಳಲಿಲ್ಲ ಎಂದು ಹೇಳಿದರೂ, ವಾಸ್ತವವಾಗಿ ಅವರು ನವೋದಯ ಕವಿ. ತಮಗೆ ಅವರ ಜೊತೆ ಬಹಳ ವರ್ಷಗಳ ಕಾಲ ಶಿಷ್ಯರಾಗುವ ಭಾಗ್ಯ ಒದಗಿತ್ತು. (ಡಾ. ಜಿ. ಎಸ್ ಎಸ್ ರವರ ಅಳಿಯ) ತಾತ್ವಿಕವಾಗಿ ಕನ್ನಡ ಕಾವ್ಯ ಪರಂಪರೆಯನ್ನು ವ್ಯಾಖ್ಯಾನಿಸುವ ಶಿವರುದ್ರಪ್ಪನವರ ಪ್ರಯತ್ನ ನಿಜಕ್ಕೂ ಅದ್ಭುತವಾದದ್ದು ಕನ್ನಡ ಕಾವ್ಯಕ್ಕೆ ಒಂದು ಹೊಸ ಆಯಾಮವನ್ನು ಕಲ್ಪಿಸಿಕೊಡುವಲ್ಲಿ ಅವರು ಯಶಸ್ವಿಯಾದರು. ಎಂದು ಅವರು ಅಭಿಪ್ರಾಯಪಡುತ್ತಾರೆ.
ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಂಜುನಾಥಯ್ಯನವರು ಮಾತನಾಡುತ್ತಾ ಕನ್ನಡದ ಎಲ್ಲಾ ಹಿರಿಯ ಸಾಹಿತಿಗಳು ಮೈಸೂರು ಅಸೋಸಿಯೇಷನ್ ಗೆ ಆಗಮಿಸಿ ತಮ್ಮ ವಿಚಾರಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಅದೇ ತರಹ ಡಾ. ಜಿ. ಎಸ್ ಎಸ್ ಸಹಿತ ಹಿಂದೆ ಭೇಟಿನೀಡಿದನ್ನು ಸ್ಮರಿಸಿಕೊಂಡರು
ಕಾವ್ಯ ಗಾಯನ ಕಾರ್ಯಕ್ರಮ :
ಪ್ರೊ. ಜಿ. ಎಸ್ ಎಸ್ ಅವರು ರಚಿಸಿದ ಕಾವ್ಯಗಳ ಗಾಯನವನ್ನು
೧. ವಿದುಷಿ, ಶ್ಯಾಮಲಾ ರಾಧೇಶ್,
೨. ವಿದುಷಿ ಡಾ. ಶ್ಯಾಮಲಾ ಪ್ರಕಾಶ್,
೩. ವಿದುಷಿ ಜ್ಯೋತಿ ಭಟ್,
೪. ವಿದುಷಿ ವೀಣಾ ಶಾಸ್ತ್ರಿ ನಡೆಸಿಕೊಟ್ಟರು.
ಮೈಸೂರು ಅಸೋಸಿಯೇಷನ್ ನ ಕಾರ್ಯದರ್ಶಿಗಳಾದ ಶ್ರೀ. ನಾರಾಯಣ ನವಿಲೇಕರ್ ಅತಿಧಿಗಳನ್ನು ಸ್ವಾಗತಿಸಿ ಗೌರವಿಸಿದರು.
ಮೇಲಿನ ಕಾರ್ಯಕ್ರಮಗಳನ್ನು
೧.ಶ್ರೀಮತಿ ನಳಿನಾ ಪ್ರಸಾದ್
೨. ಡಾ ಜ್ಯೋತಿ ಸತೀಶ್ ನಿರ್ವಹಿಸಿದರು.
ದೀಪ ಪ್ರಜ್ವಲನದ ಬಳಿಕ, ಮುಂಬಯಿನ ವಿಜ್ಞಾನಿ, ಕವಿ, ಮತ್ತು ಚಿಂತಕ, ಡಾ. ವ್ಯಾಸರಾವ್ ನಿಂಜೂರ್ ಅವರು ತಮ್ಮ ಅಧ್ಯಕ್ಷೀಯ ಭಾಷಣವನ್ನು ಮಂಡಿಸುತ್ತಾ, ಅವರ ಮತ್ತು ಡಾ. ಜಿ.ಎಸೆಸ್ ರವರ ಸಂಬಂಧಗಳ ಬಗ್ಗೆ ವಿವರಿಸಿದರು.
ಡಾ. ರಘುನಾಥ್ ರವರು ತಮ್ಮ ಗುರುಗಳಾಗಿದ್ದ ಡಾ. ಜಿ. ಎಸ್ ಎಸ್ ರವರ ಸಾಹಿತ್ಯಿಕ ಕೊಡುಗೆಗಳನ್ನು ಕುರಿತು ದೀರ್ಘವಾದ ಉಪನ್ಯಾಸ ಕೊಟ್ಟರು.ಶ್ರೀಮತಿ. ವಿದುಷಿ ವೀಣಾ ಶಾಸ್ತ್ರಿಯವರು ಸುಗಮ ಸಂಗೀತವನ್ನು ಹಾಡಿದರು. Link of Dr. GSS song, by Vidushi, Veena shastry : https://youtu.be/to1QXIZygFo?si=SdpB1yC85EPBxQ1j
Comments