Shri. Purundaradasa's 456th year is being celebrated by Mumbai kannada sangha !

ದಾಸಶ್ರೇಷ್ಠ  ಶ್ರೀ. ಪುರುಂದರ ದಾಸರ ೪೫೬ ನೆಯ ಆರಾಧನಾ ಮಹೋತ್ಸವ 

At.
The Mysore Association, Matunga, Mumbai-19
ತಳಮಹಡಿಯಲ್ಲಿರುವ " ಗಣೇಶ ದರ್ಬಾರ್ ಹಾಲಿನಲ್ಲಿ ಕಾರ್ಯಕ್ರಮಗಳೆಲ್ಲಾ ಜರುಗಿದವು.
೨೩,  ರವಿವಾರ,  ಫೆಬ್ರವರಿ, ೨೦೨೦ ರಂದು, 


ಶ್ರೀ. ಜಿ. ಎಸ್ ನಾಯಕರ ಅಧ್ಯಕ್ಷತೆಯಲ್ಲಿ ಜರುಗಿದ ಪುರುಂದರದಾಸರ ೪೫೬ ನೆಯ ಆರಾಧನಾ ಮಹೋತ್ಸವ.

ಮೊದಲು ಸಂಘದ ಪದಾಧಿಕಾರಿಗಳು ದೀಪ ಪ್ರಜ್ವಲನೆ ಮಾಡುವ ಮೂಲಕ ಮಹೋತ್ಸವಕ್ಕೆ ಅಧಿಕೃತ ಚಾಲನೆ ನೀಡಿದರು.ಗಾಯನ ಸ್ಪರ್ಧೆಯಲ್ಲಿ ಮುಂಬಯಿ ಮಹಾನಗರದ ಬಹುಭಾಷಾ ಪ್ರತಿಭೆಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು ವಿದ್ವಾನ್ ಟಿ. ಏನ್. ಅಶೋಕ್ ಅವರು ಸ್ಪರ್ಧೆಯ ತೀರ್ಪುಗಾರರಾಗಿ ಕಾರ್ಯಕ್ರಮ ನಡೆಸಿಕೊಟ್ಟರುಮುಖ್ಯ ಅತಿಥಿಗಳು :ಡಾ. ಸುರೇಂದ್ರಕುಮಾರ್ ಹೆಗ್ಡೆ. ರಂಗ ಕಲಾವಿದರು, ಹಾಗೂ ಸಮಾಜ ಸೇವಕರು.(ಅಧ್ಯಕ್ಷರು, ಮಹಾರಾಷ್ಟ್ರ ಕನ್ನಡ ಕಲಾವಿದರ  ಪರಿಷತ್ತು, ಮುಂಬಯಿ) ತಮ್ಮ ಭಾಷಣದಲ್ಲಿ ಕನ್ನಡ ಸಂಘದ ಸೇವಾ ವೈಖರಿಯನ್ನು ಶ್ಲಾಘಿಸಿದರು.  ಕಾರ್ಯಕ್ರಮದ ಪ್ರಯೋಜಕರನ್ನು ಗೌರವಿಸಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪಾರಿತೋಷಕಗಳನ್ನು ಪ್ರದಾನಮಾಡಿದರು ಕನ್ನಡ ಸಂಘದ ಉಪಾಧ್ಯಕ್ಷ, ಡಾ. ಎಸ್ ಕೆ. ಭವಾನಿಯವರು ಎಲ್ಲರನ್ನೂ ಸ್ವಾಗತಿಸಿದರು ಕುಮಾರಿ. ಎಂ. ಆರ್. ಚಿತ್ರರಥ್ ಎಂ. ಆರ್. ಎಸ್ ಹರ್ಷ ಪ್ರಾರ್ಥನಾ ಗೀತೆಯನ್ನು ಹಾಡಿದರು. ಪ್ರಾಸ್ತಾವಿಕ ಭಾಷಣ ಮಾಡಿದ ಅಧ್ಯಕ್ಷರು, ಸಂಘಕ್ಕೆ ಅದರದೇ ಆದ ಒಂದು ಕಟ್ಟಡದ ಆವಶ್ಯಕತೆ ಇದೆ ಆ ಕನಸನ್ನು ನನಸುಮಾಡಲು ಎಲ್ಲಾ ಕನ್ನಡಿಗರ ಸಹಕಾರವನ್ನು ಕೋರಿದರು ಸಂಘದ ಗೌ. ಕಾರ್ಯದರ್ಶಿ ಸತೀಶ್ ಏನ್. ಬಂಗೇರ ಎಲ್ಲರನ್ನೂ ಆಹ್ವಾನಿಸಿದರು. ರಾಜೇಂದ್ರ ಗಡಿಯಾರ್ ಬಹುಮಾನ ವಿಜೇತರ ಪಟ್ಟಿಯನ್ನು ಪ್ರಕಟಿಸಿದರು. ಶ್ರೀಮತಿ ನರ್ಮದಾ ಕಿಣಿ ಅವರು ಶೈಕ್ಷಣಿಕ ರಂಗದ ಸಾಧಕರ ಹೆಸರುಗಳನ್ನು ಓದಿದರು. ಜೆ. ಎಸ್ ಬಿ ಸಂಘ ಮುಂಬಯಿನ ಮುಖ್ಯಸ್ಥೆ . ಸುಧಾ ಪೈ, ಶಾಂತೇರಿ ನಾಗೇಶ್ ನಾಯಕ್,  ಮಲ್ಲಿಕಾರ್ಜುನ ಬಡಿಗೇರ (ಶಿಕ್ಷಕ) ಶ್ಯಾಮಲಾ ಮಾಧವ್, ಮೈಸೂರು ಅಸೋಸಿಯೇಷನ್  ನ ವಿದುಷಿ, ಶ್ರೀಮತಿ ಶ್ಯಾಮಲಾ ರಾಧೇಶ್, ಅನಿತಾ ಪೂಜಾರಿ ತಾಕೊಡೆ, ಡಾ., ರಜನಿ ಪೈ, ಎಸ್ ಕೆ. ಪದ್ಮನಾಭ, ನಾರಾಯಣ ಎ ಆರ್. ರಾವ್, ವಿಠಲ ಆಚಾರ್ಯ, ಸಂಧ್ಯಾ ಪ್ರಭು ಮೊದಲಾದವರು ಸಭೆಯಲ್ಲಿ ಹಾಜರಿದ್ದರು.  

ಸಂಘದ  ಜಂಟೀ ಗೌ.  ಕಾರ್ಯದರ್ಶಿ, ಸೋಮನಾಥ್ ಎಸ್ ಕರ್ಕೇರ  ಕಾರ್ಯಕ್ರಮವನ್ನು ನಿರೂಪಿಸಿದರು. ಗೌ.  ಕೋಶಾಧಿಕಾರಿ ಸುಧಾಕರ್ ಸಿ. ಪೂಜಾರಿ, ವಂದನಾರ್ಪಣೆ ಮಾಡಿದರು  ಮಹಾಮಂಗಳಾರತಿ, ಪ್ರಸಾದ ವಿತರಣೆಯೊಂದಿಗೆ ಈ ವರ್ಷದ  (೨೦೨೦ ರ) ಪುರುಂದರ ದಾಸರ ಆರಾಧನೋತ್ಸವ ಸಂಪನ್ನಗೊಂಡಿತು 




ನವಿ ಮುಂಬಯಿನ ಶ್ರೀಮತಿ ಆಶಾ ಕುಲಕರ್ಣಿ ಹಾಗೂ ಬಳಗದವರಿಂದ ದಾಸವರೇಣ್ಯ ಪುರುಂದರ ದಾಸರ ಭಕ್ತಿ ಕೀರ್ತನೆಗಳನ್ನು (ಸಾಮೂಹಿಕ ಭಜನಾ ಕಾರ್ಯಕ್ರಮ) ಆಯೋಜಿಸಲಾಗಿತ್ತು.  














Comments

Popular posts from this blog

ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ' !

99th Foundation day of Mysore association Mumbai-2024 !

ಬಿ. ಎಂ. ಶ್ರೀ. ಪ್ರತಿಷ್ಠಾನ, ಎಂ. ವಿ. ಸೀ. ಸ್ನಾತಕೋತ್ತರ ಸಂಶೋಧನಾ ಕೇಂದ್ರ. ನರಸಿಂಹರಾಜ ಕಾಲೋನಿ, ಬೆಂಗಳೂರು .