Posts

Showing posts from January, 2013

ಸನ್ ೨೦೧೩ ರ ಜನವರಿ ೧೯-೨೦ ರಂದು ಮುಂಬೈವಿಶ್ವವಿದ್ಯಾಲಯದ ಕನ್ನಡ ವಿಭಾಗ, ಹಾಗೂ 'ಮೈಸೂರ್ ಅಸೋಸಿಯೇಷನ್ ಮುಂಬೈ ಸಂಸ್ಥೆಗಳ ಜಂಟಿ ಸಹಭಾಗಿತ್ವ' ದಲ್ಲಿ ಆಯೋಜಿಸಲಾಗಿದ್ದ, 'ಮೈಸೂರ್ ಅಸೋಸಿಯೇಷನ್ ಬಂಗಾರದ ಹಬ್ಬದ ದತ್ತಿ ಉಪನ್ಯಾಸ ಮಾಲಿಕೆ' !

Image
                        ದತ್ತಿ ಉಪನ್ಯಾಸಮಾಲಿಕೆಯ ಪ್ರಮುಖ ಉಪನ್ಯಾಸಕರಾಗಿ ಡಾ. ಎಚ್. ಎಸ್. ವಿ ಯವರು ಹಾಜರಿದ್ದರು.                             ಮೊದಲನೆಯ ದಿನ ಎಂದರೆ, ೧೯, ಜನವರಿ, ೨೦೧೩ ರಂದು,   12 ಗಂಟೆಗೆ                                                                                                               ಡಾ. ಎಚ್. ಎಸ್. ವೆಂಕಟೇಶ ಮೂರ್ತಿಯವ ರು,                  'ಮೈಸೂರು ಅಸೋಸಿಯೇಶನ್ ಬಂಗಾರದ ಹಬ್ಬದ ದತ್ತಿ ಉಪನ್ಯಾಸ' ಮಾಲಿಕೆಯಲ್ಲಿ  :                                                   ' ನಾನು ಮತ್ತು ನನ್ನ ಸಮಕಾಲೀನರು'            ಎಂಬ    ವಿಷಯವಾಗಿ ಭಾಷಣಮಾಡಿದರು. ಮೊದಲು ಸಂಸ್ಥೆಯ ಪ್ರಮುಖ ಸಂಘಟಕರಲ್ಲೊಬ್ಬರಾದ  ಡಾ. ಬಿ.  ಆರ್. ಮಂಜುನಾಥ್ ರವರು, ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರ   'ಕ್ಷಣ ಕ್ಷಣಕ್ಕೂ ನಮ್ಮ  ಹಮ್ಮನರೆಯುವ ಲೋಕತಂತ್ರಗಳೇ ನಮೋ ನಮೋ' ಎಂಬ ಅರ್ಥಪೂರ್ಣವಾದ  'ಪ್ರಾರ್ಥನಾ ಗೀತೆ' ಯನ್ನು ಹಾಡಿ,  ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕ್ಷಣ ಕ್ಷಣಕ್ಕೂ ನಮ್ಮ  ಹಮ್ಮನರೆಯುವ ಲೋಕತಂತ್ರಗಳೇ ನಮೋ ನಮೋ ಎನ್ನಲ್ಪತೆಯನು  ತೋರುತ ಮೆರೆಯುವ  ಬೆಳೆವ ತೇಜಗಳೇ  ನಮೋ ನಮೋ   ಬೆಳಕಿನ ಬೆಲೆಯನ್ನೆತ್ತಿ  ತೋರುವೊಲು  ಕವಿವ  ಕತ್ತಲೆಗೆ  ನಮೋ ನಮೋ  ಶೋಕ  ತಾಪ ಭಯ ತಲ್ಲಣದಲ್ಲಿಯೂ  ಗೆಲ್ಲುವ ಸಹ