Posts

Showing posts from 2021

ಮೈಸೂರ್ ಅಸೋಸಿಯೇಷನ್ ಮುಂಬಯಿ, ಹಾಗೂ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ, ಜಂಟಿಯಾಗಿ ಆಯೋಜಿಸಿದ 'ಸಾಹಿತ್ಯ ಸಂಭ್ರಮ ಕಾರ್ಯಕ್ರಮ' !

Image
'ಕರ್ನಾಟಕ ಮಲ್ಲ ದಿನಪತ್ರಿಕೆ'ಯ ೨೧, ಡಿಸೆಂಬರ್ ೨೦೨೧ ರ ಪ್ರತಿಯ ಕೊಂಡಿಯನ್ನು ತಟ್ಟಿ  :                      http://www.karnatakamalla.com/imageview_26063_1353839_4_137_21-12-2021_9_i_1_sf.html https://www.karnatakamalla.com/ 'ವ್ಯಾಪಕವಾದ ಓದು ಬರವಣಿಗೆಗೆ ಪೂರಕ '~ ಡಾ. ರಮಾ ಉಡುಪ.   ಮೈಸೂರ್ ಅಸೋಸಿಯೇಷನ್ ಮುಂಬಯಿ, ಹಾಗೂ  ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ, ಜಂಟಿಯಾಗಿ ಆಯೋಜಿಸಿದ  'ಸಾಹಿತ್ಯ ಸಂಭ್ರಮ ಕಾರ್ಯಕ್ರಮ', ಡಿಸೆಂಬರ್ ೨೦೨೧ ರಂದು, 'ಮೈಸೂರ್ ಅಸೋಸಿಯೇಷನ್ ನ ಕಿರು ಸಭಾಗೃಹ'ದಲ್ಲಿ ಜರುಗಿತು. ಮೊದಲು ಯಕ್ಷಗಾನ ಭಾಗವತಿಕೆಯನ್ನು ಪ್ರಭಾಕರ ದೇವಾಡಿಗ ನಡೆಸಿಕೊಟ್ಟರು. ನಂತರ ಕುಮಾರವ್ಯಾಸನ ಕಥಾಮಂಜರಿಯ ಆಯ್ದ ಭಾಗಗಳನ್ನು ಶೈಲಜಾ ಹೆಗಡೆಯವರು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದರು.  ತಾವು ರಚಿಸಿದ ೨ ಕವಿತೆಗಳನ್ನುಅನಿತಾ ಪಿ. ತಾಕೊಡೆ  ವಾಚಿಸಿದರು. ಅವುಗಳು ಹೀಗಿವೆ : ೧. " ಕವಿಸಮಯದಲ್ಲಿ ಅಡುಗೆಮನೆಯೂ ಬದಲಾಗಿದೆ"  ೨.  "ಸುಮ್ಮನೆ ನಗುತ್ತೇನೆ" .   ವಿದ್ಯಾರ್ಥಿಗಳು ನಡೆಸಿಕೊಟ್ಟ ಈ ವಿಶಿಷ್ಠ ಸಾಹಿತ್ಯ ಸಮ್ಮೇಳನದಲ್ಲಿ , ಕೆ. ಕಮಲಾ, ಮಧುಸೂಧನ್, ದಾಕ್ಷಾಯಣಿ ಎಡೆಹಳ್ಳಿ, ನಿತ್ಯಾನಂದ ಕೋಟ್ಯಾನ್, ಡಾ. ಈಶ್ವರ್ ಅಲೆವೂರ್, ರಂಗ ಎಸ್. ಪೂಜಾರಿ, ಮೋಹನ್ ಮಾರ್ನಾಡ, ವಿವೇಕ್ ಶಾನ್ ಭಾಗ್, ಡಾ. ಭರತ್ ಕುಮಾರ್ ಪೊಲಿಪು, ಮನೋಹರ್

Smt. Satyabhama nidwannayya-A real star is being remembered !

Image
'Vaikunthasamaradhane', was held at Adamar mutt, S. V. Road, Andheri west, (near fire brigade) Mumbai-400 058 on 1st, Dec, 2021.                   Smt. Satyabhama Nidwannaya-A real star ! - Dr. G. V. Kulkarni ವರ್ಷ ೨೦೦೦ ದ  ಮಾರ್ಚ್ ತಿಂಗಳಿನಲ್ಲಿ  'ಪ್ರಿಯಾಂಕಾ ಪತ್ರಿಕೆ'ಯಲ್ಲಿ ಪ್ರಕಟವಾದ ಶ್ರೀನಿವಾಸ ಜೋಕಟ್ಟೆಯವರ ಲೇಖನ : "ಮುಂಬಯಿ  ಕನ್ನಡ ರಂಗಭೂಮಿಯ ಆದರ್ಶ ದಂಪತಿಗಳು" : ಮುಂಬಯಿ ಕ ರ್ನಾಟಕ ಸಂಘ (ಮಹೀಮ್) ದ ಡಾ. ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ೨೦, ಅಕ್ಟೊಬರ್ ೨೦೦೭ ರಂದು ಮಧ್ಯಾನ್ಹ ೩ ಗಂಟೆಯಿಂದ ರಾತ್ರಿ ೯  ಗಂಟೆಯವರೆಗೆ  ಹಲವಾರು  ಅವಿಸ್ಮರಣೀಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.    

'ಬುದ್ಧ ಚರಣ' - ಡಾ. ಎಚ್. ಎಸ್. ವೆಂಕಟೇಶ ಮೂರ್ತಿ !

Image
'ಶ್ರೀಮತಿ. ರಾಜಲಕ್ಷ್ಮಿ ಮೂರ್ತಿ ಮತ್ತು ಎಚ್ಚೆಸ್ವಿ ಯವರ  ಆನಂದದ ಜೊತೆಫೋಟೋ'  ! (ಗೋಡೆಯ ಮೇಲೆ) ಡಾ . ಎಚ್. ಎಸ್. ವೆಂಕಟೇಶ ಮೂರ್ತಿಯವರು ತಮ್ಮ ಪ್ರೀತಿಯ ತಾಯಿ ನಾಗರತ್ನಮ್ಮನವರ ಜೊತೆ. ಅವರ ಆಪ್ತ ಗೆಳೆಯರು  ೧. ಜಿ. ಎಸ್. ಶಂಕರ ನಾರಾಯಣ, ೨. ಎಚ್. ಆರ್. ಎಲ್. ವೆಂಕಟೇಶ, ೩. ಕೆ. ಟಿ. ಶಂಕರನಾರಾಯಣ  ಅಂತಃಕರಣದ ಕವಿ ಡಾ. ಎಚ್. ಎಸ್. ವೆಂಕಟೇಶ ಮೂರ್ತಿ ಅವರ ಇಪ್ಪತ್ತು ವರ್ಷಗಳ ಅವಿರತ ತಪಸ್ಸಿನ ಫಲವಾಗಿ ಜನ್ಮತಾಳಿದ ಮಹಾಕಾವ್ಯ ಬುದ್ಧಚರಣ. ಬುದ್ಧನ ಕತೆಯನ್ನು ಕಾವ್ಯದಲ್ಲಿ ಕಟ್ಟಿಕೊಟ್ಟಿರುವ ಎಚ್ಚೆಸ್ವಿಯವರ ಈ ಪುಸ್ತಕ ಇಂದು ವರ್ಚುಯಲ್ ಸಮಾರಂಭದಲ್ಲಿ ಲೋಕಾರ್ಪಣೆ ಆಗುತ್ತಿದೆ. ಕನ್ನಡಿಗರಿಗೆ ಓದಿಗೆ ಸಿಕ್ಕಲಿದೆ.ಅಂಕಿತ ಪುಸ್ತಕ ಹೊರತಂದಿರುವ ಈ ಮಹಾಕಾವ್ಯದ ಹೊತ್ತಿಗೆಯನ್ನು ಬುಕ್ ಬ್ರಹ್ಮ ಫೇಸ್ ಬುಕ್ ಲೈವ್ ನಲ್ಲಿ ಹೆಸರಾಂತ ವಿಮರ್ಶಕ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಬಿಡುಗಡೆ ಮಾಡಲಿದ್ದಾರೆ. ಕವಿ ಎಚ್. ಎಸ್ ವೆಂಕಟೇಶ ಮೂರ್ತಿ ಮತ್ತು ಎಂ. ಆರ್. ದತ್ತಾತ್ರಿ ಅವರು ನಂತರ ನಡೆಯುವ ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಈ ಪುಸ್ತಕದ ಒಂದು ಭಾಗವನ್ನು  ಕನ್ನಡ ಪ್ರೆಸ್  ಓದುಗರಿಗೆ ಇಲ್ಲಿ ಸಾದರ ಪಡಿಸುತ್ತಿದ್ದೇವೆ. Courtesy :  ಅಂಕಿತ ಪುಸ್ತಕ ಹೊರತಂದಿರುವ ಈ ಮಹಾಕಾವ್ಯದ ಹೊತ್ತಿಗೆಯನ್ನು 'ಬುಕ್ ಬ್ರಹ್ಮ ಫೇಸ್ ಬುಕ್ ಲೈವ್' ನಲ್ಲಿ 'ಹೆಸರಾಂತ ವಿಮರ್ಶಕ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ' ಬಿಡುಗಡೆ. ೧ ಬು

ಕರ್ನಾಟಕ ಸಂಘದ ಮುಂಬಯಿ ಕಲಾಭಾರತಿ ; ಲಕ್ಷ್ಮಿ ಸುಧೀಂದ್ರ ೬ ನೆಯ ಪುಣ್ಯ ಸ್ಮೃತಿ ಪ್ರಯುಕ್ತ ಸಂಗೀತ ಕಾರ್ಯಕ್ರಮ

Image
ಮುಂಬಯಿಯ ಸುವರ್ಣ ಕರ್ನಾಟಕ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಘ ಮುಂಬಯಿಯ  ಕಲಾವೇದಿಕೆ, ಕಲಾಭಾರತಿ  ಹಾಗೂ ಭವಾನಿ ಮೀರ್ ಮೀರಾ ಪರಿವಾರದ ವತಿಯಿಂದ ಲಕ್ಷ್ಮಿ ಸುಧೀಂದ್ರರವರ  ೬ ನೆಯ ಪುಣ್ಯ ಸ್ಮೃತಿಯ  ಅಂಗವಾಗಿ ವರ್ಷ ೨೦೨೧ರ ಫೆಬ್ರವರಿ ೧೯ ರ ಬೆಳಿಗ್ಯೆ,  ೧೦-೩೦ ರಿಂದ ಮುಂಬಯಿನ ಪ್ರತಿಷ್ಠಿತ ಮೈಸೂರು ಅಸೋಸಿಯೇಷನ್ ನ ಸುಸಜ್ಜಿತ ಸಭಾಗೃಹದಲ್ಲಿ  ಅಂತಾರಾಷ್ಟ್ರೀಯ ಕಿರಾಣಾ ಘರಾಣದ ಸುಪ್ರಸಿದ್ಧ ಗಾಯಕ ಪಂ. ಜಯತೀರ್ಥ ಮೇವುಂಡಿ (ಕನ್ನಡಿಗರು) ಹಾಗೂ ತಂಡದವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಆಯೋಜಿಸಲ್ಪಟ್ಟಿತ್ತು.  ಪಕ್ಕವಾದ್ಯದಲ್ಲಿ ತಬಲಾ : ಮಂದಾರ್ ಪುರಾಣಿಕ, ಸಾರಂಗಿ : ಫಾರಿಕ್ ಲತೀಫ್ ಖಾನ್.  ಸಂವಾದಿನಿ : ಜ್ಞಾನೇಶ್ವರ್ ಸೋನಾವಣೆ, ಜಯಂತ್ ನಾಯ್ಡು, ಹಾಗೂ ತಾನ್ಪುರದಲ್ಲಿ ಪ್ರಕಾಶ್ ನಾಯಿಕ್ ಜೊತೆಯಲ್ಲಿದ್ದರು. ಕಾರ್ಯಕ್ರಮದ ಆಯೋಜಕರಾಗಿದ್ದ ಡಾ ಭವಾನಿಯವರು  ಮೊದಲು ಆಹ್ವಾನಿತರಾಗಿ ಆಗಮಿಸಿದ ಸಂಗೀತಕಾರ ಡಾ. ಮೇವುಂಡಿಯವರ ಅನೇಕ  ಕಲಾಭಿಮಾನಿಗಳನ್ನೂ ಕಲಾಕಾರರನ್ನೂ ಮತ್ತು  ದಿವಂಗತ ಶ್ರೀಮತಿ ಲಕ್ಷ್ಮಿ ಸುಧೀಂದ್ರರವರ ಹಳೆಯ  ವಿದ್ಯಾರ್ಥಿಗಳನ್ನೂ ಸ್ವಾಗತಿಸಿದರು.  ಸಂಗೀತಕಾರ ಡಾ. ಮೇವುಂಡಿಯವರ ಅನೇಕ  ಕಲಾಭಿಮಾನಿಗಳನ್ನು ಕಲಾಕಾರರನ್ನು ವಿಶೇಷ ಅತಿಥಿಗಳಿಂದ ಸತ್ಕರಿಸಿ ವಂದಿಸಿದರು.  ಡಾ. ಭವಾನಿಯವರು ಕಲಾವಿದ ಪಂ. ಜಯತೀರ್ಥ ಮೇವುಂಡಿಯವರನ್ನು ಮತ್ತು ಸಹ ಕಲಾವಿದರನ್ನೂ ಸಭೆಗೆ ಪರಿಚಯಿಸುತ್ತಿದ್ದಾರೆ.