Pages

Saturday, April 4, 2015

ಡಾ. ಟಿ. ಎಸ್. ಸತ್ಯವತಿಯವರ ಅಮೋಘ ಕರ್ನಾಟಕ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು !

ಕನ್ನಡ ಸಾಹಿತ್ಯ ಪರಿಷತ್ ಮಹಾರಾಷ್ಟ್ರ ಘಟಕದ ಅಧ್ಯಕ್ಷ ರಾದ ಶ್ರಿ. ಎಚ್. ಬಿ. ಎಲ್. ರಾವ್ ಮೈಸೂರು ಅಸೋಸಿಯೇಶನ್ ಸಭಾಂಗಣದಲ್ಲಿ  ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.  ಅದರಲ್ಲಿ ದಿನದ ಕೊನೆಯ ಕಾರ್ಯಕ್ರಮ, ಕರ್ನಾಟಕ ಸಂಗೀತ.  ಡಾ. ಟಿ.ಎಸ್. ಸತ್ಯವತಿ ಮತ್ತು ಸಂಗಡಿಗರಿಂದ  ಎಪ್ರಿಲ್, ೩, ೨೦೧೫ ಶುಕ್ರವಾರದಂದು !
ಸ್ವಲ್ಪ ತಡವಾಗಿ ಕಾರ್ಯಕ್ರಮ ಶುರುವಾದರೂ  ಡಾ ಸತ್ಯವತಿಯವರು ೪ ಕಿರ್ತನೆಗಳನ್ನು ಸುಶ್ರಾವ್ಯವಾಗಿ ಹಾಡಿ, ಸಂಗೀತ ರಸಿಕರ ಮನಸ್ಸನ್ನು ರಂಜಿಸಿದರು !
ಡಾ ಸತ್ಯವತಿಯವರು ಹಾಡಿದ ಕೀರ್ತನೆಗಳು :
೧. ರಾಮನೀ ಪೈತನಕು ಪ್ರೇಮ ಎಂಬ ತ್ಯಾಗರಾಜರ ಕೃತಿಯಿಂದ ಪ್ರಾರಂಭಿಸಿದರು
೨ .ಶ್ರಿ. ಪುರುಂದರದಾಸರ ಕೃತಿ- ನೀನೆ ದಯಾಳು ನಿರ್ಮಳಚಿತ್ತ ಗೋವಿಂದ, ಮಿಶ್ರ ಛಾಪ ತಾಳ,
೩. ಶ್ರಿ. ಮುತ್ತುಸ್ವಾಮಿ ದೀಕ್ಷಿತರ ಕೃತಿ- ಆನಂದಾಮೃತ ಕರ್ಷಿನಿ, ಅಮೃತ ವರ್ಷಿಣಿ
೪. ಶ್ರೀ.  ನಾರಾಯಣ ತೀರ್ಥರ ರಚನೆ-ಶರಣಂಭವ ಕರಣ ಹರಿ ಕುರುದೀನ ದಯಾಳೋ
ಸಾಹಿತ್ಯ 'ಶರಣಂ ಭವ ಕರುಣಾಂ ಮಯಿ ಕುರು' - ನಾರಾಯಣತೀರ್ಥರುಶರಣಮುಪಗತೋಽಹಂ ತ್ವಾಂ ಶರಣ್ಯಂ ಜನಾನಾಂ
ನಿಖಿಲಭಯವಿಯೋಗಂ ಯೋಗಿಚಿಂತ್ಯಂ ಮಹಾಂತಂ |
ಸುರರಿಪುಗಣಭಾರಂ ದುಃಸಹಂ ದುರ್ಭರಂ ಮೇ
ಪರಿಹರ ಪರಮಾತ್ಮನ್ ಭಕ್ತಿ ಸಿಧ್ಯೈಕಮೂರ್ತೇ ||

ರಾಗ: Saurashtram
ತಾಳ: ಆದಿ

1. ಶರಣಂ ಭವ ಕರುಣಾಂ ಮಯಿ ಕುರು ದೀನದಯಾಲೋ
      ಕರುಣಾರಸ-ವರುಣಾಲಯ ಕರಿರಾಜಕೃಪಾಲೋ |
     ಅಧುನಾ ಖಲು ವಿಧಿನಾ ಮಯಿ ಸುಧಿಯಾಸುರ ಭರಿತಂ
     ಮಧುಸೂದನ ಮಧುಸೂದನ ಹರ ಮಾಮಕ ದುರಿತಂ ||

2. ವರನೂಪುರಧರ ಸುಂದರ ಕರಶೋಭಿತವಲಯ
      ಸುರಭೂಸುರಭಯವಾರಕ ಧರಣೀಧರ ಕೃಪಯಾ |
      ತ್ವರಯಾ ಹರ ಪರಮೇಶ್ವರ ಸುರವರ್ಯ ಮದೀಯಂ
     ಮಧುಸೂದನ ಮಧುಸೂದನ ಹರ ಮಾಮಕ ದುರಿತಂ ||

3. ಘೃಣಿಮಂಡಲ ಮಣಿಕುಂಡಲ ಫಣಿಮಂಡಲ-ಶಯನ
       ಅಣಿಮಾದಿ ಸುಗುಣಭೂಷಣ ಮಣಿಮಂಡಪ-ಸದನ |
      ವಿನತಾಸುತ-ಘನವಾಹನ ಮುನಿಮಾನಸ-ಭವನ
     ಮಧುಸೂದನ ಮಧುಸೂದನ ಹರ ಮಾಮಕ ದುರಿತಂ ||

4. ಅತಿಭೀಕರ ಹಲಿಸೋದರ ಪರಿಪೂರ್ಣಸುಖಾಬ್ಧೇ
       ನರಕಾಂತಕ ನರಪಾಲಕ ಪರಿಪಾಲಿತ ಜಲಧೇ |
      ಹರಿಸೇವಕ ಶಿವ ನಾರಾಯಣತೀರ್ಥ ಪರಾತ್ಮನ್
      ಮಧುಸೂದನ ಮಧುಸೂದನ ಹರ ಮಾಮಕ ದುರಿತಂ || 

https://youtu.be/iLrwWI7Z3kA ಶರಣಂ ಭಾವ ಡಾ ಬಾಲಮುರುಲಿ ಕೃಷ್ಣ

೫. ಮಂಗಳ
1. ರಾಮನೀ ಪೈತನಕು ಪ್ರೇಮ ಎಂಬ ತ್ಯಾಗರಾಜರ ಕೃತಿ

ಪಲ್ಲವಿ : 
ರಾಮ ನೀಪೈ ತನಕು ಪ್ರೇಮ ಪೋದು  ಸೀತಾ
ಅನುಪಲ್ಲವಿ :
ತಮರಸ ನಯನಾ ನೀಡೆಮೋ ಮಾಯಾಕಾನಿ  (ರಾಮಾ )
Show Details O Lotus Eyed! No matter howsoever be your illusion, my love towards you shall never wane.

Charanams Combined :

ಮನಸು ನೀ ಪಾದಮುಲುನೆ  ಜೇರಾ
ಕನಲು  ನೀ  ರುಪಮುನೇ  ಕೋರಾ
ವಿನು ನೀ ಪೆರುಲಕೆ  ನೋರುರಾ
 ತನಪೈ ಇದಿ ನೀ ಕರುಣಾರಾ  (ರಾಮಾ)

ಜನಾನಿ ಜನಕಾಪ್ತುಲನ್ಯಲು
ಧನ ಕನಕ ಗುರು ವೆಪುಲು
ದಿನಮು ನಿವೇಯನು ಮಾತಲು
ಅನಘಾನಿವಿ ನಾ ಭುಸನಮುಲು  (ರಾಮಾ)

ಭೊಗಾನು ಭಾವಮುಲಂದು
ಬಾಗುಗ ಬುದ್ಧಿ  ನಿಯಂದು
ತ್ಯಾಗರಾಜುನಿ  ಹೃದಯ ಮಂದು
ವಾಗಿಶಾನಂದ ಮನಂದು  (ರಾಮಾ)

2. ಆನಂದಾಮೃತವರ್ಶಿನಿ : 

ರಚನಕಾರ   – ಶ್ರೀ ಮುತ್ತು ಸ್ವಾಮಿ ಭಾಗವತರು  

ರಾಗ  – ಅಮೃತ ವರ್ಷಿಣಿ  

ಪಲ್ಲವಿ : 

ಅನಂದಾಮೃತ ವರ್ಷಿಣಿ  ಅಮೃತವರ್ಷಿಣಿ  
ಹರಾದಿ ಪುಜಿತೇ ಶಿವೆ ಭವಾನಿ 

Oh Bhavani, the consort of Shiva, who captivates the nectar like bliss, showers the nectar like rain, 
worshipped by Shiva and other Gods.

ಚರಣ :
ಶ್ರಿ. ನಂದನಾದಿ  ಸಂರಕ್ಷಿಣಿ
ಶ್ರಿ. ಗುರುಗುಹಾ ಜನನಿ ಚಿತ್ರುಪಿಣಿ 
ಸಾನಂದ ಹೃದಯೆ ನಿಲಯೇ ಸದಯೇ 
ಸದ್ಯ ಸುವ್ರುಷ್ಟಿ ಹೇತವೇ ತ್ವಂ 
ಸಂತತಂ ಚಿಂತಯೇ ಅಮ್ರುತೆಶ್ವರಿ 
ಸಲಿಲಂ ವರ್ಶಯ ವರ್ಶಯ ವರ್ಶಯ 
Link :

Read more:  http://amrithavarshini.proboards.com/thread/558/ananda-amrutaakarshini#ixzz3WMWC0vzu

Link :

http://sangeetasagaram.blogspot.in/2013/03/sharanam-bhava-karunamayi-flute-recital.html

ರಾಗ : Anandabhairavi
ತಾಳ : Mishrachapu
ರಚನಾಕಾರ : Purandaradasa
ಭಾಷೆ  : Kannada
-------------------------------------------------------------------------------
ನೀನೆ ದಯಾಳು ನಿರ್ಮಲ ಚಿತ್ತ ಗೋವಿಂದ-ಪುರಂದರದಾಸರ ಕೀರ್ತನೆ 
ನೀನೆ ದಯಾಳು ನಿರ್ಮಲ ಚಿತ್ತ ಗೋವಿಂದ   
ನಿಗಮ ಗೋಚರ ಮುಕುಂದ
ಜ್ಞಾನಿಗಳರಸ  ನೀನಲ್ಲದೆ  ಜಗಕಿನ್ನು
ಮಾನದಿಂದಲಿ  ಕಾಯ್ವ ದೊರೆಗಳ ನಾಕಾಣೆ

ದಾನವಾಂತಕ  ದೀನ ಜನ ಮಂದಾರನೆ ಧ್ಯಾನಿಪರ ಮನ ಸಂಚಾರನೆ
ಮೌನನಾದೆನು ನಿನ್ನ ಧ್ಯಾನದಿಂದೀಗ ಸಾನುರಾಗದಿ ಕಾಯೋ ಸನಕಾದಿ ವಂದ್ಯನೆ
ಬಗೆಯಲಿ ನಿನ್ನ  ಸ್ತುತಿಪೆನೊ  ನಗಧರ ಖಗಪತಿ ವಾಹನನೆ
ಮಗುವಿನ ಮಾತೆಂದು ನಗುತ ಕೇಳಿ ನೀನು ಬೇಗದಿಂದಲಿ ಕಾಯೋ ಸಾಗರ ಶಯನನೆ
ಮಂದರಧರ ಅರವಿಂದ ಲೋಚನ ನಿನ್ನ ಕಂದ ನಂದೆಣಿಸೋ ಎನ್ನ
ಸಂದೇಹವೇಕಿನ್ನು  ಸ್ವಾಮಿ ಮುಕುಂದನೆ ಬಂದೆನ್ನ ಕಾಯೋ ಶ್ರಿ. ಪುರಂದರ ವಿಠಲ

Link : http://sangitasopana.blogspot.in/2013/07/nine-dayalo.html
           https://youtu.be/StKH91QFN8w nine dayalu

ಈ ಕಾರ್ಯಕ್ರಮದ ಮೊದಲು, ಒಂದು ಕವಿಗೋಷ್ಠಿಯನ್ನು ಆಯೋಜಿಸಲಾಗಿತ್ತು. ಅದರಲ್ಲಿ ಭಾಗವಹಿಸಿದವರು, 
೧. ಶ್ರೀನಿವಾಸ ಜೋಕಟ್ಟೆ,
೨. ಡಾ. ಭರತ್ ಕುಮಾರ್ ಪೊಲಿಪು
೩ . ಮಹಿಳೆ ಉಪನ್ಯಾಸಕಿ (ಹೆಸರು ಮರೆತಿದ್ದೆನೆ. ಕ್ಷಮಿಸಿ)
ಈ ಕವಿಗೋಷ್ಠಿಯನ್ನು ನಡೆಸಿಕೊಟ್ಟವರು, ಡಾ. ವ್ಯಾಸರಾವ್ ನಿಂಜುರ್

                                              ಕವಿಗೊಷ್ಟಿಯ ಉದ್ಘೋಷಕ, ಶ್ರಿ. ಮಧುಸುಧನ್
ಶ್ರೀನಿವಾಸ ಜೋಕಟ್ಟೆಯವರು ಬಂಡಾಯ ಸಾಹಿತ್ಯ ನಡೆದುಬಂದ ರೀತಿ, ಇಂದಿನ ಸ್ಥಿತಿ ಗತಿಗಳ ಬಗ್ಗೆ ಸಮೀಕ್ಷೆ ಮಾಡಿದರು
                     ಡಾ ಭರತ್ ಕುಮಾರ್ ಪೊಲಿಪುರವರನ್ನು ಶ್ರಿ. ಎಚ್. ಬಿ. ಎಲ್. ರಾಯರು ಗೌರವಿಸುತ್ತಿದ್ದಾರೆ.
ಕೊನೆಯ ಲೇಖಕಿ, ಅತ್ಯಂತ ಸೊಗಸಾಗಿ ತಮ್ಮ ವಿಷಯವನ್ನು ಮಂಡಿಸಿದರು. ಅವರಿಗೆ ಹೂಗುಚ್ಛವನ್ನು ನೀಡಿ ಗೌರವಿಸಲಾಯಿತು 

ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯಂ, ಡಾ.ಕೆ.ಎಸ್.ನ. ರ, ಪ್ರೇಮ ಗೀತೆಗಳಲ್ಲದೆ ಮತ್ತಿತರ ಮಹತ್ವದ ಕೃತಿಗಳ ಬಗ್ಗೆ ಉಪನ್ಯಾಸ ಮಾಡಿದರು: ಸ್ಥಳ : ಮೈಸೂರು ಅಸೋಸಿಯೇಷನ್ ಸಭಾಂಗಣ, ಮುಂಬಯಿ ನಗರ...

ಮೈಸೂರು ಅಸೋಸಿಯೇಶನ್ ನಿದುಷಿ, ಶ್ರೀಮತಿ. ಶ್ಯಾಮಲಾ ರಾಧೇಶ್,  ಸ್ವಾಗತ  ಗೀತೆಯನ್ನು ಹಾಡುತ್ತಿದ್ದಾರೆ 
ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯಂರವರು, ಶ್ರಿಧರ್ ರವರ  ಇ-ಪುಸ್ತಕವನ್ನು ಮತ್ತು  ಶ್ರಿ. ಎಮ್. ಎ. ನಾರಾಯಣ ಪ್ರಸಾದ್ ರಚಿಸಿದ, 'ಸುಮ ಸಂಚಯ'  ಪುಸ್ತಕವನ್ನು ಬಿಡುಗಡೆ ಮಾಡಿದರು. ಶ್ರೀಧರ್ ಮತ್ತು ಡಾ. ಗಣೇಶ್ ಉಪಾಧ್ಯರಲ್ಲದೆ,   ಮೈಸೂರು  ಅಸೋಸಿಯೇಶನ್  ಅಧ್ಯಕ್ಷೆ, ಶ್ರೀಮತಿ ಕಮಲಾ, ಹಾಗೂ  ಶ್ರೀಮತಿ ಭಾರತಿ ಪ್ರಸಾದ್ ವೇದಿಕೆಯ ಮೆಲಿದ್ದಾರೆ.  
                                                                     ಆಹ್ವಾನಿತ ಸಭಿಕರು..
ಡಾ. ನರಹಳ್ಳಿ ದಂಪತಿಗಳು ಗೌರವಿಸಲ್ಪಟ್ಟರು 
                                                     ಶ್ರೀ ಮತ್ತು ಶ್ರೀಮತಿ ಪ್ರಸಾದ್ ಗೌರವಿಸಲ್ಪಟ್ಟರು

                       ಡಾ. ನರಹಳ್ಳಿ, ಶ್ರೀಮತಿ ನರಹಳ್ಳಿದಂಪತಿಗಳ ಜೊತೆಯಲ್ಲಿ ಮೈಸೂರ್  ಅಸೋಸಿಯೇಶನ್ ಸದಸ್ಯರು.
  ಶ್ರೀಮತಿ.  ಭಾರತಿ ಪ್ರಸಾದ್,  ಮತ್ತು ಶ್ರೀಮತಿ ಶ್ಯಾಮಲಾ ರಾಧೇಶ್, ಒಟ್ಟಾಗಿ  ದೇವರ  ಕೀರ್ತನೆಯನ್ನು  ಹಾಡುತ್ತಿದ್ದಾರೆ.
 ಕುಮಾರಿ. ರವಿ, ಹಾಡಿದ ದೇವರ ಕೀರ್ತನೆ ಶ್ರದ್ಧಾಳುಗಳ ಮನಸ್ಸಿನಲ್ಲಿ ಭಕ್ತಿಯ ಭಾವನೆಯನ್ನು ಮತ್ತಷ್ತು  ಜಾಗೃತಗೊಳಿಸಿತು. 
  ಎಪ್ರಿಲ್, ೨೮, ೨೦೧೫ ರಂದು,  ರಾಮನವಮಿಯ ಹಬ್ಬದ ದಿನವಾದ್ದರಿಂದ ಗಣಪತಿ ದೇವರ ಮುಂದೆ ಇರಿಸಲಾಗಿದ್ದ     ಶ್ರೀರಾಮ ಫೋಟೋದ ಮುಂದೆ  ಅಸೋಸಿಯೇಶನ್ ಸದಸ್ಯರು ಕುಳಿತು ಶ್ರೀರಾಮ ಭಜನೆ ಮಾಡಿದರು.
                  ಪಾನಕ, ಕೋಸುಂಬರಿ, ದಿನದ ವಿಶೇಷವಾಗಿತ್ತು. ನಂತರ ಎಲ್ಲರಿಗೂ  ಊಟದ ವ್ಯವಸ್ಥೆಯಿತ್ತು.Sunday, August 4, 2013

NAYE, Award winning Kashmiri Theatre Play, enacted at The Mysore Association hall, Mumbai !

Gandhi Global Family, New Delhi,  presented the above drama, on 4th, August, 2013, at 6-30 pm. in the Association hall, in front of August gathering. It was directed by 'Dr. Aziz Hajini, Wahab Dramatic Club, Srinagar' (J&K)

Link : 
https://plus.google.com/photos/117225798684059542608/albums/5908486820502135905ಮುಂಬೈ ನಗರದ ವೈದ್ಯೆಸಮಾಜಸೇವಕಿಮಹಾರಾಷ್ಟ್ರ ಸರಕಾರದ  ಮಾಜಿ ಸಮಾಜ ಕಲ್ಯಾಣ ಸಚಿವೆದಿವಂಗತಡಾ . ಲಲಿತಾ ರಾವ್ ರವರಿಗೆ ಶ್ರದ್ಧಾಂಜಲಿ.
(13-03-1920-28-07-2013)

ಮುಂಬೈ ನಗರದ ಹಿರಿಯ ವೈದ್ಯೆಸಾಮಾಜಿಕ ಕಾರ್ಯಕರ್ತೆಮಹಾನ್ ಸಂಘಟಕಿಸಾರ್ವಜನಿಕ ಸೇವೆಯನ್ನು ತನುಮನ ಧನಗಳಿಂದ ತಮ್ಮ ಜೀವನದ ಧ್ಯೇಯವೆಂದು ಪರಿಗಣಿಸಿ  ಜೀವನದ ಬಹುಮುಲ್ಯ ಸಮಯವನ್ನು ಅದಕ್ಕಾಗಿಯೇ ಮುಡಿಪಾಗಿಟ್ಟ ದಿಟ್ಟ ಮಹಿಳೆ.

ದಕ್ಷಿಣ ಕನ್ನಡದ ಮಂಗಳೂರಿನ ಹತ್ತಿರದ 'ಇನ್ನ' ಎಂಬ ಚಿಕ್ಕ ಗ್ರಾಮದಿಂದತಮ್ಮ 17 ವಯಸ್ಸಿನ ಚಿಕ್ಕ ಪ್ರಾಯದಲ್ಲೇ ಮುಂಬೈಗೆಪಾದಾರ್ಪಣೆಮಾಡಿದ ಲಲಿತಾರಾವ್ಅವರ  ತಂದೆಯವರ ಹೆಸರುಆಯುರ್ವೇದಾಚಾರ್ಯಶ್ರೀ.ಎಂ.ವಿ.ಶಾಸ್ತ್ರಿಯವರುಲೀತಾರವರು  ಮದುವೆಯಾದದ್ದು ಉದ್ಯಮಿಶ್ರೀ. ಪಿ. ವೆಂಕಟರಾವ್ರವರನ್ನು ದಂಪತಿಗಳಿಗೆ ಡಾಅನಿಲ್ ಎಂಬ ಒಬ್ಬ ಮಗನಿದ್ದಾನೆ. (ಅನಿಲ್ ಅಮೇರಿಕೆಯಲ್ಲಿ ವಾಸ್ತವ್ಯ ಹೂಡಿದ್ದಾರೆ.)

93 ರ್ಷದ ಪ್ರಾಯದ  ಡಾ . ಲಲಿತಾ ರಾವ್ 2013  ಜುಲೈ ತಿಂಗಳ 28   ಬೆಳಿಗ್ಯೆ, 11 ಗಂಟೆಗೆ ಮುಂಬೈನ ಸಯಾನ್ ಆಸ್ಪತ್ರೆಯಲ್ಲಿ ನಿಧನರಾದರುಸುಮಾರು ವರ್ಷಗಳಿಂದ ಲಲಿತಾರವರು ವೃದ್ಧಾಪ್ಯಹಾಗೂ ದೈಹಿಕ ತೊಂದರೆಯಿಂದ ನರಳುತ್ತಿದ್ದರು.

ಮುಂಬೈನ ಜನರು ಅವರ ಮರಣದಿಂದ ತೀವ್ರವಾಗಿ ನೊಂದಿದ್ದಾರೆಒಬ್ಬ ತಾಯಿಯನ್ನು ಕಳೆದುಕೊಂಡ ಮನಸ್ಥಿತಿಯಲ್ಲಿ ಇದ್ದಾರೆಅವರು ಕಟ್ಟಿ ಬೆಳೆಸಿದ ಸಂಸ್ಥೆಗಳು ಮತ್ತು ಅವರೊಂದಿಗೆ ಸಹಕರಿಸಿದ ಸಂಸ್ಥೆಗಳು ಇಂದು ಒಬ್ಬ ಆಪ್ತರನ್ನು ಕಳೆದುಕೊಂಡ ದುಖಃವನ್ನು ಅನುಭವಿಸುತ್ತಿದ್ದಾರೆಡಾಲಲಿತಾ ರಾವ್ ಆತ್ಮಕ್ಕೆ ಶಾಂತಿ ಕೋರುವ,

-ಮುಂಬೈ ನಗರದ ಎಲ್ಲ ನಾಗರಿಕರುಮತ್ತು  ಪ್ರಮುಖವಾಗಿಕನ್ನಡ, ಹಾಗೂ ಕನ್ನಡ-ತುಳು ಬಾಂಧವರು.

ಅವರ ಕಿರು-ಪರಿಚಯ ಕೆಳಗೆ ಕೊಟ್ಟಿರುವ ವಿಕಿಪೀಡಿಯ ಲೇಖನದಲ್ಲಿದೆ. (ಉದಯವಾಣಿ ಪತ್ರಿಕೆ ಮತ್ತು ದೈಜಿ ವರ್ಲ್ಡ್.ಕಾಂ - ಪತ್ರಿಕೆಗಳಿಂದ)

http://kn.wikipedia.org/wiki/%E0%B2%A1%E0%B2%BE._%E0%B2%B2%E0%B2%B2%E0%B2%BF%E0%B2%A4%E0%B2%BE%E0%B2%B0%E0%B2%BE%E0%B2%B5%E0%B3%8D

Sunday, May 26, 2013

ಮೈಸೂರ್ ಅಸೋಸಿಯೇನ್ ಮುಂಬೈ ಹಾಗೂ ಕರ್ನಾಟಕ ಜಾನಪದ ಅಕ್ಯಾಡೆಮಿ ಬೆಂಗಳೂರು, ಅರ್ಪಿಸುವ ಕಾರ್ಯಕ್ರಮ !

ಮೈಸೂರ್ ಅಸೋಸಿಯೇನ್ ಮುಂಬೈನ ಲಲಿತ ಕಲಾ ಅಕ್ಯಾಡೆಮಿ ಕಲಾವಿದರು ಅರ್ಪಿಸುತ್ತಿರುವ ಕನ್ನಡ ನಾಟಕ,
                                                         
                                                                   'ಬೆಳ್ಳಿ ಬೈಲು'

ಶುಕ್ರವಾರ, ೨೪ , ಮೇ, ೨೦೧೩  ಸಂಜೆ ೬-೩೦  ಕ್ಕೆ ಇದನ್ನು ಬರೆದು ಆಡಿಸಿದವರು, ಡಾ. ಬಿ. ಆರ್. ಮಂಜುನಾಥ್


                                      ಎರಡನೆಯ ದಿನ, ೨೫ ಮೇ, ೨೦೧೩ ರಂದು ಶನಿವಾರ ಸಂಜೆ,

                                                         ಮೆರವಣಿಗೆ ೬ ರಿಂದ ೭ ಗಂಟೆಗೆ

ಭಾವುದಾಜಿ ರಸ್ತೆ, ಮಹೇಶ್ವರಿ ಉದ್ಯಾನ್, ಭಂಡಾರ್ ಕರ್ ರಸ್ತೆ, ಶಂಕರ ಮಠ, ವಾಪಸ್ ಮೈಸೂರ್ ಅಸೋಸಿಯೇಶನ್

ಭಾಗವಹಿಸಿದ ತಂಡಗಳು :

* ಚೌಡಿಕೆ ಪದ, ರಾಧಾಬಾಯಿ ಮತ್ತು ಸಂಗಡಿಗರು. ಬೆಳಗಾಮ್ ಜಿಲ್ಲೆ.

* ಪೂಜಾ ಕುಣಿತ, ಶ್ರೀ. ಬಿ. ಕೆ. ಸ್ವಾಮಿ ಸಂಗಡಿಗರು, ಮಂಡ್ಯ ಜಿಲ್ಲೆ.

* ಕಂಸಾಳೆ ಕುಣಿತ, ಶ್ರೀ. ಮಹದೇವಮೂರ್ತಿ ಮತ್ತು ಸಂಗಡಿಗರು, ಬೆಂಗಳೂರು

* ಜಡೆ ಕೋಲಾಟ, ಶ್ರೀ. ಹಾಲಪ್ಪ ಮತ್ತು ಸಂಗಡಿಗರು, ದಾವಣಗೆರೆ ಜಿಲ್ಲೆ

* ಹಾಲಕ್ಕಿ ಸುಗ್ಗಿ ಕುಣಿತ, ಶ್ರೀ. ಗಣಪು ಬಡವ ಗೌಡ ಮತ್ತು ಸಂಗಡಿಗರು, ಉತ್ತರ ಕನ್ನಡ ಜಿಲ್ಲೆ,

* ಗೌಳಿಗರ ರಣಮಾಲ್ ಕುಣಿತ, ಶ್ರೀಮತಿ ವಿಕ್ಟೋರಿಯ ಮತ್ತು ಸಂಗಡಿಗರು, ಉತ್ತರ ಕನ್ನಡ ಜಿಲ್ಲೆ.

* ಗೀಗೀ ಪದ, ಶ್ರೀಮತಿ ಯಲ್ಲವ್ವ ಬಿ. ಮಾದರ ಮತ್ತು ಸಂಗಡಿಗರು ಬೆಳಗಾವಿ ಜಿಲ್ಲೆ.

೬-೩೦ ಕ್ಕೆ ಮೈಸೂರ್  ಅಸೋಸಿಯೇನ್  ಸಭಾಂಗಣದಲ್ಲಿ ಉದ್ಘಾಟನಾ ಸಮಾರಂಭ, ಶನಿವಾರ, ಮೆರವಣಿಗೆಯ ಬಳಿಕ,


-ಡಾ.  ಬಾನಂದೂರು ಕೆಂಪಯ್ಯ (ಅಧ್ಯಕ್ಷರು, ಕರ್ನಾಟಕ ಜಾನಪದ ಅಕ್ಯಾಡೆಮಿ ಬೆಂಗಳೂರು) ಉದ್ಘಾಟಿಸಿದರು. 

-ಶ್ರಿ. ಸಿ. ರಾಜಗೋಪಾಲ್, ನಿವೃತ್ತ ನಿರ್ದೇಶಕರು, ಆಕಾಶವಾಣಿ ಮುಂಬೈ, ಅತಿಥಿ. 

-ಶ್ರಿ. ಜಿ. ಎನ್. ಪರಡ್ಡಿ, ರೆಜಿಸ್ಟ್ರಾರ್, ಕನ್ನಡ ಜಾನಪದ ಅಕ್ಯಾಡೆಮಿ ಬೆಂಗಳೂರು, ಅತಿಥಿ, 

-ಶ್ರಿ. ಕೆ. ಮಂಜುನಾಥಯ್ಯನವರು, ಮೈಸೂರ್ ಅಸೋಸಿಯೇಶನ್, ಪ್ರಮುಖ ಕಾರ್ಯಕರ್ತರು, ಅತಿಥಿ, 

ಮೆರವಣಿಗೆಯಲ್ಲಿ ಪಾಲ್ಗೊಂಡ ತಂಡಗಳೇ ಸಭಾಂಗಣದಲ್ಲಿ ತಮ್ಮ ಪ್ರತಿಭಾ ಪ್ರದರ್ಶನಗಳನ್ನು ತೋರಿಸಿ ಮುಂಬೈನ ಕಲಾ ರಸಿಕರಿಗೆ ಪ್ರಿಯರಾದರು. 

ಕೊಂಡಿಗಳು ದಯಮಾಡಿ ಜಗ್ಗಿ : 

(೨೪ -೦೫ -೨೦೧೩)

[[https://plus.google.com/photos/117225798684059542608/albums/5881714713566951745]]    

(೨೫ -೦೫ -೨೦೧೩)

[[https://plus.google.com/photos/117225798684059542608/albums/5882162418805204433]]


Friday, May 17, 2013

ಸನ್. 2013 ರ ಸಾಲಿನ 'ಅಕ್ಷಯ ತೃತಿಯ' ಮುಂಬೈನ ಮೈಸೂರ್ ಅಸೋಸಿಯೇಷನ್ ನಲ್ಲಿ ನೆರವೇರಿತು !

   ’ಅಕ್ಷರ ತೃತಿಯ’, ದ ಶುಭ ಸಂದರ್ಭದಲ್ಲಿ (13-05-2013) ಅಸೋಸಿಯೇಷನ್ ನ ಸದಸ್ಯರು ಹೆಚ್ಚು ಸಂಖ್ಯೆಯಲ್ಲಿ ಬಂದು ಪಾಲ್ಗೊಂಡರು. ಈ ಬಾರಿ ಹೋಮ, ಅಸೋಸಿಯೇಶನ್ ಒಳ ಭಾಗದಲ್ಲಿ ಅಂದರೆ ಈಗಿರುವ ಗಣಪತಿ ಮೂರ್ತಿಯ ಎದುರಿಗೆ ನೆರವೇರಿತು.  ಡಾ.ಮಂಜುನಾಥ್ ಮತ್ತು ಕೆ.ಮಂಜುನಾಥಯ್ಯ,ಮಂಜು ದೇವಾಡಿಗ, ಭವಾನಿ, ನೀಲಕಂಠ ಮೇಡರ್, ಗಣಪತಿ ಶಂಕರಲಿಂಗ ಮೊದಲಾದವರು ಬಂದಿದ್ದರು.
                                            Smt/Shri. Ranganath performed the pooja
Smt/Shri. Ranganath performed the pooja
Shri. Hanuman shastrigalu
Dr. B.R.M and Shri. Manju and ...
Lady devotees


Mangalarathi...

Wednesday, May 1, 2013

ಮುಂಬೈನ ಮೈಸೂರ್ ಅಸೋಸಿಯೇಷನ್ ಒಳಗೆ, ಎಚ್ಚೆಸ್ವಿಯವರು.......

                         Murthy was the center of attraction. Mumbai kannadigas, just love, HSV !