Shri. Svarna Gauri and Ganesh pooja, Mysore Association, Mumbai !
ಮೈಸೂರು ಅಸೋಸಿಯೇಷನ್, ಮುಂಬೈ. ಶ್ರೀ. ಸ್ವರ್ಣ ಗೌರಿ ಮತ್ತು ಶ್ರೀ ಮಹಾಗಣಪತಿ ಪೂಜಾ ಮಹೋತ್ಸವ. ಶ್ರೀ. ಶುಭಕೃತ್ ನಾಮ ಸಂವತ್ಸರ, ಶಾಲಿವಾಹನ ಶಕೆ, ೧೯೪೫ (೨೦೨೨) ೩೦, ಆಗಸ್ಟ್, ೨೦೨೨ ರಂದು ನಮ್ಮ ಅಸೋಸಿಯೇಷನ್ ನ ಸದಸ್ಯೆಯರೆಲ್ಲಾ ಸೇರಿ ಶ್ರೀ. ಸ್ವರ್ಣ ಗೌರಿಯನ್ನು ಪ್ರತಿಷ್ಠಾಪಿಸಿ, ವಿಧಿವತ್ತಾಗಿ ಪೂಜಿಸುವುದರ ಮೂಲಕ ಈ ವರ್ಷದ ಮಹಾಗಣಪತಿಯ ಗಣೇಶ ಪೂಜೆಯ ಶುಭಾರಂಭ ಮಾಡಿದ್ದಾರೆ. ಗಣೇಶ ಮತ್ತು ಗೌರಮ್ಮ ! ಅಸೋಸಿಯೇಷನ್ ನಲ್ಲಿ ವಿಧಿವತ್ತಾಗಿ ಗೌರಮ್ಮನಿಗೆ ಪ್ರತಿದಿನವೂ ಪೂಜೆ. ಶ್ರೀಮತಿ ಕಮಲಾ ಕಾಂತ ರಾಜ್ ರವರಿಂದ ಹಿಡಿದು, ಸದಸ್ಯೆಯರೆಲ್ಲಾ ಪೂಜೆಯ ನಂತರ ನಗುಮುಖದಲ್ಲಿ ನಿಂತು ನಮಗೂ ಪೂಜೆಯಲ್ಲಿ ಭಾಗವಹಿಸುವ ಸಂದೇಶವನ್ನು ಕೊಡುತ್ತಿದ್ದಾರೆ. ಅವರೆಲ್ಲರ ಮುಖದಲ್ಲಿ ಭಾವುಕತೆ, ಮತ್ತು ಧನ್ಯತಾಭಾವ, ಮಿನುಗುತ್ತಿರುವುದನ್ನು ನೋಡಲು ಎಷ್ಟು ಚೆನ್ನಾ ?! ಗಣಪತಿ ಪೂಜೆನೂ ಮಾಡಿ ಕೂತಿದ್ದಾರೆ ನೋಡಿ ಭೂಪರು !ಎಲ್ಲರ