Posts

Showing posts from March, 2010

ವಿ. ಕೆ. ಮೂರ್ತಿ-ಹಿಂದಿ ಚಲನ ಚಿತ್ರರಂಗದ ಗಾರುಡಿಗ !

Image
ನುಡಿ ನಮನ : ಭಾರತಿಯ ಚಲನ ಚಿತ್ರ ರಂಗದ ಗಾರುಡಿಗ- ವಿ. ಕೆ. ಮೂರ್ತಿ   ! ೨೦೧೪ ರ ಎಪ್ರಿಲ್ ೭ ರಂದು, ಸೋಮವಾರ,  ಬೆಂಗಳೂರಿನ ಶಂಕರ ಪುರದ ತಮ್ಮ ಸ್ವಗೃಹದಲ್ಲಿ ೯೧ ವರ್ಷ ಪ್ರಾಯದ  ವಿ. ಕಿ. ಮೂರ್ತಿಯವರು ನಿಧನರಾದರು. ಸುಮಾರು ದಿನಗಳಿಂದ ಅವರು ನಿಶ್ಯಕ್ತಿಯಿಂದ ನರಳುತ್ತಿದ್ದರು.  ಭಾರತದ ಚಲನಚಿತ್ರ ರಂಗದಲ್ಲಿ ಸಿನೆಮಾತೊಗ್ರಾ ಗ್ರಾಫರ್ ಆಗಿ ಮತವಾದ ಚಿತ್ರಗಳನ್ನು ನಿರ್ಮಿಸಲು ಯೋಗದಾನ ಮಾಡಿದ ಮೂರ್ತಿಯವರು ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ.  ಮಗಳು ಛಾಯಾ ಮತ್ತು ಅಪಾರ ಬಂಧುವರ್ಗ ಅಲ್ಲದೆ ಗೆಳೆಯರನ್ನು ಅಗಲಿಹೊಗಿದ್ದಾರೆ. ಕೇವಲ ಹಿಂದೀ ಭಾಷೆಯ ಚಿತ್ರಗಳಲ್ಲದೆ, " ಹೂವು ಹಣ್ಣು " ಎಂಬ ಕನ್ನಡ ಚಲನಚಿತ್ರವನ್ನೂ (೧೯೯೩) ತಮ್ಮ ಕ್ಯಾಮರಾ ಕಣ್ಣಿನಿಂದ ಗ್ರಹಿಸಿ, ನಮಗೆಲ್ಲಾ ಸುಂದರವಾಗಿ ತೋರಿಸಿರುವ, ’ಡಾ. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ,’ ವಿ. ಕೆ. ಮೂರ್ತಿ ಯವರು, ಮುಂಬೈನ ಜನತೆಗೆಲ್ಲಾ ಕಣ್ಮಣಿಯಾಗಿದ್ದಾರೆ ! ಶ್ರೀ. ಶ್ಯಾಮ್ ಬೆನೆಗಲ್, ವಿ. ಕೆ. ಮೂರ್ತಿ ಹಾಗೂ ಸುನಿಲ್ ದತ್ ರವರು ಒಟ್ಟಿಗೆ... ’ವಹೀದಾ ರೆಹಮಾನ್,’ ಅಂದಿನ ದಿನಗಳಲ್ಲಿ ಬಹು ಪ್ರಖ್ಯಾತಿ ಪಡೆದ ನಟಿಯಾಗಿದ್ದರು... ಶ್ರೀ. ಗೋವಿಂದ್ ನಿಹಲಾನಿಯವರು, ಮೂರ್ತಿಯವರಿಗಿಂತ ವಯಸ್ಸಿನಲ್ಲಿ ಕಿರಿಯ ಛ್ರಾಯಾಚಿತ್ರಗ್ರಾಹಕರು. ಆದರೆ ಸಮಯ ಕಳೆದಂತೆ ಛಾಯಾಗ್ರಹಣದ ವಲಯದಲ್ಲಿ, ಮೇರು ವ್ಯಕ್ತಿಯ