ವಿ. ಕೆ. ಮೂರ್ತಿ-ಹಿಂದಿ ಚಲನ ಚಿತ್ರರಂಗದ ಗಾರುಡಿಗ !

ನುಡಿ ನಮನ : ಭಾರತಿಯ ಚಲನ ಚಿತ್ರ ರಂಗದ ಗಾರುಡಿಗ- ವಿ. ಕೆ. ಮೂರ್ತಿ   !

೨೦೧೪ ರ ಎಪ್ರಿಲ್ ೭ ರಂದು, ಸೋಮವಾರ,  ಬೆಂಗಳೂರಿನ ಶಂಕರ ಪುರದ ತಮ್ಮ ಸ್ವಗೃಹದಲ್ಲಿ ೯೧ ವರ್ಷ ಪ್ರಾಯದ  ವಿ. ಕಿ. ಮೂರ್ತಿಯವರು ನಿಧನರಾದರು. ಸುಮಾರು ದಿನಗಳಿಂದ ಅವರು ನಿಶ್ಯಕ್ತಿಯಿಂದ ನರಳುತ್ತಿದ್ದರು.  ಭಾರತದ ಚಲನಚಿತ್ರ ರಂಗದಲ್ಲಿ ಸಿನೆಮಾತೊಗ್ರಾ ಗ್ರಾಫರ್ ಆಗಿ ಮತವಾದ ಚಿತ್ರಗಳನ್ನು ನಿರ್ಮಿಸಲು ಯೋಗದಾನ ಮಾಡಿದ ಮೂರ್ತಿಯವರು ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ.  ಮಗಳು ಛಾಯಾ ಮತ್ತು ಅಪಾರ ಬಂಧುವರ್ಗ ಅಲ್ಲದೆ ಗೆಳೆಯರನ್ನು ಅಗಲಿಹೊಗಿದ್ದಾರೆ.


ಕೇವಲ ಹಿಂದೀ ಭಾಷೆಯ ಚಿತ್ರಗಳಲ್ಲದೆ, " ಹೂವು ಹಣ್ಣು " ಎಂಬ ಕನ್ನಡ ಚಲನಚಿತ್ರವನ್ನೂ (೧೯೯೩) ತಮ್ಮ ಕ್ಯಾಮರಾ ಕಣ್ಣಿನಿಂದ ಗ್ರಹಿಸಿ, ನಮಗೆಲ್ಲಾ ಸುಂದರವಾಗಿ ತೋರಿಸಿರುವ, ’ಡಾ. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ,’ ವಿ. ಕೆ. ಮೂರ್ತಿ ಯವರು, ಮುಂಬೈನ ಜನತೆಗೆಲ್ಲಾ ಕಣ್ಮಣಿಯಾಗಿದ್ದಾರೆ !



ಶ್ರೀ. ಶ್ಯಾಮ್ ಬೆನೆಗಲ್, ವಿ. ಕೆ. ಮೂರ್ತಿ ಹಾಗೂ ಸುನಿಲ್ ದತ್ ರವರು ಒಟ್ಟಿಗೆ...

’ವಹೀದಾ ರೆಹಮಾನ್,’ ಅಂದಿನ ದಿನಗಳಲ್ಲಿ ಬಹು ಪ್ರಖ್ಯಾತಿ ಪಡೆದ ನಟಿಯಾಗಿದ್ದರು...

ಶ್ರೀ. ಗೋವಿಂದ್ ನಿಹಲಾನಿಯವರು, ಮೂರ್ತಿಯವರಿಗಿಂತ ವಯಸ್ಸಿನಲ್ಲಿ ಕಿರಿಯ ಛ್ರಾಯಾಚಿತ್ರಗ್ರಾಹಕರು. ಆದರೆ ಸಮಯ ಕಳೆದಂತೆ ಛಾಯಾಗ್ರಹಣದ ವಲಯದಲ್ಲಿ, ಮೇರು ವ್ಯಕ್ತಿಯಾಗಿ ಬೆಳೆದು, ಈಗ ಮಂಚೂಣಿಯಲ್ಲಿದ್ದಾರೆ. ಅವರ ಕೊಡುಗೆ ಅಪಾರ...

ನಾಯಕಿ ’ಶಕೀಲ,” ರವರ, ಮೋಹಕ ನಗೆ, ಎಲ್ಲರನ್ನೂ ಚಕಿತಗೊಳಿಸುತ್ತಿತ್ತು. ಆಕೆ ನಟ, ’ದೇವಾನಂದ್,’ ಜೊತೆ ನಾಯಕಿಯಾಗಿ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಕ್ರಿಕೆಟ್ ಆಟದಲ್ಲೂ ಮೂರ್ತಿಯವರಿಗೆ ಅತೀವ ಆಸಕ್ತಿ....



’ಅಜ್ಜಿ-ತಾತ’- ಇವರ ಬಗ್ಗೆ ವಿವರವಾಗಿ ಓದಿ...

’ವಯೊಲಿನ್’ ಅವರ ಬಾಲ್ಯದ ದಿನಗಳಿಂದ ಜೀವನದಲ್ಲಿ ಹಾಸುಹೊಕ್ಕಿತ್ತು...










ಬಾಲ್ಯದ ದಿನಗಳು...



ವಿ. ಕೆ. ಮೂರ್ತಿಯವರ ಪ್ರೀತಿಯ ಮಡದಿ, ’ ಸಂಧ್ಯಾರವರು ’, ಅವರ ಜೀವನದ ಸ್ಪೂರ್ತಿಯಾದರು....


’ಮೈಸೂರ್ ಅಸೋಸಿಯೇಷನ್ ಮುಖ ಪತ್ರಿಕೆ, ನೇಸರು,’ ವಿನ ಸಂಪಾದಕಿ, ಡಾ. ಗಿರಿಜಾ ಶಾಸ್ತ್ರಿಯವರು, ’ನೇಸರು ವಿಶೇಷ ಸಂಚಿಕೆ, ’ಯಲ್ಲಿ ಒದಗಿಸಿದ ಲೇಖಕರನ್ನು ಅಭಿನಂದಿಸುತ್ತಾ, ನಿಮಗೆ ಬೇಕಾದ ವಿಶೇಷ ಮಾಹಿತಿಗಳಿಗೆ, ಶ್ರೀಮತಿ. 'ಉಮಾ ರಾವ್ ’ ರವರ,”ಬಿಸಿಲು ಕೋಲ ’ನ್ನು ಓದುತ್ತಾ ಹೋಗಿ, ಎಂದು ಮಾರ್ಗದರ್ಶನ ಮಾಡಿದ್ದಾರೆ.





" ನೇಸರು- ಶ್ರೀ ವಿ. ಕೆ. ಮೂರ್ತಿಯವರ ವಿಶೇಷ ಸಂಚಿಕೆ " : ಮೈಸೂರು ಅಸೋಸಿಯೇಷನ್ ನ ಸದಸ್ಯರಿಗೆ ಮಾತ್ರ ಲಭ್ಯವಾದದ್ದು. ವಿಚಾರಿಸಿ.

೨೦೧೦ ಮಾರ್ಚ್ ೨೧ ನೇ ತಾರೀಖು, ರವಿವಾರದಂದು ಮೂರ್ತಿಯವರಿಗೆ ಮುಂಬೈನ ಕನ್ನಡ ಸಂಘಗಳು ಮತ್ತು ಸಿನಿಮಾಕ್ಷೇತ್ರದ ದಿಗ್ಗಜರಿಂದ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿತ್ತು. ಮುಂಬೈನ ಹಿರಿಯ ಕನ್ನಡ ಸಂಸ್ಥೆ, 'ಮೈಸೂರ್ ಅಸೋಸಿಯೇಷನ್ 'ಮತ್ತು ಜಂಟಿಯಾಗಿ 'ಕೊಡಕ್ ಇಂಡಿಯ,' 'ಫಿಲ್ಮ್ ಫೆಡರೇಷನ್ ಗಿಲ್ಡ್ 'ಮತ್ತು 'ಕನ್ನಡ ಸಂಸ್ಥೆಗಳು' ಭಾಗವಹಿಸಿದ್ದವು.

ಮೂರ್ತಿಯವರ ಸಿನೆಜೀವನದಲ್ಲಿ ಕೆಲಸಮಾಡಿದ ಹಲವಾರು ಚಲನಚಿತ್ರಗಳ ಬಗ್ಗೆ, ಅವರ ಕೆಲಸದ ಮಧ್ಯೆ ಭೆಟ್ಟಿಮಾಡಿದ ಕಲಾವಿದರು, ನಿರ್ದೇಶಕರು, ಮತ್ತು ಚಿತ್ರನಿರ್ಮಾಪಕರ ಮಾತು ಕತೆಗಳನ್ನು, ವಿಚಾರವಿನಿಮಯಗಳನ್ನೊಳಗೊಂಡ ಒಂದು 'ಚಿತ್ರಪ್ರದರ್ಶನ' ವನ್ನೂ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅತಿಥಿಯಾಗಿ 'ಶ್ಯಾಮ್ ಬೆನೆಗಲ್ 'ಆಗಮಿಸಿದ್ದರು.

ಮೈಸೂರ್ ಅಸೋಸಿಯೇಷನ್ ಆ ಸಂದರ್ಭದಲ್ಲಿ 'ನೇಸರು ಪತ್ರಿಕೆಯ ವಿಶೇಷಾಂಕ ' ವನ್ನು ಹೊರತಂದಿತ್ತು. ಆ ವಿಶೇಷಾಂಕವನ್ನು ಪೂರ್ತಿಯಾಗಿ ನಾನು ’ಸ್ಕಾನ್”ಮಾಡಿ ಈ ಬ್ಲಾಕ್ ನಲ್ಲಿ 'ಮೈಸೂರ್ ಅಸೋಸಿಯೇಷನ್ 'ನ ಸೌಜನ್ಯದಿಂದ ಪ್ರಕಟಿಸಿದ್ದೇನೆ.

ವಿ. ಕೆ. ಮೂರ್ತಿಯವರ ಹಲವಾರು ಹವ್ಯಾಸಗಳಲ್ಲಿ ಸಿನಿಮಾ ಕ್ಯಾಮರಾಮನ್ ಆಗುವುದು, ಪ್ರಮುಖ ಆದ್ಯತೆಗಳಲ್ಲೊಂದಾದರೆ, ಮತ್ತೆ ಕೆಲವು, ನಾಟಕಾಭಿನಯ, ಸಂಗೀತ, ಮತ್ತು ತಮ್ಮ ಪರಿವಾರದ ಬಗ್ಗೆ ತೀವ್ರವಾದ ಕಾಳಜಿ ! ನಾಟಕ ಗೀಳು ಎಷ್ಟಿತ್ತೆಂದರೆ, ಅವರು ಒಮ್ಮೆ ಮೈಸೂರಿನ ಲಕ್ಷ್ಮೀಪುರಂ ಶಾಲೆಯಲ್ಲಿ ಓದುತ್ತಿರುವಾಗ, ’ಭಕ್ತ ನಾಮದೇವ್”ಎಂಬ ನಾಟಕವನ್ನು ಆಡಿದಾಗ ಅವರು ಅದರಲ್ಲಿ ನಾಮದೇವರ ಪಾತ್ರವನ್ನು ಅಭಿನಯಿಸಿದ್ದರು. ಅದರಲ್ಲಿ ಅವರು ಎಷ್ಟು ತಲ್ಲೀನರಾಗಿದ್ದರು ಎಂದರೆ, ಬೇರೆ ನಾಟಕ ಕಂಪೆನಿಗಳಲ್ಲಿ ಎಲ್ಲಿಯಾದರೂ ಆ ಪಾತ್ರವನ್ನು ಅವರಿಗೆ ಕೊಡುವುದಾದರೆ, ತಮಗೇನೂ ಬೇಡ, ಎಲ್ಲವನ್ನೂ ತ್ಯಾಗಮಾದಲು ಸಿದ್ಧರಿದ್ದರು.ಸಿನಿಮಾದಲ್ಲಿನ ಕ್ಯಾಮರಮನ್ ಕೆಲಸ ಸಹಿತ !

ತಂದೆಯವರು ಸ್ವತಃ ನಟರು. ಅವರು ಮಹಾರಾಜರ ಅರಮನೆಯ ನಾಟಕ ತಂಡದಲ್ಲಿ ಮಹಾರಾಜರ ಸಮ್ಮುಖದಲ್ಲಿ ಅನೇಕ ನಾಟಕಗಳನ್ನು ಆಡಿದ್ದರು. ಗುಬ್ಬಿವೀರಣ್ಣ ಮತ್ತು ಸುಬ್ಬಯ್ಯ ನಾಯಿಡುರವರ ನಾಟಕ ಕಂಪೆನಿಯ ನಾಟಕಗಳು ಆಗ ಬಹಳ ಪ್ರಸಿದ್ಧಿ. ಮೂರ್ತಿಯವರಿಗೆ ಸುಲಭವಾಗಿ ಫ್ರೀ ಪಾಸ್ ಸಿಗುತ್ತಿತ್ತು. ೧೯೪೬ ರಲ್ಲಿ ಬೆಂಗಳೂರಿನ ಜಯಚಾಮರಾಜೆಂದ್ರ ಪಾಲಿಟೆಕ್ನಿಕ್ ನಲ್ಲಿ ವ್ಯಾಸಂಗ ಮಾಡುವಾಗಲೂ ಅಲ್ಲಿನ ಗೆಳೆಯರನ್ನು ಕೂಡಿಕೊಂಡು ನಾ. ಕಸ್ತೂರಿಯವರ ’ಗಗ್ಗಯ್ಯನ ಗಡಿಬಿಡಿ’ ಎಂಬ ನಾಟಕವನ್ನು ನಿರ್ದೇಶಿಸಿದ್ದರು.

ಆಗಿನ ಕಾಲದಲ್ಲಿ, ಸುಪ್ರಸಿದ್ಧ ಸಾಮಾಜಿಕ ಕನ್ನಡ ನಾಟಕಗಳ ಕರ್ತೃ, ಟಿ. ಪಿ. ಕೈಲಾಸಂ, ಬೆಂಗಳೂರಿನ ನ್ಯಾಶನಲ್ ಕಾಲೆಜ್ ನಲ್ಲಿ ಅವರ ನಾಟಕಗಳನ್ನು ಅತ್ಯಂತ ಸ್ವಾರಸ್ಯವಾಗಿ ಓದುತ್ತಿದ್ದರು. ಬಾಲಕ ಕುಟ್ಟಿಯವರು, ಅದಕ್ಕೆ ಒಮ್ಮೆಯೂ ತಪ್ಪಿಸಿಕೊಂಡ ನೆನಪಿಲ್ಲವೆಂದು ಸ್ಮರಿಸಿಕೊಳ್ಳುತ್ತಾರೆ. ಇದೇ ಗೀಳು ಮುಂಬೈಗೆ ಬಂದಮೇಲೂ ಮುಂದುವರೆಯಿತು. ನಾಟಕಗಳನ್ನು ಬರೆಯುವುದು, ನಿರ್ದೇಶನ, ನಟನೆ, ಮತ್ತು ೧೯೪೮ ರಿಂದ ೧೯೬೫ ರವರೆಗೆ ಪ್ರತಿತಿಂಗಳೂ ಕೈಲಾಸಂ, ಪರ್ವತವಾಣಿ, ದಾಶರಥೀದೀಕ್ಷಿತ್, ಮತ್ತು ಜಿ. ಪಿ. ರಾಜರತ್ನಂರವರ ಒಂದು ನಾಟಕವನ್ನಾದರೂ ಪ್ರದರ್ಶನ ಮಾಡೇಮಾಡುತ್ತಿದ್ದರು. ಅವರಿಗೆ ಸಂಗೀತದಲ್ಲೂ ತೀವ್ರ ಆಸಕ್ತಿ. ರಂಗ ಭೂಮಿಯಲ್ಲಿ ಪಾತ್ರಾಭಿನಯವನ್ನು ಮಾಡಲು ಕಲಿಯಲು ಅಸೋಸಿಯೇಷನ್ ನ ಗೆಳೆಯರನ್ನು ಪ್ರೇರೇಪಿಸಿದರು, ಇ. ಆರ್. ಕೃಷ್ಣ,, ರಾಘವೇಂದ್ರ, ಅನಂತ ಪದ್ಮನಾಭ, ಸಂಧ್ಯ, ಮಾನಸ, ಕೆ. ಆರ್. ಗುರು, ಪದ್ಮ, ಗೀತ, ಮತ್ತು ಹಲವರು, ಅವರ ಜೊತೆಯಲ್ಲಿ ಕಲೆತು ನಾಟಕಗಳಲ್ಲಿ ಪಾತ್ರವಹಿಸಲು ಶುರುಮಾಡಿದರು. ಮತ್ತೊ ಂದು ಒಳ್ಳೆಯ ಕೆಲಸವೆಂದರೆ, ಸ್ತ್ರೀಯರ ಪಾತ್ರಗಳನ್ನು ಮಾಡಲು ಸ್ತ್ರೀಯರನ್ನೇ ಪ್ರೇರೇಪಿಸಿ ಮಾಡಿದ ಸಾಹಸ. ಶ್ರೀಮತಿ, ಮಧುರಾ ಕೃಷ್ಣಸ್ವಾಮಿ, ೧೯೫೩ ರ ನಾಟಕ ಪ್ರದರ್ಶನದಲ್ಲಿ ಪೂರ್ತಿಯಾಗಿ ಭಾಗವಹಿಸಿದ್ದರು. ಶಾರದಮ್ಮ, ಮಹಾಲಕ್ಷ್ಮಿ ಸ್ವಾಮಿ, ಶಾಂತ ಮುಂತಾವರು ಮುಂದುವರೆಸಿದರು.

ಕೈಲಾಸಂರವರ ಸಾತು ತವರ್ಮನೆ, ಪಾತು ತವರ್ಮನೆ, ಮತ್ತು ಯೋಧ್ರು ವಾಣಿ, ನಾಟಕಗಳನ್ನು ಕೈಲಾಸಂ ಹುಟ್ಟಿದ ಹಬ್ಬಕ್ಕೆ ಆರಿಸಿದ್ದರು. ’ಹುತ್ತದಲ್ಲಿ ಹುತ್ತ” ನಾಟಕದಲ್ಲಿ ಪಾತ್ರಾಭಿನಯ ಮಾಡಿದರು ಸಹಿತ. ’ನಂ ಕಂಪ್ನಿ ” ಮೂರ್ತಿಯವರ ಯಶಸ್ವಿ ಪ್ರಯೋಗ. ವಿಶೇಷ ಸಂಗೀತ ರೂಪಕ. ಅದನ್ನು ಅವರು ನಿರ್ದೇಶಿಸಿದರು. ವರ್ಣಾಂಧ, ಗಂಡಾಂತರ, ನವಗ್ರಹಾಸ್, ನಂದಿ ಮಹಲ್ ಬರೆದರು. ಕನ್ನಡ ಕಲಾ ಕೆಂದ್ರದಲ್ಲಿ ಪ್ರದರ್ಶಿಸಲ್ಪಟ್ಟವು. ಕೊನೆಯವರೆಗೂ ಗುಟ್ಟನ್ನು ಕಾಪಾಡಿಕೊಂಡು ಬರುವ ನಾಟಕಗಳು ಬಹಳ ಯಶಸ್ವಿಯಾದವು. ಮೂರ್ತಿಯವರಿಗೆ, ಬರಿ ಹಣ ಕೀರ್ತಿಯ ಮನಸ್ಸಿರಲಿಲ್ಲ. ಎಲ್ಲ ಕನ್ನಡಿಗರನ್ನೂ ಸೇರಿಸಿಕೊಂಡು ಒಟ್ಟಾಗಿ ಬೆರೆಯುವ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಅವರು ಹೆಚ್ಚಾಗಿ ಶ್ರಮಿಸಿದರು.

ಶ್ರೀ. ವಿ. ಕೆ. ಮೂರ್ತಿಯವರ ಬಾಲ್ಯ, ಮತ್ತು ವಿದ್ಯಾಭ್ಯಾಸ :

’ವೆಂಕಟರಾಮಾ ಪಂಡಿತ್ ಕೃಷ್ಣಮೂರ್ತಿ ’ ಯವರ ಜನನ, ನವೆಂಬರ್ ೨೬, ೧೯೨೨, ರಲ್ಲಿ ಮೈಸೂರಿನಲ್ಲಾಯಿತು. ತಂದೆ ವೆಂಕಟಾರಾಮಾ ಪಂಡಿತ್, ಮೈಸೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಆಯುರ್ವೇದದ ಪಂಡಿತರು. ತಾಯಿ ಶ್ರೀಮತಿ ನಾಗಮ್ಮನವರು ದಂಪತಿಗಳಿಗೆ ೫ ಜನ ಮಕ್ಕಳು. ಬಾಲ್ಯದಲ್ಲೇ ತಾಯಿಯವರು ತೀರಿಕೊಂಡರು. ಮೂರ್ತಿಯವರ ಪರಿವಾರದವರ ಹೆಸರುಗಳು ಹೀಗಿವೆ :

* ಸತ್ಯನಾರಾಯಣ
* ಅಮ್ಮಯ್ಯ,
* ಕೃಷ್ಣಮೂರ್ತಿ,
* ಕೌಸಲ್ಯ,
* ಅನುಸೂಯಾ

ಮನೆ, ಮೈಸೂರಿನ ಲಕ್ಶ್ಮೀಪುರಂ, ಹೊಸಕೇರಿಯಲ್ಲಿ, ಮೇನ್ ಹೌಸ್ ಬಾಡಿಗೆ ಕೊಟ್ಟು ಔಟ್ ಹೌಸ್ ನಲ್ಲಿ ಇರುತ್ತಿದ್ದರು. ತಂದೆಯವರ ಸಂಬಳ ೬೦ ರೂಪಾಯಿಗಳು. ಅಕ್ಕನಿಗೆ ಮದುವೆಯಾಗಿ ಗಂಡನ ಮನೆಗೆ ಹೋಗಿದ್ದರು. ಮನೆಯಲ್ಲಿ ತಂದೆ ತಾಯಿ, ಮೂರ್ತಿ ಅವರ ಅಣ್ಣ ಮತ್ತು ಇಬ್ಬರು ತಂಗಿಯರಿದ್ದರು. ತಾಯಿಯವರ ಆರೋಗ್ಯ ಯಾವಾಗಲೂ ಆಷ್ಟಕ್ಕಷ್ಟೆ. ಕಾಯಿಲೆಯಿಂದ ನರಳಿ, ಬೇಗ ತೀರಿಕೊಂಡರು. ಆಗ ಮೂರ್ತಿಯವರ ವಯಸ್ಸು, ೮-೯ ವಯಸ್ಸಿರಬಹುದು. ಅವರ ತಂಗಿಯರನ್ನು ದೊಡ್ಡಮ್ಮ ಅವರ ಚಿಂತಾಮಣಿಯ ಮನೆಗೆ ಕರೆದುಕೊಂಡು ಹೋದರು. ಹೀಗೆ ಅವರು, ತಮ್ಮ ಅಣ್ಣ, ತಂದೆಯವರ ಜೊತೆಯಲ್ಲಿ, ಬೆಳೆದರು. ಹೆಣ್ಣುಮಕ್ಕಳ ಒಡನಾಟ ಅವರಿಗೆ ಹೆಚ್ಚಿಗೆ ಆಗಲೇ ಇಲ್ಲ.

ಮೈಸೂರಿನಲ್ಲಿ ಮೂಕಿಚಿತ್ರಗಳನ್ನು ಪ್ರದರ್ಶಿಸುತ್ತಿದ್ದರು. ನೆಂತರ ಮಗ ಸುಬ್ಬರಾಮಯ್ಯ, ಕೃಷ್ಣ ಸಿನೆಮಾ ಥಿಯೇಟರ್ ನಲ್ಲಿ ಹಾರ್ಮೋನಿಯಮ್ ನುಡಿಸುತ್ತಿದ್ದನು. ಸಿನಿಮಾಗಳಲ್ಲಿ ಒಂದು ಅರ್ಕೆಸ್ಟ್ರಾ ಇರುತ್ತಿತ್ತು. ಹಿಮ್ಮೇಳ ನುಡಿಸುತ್ತಿದ್ದರು. ಪಿಟೀಲು, ಹಾರ್ಮೋನಿಯಮ್, ತಬಲ ಇತ್ಯಾದಿ. ಐತಿಹಾಸಿಕ ಮತ್ತು ಪೌರಾಣಿಕ ಚಿತ್ರಗಳೇ ಇದ್ದದ್ದರಿಂದ ರಾಗ ಹಾಕಿಕೊಂಡು ಸನಿವೇಷಕ್ಕೆ ಹೊಂದುವಂತ ತಿಳಿದಷ್ಟು ಮಟ್ಟಿಗೆ, ಹಾಡು ನುಡಿಸುತ್ತಿದರು. ಸುಬ್ಬರಾಮಯ್ಯನ ಆತಿತ್ಯದಿಂದ ಈ ಮಾಂತ್ರಿಕ ವಾತಾವರಣ ಚಿಕ್ಕ ಮೂರ್ತಿಯಮೇಲೆ ಅಗಾಧ ಪರಿಣಾಮ ಉಂಟುಮಾಡಿತು. ಮನೆಯಲ್ಲಿ ತಂದೆಯವರಿಗೆ ಆಡಿಗೆ ಸಿದ್ಧಪಡಿಸಿ, ಅವರು ಆಫೀಸ್ ನಿಂದ ಬರುವ ಮೊದಲೇ ಮನೆ ಸೇರುತ್ತಿದ್ದರಂತೆ. ತಂದೆ ಕೆಲವು ವಿಶಯಗಳಲ್ಲಿ ಕಟ್ಟುನಿಟ್ಟು.

ಮೂರ್ತಿಯವರು ಸಿನಿಮಾ ನೋಡಲು ಆರ‍ಂಭಿಸಿದ ಒಂದು ವರ್ಷದಲ್ಲೇ ’ಟಾಕಿ ಸಿನಿಮಾಗಳು ’ ಬರಲಾರ‍ಂಭಿಸಿದವು. ಈ ಭಾರಿ ಉತ್ಸಾಹದ ಬದಲಾವಣೆ ಮುದಕೊಟ್ಟರೂ”ಆರ್ಕೆಸ್ಟ್ರಾ ತಂಡ ’ ದವರು ಕೆಲಸ ಕಳೆದುಕೊಂಡರು. ಚಿತ್ರಗಳೆಲ್ಲಾ ಸಾಮಾಜಿಕ, ಐತಿಹಾಸಿಕ, ಪರಾಣಿಕ ಕನ್ನಡ ಬಿಟ್ಟು ತಮಿಳು, ಇಂಗ್ಲೀಷ್ ಹಿಂದಿಯಲ್ಲಿ ಮಾತ್ರ, ಕುದುರೆ ಸವಾರಿ, ಕತ್ತಿವರಸೆ, ಎಲ್ಲರಿಗೂ ಪ್ರಿಯ. ಇಂಗ್ಲಿಷ್ ನಲ್ಲಿ ಶೆಕ್ಸ್ ಪಿಯರ್ ನ, ಕ್ಲಾಸಿಕ್ ಬರುತ್ತಿತ್ತು. ’ಮಿಡ್ ಸಮ್ಮರ್” ’ನೈಟ್ಸ್ ಡ್ರೀಮ್” ’ ಕಿಂಗ್ ಲಿಯರ್,’ ’ ಮ್ಯಾಕ್ ಬೆತ್” ’ ಸೈನ್ ಆಫ್ ದ ಕ್ರಾಸ್ ’ಇತ್ಯಾದಿ” ಮೋತಿಲಾಲ್,’ ’ಈಶ್ವರ್ ಲಾಲ್,’ ”ಸಬಿತಾದೇವಿ, ’ ’ಶಾಂತಾ ಆಪ್ಟೆ,”ದುರ್ಗಾಖೋಟೆ ,’ ಇತ್ಯಾದಿ.

ಸ್ಕೂಲಿನ ದಿನಗಳು, ಅವರು ಧರಿಸುತ್ತಿದ್ದ, ಯೂನಿಫಾರ್ಮ್, ಗೆಳೆಯರು, ಮರಕೋತಿಯಾಟ, ಬೈಸೈಕಲ್ ಮೆಲೆ ಪ್ರಯಾಣ, ಈಜಿನ ವ್ಯಾಮೋಹ, ವಯಲಿನ್ ಕಲಿಕೆ, ಮೈಸೂರಿಗೆ ಬಂದು ಪಂ. ಶಿವರುದ್ರಪ್ಪನವರ ಬಳಿ ವೈಲಿನ ಕಲಿಕೆ, ವೀಣೆ, ಮಹಾರಾಣಿ ಕಾಲೆಜ್ ನಲ್ಲಿ ಆರ್ಕೆಸ್ಟ್ರಾ ಇತ್ತು. ’ಸಿ. ವಿ. ರಾಮನ್”ಅತಿಥಿ. ಮೆಚ್ಚಿದರು. ದಿನಪತ್ರಿಕೆಯಲ್ಲಿ ಜಾಹಿರಾತು ಬಂದಿತ್ತು. ಪ್ರಭಾತ್ ಮೂವಿಟೋನ್ ಕಾಲೆಜ್ ನಲ್ಲಿ ನಟನೆ, ನಿರ್ದೇಶನ, ಛಾಯಾಗ್ರಹಣ ತರಬೇತಿ ಕೊಡಲಾಗುತ್ತದೆ ಎಂದು. ೬ ತಿಂಗಳ ಅವಧಿಯಲ್ಲಿ ಬ್ರೋಶರ್ ತರಿಸಿದರು. ಮುಂದೆ ಬೊಂಬಾಯಿಗೆ ಹೋದರು. ಅಲ್ಲಿ ಮೊದಲು ಮೈಸೂರ್ ಅಸೋಸಿಯೆಷನ್ ನಲ್ಲಿ ಕನ್ನಡ ಗೆಳೆಯರ ಪರಿಚಯವಾಯಿತು. ಉಳಿದಿದ್ದೆಲ್ಲಾ ಇತಿಹಾಸ !

ನವೆಂಬರ್, ೩, ೨೦೦೩ ರಲ್ಲಿ ”ಶ್ರೀಮತಿ ಉಮಾ ರಾವ್,’  ವಿ. ಕೆ. ಮೂರ್ತಿಯವರ ಆತ್ಮ ಕಥೆ, 'ಬಿಸಿಲುಕೋಲು' ಬರೆಯಲು ಪ್ರಾರಂಭಿಸುತ್ತಾರೆ. ಶಂಕರಪುರದ ಪಂಡಿತ್ ಹೌಸ್, ೧೯೪೦ ರ ಶೈಲಿಯ ಮನೆ, ಅವರು ಬಳಸುತ್ತಿರುವ ಫಿಯಟ್ ಕಾರು, ಸುಸಜ್ಜಿತ ಹೂದೋಟದ ಮನೆಯಲ್ಲಿ ಅವರ ಪ್ರೀತಿಯ ಪತ್ನಿ, ಸಂಧ್ಯಾ, ಪ್ರೀತಿಯ ಮಗಳು, ಛಾಯಾ, ಮತ್ತು ಅವರ ಅಸಂಖ್ಯಾತ ಗೆಳೆಯರು, ಸಹೃದಯರು ಇತ್ಯಾದಿ, ಇತ್ಯಾದಿ.. ಮತ್ತು ಶ್ಯಾಂಡಲಿಯರ್, ರತ್ನ ಕಂಬಳಿಗಳು, ಅಲಮೀರಿನಲಿ ತುಂಬಲಾರದಷ್ಟು”ಪ್ರಶಸ್ತಿಗಳು,’ ’ಪ್ರಶಸ್ತಿ ಪತ್ರಗಳು’ ,’ ಸ್ಮೃತಿ ಚಿನ್ಹೆಗಳು,’ ’ ಪತ್ರಗಳು,’ ’ಫೋಟೋಗಳು ’, ಇತ್ಯಾದಿ, ಇತ್ಯಾದಿಗಳ ವಿವರಗಳು. ಅದರ ಹಿಂದಿನ ಸಿಹಿ ಸ್ಮೃತಿಗಳು, ಇತ್ಯಾದಿ, ಇತ್ಯಾದಿ....... ಹೀಗೆ ಮುಂದುವರೆಯುವ ವಿ ಕೆ. ಮೂರ್ತಿಯವರ ಆತ್ಮಕಥೆ, ಮುಂದೆ ಸಾಗುತ್ತಾ ಹೋಗುತ್ತದೆ.


Comments

Popular posts from this blog

"ನೇಸರು ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆ-2022ರ ಬಹುಮಾನ ವಿತರಣೆ ಹಾಗೂ ಕನ್ನಡ ನಾಟಕ- "ಚಿಟ್ಟೆ" ಪ್ರದರ್ಶನ !

ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ' !

Mysore association, Mumbai, Swarna Gauri & Ganesh pujotsav (2023) !