ಸನ್ ೨೦೧೩ ರ ಜನವರಿ ೧೯-೨೦ ರಂದು ಮುಂಬೈವಿಶ್ವವಿದ್ಯಾಲಯದ ಕನ್ನಡ ವಿಭಾಗ, ಹಾಗೂ 'ಮೈಸೂರ್ ಅಸೋಸಿಯೇಷನ್ ಮುಂಬೈ ಸಂಸ್ಥೆಗಳ ಜಂಟಿ ಸಹಭಾಗಿತ್ವ' ದಲ್ಲಿ ಆಯೋಜಿಸಲಾಗಿದ್ದ, 'ಮೈಸೂರ್ ಅಸೋಸಿಯೇಷನ್ ಬಂಗಾರದ ಹಬ್ಬದ ದತ್ತಿ ಉಪನ್ಯಾಸ ಮಾಲಿಕೆ' !

                       ದತ್ತಿ ಉಪನ್ಯಾಸಮಾಲಿಕೆಯ ಪ್ರಮುಖ ಉಪನ್ಯಾಸಕರಾಗಿ ಡಾ. ಎಚ್. ಎಸ್. ವಿ ಯವರು ಹಾಜರಿದ್ದರು. 

                           ಮೊದಲನೆಯ ದಿನ ಎಂದರೆ, ೧೯, ಜನವರಿ, ೨೦೧೩ ರಂದು,  12 ಗಂಟೆಗೆ                                                                

                                           ಡಾ. ಎಚ್. ಎಸ್. ವೆಂಕಟೇಶ ಮೂರ್ತಿಯವರು,  


             'ಮೈಸೂರು ಅಸೋಸಿಯೇಶನ್ ಬಂಗಾರದ ಹಬ್ಬದ ದತ್ತಿ ಉಪನ್ಯಾಸ' ಮಾಲಿಕೆಯಲ್ಲಿ  : 

                                              'ನಾನು ಮತ್ತು ನನ್ನ ಸಮಕಾಲೀನರು' 

          ಎಂಬ  ವಿಷಯವಾಗಿ ಭಾಷಣಮಾಡಿದರು.

ಮೊದಲು ಸಂಸ್ಥೆಯ ಪ್ರಮುಖ ಸಂಘಟಕರಲ್ಲೊಬ್ಬರಾದ  ಡಾ. ಬಿ.  ಆರ್. ಮಂಜುನಾಥ್ ರವರು, ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರ   'ಕ್ಷಣ ಕ್ಷಣಕ್ಕೂ ನಮ್ಮ  ಹಮ್ಮನರೆಯುವ ಲೋಕತಂತ್ರಗಳೇ ನಮೋ ನಮೋ' ಎಂಬ ಅರ್ಥಪೂರ್ಣವಾದ  'ಪ್ರಾರ್ಥನಾ ಗೀತೆ' ಯನ್ನು ಹಾಡಿ,  ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಕ್ಷಣ ಕ್ಷಣಕ್ಕೂ ನಮ್ಮ  ಹಮ್ಮನರೆಯುವ ಲೋಕತಂತ್ರಗಳೇ ನಮೋ ನಮೋ
ಎನ್ನಲ್ಪತೆಯನು  ತೋರುತ ಮೆರೆಯುವ  ಬೆಳೆವ ತೇಜಗಳೇ  ನಮೋ ನಮೋ  

ಬೆಳಕಿನ ಬೆಲೆಯನ್ನೆತ್ತಿ  ತೋರುವೊಲು  ಕವಿವ  ಕತ್ತಲೆಗೆ  ನಮೋ ನಮೋ 
ಶೋಕ  ತಾಪ ಭಯ ತಲ್ಲಣದಲ್ಲಿಯೂ  ಗೆಲ್ಲುವ ಸಹನೆಗೆ ನಮೋ  ನಮೋ

ದಾರಿತಪ್ಪಿದರೂ   ಕೈಹಿಡಿದೆತ್ತುವ  ಕೃಪಾವಲಂಬಕೆ   ನಮೋ ನಮೋ
ಬೇಯಿಸಿದರೂ   ಮಳೆ ಹೊಯ್ಯುತ ಹಸಿರನು ಕೊನರಿಪ  ಕರುಣೆಗೆ ನಮೋನಮಃ
 

                         ಎರಡನೆಯ ದಿನ, 20 ನೆಯ ತಾರೀಖು  ರವಿವಾರದಂದು  ಮಧ್ಯಾನ್ಹ  11 ಗಂಟೆಗೆ


         ಡಾ. ಎಚ್ಸೆಸ್ವಿಯವರು ಕೆಳಗೆ ನಮೂದಿಸಿದ 2 ಮಹತ್ವದ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಿದರು. 


                                           'ಬುಕ್ 1-  ಡಾ. ಚನ್ನವೀರ ಕಣವಿಯವರು ರಚಿಸಿದ, 

                                                   'ಬೆಂದ್ರೆ ಕಾವ್ಯ , ಕುಹೂ ಕುಹೂ' 

                                               (ಬೇಂದ್ರೆ ಸ್ಮಾರಕ ಟ್ರಸ್ಟ್ ಧಾರವಾಡ)  


                                            * ಬುಕ್ 2- ಡಾ. ಗಿರಿಜಾ ಶಾಸ್ತ್ರಿಯವರು ರಚಿಸಿದ,  

                                                   'ಪುಸ್ತಕ ಮತ್ತು ನವಿಲುಗರಿ' 

                                                 (ಅಭಿನವ ಪ್ರಕಾಶನ, ಬೆಂಗಳೂರು) 

                                                      ಬಿಡುಗಡೆಯಾಯಿತು.

                                 Dr. B. R. Manjunath, is rendering the invocation song ..

                                Dr. Upadhya is delivering the formal lecture..
                                                            Pustaka mattu navilugari !

                                         Dr. Girija shastry is addressing the audience..



'ಆಪ್ತಗೀತ'

                                                                  (ಹೊಸ ಒಡಂಬಡಿಕೆ)

                                                                                  ಉವಾಚ : 1

ಗೋಪಾಲನೆಯೆಂದರೆ   ಬರೀ ಕೊಳಲೂದುವುದಲ್ಲ 
ಅರ್ಜುನಾ ಬೆಳಗಾದರೆ ಹಸುಗಳನ್ನು ಕೊಟ್ಟಿಗೆಯಿಂದ 
ಹೊರಕ್ಕಟ್ಟಿ ಗೋದಲೆ ಬಾಚಬೇಕು. ದುರ್ನಾತ 
ಹೊಡೆವ  ಮುಸುರೆ  ಬಾನಿ ಖಾಲಿಮಾಡಿ, ಗಸಗಸ ತಿಕ್ಕಿ 

ಶುಚಿಮಾಡಬೇಕು. ಎರಡೂ ಕೈ ಬಳಸಿ ಸೆಗಣಿ-
ಎತ್ತಬೇಕು. ಮುಚ್ಚದೇ ಮೂಗು, ಚಿಪ್ಪಲ್ಲಿ ಮೊಗೆಮೊಗೆದು ಗ್ವಾತ 
ಕೊಟ್ಟಿಗೆ ಮೂಲೆಯ ಕುಡಿಕೆ ಖಾಲಿಮಾಡಬೇಕು; 
ಆಮೇಲೆ ಹತ್ತಾರು ಕೊಡ ನೀರು ಹೊಯ್ದು, ಕಡ್ಡಿ-

ಪೊರಕೆಯಲ್ಲಿ ಕರಕರ ಬಳಿದು, ಕಲ್ಲು ಹಾಸಿದ ಕೊಟ್ಟಿಗೆ 
ಶುಚಿಮಾಡಬೇಕು. ಗೊದಲೆಯ ಮೆದೆ 
ಹುಲ್ಲ ಹಾಕಿ ಕಟ್ಟಬೇಕು ಎಳೆಗರುಗಳನ್ನೆಳೆದು.
ಬಳಿಕ ತಂಗಳು ರೊಟ್ಟಿ ನಾಷ್ಟ ಬೆಣ್ಣೆ ಸಮೇತ ಮುಗಿಸಿ 

ಗಡಿಬಿಡಿಯಿಂದ, ಕೊಳಲು ಸಿಕ್ಕಿಕೊಂಡು ಟೊಂಕಕ್ಕೆ, ನವಿಲ 
ಗರಿ ಇಟ್ಟುಕೊಂಡು ಕೋರೆರುಮಾಲಲ್ಲಿ  ಮಳೆಗಿಳೆಗಿರಲೆಂದು 
ಹೊದ್ದು ಬಣ್ಣಕಂಬಳಿ ಕೌದಿ, ನಡೆಯಬೇಕು ಮಂದೆಯ ಹಿಂದೆ 
ಹಸಿರುಗಪ್ಪಿನ ಕಾಡಕಣಿವೆಗೆ. ಥಳ  ಥಳ ಹರಿಯುತ್ತಿದ್ದಾಳಲ್ಲಿ 

ಯಮುನೆ ಹಸುಗಳನ್ನಿಳಿಸಿ ನೀರಿಗೆ, ಕೌಪೀನ 
ಮಾತ್ರರಾಗಿ ಹಾರಿ ಹೊಳೆಗೆ, ನುಣ್ಣನೆ ಬೆಣಚುಕಲ್ಲಲ್ಲಿ 
ಕಪಿಲೆ ಕಾಳಿಯರ ಮೈಯುಜ್ಜಬೇಕು. ಕಿವಿಯ ಗಿಮಿಟು 
ತೆಗೆದು, ಕೋಡ ನಡುವಿನ ಕೊಳೆತಿಕ್ಕಿ,ರಕ್ತ 

ಹೀರುವ ಕರಿಯುಣ್ಣೆ  ಕಿತ್ತು, ತೊಡೆಗೆ ಮೆಟ್ಟಿದ 
ಸೆಗಣಿಕರೆ ತೊಳೆದು ಕಣ್ಣಿನ ಪಿಸುರು, ನೀರಲ್ಲಿ 
ಕಾಲು ಹಗುರಾಗುವಂತೀಜಿಸಿ  ಹಸುಕರು ಮುಂದೆ,

ಮುಂದೆ, ಹಸಿರು ಚಿಗುರೋದೆದತ್ತ ನಡೆಸಬೇಕು.
ಮಂದೆಯಲ್ಲಿರುತ್ತವೆ ಕಣ್ಣುತಪ್ಪಿಸಿ ಕಾಡಲ್ಲೆಲ್ಲೋ 
ನುಗ್ಗಿಬಿಡುವ ಕಳ್ಳದನ. ಅವುಗಳ ಮೇಲೆ 
ಸದಾ ಇರಬೇಕು ಒಂದು ಕಣ್ಣು.ಕಟ್ಟಬೇಕವನ್ನು 

ಸಾದು ಹಸುಗಳ ಜೋಡಿ, ನಡುಹಗಲಲ್ಲಿ 
ಅರಳಿಮರದಡಿಯ ನೆರಳಲ್ಲಿ ಕೂತು, ಬಿಚ್ಚಿ ಬುತ್ತಿ 
ಉಂಡಾದ ಮೇಲೆ ಸಿಕ್ಕರೆ ಕೊಂಚ ಸಮಯ, ಕೊಳಲಿಂ-
ದೊಂದು ಸಣ್ಣ ಸ್ವರಮಾಲಿಕಾ ಸ್ಫುರಣೆ.

ನಾನಿದೆಲ್ಲ ಮಾಡಿದ್ದರಿಂದಲೇ -ಯಾದವ.

                                                                             ಉವಾಚ : 2

ಮಿಧಿಲೆಯಾಳರಸ ಕಂಸ, ನನ್ನ ತಂದೆಯನ್ನೇ 
ತಳ್ಳಿ ಸೆರೆಮನೆಗೆ, ಜಬರದಸ್ತಲ್ಲಿ ತಾನೇ 
ಕೂತಿದ್ದಾನೆ ರಾಜ ಸಿಂಹಾಸನದಲ್ಲಿ. ತಂಗಿ ದೇವಕಿ 
ಮತ್ತವಳ ಗಂಡ ವಸುದೇವನನ್ನ ಕಾರಾಗಾರಕ್ಕೆ 

ನೂಕಿ, ಅವರುಳಿಮೆ ನಾಟಿನ ಬೀಜ ಮೊಳಕೆಯೊಡೆದು 
ನಿಧಾನಕ್ಕೆತ್ತಿದಾಗ ತಲೆ, ನಿಷ್ಕರುಣೆಯಿಂದ  ನಡೆಸಿ ಕುಯ್ಳು,
ಬಿಸಾಕುತ್ತ ತಿಪ್ಪೆಗುಂಡಿಗೆ  ಕಸ, 
ಬೆಳೆಸುತ್ತಿದ್ದಾನೆ ರಕ್ತ ಹುಯ್ದೂಹುಯ್ದೂ ಸ್ವಾಟಿ  ಕೋರೆ.

ಅವನನ್ನೆದುರಿಸಲು ನಿತ್ಯ ಪಡೆಯಬೇಕಿತ್ತಿಲ್ಲಿ 
ಮಟ್ಟಿಸಾಮು. ರಾಜಸರನ್ನ ಬಗ್ಗುಬಡಿಯಲಿಕ್ಕೆ 
ರಾಸಕ್ರೀಡೆಯಷ್ಟೇ  ಸಾಲದು ಅರ್ಜುನಾ. ಗೋವರ್ಧನವನ್ನೆತ್ತಿ 
ಇಳಿಸಿ, ನಡೆಸಬೇಕು ಸಮಯ ಸಿಕ್ಕಾಗೆಲ್ಲಾ ಕಸರತ್ತು.

ಆಕಾಶದಿಂದಿಳಿಯಬಹುದು ಹಠಾತ್ ಕೇಡು; ನೆಲದಿಂದೇಳ-
ಬಹುದು ಧುತ್ತ್  ಎಂದು ಹುತ್ತ; ಸುಟ್ಟುರೆಗಾಳಿ ತಿತ್ತಿರಿ 
ತಿರುಗುತ್ತೆತ್ತೊಯ್ಯಬಹುದು ಕತ್ತಮುಕಲೆತ್ತರಕ್ಕೆ ..
ಕಾಳಿಂದಿಯಲ್ಲಾಯೆಂದು ಬಾಯ್ದೆರೆಯಬಹುದು 

ದರ್ಪಿಷ್ಟ ಘಟಸರ್ಪ ಕಾಲಗರ್ಭಕ್ಕೆಳೆವ 
ಗಿಮಿದಿರುಗು ಗವಿಬಾಯಿ ! ಪಂಚಭೂತದ 
ಹೊಂಚೆದುರಿಸಿ ಹಾಕಲಿಕ್ಕೇಬೇಕು ಇದಿರುಮೊಡಿ.
ಬರೀ ಹಾಡುಕುಣಿದರೆ ಮುಗಿಯಲಿಲ್ಲ ; ಕಾದಾಡಬೇಕು.

ಅರ್ಜುನಾ ಹಾಗೆ ಕಾದಿಯೇ  ನಾನು-ಕಾದವ.


                                                                                 ಉವಾಚ : 3

ಬೆಣ್ಣೆ ಕದ್ದದ್ದುಂಟು ಜತೆಗಾರರೊಡಗೂಡಿ .
ಕಾಡಿದ್ದೂ ಉಂಟು  ಬಣ್ಣಗಿಂಡಿಯ ಪುಟ್ಟಪುಟ್ಟ ಪುಟ್ಟಿಯರನ್ನ.
ಮೀಸೆ ಚಿಗುರೊಡೆದಾಗ ಆಸೆಪಟ್ಟಿದ್ದುಂಟು 
ಹದಿಹರಯದ ಹೆಂಗಳ ತಕಪಕ ಪುಳಕ-

ಕ್ಕೆ, ತತ್ತರಗುಡೊ ತೊಡೆ, ಯಮುನೆಯ ಹೊನ್ನದಿಣ್ಣೆಗಳ 
ನಿಮ್ನೋನ್ನತ ನಿತಂಬ ನಿರೀಕ್ಷಣೆಗೆ, ಕೈನಿಮಿರ 
ಜಾರುಸ್ಪರ್ಶಕ್ಕೆ. ಆಡಿದ್ದುಂಟವರ  ಜೋಡಿ ಚಿನ್ನಿಕೋಲು,
ಕೈಚಂಡು, ಗುಮ್ಮಟಬುಗರಿ, ಕಗ್ಗವಿಗತ್ತಲಲ್ಲಿ ಕಣ್ಣುಮುಚ್ಚಾಲೆ.

ನುಗ್ಗಿದ್ದೂ ಉಂಟು ಒಬ್ಬನೇ ಪಾತಾಳಗಹ್ವರದಾಳಕ್ಕೆ 
ಹನಿಮಿನುಗು ನಕ್ಷತ್ರದೀಪ್ತಿಯಲಿ ಮೈಮರೆತು 
ಏಕಾಂಗಿ ಧ್ಯಾನಿಸಿದ್ದುಂಟು  ಕಾಣದ್ದನ್ನು ಕಾಣಲಿಕ್ಕೆ 
ಮೈಯೆಲ್ಲ ಕಿವಿಯಾಗಿ ಕಾದದ್ದುಂಟು  ಕೇಳದ್ದನ್ನು ಕೇಳಲಿಕ್ಕೆ. 

ಸಾಂದೀಪಿನೀಮುನಿಯ ಕಾಲಕೆಳಗರಳಿತ್ತು ಒಂದು ನಿಶ್ಯಬ್ದ 
ನೀಲೊತ್ಪಲ ಪುಷ್ಪ ತುಂಬಿಯೋಂಕಾರ ಝಂಕೃತಿಯಲ್ಲಿ.
ಚಿಂತಿಸಿದ್ದುಂಟು  ಕೈಗಂಟಿಸಿಕೊಳ್ಳದೆ  ಬಿಡಿಸುವುದ ಹಲಸ.
ಒತ್ತೊತ್ತುಕತ್ತಲನು ಬೆಂಕಿಗೂಡಲಿ ಸುಟ್ಟು ನಕ್ಷತ್ರಮಾಡುವುದ.

ಧ್ಯಾನಿಸಿದ್ದುಂಟು  ಆಗುವುದು ಹೇಗೆಂದು ಕೈಯಿಲ್ಲದವರ ಕೈ ;
ಬಟ್ಟೆಗೆಟ್ಟವರ ಬಟ್ಟೆ ; ಮೃತ್ಯುಪೀಡಿತರನ್ನೆತ್ತುವ 
ಗರುತ್ಮಂತ ಕೊಕ್ಕಿನಿಕ್ಕುಳ; ಏಕಾಗ್ರಚಿತ್ತದಿಂದಾತ್ಮಾಹುತಿ ನಡೆಸುತ್ತ 
ರಚಿಸುವುದು ಹೇಗೆಂದು ಕಗ್ಗಾಡಿನಲ್ಲೊಂದು ಕಾಲೋಣಿ 

ಅರ್ಜುನಾ, ಈ ನಿದಿಧ್ಯಾಸನದಿಂದಲೇ ನಾನು -ಶ್ರಾವಕ.

                                                                                ಉವಾಚ :4


ಸೇವೆಯೆಂದರೆ ಸೇವೆ. ನಿರಹಂಕಾರಿಯಾಗದೆ ಸಾಗದೆಂದಿಗೂ
ನಡಬಗ್ಗಿ ನಡೆ ಸುವೀ ಕೈಂಕರ್ಯ. ಭೃಗುವಿನ
ಕಾಲೊತ್ತಬೇಕು. ಯಾರದೋ ತೇರಗುದುರೆಯ ದೇಕುರೇಖು
ನಡೆಸಬೇಕು. ಕುರುಕ್ಷೇತ್ರದ ಮಡುವಲ್ಲಿಳಿಸಿ ಕುದುರೆ

ಕುಡಿಸಬೇಕು ತಣ್ಣನೆ ನೀರು. ಅದರ ಮೈ ತಿಕ್ಕಿತಿಕ್ಕಿ

ತೊಳೆಯಬೇಕು. ಹಲ್ಲಣದ ಧೂಳು ಝಾಡಿಸಿ, ಕಟ್ಟಿ ಗಾಯಕೆ ಬಟ್ಟೆ
ರಕ್ತಕಲೆಯೊರಸಿ, ಮೆತ್ತಗೆ ಅಕ್ಕರಾಸ್ಥೆಯಿಂದ ಕತ್ತಿನ
ಜೂಲಲ್ಲಾಡಿಸುತ್ತಾ  ಕೈ, ಆದಾಗ ನಾನದರೊಂದು ಅವಿಭಾಜ್ಯ

ಅಂಗ, ಕಣ್ಣಲ್ಲೇಕೆ ತೆಳ್ಳಗೆ ತೇವವಾಡುವುದೋ ಕಾಣೆ.

ಗರಿಕೆಹುಲ್ಲು ತಿನ್ನಿಸುವಾಗ, ಹಚ್ಚನೆ  ಹಸಿಹುಲ್ಲ ಕಂಪು
ಮೂಗಿಗಡರಿ, ಸ್ವಾಟೆಯಂಚಿಂದ ತೊಟ್ಟಿಕ್ಕುವ ಮರಕತ
ಮಣಿ ನಿಟ್ಟಿಸುತ್ತಾ ಮೈ ಮರೆತಾಗ ನಾನು, ನಿನಗೆ ತೂಕಡಿಕೆ

ಸೇವೆಯೆಂದರೆ ಹೀಗೇ  ಮತ್ತೆ. ನಿರಹಂಕರಣಕ್ಕಗತ್ಯ-

ವೀ ಆತ್ಮೋನ್ನತಿಯ  ರಾಜಮಾರ್ಗ. ರಾಜರದ್ದಲ್ಲ ಅರ್ಜುನಾ ..
ಸೇವಾಮಗ್ನರದ್ದು. ನೆನೆಸಿಕೋ  ನಾನು ವಿದುರನ ಮನೆಯ ಹಂಚು
ಹಚ್ಚಿದ್ದ; ದ್ರೌಪದಿಯ ಅಕ್ಷಯ ಭಾಂಡಿ ತೊಳೆದಿದ್ದ ..

ಅನನ್ಯತನ್ಮಯತೆಯಿಂದ ಇಷ್ಟೆಲ್ಲ ಮಾಡಿದೆನೆಂದೇ  ನಾನು-ಸೇವಕ.



                                                                                ಉವಾಚ : 5


ಓದೋನು ಒಬ್ಬ, ಕಾದೋ ನು ಇನ್ನೊಬ್ಬ, ದನಿಯ ಮನೆಮುಂದೆ
ಕೈ ದೊಣ್ಣೆಕಾವಲ  ಬಾಗಿಲ ಭಂಟ ಮತ್ತೊಬ್ಬ  ಮಳೆ ತೊಳಿದಿಟ್ಟ
ಮಣ್ಣ ಪಾತ್ರೆಯನ್ನಕ್ಷಯಗೊಳಿಸಿ ಅಣ್ಣ ಬೆಳೆಯುವ ಕೃಷಿಕ
ಮಗದೊಬ್ಬ- ಖಂಡಿತ ಅಲ್ಲ ; ನಾಲಕ್ಕನ್ನೂ  ಮಾಡಿದ್ದು ನಾನು-ಒಬ್ಬನೆ

ಇದೀಗ ಪಂಚಮಾಂಕದ ಸರದಿ. ಒಟ್ಟಿಗೆದೆಯೊಡ್ಡಿ  ನಿಂತಿದ್ದೇನೆ
ಬರಿಗೈಬಂಟ. ಚಕ್ರವನ್ನಳವಡಿಸಿ ನೂತಿದ್ದಾಯ್ತು  ಏಕಾಂತದೇ ಕಾಗ್ರ
ಧ್ಯಾನದ ಹುರಿ. ಉನ್ಮತ್ತ ಕತ್ತಲ ಮುಂದೆ ಚಾಚುತ್ತ ಕೊರಳು
ತನ್ನನ್ನು ತಾನೇ ಸುಟ್ಟುಕೊಳ್ಳುವ ಸತ್ಯಾಗ್ರಹದ ನಿಷ್ಕಂಪಿತಗ್ನಿಶಿಖೆ.

ತನ್ನ ತಾನೇ ರಕ್ಷಿಸುವ, ತನ್ನ ತಾನೇ ಸೇವಿಸುವ, ತನ್ನ ಮಲವನ್ನ ತಾನೇ
ತೊಳೆದು ನಿರ್ಮಲಗೊಳುವ ಪಂಚಮಾಂಕ -ಈಗ ನಾಕೂ
ಕಾಲೂರಿ ಚಾಲೂ. ಗಲ್ಲಕೆ ಕೈ ಹಚ್ಚಿ ಯೋಚಿಸು ಪಾರ್ಥ.
ಬೆವರಿ ನಾರದರ್ಥಕ್ಕಿಲ್ಲ ತೃಣಮಾತ್ರ ಪರಮಾರ್ಥ.

ಅನುವಾಗಿನ್ನು; ನಿರ್ಧನುವಾಗಿನ್ನು. ಬಂಧಮೋಕ್ಷದ ಸಂಗ್ರಾಮಕ್ಕೆ ಬೇಕಾದ್ದು
ಹೃದಯಪಕ್ಷಿಗೆ ವೈನತೇ ಯ ರೆಕ್ಕೆ ; ಉರಿ ಉರಿವ ಬೆಂಕಿಚರಿಗೆಗೆ ಸದಾ
ಸತ್ಯನಿಷ್ಟೆಯ ಅಸ್ಖಲಿತಧಾರೆ. ಎತ್ತೆತ್ತಿ ಇಡು ನಿಧಾನಕ್ಕೆ ಸಾವಿರ ಪಾದ
ಇರುವೆ ನೋಯದ ಹಾಗೆ ..ಪಂಚಮದ ಇಂಚರ ಎಷ್ಟು ಮಾತ್ರಕ್ಕೂನೂ
ಒಡೆಯದಂತೆ.

 ಮೊದಲನೆಯ ದಿನ 19 ನೆಯ ತಾರೀಖು  ಶನಿವಾರ  ಜರುಗಿದ  ಕಾರ್ಯಕ್ರಮದಲ್ಲಿ .
ಸನ್ . 2013 ರ 'ಮೈಸೂರ್ ಅಸೋಸಿಯೇಷನ್, ಮತ್ತು ಮುಂಬೈ ವಿಶ್ವವಿದ್ಯಾಲಯದ  ಕನ್ನಡ ವಿಭಾಗ,  ಜಂಟಿಯಾಗಿ ಆಯೋಜಿಸಿದ್ದ  'ಮೈಸೂರು ಅಸೋಸಿಯೇಶನ್ ಬಂಗಾರದ ಹಬ್ಬದ ದತ್ತಿ ಉಪನ್ಯಾಸ ಕಾರ್ಯಕ್ರಮ' ದಲ್ಲಿ  ಭಾಷಣ ಮಾಡಲು ಡಾ. ಎಚ್ಛೆಸ್ವಿಯವರುಆಗಮಿಸಿದ್ದರು. 

                                        19 ನೆಯ ತಾರೀಖು  ಶನಿವಾರ  ಜರುಗಿದ  ಕಾರ್ಯಕ್ರಮದಲ್ಲಿ 

                                                              ಮೊದಲನೆಯ ದಿನ 
                                                        
                                                        'ಆಧುನಿಕ ಕನ್ನಡಕಾವ್ಯಗಳು' 

                                          ಎಂಬ ವಿಷಯಗಳನ್ನು ಕುರಿತು ಮಾತಾಡಿದರು.                                     
                                                     
                                                      ಇದಕ್ಕೆ ಪೂರ್ವ ಭಾವಿಯಾಗಿ                             

                            ಏನ್.ಕೆ.ಇ. ಎಸ್ . ಶಾಲೆಯ ಮಕ್ಕಳಿಂದ 'ಕಾವ್ಯ ನೃತ್ಯ' ಕಾರ್ಯಕ್ರಮವಿತ್ತು. 


                                                                           Dance
                                                   Murthy is also watching the events
                                                                            Dance
                                                                       Audience
                                                       Section of the audience..
                                                                       Dance
                                                                    Dance programme
                                                          Dance by the students...
                                                                    Dance by the students..
Dance by the NKES High School boys and girls...
Dr. Murthy being felicitated with a shawl and flower bouquet by the Vice president, Shri. Jagirdhar,  of 
The My.Assn. while Shri. K. Manjunathiah is also there...

ಶ್ರೀ. ಕೆ. ಮಂಜುನಾಥಯ್ಯನವರು ಪ್ರಾಸ್ತಾವಿಕ ಭಾಷಣ ಮಾಡಿ,  80 ರ ದಶಕದ  ಹೊಸದರಲ್ಲಿ  ಆಗತಾನೆ ಶುರುವಾಗಿದ್ದ  ಮುಂಬೈ ವಿಶ್ವವಿದ್ಯಾಲಯದ ಕನ್ನಡ ಶಾಖೆಯ ಅಂದಿನ ಮುಖ್ಯಸ್ಥರಾಗಿದ್ದ ಡಾ. ಚಿದಂಬರ ದೀಕ್ಷಿತರು,  ಬಂಗಾರದ ಹಬ್ಬವನ್ನು ಆಚರಿಸಿಕೊಂಡ ಬೊಂಬಾಯಿನ ಅತಿ ಹಿರಿಯ ಸಂಸ್ಥೆಯಾದ  ಮೈಸೂರ್ ಅಸೋಸಿಯೇಶನ್ ಜೊತೆ ಸಂಪರ್ಕಿಸಿದರು. ಕನ್ನಡ ಭಾಷೆಯ ಹಲವಾರು ಪ್ರಾಕಾರಗಳಾದ ನಾಟಕ, ಸಂಗೀತ, ನೃತ್ಯ, ಮೊದಲಾದ ಕ್ಷೇತ್ರಗಳಲ್ಲಿ ಮಂ ಚೂಣಿಯಲ್ಲಿದ್ದ  ಮೈಸೂರ್ ಅಸೋಸಿಯೇಶನ್  ಪ್ರತಿವರ್ಷವೂ ಒಬ್ಬ ಶ್ರೇಷ್ಠ ಕವಿಗಳು, ಸಂಗೀತಕಾರರು,  ನಾಟಕಕಾರರು, ಭಾಷಣಕಾರರು ಮೊದಲಾದ ಮೇರು ವ್ಯಕ್ತಿಗಳನ್ನು ಬರಮಾಡಿಕೊಂಡು  ಒಂದು  ದತ್ತಿ ಉಪನ್ಯಾಸ  ಮಾಲಿಕೆಯನ್ನು  ಆರಂಭಿಸುವ ಅಗತ್ಯದ ಬಗ್ಗೆ  ಸಮಾಲೋಚಿಸಿ  ಕನ್ನಡ ವಿಭಾಗ ಇಂತಹ ಕಾರ್ಯದಲ್ಲಿ ಸದಾ ತನ್ನ ಸಹಯೋಗವನ್ನು ಕೊಡುವುದಾಗಿ ಭರವಸೆ ಕೊಟ್ಟರು. ಅದೇ ಪ್ರಕಾರ ದೀಕ್ಷಿತರ  ತರುವಾಯ  ಬಂದ ಡಾ. ತಾಳ್ತಜೆ ವಸಂತಕುಮಾರ್, ಈಗಿನ ಡಾ. ಜಿ.ಏನ್. ಉಪಾಧ್ಯ ಮೊದಲೇ ನಿರ್ಧರಿಸಿದ್ದಂತೆ ನಡೆಸಿಕೊಂಡು ಹೋಗುತ್ತಿರುವುದನ್ನು ಶ್ಲಾಘಿಸಿದರು.  ಈ ಮಹನೀಯರ ನಿಸ್ವಾರ್ಥ ಪರಿಶ್ರಮದಿಂದಾಗಿ ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ  ಎಂ. ಎ; ಎಂ. ಫಿಲ್ ಮತ್ತು  ಪಿ. ಎಚ್. ಡಿ ಗಳಿಸುವ ಪ್ರತಿಭಾನ್ವಿತ ವಿದ್ಯಾರ್ಥಿಗಳ ಸಂಖ್ಯೆ ದಿನ ದಿನವು ಹೆಚ್ಚುತ್ತಿದೆ.

ಅನಾರೋಗ್ಯದ ಕಾರಣದಿಂದಾಗಿ ಡಾ. ಉಪಾಧ್ಯ, ಹಾಗೂ  ಅಧ್ಯಕ್ಷ,  ಡಾ. ರಾಮಭದ್ರ ಸಮಾರಂಭದಲ್ಲಿ ಹಾಜರಿರಲು ಸಾಧ್ಯವಾಗಲಿಲ್ಲ. ಉಪಾಧ್ಯಕ್ಷ ಶ್ರೀ. ನಾರಾಯಣ ಜಾಗೀರ್ದಾರ್ ರವರು 'ಡಾ. ಎಚ್ಚೆಸ್ವಿ' ಯವರಿಗೆ 'ಪುಷ್ಪ ಗುಚ್ಛ' ವನ್ನು ಕೊಟ್ಟು ಗೌರವಿಸಿದರು. ಮುಂಬೈನ ಉಪನಗರ ವಡಾಲದಲ್ಲಿರುವ   'ರಾಷ್ಟ್ರೀಯ ಕನ್ನಡ ಶಾಲೆ'ಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮೊದಲು ಸುಂದರವಾದ ಸಾಮೂಹಿಕ ನೃತ್ಯ ಪ್ರದರ್ಶನಮಾಡಿ ತೋರಿಸಿದರು. ಬೆಳಗಾವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ಭಾಗವಹಿಸಿ ಪ್ರಥಮ ಪುರಸ್ಕಾರವನ್ನುಗಳಿಸಿದ್ದ ವಿಚಾರವನ್ನು ಶ್ರೀ. ಕೆ. ಮಂಜುನಾಥಯ್ಯನವರು  ಸಭೆಯ ಗಮನಕ್ಕೆ ತಂದರು. ಈ ಶಾಲೆಯ ಹಲವಾರು ವಿದ್ಯಾರ್ಥಿಗಳು ಮುಂಬೈ ನಗರದ ಹಲವಾರು ಪ್ರತಿಯೋಗಿತೆಗಳಲ್ಲಿ ಭಾಗವಹಿಸಿ ಪಾರಿತೋಷಕಗಳನ್ನೂ ಗೆಲ್ಲುತ್ತಾ  ಬಂದಿರುವುದು ಹೆಮ್ಮೆಯ ವಿಷಯವಾಗಿದೆ.  ಕಾರ್ಯಕ್ರಮ ನಿರೂಪಕಿ,  ಚಿ. ಜ್ಯೋತಿ ದೇವಾಡಿಗ, ಡಾ. ಎಚ್. ಎಸ್. ವೆಂಕಟೇಶಮೂರ್ತಿಯವರ ಪರಿಚಯವನ್ನು ಓದಿದರು.  ತಾಯಿಯ  ವಾತ್ಸಲ್ಯದ  ಬಗ್ಗೆ  ದ.ರಾ. ಬೇಂದ್ರೆ, ಗೋಪಾಲ ಕೃಷ್ಣ ಅಡಿಗ,  ಆಲನಹಳ್ಳಿ ಶ್ರೀಕೃಷ್ಣ,  ಪಿ. ಲಂಕೇಶ್  ತಮ್ಮ ಕವನಗಳಲ್ಲಿ ವಿಶ್ಲೇಷಿಸಿದ್ದಾರೆ.

ನನ್ನವ್ವ ಫಲವತ್ತಾದ ಕಪ್ಪು ನೆಲ 
ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ ; 
ಸುಟ್ಟಷ್ಟು ಕಸುವು, ನೊಂದಷ್ಟು ಹೂ ಹಣ್ಣು 
ಮಕ್ಕೊಳೊದ್ದರೆ ಅವಳ ಅಂಗಾಂಗ ಪುಲಕ ;
ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ

ಪಲ್ಲ ಜೋಳವ ಎತ್ತಿ ಅಪ್ಪನ್ನ ಮೆಚ್ಚಿಸಿ ತೋಳಬಂದಿಯ ಗೆದ್ದು ,
ಹೆಂಟೆಗೊಂದು ಮೊಗೆ ನೀರು ಹಿಗ್ಗಿ ;
ಮೆಣಸು, ಅವರೆ, ಜೋಳ, ತೊಗರಿಯ ಹೊಲವ ಕೈಯಲ್ಲಿ ಉತ್ತು , 
ಹೂವಲ್ಲಿ ಗದ್ದೆಯ ನೋಡಿಕೊಂಡು, 
ಯೌವನವ ಕಳೆದವಳು ಚಿಂದಿಯ ಸೀರೆ ಉಟ್ಟುಕೊಂಡು.

ಸತ್ತಳು ಈಕೆ : 
ಬಾಗು ಬೆನ್ನಿನ ಮುದುಕಿಗೆಷ್ಟು ಪ್ರಾಯ ? 
ಎಷ್ಟು ಗಾದಿಯ ಚಂದ್ರ, ಒಲೆಯೆದುರು ಹೋಳಿಗೆಯ ಸಂಭ್ರಮ ?
ಎಷ್ಟು ಸಲ ಈ ಮುದುಕಿ ಅತ್ತಳು
ಕಾಸಿಗೆ, ಕೆಟ್ಟ ಪೈರಿಗೆ, ಸತ್ತ ಕರುವಿಗೆ; 
ಎಷ್ಟು ಸಲ ಹುಡುಕುತ್ತ ಊರೂರು ಅಲೆದಳು 
ತಪ್ಪಿಸಿಕೊಂಡ ಮುದಿಯ ಎಮ್ಮೆಗೆ ?


ಸತಿ ಸಾವಿತ್ರಿ, ಜಾನಕಿ, ಊರ್ಮಿಳೆಯಲ್ಲ ;
ಚರಿತ್ರೆ ಪುಸ್ತಕದ ಶಾಂತ, ಶ್ವೇತ, ಗಂಭೀರೆಯಲ್ಲ ;
ಗಾಂಧೀಜಿ , ರಾಮಕೃಷ್ಣರ ಸತಿಯರಂತಲ್ಲ ; 
ಮುತ್ತೆೈದೆಯಾಗಿ ಕುಂಕುಮ ಕೂಡ ಇಡಲಿಲ್ಲ .

ಬನದ ಕರಡಿಯ ಹಾಗೆ 
ಚಿಕ್ಕ ಮಕ್ಕಳ ಹೊತ್ತು 
ಗಂಡನ್ನ ಸಾಕಿದಳು ಕಾಸು ಗಂಟಿಕ್ಕಿದಳು 
ನೊಂದ ನಾಯಿಯ ಹಾಗೆ ಬೈದು, ಗೊಣಗಿ, ಗುದ್ದಾಡಿದಳು ;

ಸಣ್ಣತನ, ಕೊಂಕು, ಕೆರೆದಾಟ ಕೋತಿಯ ಹಾಗೆ :
ಎಲ್ಲಕ್ಕೆ ಮನೆತನದ ಉದ್ಧಾರ ಸೂತ್ರ. 
ಈಕೆ ಉರೆದೆದ್ದಾಳು 
ಮಗ ಕೆಟ್ಟರೆ, ಗಂಡ ಬೇರೆ ಕಡೆ ಹೋದಾಗ ಮಾತ್ರ. 

ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ ;
ನನ್ನವ್ವ ಬದುಕಿದ್ದು 
ಕಾಳುಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ ;
ಮೇಲೊಂದು ಸೂರು, ಅನ್ನ , ರೊಟ್ಟಿ , ಹಚಡಕ್ಕೆ ;
ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ.

ಇವಳಿಗೆ ಮೆಚ್ಚುಗೆ,
ಕೃತಜ್ಞತೆಯ ಕಣ್ಣೀರು : 
ಹೆತ್ತದ್ದಕ್ಕೆ ಸಾಕಿದ್ದಕ್ಕೆ ; ಮಣ್ಣಲ್ಲಿ ಬದುಕಿ, 

ಮನೆಯಿಂದ ಹೊಲಕ್ಕೆ ಹೋದಂತೆ 
ತಣ್ಣಗೆ ಮಾತಾಡುತ್ತಲೇ ಹೊರಟು ಹೋದದ್ದಕ್ಕೆ.



ಬೇಂದ್ರೆ, ಗೋಪಾಲಕೃಷ್ಣ ಅಡಿಗ, 'ಡಾ. ಚೆಸ್ವಿ'ಯವರ ಆರಾಧ್ಯ ದೇವತೆಗಳು. ಮತ್ತಿತರ ಕವಿಗಳ ಕವನಗಳನ್ನೂ ವಿಶ್ಲೇಷಿಸಿದರು.
ತಮ್ಮ ಬರಹದ ಒಂದು ತುಣುಕನ್ನೂ ಹೋಲಿಕೆಗೆ ಬಳಸಿದರು
'ಉತ್ತರಾಯಣ ಮತ್ತು .. (ಪುಟ ೩)

'ಶ್ರೀ ಸಂಸಾರಿ'.

ಶ್ರೀರಾಮನು ತಾನೊಬ್ಬನೇ ಎಲ್ಲೂ  ಪುಜೆಗೊಳ್ಳುದುವು ಕಂಡಿಲ್ಲ 
ಹೋಗಿ ನೋಡಿ ನೀವ್ಯಾವುದೆ  ಊರಿನ ಯಾವುದೆ ರಾಮನ ಗುಡಿಗೆ !
ಯಾವುದೇ ಮನೆಯ ಗೋಡೆಯ ಮೇಲಿನ ಪಠವನ್ನಾದರು ನೋಡಿ 
ರಾಮನೊಬ್ಬನೇ ಎಂದೂ ಎಲ್ಲೂ ಬಾರನು ಪೂಜೆಯ ಮಣೆಗೆ 

ಎಡಕ್ಕೆ ಸೀತ, ಬಲಕ್ಕೆ ಲಕ್ಷ್ಮಣ, ಕಾಲ ಕೆಳಗೆ ಹನುಮಂತ 
ಕೆಲವು ಪಠದಲ್ಲಿ  ತಮ್ಮ ಶತ್ರುಘ್ನ ಚಾಮರ ಹಾಕುವ ಭಂಗಿ
ಹಿಂದೆ ಕೊಡೆ ಹಿಡಿದ ಭರತ, ವಿಭೀಷಣ-ಜಾಂಬವ - ದೊರೆ ಸುಗ್ರೀವ 
ಕೆಲವು ಪಠದಲ್ಲಿ ಮಾಂಡವಿ, ಊರ್ಮಿಳೆ, ನಗುತ್ತಿರುವ ಶ್ರುತಕೀರ್ತಿ
  
ಉಳಿದ ದೇವರಂತೆಂದಿಗು ರಾಮ ಒಬ್ಬನೆ  ಪೂಜೆಯ ಕೊಳ್ಳನು 
ರಾಮಪೂಜೆ ಬರಿ ರಾಮನ ಪುಜೆಯೇ ? ಅದೊಂದು ಕುಟುಂಬ ಪೂಜೆ 
ಎಷ್ಟು ವಿಶಾಲ...ಎಷ್ಟು ವಿಸ್ತೃತ ...ಶ್ರೀರಾಮನ ಈ ಸಂಸಾರ !
ಇದು ತಾನಾಯಿತು ತನ್ನ ಕಣ್ಗೊಂಬೆ ತಾನಾಯಿತು- ಚೌಕಟ್ಟಲ್ಲ.

ರಾಮ ಸಂಸಾರ ಒಟ್ಟು ಸಂಸಾರ. ತಮ್ಮಂದಿರು ನಾದಿನಿ ತಾಯಿ 
ಆಳು ಕಾಳಿಗೂ ಮನ್ನಣೆಯುಂಟು. ಜೊತೆಗೆ ಗೆಳೆಯರಿಗು ಕೂಡ 
ಅಯೋಧ್ಯೆಯಲ್ಲೇ ಲಂಕೆ-ಕಿಷ್ಕಿಂಧ-ಗುಡ್ಡಗಾಡು ಸೇರಿರಲು 
ಆರ್ಯ-ದ್ರಾವಿಡ-ಆದಿವಾಸಿಗೂ   ರಾಮಪೂಜೆಯಲಿ ಪಾಲು 

ಸಂಸಾರದ ಈ ಸಾರ ವ್ಯವಸ್ಥೆ ಪೂಜೆಗೊಳ್ವುದೀ  ನೆಲದಲ್ಲಿ 
ನಿತ್ಯಾರಾಧನೆ ನಿತ್ಯನೈವೇದ್ಯ ರಾಮನ ಪೂಜೆಯ ನೆವದಲ್ಲಿ 
ವರ್ಗ ವರ್ಣ ವೈಷಮ್ಯ ಲೆಕ್ಕಿಸದೆ ಪೂಜೆಗೊಳ್ಳುತಿದೆ ಸಂಸಾರ 
ಸ್ವರ್ಗವೆನ್ನುವುದು ಇನ್ನೆಲ್ಲಿರುವುದು-ಇಲ್ಲೇ ಕಾಲಡಿ ನೆಲದಲ್ಲೆ 

ಈ ಕೌಟುಂಬಿಕ ಗೋಷ್ಠಿ ಪಠದಲ್ಲಿ ಸ್ನೇಹ ಮೋಹ ತಿಕ್ಕಾಟಗಳು !
ತಮ್ಮ ತಮ್ಮ ಗಂಡಂದಿರ ಪಕ್ಕ ಬೀಗುವರರೆನಗೆ ಹೆಣ್ಣುಗಳು !
ಹೆಗಲಿಗೆ ಹೆಗಲನು ತಾಗಿಸಿ ನಿಂತಿದ್ದಾನೆ ಜಾಂಬವನು ಭರತನಿಗೆ 
ಚಿತ್ರ ಪಠದ ಅಂದಾಜೇ  ಇಲ್ಲ ತಿರುವುಮೂತಿ ಹನುಮಂತನಿಗೆ 

ಕರಿಯ ಮುಸುಕಲ್ಲಿ ಬಿಂಬಗ್ರಾಹಿ ಮಂದ್ರದಲ್ಲಿ ಗೊಣಗಿದ ಹೀಗೆ :
"ಹೆಗಲ ಬಿಲ್ಲ ಕೆಳಗಿರಿಸಿರಿ ಸ್ವಾಮಿ, ಜಾಗ ಉಂಟು ಇನ್ನೊಬ್ಬರಿಗೆ !"
ಥಟ್ಟನೆ ನೆನಪು ಸೇತುರಾಮನಿಗೆ ಮರಳು ಸೇವೆಯ ಅಳಿಲುಮರಿ !
ರಾಮ ಧ್ಯಾನಿಸಿದ : ಮರುಕ್ಷಣದಲ್ಲಿ ಅಳಿಲಿದೆ ಆತನ ಹೆಗಲಲ್ಲಿ.


                                Dr. HSV with the Organizers of Mysore Association..
                         Dr. HSV with  Shri. K. Manunathaiah, Dr. B. R.Manjunath, and other friends...
                                    Dr. HSV Murthy, after the Lecture programme...

Dr. Bhavani, Chi. Madhavi, Chi. Tejas, HRLV, Saroja and Lakshmi Bhavani, in their residence at Mahim, Mumbai..


Comments

Popular posts from this blog

"The Kannada division of Mumbai university", is celebrating 45th year !

98th, Foundation day of The Mysore Association celebrated on 4th, March, 2023 !

"ನೇಸರು ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆ-2022ರ ಬಹುಮಾನ ವಿತರಣೆ ಹಾಗೂ ಕನ್ನಡ ನಾಟಕ- "ಚಿಟ್ಟೆ" ಪ್ರದರ್ಶನ !