Karnataka sangha kalabharati 

The Bhavani Mirmira parivar 

present,
Dr. Sow. Ashwini Bhide-Deshpande
at a 
Hindustani Classical Vocal Concert
with percussionists
Pt., Vishwanath & Smr.,Seema shirodkhar

On the 5th, Anniversary Memorial of the dedicated Achiever,

Sow, Lakshmi Sudhindra


On Wed, 19th Februvary, 2020
at 10 a.m. 
At
The Mysore association's Auditoriu, Matunga, 


Mumbai-400019

ಶ್ರೀಮತಿ ಲಕ್ಷ್ಮೀ ಸುಧೀಂದ್ರ ಅವರ ಪರಿಚಯ :

(ಮೇಲಿನ ಸ್ಕ್ಯಾನ್ ಮಾಡಿ ಹಾಕಿರುವ  ಪರಿಚಯದ ಪುಟವನ್ನು ಓದುವುದು ಕಷ್ಟ. ಅಕ್ಷರಗಳು ಚಿಕ್ಕದಾಗಿರುವುದರಿಂದ ಅದರ ಪ್ರತಿಲಿಪಿಯನ್ನು ಕೆಳಗೆ ಟೈಪ್ ಮಾಡಿ ಕೊಟ್ಟಿದ್ದೇನೆ)  

ಜನನ ಹಾಗೂ ಜೀವನದ ಪಯಣ :


ಲಕ್ಷ್ಮಿ ಅವರು, ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಚಿಲಕಾಲೂರುಪೇಟ್  ವಾಸಿ, ಶ್ರೀ ವೇದುರುಮುಡಿ ತಿರುಮಲ್ ರಾವ್ ಹಾಗೂ ಸೌ ಕೃಷ್ಣವೇಣಿಬಾಯಿ ದಂಪತಿಗಳ ಮೂರನೆಯ ಮಗುವಾಗಿ ೨೮, ಜನವರಿ, ೧೯೪೯ ರಲ್ಲಿ  ಜನಿಸಿದರು.  ಅವರು  ೧೯೬೮ ರಲ್ಲಿ ಡಾ. ಭವಾನಿಯವರನ್ನು ಮದುವೆಯಾದ ಬಳಿಕ, ಮುಂಬಯಿಗೆ ಪಾದಾರ್ಪಣೆ ಮಾಡಿದರು.  ಅವರ ತಂದೆ ಧಾರವಾಡ  ಜಿಲ್ಲೆಯ ರಾಣಿಬೆನ್ನೂರಿನಲ್ಲಿ ವೃತ್ತಿಯಲ್ಲಿದ್ದಾಗ,  ಕನ್ನಡ ಮೀಡಿಯಂ ನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಾಡಿದ್ದರು. ಆದರೆ ತಂದೆಯವರಿಗೆ ಮತ್ತೆ ಆಂಧ್ರ ಪ್ರದೇಶಕ್ಕೆ ಮರುವರ್ಗವಾದಾಗ ಅಲ್ಲೇ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿದರು. ಹಲವು ಭಾಷೆಗಳನ್ನು ಕಲಿಯಲು ಆಸಕ್ತರಾಗಿದ್ದ ಲಕ್ಷ್ಮಿಯವರು ಮುಂಬಯಿಗೆ ಬಂದಕೂಡಲೇ ತಾವು ಕಲಿತಿದ್ದ ಕನ್ನಡವನ್ನು ಮರು ಕಲಿಯಲು ಪುಣೆಯ ಕನ್ನಡ  ಮರಾಠಿ ಸ್ನೇಹವರ್ಧಕ ಸಂಘದ ಆಶ್ರಯದಲ್ಲಿ ದಾಖಲಾಗಿ ಸರ್ಟಿಫಿಕೇಟ್ ಗಳಿಸಿದರು 



ಕನ್ನಡ ಮಾತೆಯ ಪರಿಚಾರಿಕೆಯಾಗಿ :

೧೯೯೦ ರಲ್ಲಿ ಕರ್ನಾಟಕ ಸಂಘ ಮುಂಬಯಿ "೩ ವರ್ಷಗಳ ಕನ್ನಡ ಮರಾಠಿ ಸರ್ಟಿಫಿಕೇಟ್ ಕೋರ್ಸ್" ಪ್ರಾರಂಭಿಸಿದಾಗ,  ೯ ತಿಂಗಳ ಕಾಲ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದರು  ಕನ್ನಡ  ಶಾಲೆಗೆ ದಾಖಲಾದ ವಿದ್ಯಾರ್ಥಿಗಳು : 
* ಲಾಯರ್ ಗಳು, 
* ಹಾಡುಗಾರರು, 
* ವೈದ್ಯರು, 
* ನಟರು, 
* ಪತ್ರಿಕೋದ್ಯಮಿಗಳು,
* ಸರ್ಕಾರೀ ಮತ್ತು ಬ್ಯಾಂಕ್ ಅಧಿಕಾರಿಗಳು, 
* ವಿದ್ಯಾರ್ಥಿಗಳು,
* ಗೃಹಿಣಿಯರು, 
* ಬಿಜಿನೆಸ್ ಮನ್ ಗಳು, 
* ಇತ್ಯಾದಿ. 
ಅವರ ಮಾತೃಭಾಷೆಗಳು ಹಲವಾರು : ತೆಲುಗು, ತಮಿಳು, ಮರಾಠಿ, ಗುಜರಾತಿ, ಹಿಂದಿ ಕೊಂಕಣಿ ಇತ್ಯಾದಿ. ಅವರಿಗೆಲ್ಲ ಅತಿ ಸುಲಭವಾಗಿ ಅರ್ಥವಾಗುವಂತೆ ಕನ್ನಡ ಭಾಷೆಯನ್ನು ಕಲಿಸಿ, ಅವರ ಪ್ರೀತಿಗೆ ಪಾತ್ರರಾದರು. 

ಕರ್ನಾಟಕ ಸಂಘದ ವಾರ್ಷಿಕ ಕಾರ್ಯಕ್ರಮಗಳಲ್ಲಿ ತಮ್ಮ ವಿದ್ಯಾರ್ಥಿಗಳಿಂದ ಸಾಮೂಹಿಕ ಗೀತೆಗಳು, ಏಕಾಂಕ ನಾಟಕಗಳಲ್ಲಿ ಅಭಿನಯ, ನೃತ್ಯ ಪ್ರದರ್ಶಿಸುತ್ತಿದ್ದರು. 'ಆಲ್ ಇಂಡಿಯಾ ರೇಡಿಯೋ ಮುಂಬಯಿ' ನಿಂದ ಪ್ರತಿ ಶನಿವಾರ ಮಧ್ಯಾನ್ಹ ೧೨-೩೦ ರಿಂದ ೧ ಗಂಟೆಯವರೆಗೆ ಪ್ರಸಾರವಾಗುವ ಕನ್ನಡ ಕಾರ್ಯಕ್ರಮದಲ್ಲಿ ಲಕ್ಷ್ಮಿಯವರ 'ಸಮೀರ್ ತೊಡಂಕರ್' ಎಂಬ ವಿದ್ಯಾರ್ಥಿ "ನಾಗಪಂಚಮಿ ಹಬ್ಬದ ಬಗ್ಗೆ ಕನ್ನಡದಲ್ಲಿ ಕಾರ್ಯಕ್ರಮ" ಪ್ರಸ್ತುತಿ ಮಾಡಿದ್ದರು. 

ರಂಗ ಪ್ರಕಾರಗಳಲ್ಲಿ ಅಂದರೆ ರಂಗ ಸಜ್ಜಿಕೆ, ಬೆಳಕು, ನಿರ್ದೇಶನ ಮೊದಲಾದ ಬಗ್ಗೆ  ಹೆಚ್ಚು ತಿಳಿಯಲು ಅವರು ಒಂದು ತಿಂಗಳ 'ನೀನಾಸಂ' ನ (ಹೆಗ್ಗೋಡು) ಸುರೇಶ ಆನಗಳ್ಳಿ ಅವರ ನಾಯಕತ್ವದ  ಕಮ್ಮಟಕ್ಕೆ ಸೇರಿದರು. ಒಂದು ತಿಂಗಳು ಜರುಗಿದ ಕಮ್ಮಟದ ಸಮಾಪನ ಕಾರ್ಯಕ್ರಮದ ದಿನ, "ಸಿರಿ ಸಂಪಿಗೆ" ಎಂಬ ನಾಟಕದಲ್ಲಿ ತರಪೇತಿಗಾಗಿ  ಬಂಡಿದ್ದ ವಿದ್ಯಾರ್ಥಿಗಳ ಜೊತೆಗೆ ಭಾಗವಹಿಸಿದ್ದರು. 

ಇವೆಲ್ಲಾ ಅನುಭವಗಳಿಂದ ಲಕ್ಷ್ಮಿಯವರಿಗೆ ನಾಟಕ ನಿರ್ದೇಶನದ ಬಗ್ಗೆ ಬಹಳ  ಆಸಕ್ತಿಯುಂಟಾಯಿತು. ಕರ್ನಾಟಕ ಸಂಘವು  ಆಯೋಜಿಸಿದ  ಕುವೆಂಪು ರಾಷ್ಟ್ರಮಟ್ಟದ ಏಕಾಂಕ ನಾಟಕಗಳ ಸ್ಪರ್ಧೆಯಲ್ಲಿ ೭ ನಾಟಕಗಳ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತು ಯಶಸ್ವಿಯಾದರು. ಎರಡು ಪ್ರಯತ್ನಗಳಿಗೆ ಪ್ರಶಸ್ತಿ ದೊರೆಯಿತು ಮಾಟುಂಗಾ ಪೂರ್ವದಲ್ಲಿರುವ ಮುಂಬಯಿ ಕನ್ನಡ ಸಂಘ, ಹಾಗೂ ಮಹಾರಾಷ್ಟ್ರ ಘಟಕದ ಕನ್ನಡ ಸಾಹಿತ್ಯ ಪರಿಷತ್ತು, ಅವರ ಕನ್ನಡೇತರಕಲಾವಿದರಿಗೆ  ಕನ್ನಡ ಕಲಿಸಲು ಆಹ್ವಾನಿಸಿದರು.  

ಒಳ್ಳೆಯ ಕಂಠಶ್ರೀ ಇದ್ದ ಲಕ್ಷ್ಮಿ ಸುಧೀಂದ್ರ ಅವರು ತಮ್ಮ ವಿದ್ಯಾರ್ಥಿಗಳನ್ನು ಜಮಾಯಿಸಿಕೊಂಡು ಭಾವಗೀತೆ, ಸಾಮೂಹಿಕ ಗೀತೆ,  ಭಜನೆ, ಮೊದಲಾದವುಗಳನ್ನು ಗಣೇಶೋತ್ಸವ, ಶಾರದೋತ್ಸವ, ಪುರಂದರದಾಸರ ಆರಾಧನೆ, ಮೊದಲಾದ ಸಮಾರಂಭಗಳಲ್ಲಿ ಪ್ರಸ್ತುತಪಡಿಸುತ್ತಿದ್ದರು. "ಸಂದರ್ಯ ದರ್ಪಣ" ವೆಂಬ "ನೃತ್ಯ ಬ್ಯಾಲೆ" ಕರ್ನಾಟಕ ಸಂಘದ ವೇದಿಕೆಯಲ್ಲಿ ಪ್ರದರ್ಶಿಸಲ್ಪಟ್ಟು ಅಪಾರ ಮನ್ನಣೆ ಗಳಿಸಿತು.
"ನವರಸ"ವೆಂಬ ಸಂಸ್ಕೃತ ನಾಟ್ಯಶಾಸ್ತ್ರದಿಂದ ಆಧರಿಸಿದ  ಗೀತೆಗಳನ್ನು ನೃತ್ಯ ಪ್ರದರ್ಶನದಲ್ಲಿ ಸುಂದರವಾಗಿ ರಂಗಮಂಚದಲ್ಲಿ  ತಂದರು. ಮುಂಬಯಿನ ಘಾಟ್ಕೋಪರ್ (ಪ) ದಲ್ಲಿರುವ 'ಸೋಮಯ್ಯ ಕಾಲೇಜ್ ಕನ್ನಡಸಂಘ'ದ ಆಶ್ರಯದಲ್ಲಿ ಪ್ರದರ್ಶಿಸಿದ ನೃತ್ಯ ಕಾರ್ಯಕ್ರಮದಲ್ಲಿ ಶ್ರೀಮತಿ ಲಕ್ಷಿ ಮತ್ತು ತಂಡದವರು ಭಾಗವಹಿಸಿದ್ದರು.  ಭಾರತೀಯ ಜ್ಞಾನ ಪೀಠ ಪ್ರಶಸ್ತಿ ವಿಜೇತ,  ಡಾ. ಯು. ಆರ್. ಅನಂತ ಮೂರ್ತಿಯವರನ್ನು ಸನ್ಮಾನ ಮಾಡಿದ ಸಮಯದಲ್ಲಿ ಸ್ವಾಗತ ಗೀತೆಯನ್ನು ಶ್ರೀಮತಿ ಲಕ್ಷ್ಮಿ ಹಾಗೂ  ತಂಡದವರು ಹಾಡಿದ್ದರು. 

"ಕರ್ನಾಟಕ ದರ್ಶನ"ಎಂಬ ಖಾಸಗಿ ಪರ್ಯಟನೆಯನ್ನು ಆಯೋಜಿಸಿದ ಸಮಯದಲ್ಲಿ ಪಟ್ಟದ ಕಲ್ಲು, ಐಹೊಳೆ, ಬಾದಾಮಿ, ಬೇಲೂರು, ಹಳೇಬೀಡು, ಮೈಸೂರು, ಶ್ರವಣಬೆಳುಗೊಳ, ಹಾಗೂ ಶೃಂಗೇರಿಗೆ ತಮ್ಮ ವಿದ್ಯಾರ್ಥಿಗಳನ್ನು ಕಳಿಸಿಕೊಟ್ಟಿದ್ದರು.   ಶ್ರೀಮತಿ ಲಕ್ಷ್ಮೀ ಸುಧೀಂದ್ರ ಅವರ  ೨೫ ವರ್ಷಗಳ ಸತತ ಸೇವೆಯನ್ನು , ಗುರುತಿಸಿ, ಕನ್ನಡ ಸಾಹಿತ್ಯ ಪರಿಷತ್, ಮಹಾರಾಷ್ಟ್ರ ಘಟಕ, ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ, ೨೦೧೩ ಹಾಗೂ ೨೦೧೪ ಸಾಲಿನಲ್ಲಿ ಗೌರವಿಸಿದರು.  

ತಮ್ಮ ಮಾತೃಭಾಷೆ ತೆಲುಗಿನಲ್ಲೂ ನೈಪುಣ್ಯತೆಗಳಿಸಲು ತೆಲುಗು ಮಹಿಳೆಯರ ಸಾಹಿತ್ಯಿಕ ತಂಡಕ್ಕೆ ಸದಸ್ಯರಾದರು.  ಅವರು ಪ್ರಕಟಿಸುವ ವಾರ್ಷಿಕ ಪತ್ರಿಕೆ "ಸ್ಪಂದನ"ದಲ್ಲಿ ತಮ್ಮ ಲೇಖನಗಳನ್ನು ಪ್ರಕಟಿಸಿದರು.  ೨೦೧೫ ರಲ್ಲಿ ಪ್ರಕಟವಾದ "ಸ್ಪಂದನ" ಪತ್ರಿಕೆ ಅವರ ನೆನಪಿಗೆ ಮುಡುಪಾಗಿತ್ತು.  

ಪ್ರತಿಷ್ಠಿತ ವಾರದರಾಜ್ಯ ಆದ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ :
ಹಿಂದುಸ್ತಾನಿ ಸಂಗೀತವನ್ನು ಆಲಿಸಲು ಅವರಿಗೆ ಬಹಳ ಇಷ್ಟ. ೨೦೧೫ ರ ಫೆಬ್ರವರಿ ೧೯ ರಂದು ತೀರಿಕೊಂಡ ಲಕ್ಷ್ಮಿಯವರು ತಮ್ಮ ಎಲ್ಲಾ ಆಸಕ್ತಿ ಹಾಗೂ ಕಾರ್ಯಗಳಿಂದಾಗಿ ಕರ್ನಾಟಕ ಸಂಘ ಮುಂಬಯಿ ನಗರದಲ್ಲಿ ಮರಾಠಿ ಮತ್ತು ಕನ್ನಡಿಗರ ಬಾಂಧವ್ಯವನ್ನು ಸುಭದ್ರಗೊಳಿಸಲು ಕೊಡುತ್ತಿರುವ ಪ್ರತಿಷ್ಠಿತ, 'ವಾರದರಾಜ್ಯ ಪ್ರಶಸ್ತಿ'ಗೆ ಗುರುತಿಸಲ್ಪಟ್ಟಿದ್ದಾರೆ. ಡಾ. ಮಮತಾರಾವ್ ರಚಿಸಿರುವ ಮುಂಬಯಿನ ಕನ್ನಡ ಸಾಹಿತ್ಯಿಕ ಇತಿಹಾಸದ ಪುಟಗಳಲ್ಲಿ, ಶ್ರೀಮತಿ ಲಕ್ಷ್ಮೀ ಸುಧೀಂದ್ರರ ಹೆಸರು ದಾಖಲಾಗಿರುವುದು ಹೆಮ್ಮೆಯ ಸಂಗತಿ. (ಮರಣಾನಂತರ ಪ್ರದಾನಮಾಡುವ)

ಯಾರಾದರೂ ಮನಸ್ಸುಮಾಡಿದರೆ,  ತಮಗೆ ಸಿಕ್ಕ ಅತಿ ಚಿಕ್ಕ ಅವಕಾಶಗಳನ್ನು ಕಡೆಗಣಿಸದೆ ಶ್ರದ್ಧೆ ಮತ್ತು ಆತ್ಮವಿಶ್ವಾಸದಿಂದ ದುಡಿದರೆ ಪ್ರಶಸ್ತಿಗಳು ತಾನಾಗಿಯೇ ಬರುತ್ತವೆ. ಎಲ್ಲಕ್ಕಿಂತ ತಮ್ಮ ಕಾರ್ಯದಲ್ಲಿ ಸಿಗುವ ಸಾರ್ಥಕತೆ, ಸಮಾಧಾನ, ನಮ್ಮನ್ನು ಬೆರಗುಗೊಳಿಸುತ್ತದೆ. 

ಹರಿ ಓಂ !

** ೭ ಏಕ ಪಾತ್ರಾಭಿನಯದ ನಾಟಕಗಳನ್ನು ನಿರ್ದೇಶಿಸಿದ್ದಾರೆ. 
  (ಡಾ ಜಯಂತ ಕಾಯ್ಕಿಣಿ ವಿರಚಿತ) ೧. ಜತೆಗಿರುವನು ಚಂದಿರ ೨.  ಯಾವ ನದಿ  ಯಾವ ಪಾತ್ರ. 

* ಹುವಿ  ಡಾ ಎಚೆಸ್ವಿ. 
* ರೈಲ್ವೆ ಸ್ಟೇಷನ್, (ಶ್ರೀ ಪಿಳ್ಳೆಯವರ ಮಲಯಾಳಿ ಅನುವಾದ)
* ನನ್ನ ತಂಗಿಗೊಬ್ಬ ಗಂಡು ಬೇಕು.  ಶ್ರೀ. ಗುಂಡೂ ರಾವ್ 
* ಮುಖವಾಡ. ಶ್ರೀಮತಿ ಅಂಜಲಿ ಕೀರ್ತನೆ. (ಮರಾಠಿಯಿಂದ ಅನುವಾದ)
* ಮೂಕ ಪ್ರೇಮ, ಶ್ರೀ. ಪ್ರಕಾಶ್ ಧೋಪಟ್ಕರ್ (ಮರಾಠಿಯಿಂದ  ಕನ್ನಡಕ್ಕೆ ಅನುವಾದ)

ಪ್ರಶಸ್ತಿ ಗಳಿಸಿದ ನಾಟಕಗಳು : 
* ಯಾವ ನದಿ ಯಾವ ಪಾತ್ರ.  (ಶ್ರೀಮತಿ ಪ್ರೇರಣಾ ಶಿಧಾಯೆ -ರಾಜುರ್ಕರ್)
* ಮೂಕ ಪ್ರೇಮ (ಶ್ರೀಮತಿ ನೀತಾ ಮಹಾಜನ್ ಮತ್ತು ರಾಜೇಶ್ ಹೆಗ್ಡೆ) 

ಡಾ. ಅಶ್ವಿನಿ ಭಿಡೆ ದೇಶಪಾಂಡೆ  ಆವರ ಪರಿಚಯ 

ಪಂಡಿತ್. ವಿಶ್ವನಾಥ್ ಶಿರೋಡ್ಕರ್, ಮತ್ತು ಶ್ರೀಮತಿ ಸೀಮಾ ಶಿರೋಡ್ಕರ್  ಅವರ ಪರಿಚಯ :

ಡಾ. ಭವಾನಿಯವರು ಡಾ. ಅಶ್ವಿನಿ ಭಿಡೆಯವರ ಪರಿಚಯವನ್ನು ಸಭಿಕರಿಗೆ ಮಾಡಿಕೊಡುತ್ತಿದ್ದಾರೆ.  

The photo of Sow. Lakshmi sudhindra (Late)

       Dr. Bhavani is introducing the Artist of the afternoon, (And her troupe)

ಅಂತಾರಾಷ್ಟ್ರೀಯ ಖ್ಯಾತಿಯ  ಸಂಗೀತಜ್ಞೆ ಡಾ. ಅಶ್ವಿನಿ ಭಿಡೆ ದೇಶಪಾಂಡೆ ಅವರ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವು ಕಿಕ್ಕಿರಿದ ರಸಿಕ ಶ್ರೋತೃವೃಂದದ ಉಪಸ್ಥಿತಿಯಲ್ಲಿ ಸಂಪನ್ನಗೊಂಡಿತು. 

ಡಾ ಅಶ್ವಿನಿಯವರು ತಮ್ಮ ಹಾಡುಗಾರಿಕೆಯನ್ನು ಮೊದಲಿಗೆ ರಾಗ್ ಬೈರಾಗಿ ತೋಡಿ ರಾಗದಲ್ಲಿ "ಚರಣ ಧ್ಯಾನ ಗುರುಜನ ಅಪಾರ" ವೆಂಬ ವಿಳಂಬಿತ್  ಬಂದಿಶ್ ನ್ನು ವಿಸ್ತೃತವಾಗಿ ಹಾಡಿ "ಲಗನ್ ಲಾಗಿ" ಎಂಬ ಧೃತ್ ಬಂದಿಶ್ ನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ನಂತರ ಬೃಂದಾವನ್ ಸಾರಂಗ್ ರಾಗದಲ್ಲಿ "ಬನ ಬನ ಬಸಂತ" ಎಂಬ ಬಂದಿಶ್ ನ್ನು ತುಂಬಾ ಪರಿಣಾಮಕಾರಿಯಾಗಿ ಹಾಡಿದರು.
ಮುಂದೆ "ಶ್ಯಾಮ ರಂಗ ಖೇಲತ ಹೋರಿ" ಎಂಬ ಪಾರಂಪರಿಕ ಹೋಲಿ ಹಬ್ಬದ ಹಾಡನ್ನು ಪ್ರಸ್ತುತಪಡಿಸಿ ಕೊನೆಯಲ್ಲಿ ಪ್ರೇಮಿಗಳ ಮಿಲನದ ಸಂಕೇತವನ್ನು ಬಿಂಬಿಸುವ ಲೋಕ್ ಗೀತ್  ನ್ನು ಭೈರವಿ ರಾಗದಲ್ಲಿ ಹಾಡಿ ಮುಗಿಸಿದರು.
ಡಾ. ಅಶ್ವಿನಿಯವರಿಗೆ ತಬಲದಲ್ಲಿ ಪಂ. ವಿಶ್ವನಾಥ್ ಶಿರೋಡ್ಕರ್ ಮತ್ತು ಹಾರ್ಮೋನಿಯಂ ನಲ್ಲಿ  ಶ್ರೀಮತಿ ಸೀಮಾ ಶಿರೋಡ್ಕರ್ "ಸಾಥ್" ನೀಡಿ ಸಹಕರಿಸಿದರು. ಕು. ಸ್ವರಾಂಗಿ ಮರಾಠೆ ಹಾಗೂ ಋತುಜಾ ಲಾಡ್ ಶಿಷ್ಯೆಯರು ಕ್ರಮವಾಗಿ 'ತಾನ್ಪುರ' ಹಾಗೂ 'ಸ್ವರ್ ಸಾಥ್' ನ್ನು ಸಮರ್ಪಕವಾಗಿ ನೀಡಿದರು.
ವಿದು ಅಶ್ವಿನಿಯವರನ್ನು ಸುಧಾ ಮಾಧವ ಜೋಶಿ ಸತ್ಕರಿಸಿದರು. ಪಂ. ವಿಶ್ವನಾಥ್ ಅವರನ್ನು ಪಂ ಬಾಲಕೃಷ್ಣ ಅಯ್ಯರ್ ಮತ್ತು ಸಿಮಾ ಅವರನ್ನು ಗಾಯಕಿ. ಸುನೀತಾ ಟಿಕಾರೆ ಸನ್ಮಾನಿಸಿದರು. ಶ್ರೀಮತಿ. ಆಶಾ ಪುರುಂದರ್ ಅವರು ಋತುಜಾ ಲಾಡ್ ಹಾಗೂ ಸ್ವರಾಂಗಿ ಮರಾಠೆಯವರನ್ನು ಗೌರವಿಸಿದರು.
ಡಾ ಸುಧೀಂದ್ರ ಭವಾನಿಯವರು ಗಾಯಕ ವೃಂದವನ್ನು ಹಾಗು ಬಂದಿದ್ದ ಎಲ್ಲಾ ಸಂಗೀತ ರಸಿಕರನ್ನು ಹಾರ್ದಿಕವಾಗಿ ಸ್ವಾಗತಿಸಿ ವಂದನಾರ್ಪಣೆಯನ್ನೂ ಮಾಡಿದರು.
ಭೋಜನದ ತರುವಾಯ ಕಾರ್ಯಕ್ರಮ ಕೊನೆಗೊಂಡಿತು. 

Dr. Ashwini Bhide-Deshpande and her troupe

           Dr. Bhawani is felicitating Dr. Ashwini bhide where as her friend is also standing.
                      Smt. Seema shirodkar is being felicitated with a flower bouquet


                      Dr. Ashwini bhide during the lunch period with Dr. Bhawani and others.

         Shri. Bala govind, Shri. Balakrishna iyer, (Internationally well known, Tabla player of high repute) with  Venkatesh of Mysore association
Dr. Ashwini bhideji,  gave a scintillating music programme.

   https://photos.app.goo.gl/sY76yur7hMhDNNDy6










Comments

Popular posts from this blog

ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ' !

99th Foundation day of Mysore association Mumbai-2024 !

ಬಿ. ಎಂ. ಶ್ರೀ. ಪ್ರತಿಷ್ಠಾನ, ಎಂ. ವಿ. ಸೀ. ಸ್ನಾತಕೋತ್ತರ ಸಂಶೋಧನಾ ಕೇಂದ್ರ. ನರಸಿಂಹರಾಜ ಕಾಲೋನಿ, ಬೆಂಗಳೂರು .