Friday, August 19, 2016

ಮುಂಬಯಿಮಹಾನಗರದ ಜೋಗೇಶ್ವರಿ ಉಪನಗರದಲ್ಲಿರುವ ಅಭಿನವ ಮಂತ್ರಾಲಯವೆಂದು ಪ್ರಖ್ಯಾತವಾಗಿರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ಸತ್ಯನಾರಾಯಣ ವ್ರತ, ಮತ್ತು ಶ್ರೀ. ಹಯಗ್ರೀವ ಹೋಮಗಳನ್ನು ವಿಧಿಪೂರ್ವಕವಾಗಿ ನೆರವೇರಿಸಲಾಯಿತು.

ಮುಂಬಯಿಮಹಾನಗರದ ಜೋಗೇಶ್ವರಿ ಉಪನಗರದಲ್ಲಿರುವ ಅಭಿನವ ಮಂತ್ರಾಲಯವೆಂದು ಪ್ರಖ್ಯಾತವಾಗಿರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ಸತ್ಯನಾರಾಯಣ ವ್ರತ, ಮತ್ತು ಶ್ರೀ. ಹಯಗ್ರೀವ ಹೋಮಗಳನ್ನು ವಿಧಿಪೂರ್ವಕವಾಗಿ ನೆರವೇರಿಸಲಾಯಿತು. ೨೦೧೬ ರ ಆಗಸ್ಟ್ ತಿಂಗಳ, ೧೮ ನೇ ತಾರೀಖಿನ ಬೆಳಗಿನ ೯ ಗಂಟೆ, ಹಾಗೂ ೧೧-೩೦ ಕ್ಕೆ ಎರಡೂ ಪೂಜೆಗಳು ಪ್ರಾರಂಭವಾಗಿ ೧೨-೪೦ ಕ್ಕೆ ಮುಗಿದವು. ನಂತರ ರಾಯರ ವೃಂದಾವನಕ್ಕೆ ಮಹಾಮಂಗಳಾರತಿಯಾದ ಮೇಲೆ ಹೊಸ ದೇವಾಲಯ ಕಟ್ಟಡದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಇನ್ನು ರಾಜಗೋಪುರದ ಕೆಲಸ ಬಾಕಿ ಇದೆ. ಮಳೆಗಾಲ ವಾದ್ದರಿಂದ ಕೆಲಸ ಸ್ವಲ್ಪ ವಿಳಂಬವಾಯಿತು.


No comments: