ಏನ್. ಕೆ. ಇ. ಎಸ್. ವಡಾಲ ಮುಂಬಯಿನಗರದ ಪದವಿ ಕಾಲೇಜ್ ನಲ್ಲಿ ಘಟಿಕೋತ್ಸವ ಸಮಾರಂಭ !



ಕಾರ್ಯಕ್ರಮದ ಶುಭಾರಂಭವನ್ನು ದೀಪ ಪ್ರಜ್ವಲನದಿಂದ ಪ್ರಾರಂಭಿಸಲಾಯಿತು. 










ಕರ್ನಾಟಕ ಮಲ್ಲ ದಿನ ಪತ್ರಿಕೆಯ ವರದಿ :

ವಡಾಲ ರಾಷ್ಟೀಯ ಕನ್ನಡ ಶಿಕ್ಷಣ ಸಮಿತಿ ಕಲಾ, ವಾಣಿಜ್ಯ, ಹಾಗೂ ವಿಜ್ಞಾನ ವಿಭಾಗದ ಪದವಿ ಕಾಲೇಜಿನ ವಿದ್ಯಾರ್ಥಿಗಳ ಪ್ರಥಮ ಪದವಿ ಸಮಾರಂಭ (ಘಟಿಕೋತ್ಸವ-ಏಪ್ರಿಲ್, ೧೧, ೨೦೨೨ ರಂದು, ಸೋಮವಾರ ಕಾಲೇಜಿನ ಸಭಾಗೃಹದಲ್ಲಿ ನೆರವೇರಿತು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ  ಸಂಸ್ಥೆಯ ವಿಶ್ವಸ್ಥರಾದ ಡಾ. ಬಿ. ಆರ್. ಮಂಜುನಾಥ್ ವಿದ್ಯಾರ್ಥಿಗಳಿಗೆ ಪದವಿ ಪದವಿ ಪತ್ರಗಳನ್ನು ಪ್ರದಾನಿಸಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿಶೇಷ ಪುರಸ್ಕಾರಗಳನ್ನೂ ವಿತರಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ಅವರ ಆಸಕ್ತಿಯ, ಅಭಿರುಚಿಯ ವಿಚಾರಗಳತ್ತ ಹೆಚ್ಚಿನ ಗಮನ ನೀಡಿ ತಮ್ಮ ಗುರಿಯನ್ನು ತಲುಪಲು ಪ್ರಯತ್ನಿಸಬೇಕು ಎಂದು ನುಡಿದರು. 

ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಶ್ರೀ. ಶಶಿಕಾಂತ ಜೋಶಿಯವರು ಮಾತನಾಡುತ್ತಾ, ಪದವಿ ವಿದ್ಯಾಲಯವನ್ನು ಪ್ರಾರಂಭ ಮಾಡಲು ಪ್ರಯತ್ನಿಸಿದ ಎಲ್ಲರನ್ನೂ ಸ್ಮರಿಸಿ, ಅವರ ಅವಿರತ ಹೋರಾಟದ ಫಲವಾಗಿ ಈ ದಿನ ಘಟಿಕೋತ್ಸವ ಕಾಣುವಂತಾಗಿದೆ ಎಂದು ತಿಳಿಸಿದರು. ಹಾಗೆಯೇ ಮುಂದುವರೆದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ, ಮುಂಬರುವ ಶೈಕ್ಷಣಿಕ ವರ್ಷದಿಂದ ಕಾಲೇಜು ಹಮ್ಮಿಕೊಂಡಿರುವ ವಿವಿಧ ಯೋಜನೆಗಳ ಕುರಿತು ಬೆಳಕು ಚೆಲ್ಲುತ್ತಾ ಕಾಲೇಜಿನಲ್ಲಿ ಜರಗುವ ಕ್ಯಾಂಪಸ್ ನೇಮಕಾತಿ (ಕ್ಯಾಂಪಸ್ ರಿಕ್ರೂಟ್ ಮೆಂಟ್) ವಿದ್ಯಾರ್ಥಿಗಳಲ್ಲಿ ಸಂವಹನ ಕಲೆ ಬೆಳೆಸುವುದರೊಂದಿಗೆ ಉದ್ಯೋಗಾವಕಾಶ (ಎಂಪ್ಲಾಯ್ಬಿಲಿಟಿ)  ದಲ್ಲಿ  ಹೆಚ್ಚಿನ ಗಮನ ಹರಿಸುವುದು ಅಲ್ಲದೆ ವಿವಿಧ ತರಬೇತಿ ಕಾರ್ಯಕ್ರಮಗಳ ಕುರಿತು ಕೂಲಂಕುಶವಾಗಿ ವಿದ್ಯಾರ್ಥಿಗಳಿಗೆ ಮನದಟ್ಟಾಗುವಂತೆ ತಿಳಿಸಿದರು. 
 

ಕಾರ್ಯಕ್ರಮ : 

೧. ಪ್ರಾರ್ಥನೆ : ದೀಪ ಪ್ರಜ್ವಲದಿಂದ ವಿಧ್ಯುಕ್ತವಾಗಿ ಸಮಾರಂಭದ ಚಾಲನೆಯಾಯಿತು. 

ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ. ವೀಣಾ ಪ್ರಸಾದ್, ಎಲ್ಲರನ್ನೂ ಸ್ವಾಗತಿಸಿದರು. ವಿದ್ಯಾರ್ಥಿಗಳ ನೈತಿಕತೆ, ಮಾನವೀಯತೆ,ಮೊದಲಾದ ಮೌಲ್ಯಯುತ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆಯಿತ್ತರು. ಕುಮಾರಿ ನೇಹಾ ತೇವರ್ ರವರು ಪದವಿ ಪರೀಕ್ಷೆಯ ಫಲಿತಾಂಶಗಳನ್ನು ನೇರವಾಗಿ ವಿವರಿಸಿದರು. ಬಿ. ಕಾಮ್. ಬಿ. ಎಂ. ಎಸ್, ಬಿ.ಎ. ಎಂ  ಪದವಿ ಪ್ರಥಮಬಾರಿಗೆ ೯೦% ಕ್ಕೂ  ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಿ. ಎ ಎ ಎಫ್ ಕೋರ್ಸ್ ಗಳಲ್ಲಿ ೧೦೦% ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ, ಎಂದು ವಿದ್ಯಾರ್ಥಿಗಳನ್ನು ಅಭಿನಂದಿಸಿದರು. 

ಇದೇ  ಸಮಯದಲ್ಲಿ ಉಳಿದ ಎಲ್ಲ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿಶೇಷ ಪುರಸ್ಕಾರಗಳನ್ನು ಸಂಸ್ಥೆಯ ಅಧ್ಯಕ್ಷ ಶ್ರೀ. ಪಾರ್ಥ ಸಾರಥಿ ನಾಯಕ್, ಹಾಗೂ ವಿಶ್ವಸ್ಥರಾದ ಶ್ರೀ. ಅನಂತ ಬನವಾಸಿಯವರು ನೀಡಿ, ಸಂದರ್ಭೋಚಿತವಾಗಲಿ ಮಾತಾಡಿದರು. ಸಂಸ್ಥೆಯ ವಿಶ್ವಸ್ಥರಾದ ಶ್ರೀ. ಕೆ. ಮಂಜುನಾಥಯ್ಯನವರು, ಗೌ. ಕಾರ್ಯದರ್ಶಿ, ಶ್ರೀಮತಿ ಪದ್ಮಜಾ ಬನವಾಸಿಯವರು, ಖಜಾಂಚಿ, ಶ್ರೀಮತಿ. ಭವಾನಿ ಭಾರ್ಗವ್,  ಹಾಗೂ  ಶ್ರೀ. ಬಿ. ಎಸ್. ಸುರೇಶ್  ರವರುಗಳು, ಉಳಿದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಶಸ್ತಿ ಪ್ರದಾನಮಾಡಿ ಶುಭ ಹಾರೈಸಿದರು. 

ಸಭಾ ಕಾರ್ಯಕ್ರಮವನ್ನು ಪ್ರಾಧಾಪಕಿ ಶ್ರೀಮತಿ. ಡಯಾನಾ ರಯನ್ ರವರು ನಿರ್ವಹಿಸಿದ್ದಲ್ಲದೆ, ಕೊನೆಗೆ ಧನ್ಯವಾದ ಸಮರ್ಪಣೆಯನ್ನೂ ಮಾಡಿದರು.
 
ವಿದ್ಯಾರ್ಥಿಗಳು, 'ಈ ಸಂಸ್ಥೆ ದೊರಕಿಸಿಕೊಟ್ಟ ನುರಿತ ಅಧ್ಯಾಪಕರಿಗೆ, ಉತ್ತಮ ಗ್ರಂಥಾಲಯಕ್ಕೆ, ಅತ್ಯುತ್ತಮ ಸಾಂಘಿಕ ವಾತಾವರಣಕ್ಕೆ ಚಿರಋಣಿ ಯಾಗಿರುತ್ತೇವೆ ; ಅಲ್ಲದೆ ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆದು, ತಮ್ಮ ಜೀವನದ ಗುರಿಯನ್ನು ಮುಟ್ಟುವ ವಿಶ್ವಾಸವನ್ನು ವ್ಯಕ್ತಪಡಿಸಿ, ಈ  ಸವಿನೆನಪು ತಮ್ಮ ಜೀವನದಲ್ಲಿ ಚಿರಕಾಲ ಉಳಿಯುತ್ತದೆಂದು' ನುಡಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.  







  





Comments

Popular posts from this blog

ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ' !

99th Foundation day of Mysore association Mumbai-2024 !

ಸಾಧಕರೊಂದಿಗೆ ಮುಖಾಮುಖಿ !