Year 2022's Yugadi festival, was celebrated with traditional fervour and gaiety, at The Mysore Association, Mumbai !

ವರ್ಷ ೨೦೨೨ ರ ಯುಗಾದಿ ಹಬ್ಬದ ಸಡಗರ, ಮುಂಬಯಿ ಮಹಾನಗರದ ಹಿರಿಯ ಕನ್ನಡ ಸಂಸ್ಥೆಯಾದ ಮೈಸೂರು ಅಸೋಸಿಯೇಷನ್ ನಲ್ಲಿ !

ಅದೂ ಕರೋನ ಮಹಾಮಾರಿಯ ಪ್ರಕೋಪ ಕಡಿಮೆಯಾಗುತ್ತಿದ್ದಂತೆಯೇ,  ಸುಮಾರು ೨ ವರ್ಷದಿಂದ ಅಸೋಸಿಯೇಷನ್ ಕಡೆ ತಲೆಹಾಕದಿದ್ದ ಅನೇಕ ಸದಸ್ಯರು ಸಮಯಕ್ಕೆ ಮುಂಚೆಯೇ (೪ ಗಂಟೆಗೇ)  ೨ ನೇ ತಾರೀಖು, ಏಪ್ರಿಲ್ ೨೦೨೨ ರಂದು ಬಂದು ಹಾಜರಿದ್ದರು. ('ನೇಸರು ಪತ್ರಿಕೆ'ಯಲ್ಲಿ ಸಾಯಂಕಾಲ ೫ ಗಂಟೆ ಎಂದು ಕೊಟ್ಟಿದ್ದರು)

Link : https://youtu.be/2KSGo6cK4hM  ಗಣಪತಿ ಸ್ತೋತ್ರ ವಿದುಷಿ. ಶ್ಯಾಮಲಾ ರಾಧೇಶ್ ರವರಿಂದ. 

Link : https://youtu.be/1YpkuCIX3Ss   ಸಾಮೂಹಿಕ  ಗಣೇಶ ಪೂಜೆ, ಅಸೋಸಿಯೇಷನ್ ಸದಸ್ಯರಿಂದ. ಪ್ರಧಾನ ಪೂಜೆಯನ್ನು ಹಿರಿಯ ಸದಸ್ಯ ಶ್ರೀ. ಕೆ. ಮಂಜುನಾಥಯ್ಯನವರು ನೆರೆವೇರಿಸಿದರು. 

                                                    'ಗಣಪತಿ ದರ್ಬಾರ್ ಹಾಲ್' 


ಮೈಸೂರು ಅಸೋಸಿಯೇಷನ್ ನ ಹಿರಿಯ ಸದಸ್ಯೆ, ಶ್ರೀಮತಿ ಲಕ್ಷ್ಮೀ ಸೀತಾರಾಮ್ ರವರು ಗಣಪನಿಗೆ ವಂದಿಸುತ್ತಿದ್ದಾರೆ.  


ಮೈಸೂರು ಅಸೋಸಿಯೇಷನ್  ಸಂಗೀತ ವಿದುಷಿ,  ಚಿ. ಸೌ. ಶ್ಯಾಮಲಮ್ಮ ಹಾಡಿದ ಶ್ರೀ ಗಣೇಶ ಸ್ತುತಿ, ಕಾರ್ಯಕ್ರಮಕ್ಕೆ ತುಂಬಾ ಕಳೆ ತಂದುಕೊಟ್ಟಿತ್ತು. 

ಏಕದಂತ, ವಕ್ತ್ರತುಂಡ, ವಿಘ್ನರಾಜನೇ,  ಮೊದಲು ನಿನ್ನ ಭಜಿಸಿದವಗೆ ಕಾರ್ಯಸಾಧನೆ ॥ ಪ ॥

ಶುತಿಯು “ತತ್ವಮಸಿ” ಯು ನೀನು ನೀನೆ ಕರ್ತೃವು; ನೀನೆ ಲೋಕ ಸಂರಕ್ಷಕ ನೀನೆ ಸಂಹಾರಕ |  
ನೀನು ನಿತ್ಯನಾತ್ಮ ನೀನು ನೀನೆ, ಬ್ರಹ್ಮವೂ  ಜ್ಞಾನಮಯನು ನೀನೆ ದೇವ ನೀನೆ ಚಿನ್ಮಯ||೧|| 
 
ಭೂಮಿ ನೀನು ಜಲವು ನೀನು, ನೀನೆ ಅಗ್ನಿ ವಾಯುವು  ಅಂತರಿಕ್ಷವೆಲ್ಲ ನೀನೆ ವೇದರೂಪನು । 
 ಮೂರು ಗುಣವ ಮೀರಿದವನು ಮೂರುದೇಹವಿಲ್ಲದವನು ; ಕಾಲ ಮೂರ ದಾಟಿದವನು ಶಕ್ತಿರೂಪನು ॥೨|| 

ಬ್ರಹ್ಮ ನೀನು ವಿಷ್ಣು ನೀನು ನೀನೆ ರುದ್ರನೂ,  ಇಂದ್ರ ಅಗ್ನಿ ವಾಯು ಸೂರ್ಯ ನೀನೆ ಚಂದ್ರನೂ । 
ಪಾಶಾಂಕುಶಧಾರಿ ದೇವ ವರದಾಭಯ ಹಸ್ತನೇ,  ಇಲಿಯನೇರಿ ಮೆರೆವ ದೊರೆಯೆ ಮೂಷಿಕಧ್ವಜ ||೩||

ಲಂಬೋದರ ರಕ್ತವಸನ ಶೂರ್ಪಕರ್ಣನೇ, ರಕ್ತ ಗಂಧಲಿಪ್ತ ದೇಹ ರಕ್ತ ಕುಸುಮ ಪೂಜಿತ ।
ವ್ರಾತಪತಿಯೆ ಪ್ರಮಥ ಪತಿಯೆ ನಮಿಪೆ ಗಣಪತಿ ; ನುತಿಪೆ ಶಿವನ ಸುತನೆ ನಿನ್ನ ವರದಮೂರ್ತಿಯೇ||೪||

ನಿನ್ನ ನಾಮ ಪಠಿಸಲವಗೆ ವಿಘ್ನವಿಲ್ಲವೋ, ನಿನ್ನ ಹಾಸ್ಯಗೈದ ಶಶಿಗೆ ಕ್ಷಯವು ಬಂದುದು ;  ನಮಿಸೆ ನಿನ್ನ ಸಿದ್ಧಿಬುದ್ಧಿ ತಾನೆ ದೊರೆವುದೂ
ಅದುವೆ ನೀ ಚಿದಂಬರೇಶ ಮನದೊಳಿರುವುದೂ ||೫||

ಅರ್ಥ ವಿವರಣೆ :   ವಕ್ತ್ರ ತುಂಡ, ವಕ್ತ್ರ : ಬಾಯಿ, ಮುಖ, ವದನ, ಆನನ.  ತುಂಡ : ತುಂಡಾದವನು 


ಶ್ರೀ. ಶಶಿಕಾಂತ ಜೋಶಿ, ಮತ್ತು ಶ್ರೀಮತಿ ಜೋಶಿ 


ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ 


                                                              ತೀರ್ಥ ಪ್ರಸಾದ ವಿನಿಯೋಗ 



 ಓಂ ಗಂ ಗಣಪತಯೇ ನಮಃ 

ರಾಷ್ಟ್ರಕವಿ,  ಡಾ. ದತ್ತಾತ್ರೇಯ ರಾಮಚಂದ್ರ ಬೆಂದ್ರೆಯವರ ಯುಗಾದಿ ಹಬ್ಬಕ್ಕೆ ರಚಿಸಿದ ಅಮರ ಗೀತೆ, ಎಲ್ಲಾ ಕಾಲಗಳಿಗೂ ಸರಿಹೊಂದುವಂತಹದು  !

 

"ಯುಗ ಯುಗಾದಿ ಕಳೆದರೂ, ಯುಗಾದಿ ಮರಳಿ ಬರುತ್ತಿದೆ. 

ಹೊಸ ವರುಷಕೆ, ಹೊಸ ಹರುಷವ ಹೊಸತು ಹೊಸತು ತರುತಿದೆ. 

 

ಹೊಂಗೆ ಹೂವ ತೊಂಗಲಲಿ ಭೃಂಗದ ಸಂಗೀತ ಕೇಳಿ ;ಮತ್ತೆ ಕೇಳಿ ಬರುತ್ತಿದೆ. 

ಬೇವಿನ ಕಹಿ ಬಾಳಿನಲ್ಲಿ, ಹೂವಿನ ನಸುಗಂಪು ಸೂಸಿ ಜೀವ ಕಳೆಯ ತರುತಿದೆ.

 

ವರುಷಕೊಂದು ಹೊಸತು ಜನ್ಮ, ವರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ, 

ಒಂದೆ ಒಂದು ಜನ್ಮದಲ್ಲಿ ಒಂದೆ ಬಾಲ್ಯ ;ಒಂದೆ ಹರಯ ನಮಗದಷ್ಟೆ ಏತಕೋ,

ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ, ನಮಗೆ ಏಕೆ ಬಾರದೋ,"

 

\\ಯುಗ ಯುಗಾದಿ ಕಳೆದರು\\


Comments

ಓ ಗಣಪನೇ,

ಕೋವಿಡ್ ಮಹಾಮಾರಿಯನ್ನು ಕೊನೆಗೊಳಿಸು ಪರಮಾತ್ಮ, ಮತ್ತೆ ಯಾವ ಹೊಸ ಅಲೆಯೂ ಕಾಣಿಸಿಕೊಳ್ಳದಿರಲಿ. ಯುಕ್ರೇನ್-ರಷ್ಯಾ ಯುದ್ಧವನ್ನು ಸಾಕುಮಾಡು ದೇವಾ. ಪ್ರಪಂಚದಲ್ಲೆಲ್ಲ ಶಾಂತಿ, ಸಮಾಧಾನ, ನೆಮ್ಮದಿ ಮೇಳವಿಸಲಿ.

-ಮೈಸೂರು ಅಸೋಸಿಯೇಷನ್ ಸದಸ್ಯರು.

Popular posts from this blog

ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ' !

99th Foundation day of Mysore association Mumbai-2024 !

ಸಾಧಕರೊಂದಿಗೆ ಮುಖಾಮುಖಿ !