The Mysore association Golden jubilee endowment lecture 2017 !

ಫೆಬ್ರವರಿ, ೨೮, ೨೦೧೭ ರಂದು, ಮೈಸೂರು ಅಸೋಸಿಯೇಷನ್ ಹಾಗೂ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಜಂಟಿಯಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಡಾ. ವಿಶ್ವನಾಥ ಕಾರ್ನಾಡರ ಬಗ್ಗೆ ಡಾ. ಭರತ್ ಕುಮಾರ್ ಪೊಲಿಪು ವಿರಚಿತ ಪುಸ್ತಕ ಬಿಡುಗಡೆಯಾಯಿತು. 

ಅದರ ಕೊಂಡಿ :

http://canaranews.com/kannada/3630#.WKENFoF96s4

This lecture was held on 28th & 29th of January, 2017. at the auditorium of the Mysore association, Bhaudaji Road, Matunga, Mumbai-400 019. Mumbai university kannada division and the Mysore Association jointed hosted the event !

Fhoto poster session Link :   https://docs.com/holalkere-laxmivenkatesh/1175/29-2017

The link for the first day, (28th, Jan, 2017) Before Justice key note address, Dr.Bharath kumara polipu's book, on Dr. Vishvanatha karnad, releasing ceremony was there.

https://photos.google.com/share/AF1QipNuMpkcxeQioKlc2q34AZPkc1QUJC81YQQIRtooXnOeFj1A8P538vQxsimbE1a5NA?key=OVR0Zk1KTk1vU0xpQ3VZZEpnakdkcjRjVi02MXlR


ಫೆಬ್ರವರಿ ೨೮, ರಂದು ಜಸ್ಟಿಸ್ ಶ್ರೀಕೃಷ್ಣರ  ಮೊದಲ ದಿನದ ಉಪನ್ಯಾಸ   :
ಕಾರ್ಯಕ್ರಮದ ಮೊದಲಿಗೆ, ಮುಂಬಯಿನಗರದ ಖ್ಯಾತ ವಿದುಷಿ. ಶೈಲಜಾ ಮಧುಸೂದನ್ ರವರಿಂದ "ಸುವಿಚಾರಗಳಧಾರಿ ಹರಿಯೇ  ಮುನ್ನಡೆಸು ದೇವ" ಎಂಬ ಪ್ರಾರ್ಥನಾ ಗೀತೆಯಿತ್ತು. 
ನಂತರ ಡಾ. ಜಿ. ಏನ್. ಉಪಾಧ್ಯರಿಂದ ಪ್ರಾಸ್ತಾವಿಕ ಭಾಷಣ.  ತಮ್ಮ ಭಾಷಣದಲ್ಲಿ ಡಾ. ವಿಶ್ವನಾಥ ಕಾರ್ನಾಡರ ೪ ದಶಕಗಳ ಸಾಹಿತ್ಯಸಾಧನೆಗಳನ್ನು ಕುರಿತು ಡಾ ಭಾರತಕುಮಾರ ಪೊಲಿಪು ರಚಿಸಿದ ಪುಸ್ತಕದ ಬಗ್ಗೆ ತಮ್ಮ ಅನಿಸಿಕೆಗಳನ್ನು ಎಲ್ಲರೊಂದಿಗೆ ಹಂಚಿಕೊಂಡರು. 
ಡಾ ಪೂರ್ಣಿಮಾ ಶೆಟ್ಟಿಯವರು ಡಾ ವಿಶ್ವನಾಥ ಕಾರ್ನಾಡರ ಕಿರು ಪರಿಚಯಮಾಡಿ ಕೊಟ್ಟರು.  ಅದರ ಜೊತೆಯಲ್ಲಿ ಡಾ ಪೊಲಿಪು ತಮ್ಮ ಪುಸ್ತಕದಲ್ಲಿ ಮಂಡಿಸಿರುವ ವಿಷಯಗಳ ಬಗ್ಗೆ ಪ್ರಸ್ತಾಪ ಮಾಡುತ್ತಾ  ಸಾಗಿದರು. 

ನಂತರ ವಿಶ್ವನಾಥ ಕಾರ್ನಾಡ್ ತಮ್ಮ ಭಾಷಣ ಮಾಡಿದರು. ಡಾ.ಪೊಲಿಪುರವರ ಲೇಖನಿಯಲ್ಲಿ ಮೂಡಿಬಂದ ಬದುಕಿನ ಬಗ್ಗೆ ಹೆಚ್ಚು ಹೇಳುವಂತಹದು ಇರದೆ ಎಲ್ಲರಂತೆ ಅದೊಂದು ಸಾಧಾರಣ ಜೀವನವಾಗಿತ್ತು. ತಮ್ಮ ಸಾಹಿತ್ಯ ಸಾಧನೆಗಳಿಗೆ ಅನೇಕರ ಬೆಂಬಲವಿತ್ತು. ಗೆಳೆಯ ಜನಾರ್ಧನ ಶೆಟ್ಟಿಯವರ ಸಹಾಯ ಅತಿ ಪ್ರಮುಖವಾಗಿತ್ತೆಂದು ನೆನಸಿಕೊಂಡರು. ಮುಂಬಯಿಯ ರೂಪರೆಲ್ ಕಾಲೇಜ್ ನಲ್ಲಿ ನಿಜವಾಗಿಯೂ ಕನ್ನಡ ಕಲಿಕೆಯನ್ನು ಅತಿ ಆಸ್ಥೆಯಿಂದ  ಕಲಿತು ಅದರಲ್ಲೇ ಮುಂದುವರೆದ ವಿಚಾರಗಳನ್ನು ಸಭಿಕರೊಂದಿಗೆ ಹಂಚಿಕೊಂಡರು. ಖ್ಯಾತ ಕವಿ ಯಶವಂತ ಚಿತ್ತಾಲ, ಮತ್ತು ಹಲವಾರು ಕವಿಗಳ ಬರಹಗಳನ್ನು ಓದಿ ತಮ್ಮ ಅರಿವಿನಲ್ಲಿ  ಅರಗಿಸಿಕೊಂಡು ತಮ್ಮ ಸಾಹಿತ್ಯ ಕೃಷಿಯನ್ನು ಆರಂಭಿಸಿದರು. ಮುಂದಿನದೆಲ್ಲ ಇತಿಹಾಸ. 

ಕೆ. ಮಂಜುನಾಥಯ್ಯನವರು ಮೈಸೂರು ಅಸೋಸಿಯೇಷನ್ ನಲ್ಲಿ  ತಾವು ಕಳೆದ ಸುದಿನಗಳನ್ನು ಜ್ಞಾಪಿಸಿಕೊಂಡು ನಾಟಕ ರಂಗದಲ್ಲಿ ತಾವೂ  ಧುಮುಕಲು ಕಾರಣರಾದ ಸನ್ನಿವೇಶಗಳು ಹಾಗೂ  ವ್ಯಕ್ತಿಗಳನ್ನು ಸ್ಮರಿಸಿಕೊಂಡರು. ರೇಡಿಯೋ ನಾಟಕಗಳ ಕ್ಷೇತ್ರದಲ್ಲಿ ಅಗ್ರಗಣ್ಯರಾಗಿದ್ದ  ಡಾ ಕೆ. ಎಚ್. ರಂಗನಾಥ್ ರಿಂದ ಶುರುವಾದ  ಅವರ  ಮಾತು ಅಂದಿನ ಕಾಲದಲ್ಲಿ ಮುಂಚೂಣಿಯಲ್ಲಿದ್ದ  ಮುಂಬಯಿ ನಗರದ ಅತಿ ಹಿರಿಯ ಸಂಸ್ಥೆಗಳಲ್ಲೊಂದಾಗಿ ದಾಪುಗಾಲಿನಿಂದ  ಸಾಗುತ್ತಿರುವ  ಮೈಸೂರು ಅಸೋಸಿಯೇಷನ್ ಸೇರಿದಂತೆ  ೧೦ ಪ್ರಮುಖ  ಕನ್ನಡ ಸಂಘಗಳು, ಹಾಗೂ ಅವುಗಳ  ಆರೋಗ್ಯಕರ ಸ್ಪರ್ಧಾತ್ಮಕ ಚಟುವಟಿಕೆಗಳು, ಅವರ ಮಾತಿನಲ್ಲಿ ಸ್ಪಷ್ಟವಾಗಿ ಬೆಳಕುಚೆಲ್ಲಿದವು. ಕನ್ನಡ ಕಲಾಕೇಂದ್ರ, ವಿ.ಕೆ.ಮೂರ್ತಿ, ಕೆ.ಕೆ.ಸುವರ್ಣ, ಕೆ.ಜೆ.ರಾವ್, (ಕಲಾಜ್ಯೋತಿ ಸಂಘ)  ತಳಕೇರಿಯವರ ಕೊಡುಗೆ,  ವೈಸ್ ಚಾನ್ಸಲರ್  ಡಾ ರಾಮ ಜೋಶಿಯವರ ವಿಷಯ ಮೊದಲಾದವುಗಳು. ಕೆಲವು ವಿಶೇಷ ಸನ್ನಿವೇಶಗಳನ್ನು ತಮ್ಮ ಮಾತಿನಲ್ಲಿ ಹೊರಗೆಡಹಿದ ಮಂಜುನಾಥಯ್ಯನವರ ಭಾಷಣ ಸಭಿಕರನ್ನು ಹಲವು ದಶಕಗಳ ಹಿಂದಿನ ಪರಿಸರವನ್ನು ಪರಿಚಯಿಸಿ ಮುಂಬಯಿ ನಗರದ ಕನ್ನಡ ನಾಟಕ ರಂಗದ ಶ್ರೀಮಂತಿಕೆಯ  ಪರಿಚಯ ಮಾಡಿತು.  


  

ಜಸ್ಟಿಸ್ ಬಿ.ಏನ್. ಶ್ರೀಕೃಷ್ಣ :

ಮಹಾತ್ಮಗಾಂಧೀಜಿಯವರ ತತ್ವಗಳು ಇಂದಿನ ಪರಿಸ್ಥಿತಿಯಲ್ಲಿ ಎಷ್ಟು ಪ್ರಸ್ತುತ, ಮತ್ತು ಅವುಗಳನ್ನು ಇಂದಿನ ಯುವಕರು, ಹಾಗೂ ನಾಗರಿಕರೆಲ್ಲಾ ಹೇಗೆ ಅರ್ಥೈಸಿಕೊಳ್ಳಬೇಕು ಎನ್ನುವ ವಿಷಯಗಳನ್ನು ಉದಾಹರಣೆಗಳ ಸಹಿತ ಶ್ರೀಕೃಷ್ಣರು ವಿವರಿಸಿದರು. 
ಮಹಾತ್ಮಾ ಗಾಂಧೀಜಿಯರ ಜೀವನ ಶೈಲಿ, ಸ್ವದೇಶಿ ಚಳುವಳಿ, ಖಾದಿ, ಗ್ರಾಮೋದ್ಯೋಗ, ಸತ್ಯ, ಸತ್ಯಾಗ್ರಹ, ಬ್ರಹ್ಮಚರ್ಯ, ಅಪರಿಗ್ರಹ, ಶಾಖಾಹಾರ, ಅಸ್ಪೃಶ್ಯತೆ, ಸಕಲಧರ್ಮಸಮಭಾವದ ಕಲ್ಪನೆಗಳನ್ನು  ಇಂದಿನ ನಮ್ಮ ಜೀವನ ಪರಿಸ್ಥಿತಿಯಲ್ಲಿ ಅಳವಡಿಸಿಕೊಳ್ಳುವ ಪರಿಯನ್ನು ವಿವರಿಸಿದರು.   
ಜಸ್ಟಿನ್ ಶ್ರೀಕೃಷ್ಣರ ಎರಡನೆಯದಿನದ (೨೯-೦೨-೨೦೧೭) ಭಾಷಣ :

೧೧-೩೦ ಸರಿಯಾಗಿ ಉಪನ್ಯಾಸ ಶುರುವಾಗುವ ಮೊದಲು, ಮೇನ್ ಹಾಲಿನಲ್ಲಿ ಟೆಲಿವಿಷನ್ ಮುಂದೆ ಕೂತು ಕಾಫಿಕುಡಿಯುತ್ತಾ ಬಿ.ಏನ್. ಶ್ರೀಕೃಷ್ಣರ ಜೊತೆ ಹಲವಾರು ವಿಷಯಗಳ ಬಗ್ಗೆ ಮಾತುಕತೆ ನಡೆಯಿತು. ಅಲ್ಲಿ ನೆರೆದಿದ್ದವರು, ಶ್ರೀಮತಿ. ಕಮಲ, ಶ್ರೀ. ಮಂಜುನಾಥಯ್ಯ, ಬಿ.ಆರ್. ಮಂಜುನಾಥ್,  ಜಿ.ಏನ್. ಉಪಾಧ್ಯ, ಶಂಕರ ಲಿಂಗ, ಲೀಲ, ಮತ್ತಿತರು. ನೇಸರು ಪತ್ರಿಕೆಯ ಕೊಂಡಿಯನ್ನು ಬಳಸಿ ವೀಕ್ಷಿಸಿ :
https://lookaside.fbsbx.com/file/Nes-Feb-2017-F.pdf?token=AWyO0j_eflSVuQCMVw3VbQFgd7wp5qyhLT9oVViuSc3-uoNplUh3g41CK98FH4Yo1DYVrjFAmQLOIyFMpd8W-B8RBpIsHpbuCfskEp83BmCJ8WtcICa9MJvO_ZCuUJrOT_c94_L91FQ2NYvOBdiuph-k



ಜಸ್ಟಿಸ್  ಬಿ. ಏನ್. ಶ್ರೀಕೃಷ್ಣರು  ಮೊದಲನೆಯ  ಮಹಡಿಯಲ್ಲಿ ೧೯೮೨ ರಿಂದ ೨೦೧೬ ರ ವರೆಗೆ ಆಯೋಜಿಸಲ್ಪಟ್ಟ ದತ್ತಿ ಉಪನ್ಯಾಸಗಳ ಭಿತ್ತಿಚಿತ್ರಗಳನ್ನು ವೀಕ್ಷಿಸಿದರು. ಮಂಜುನಾಥಯ್ಯ, ಕಮಲಮ್ಮ, ಕೃಷ್ಣರ ಜೊತೆ ಹಲವಾರುಸಂಗತಿಗಳನ್ನು ಹಂಚಿಕೊಂಡರು 










ಶ್ರೀಮತಿ ನಳಿನಾರಿಂದ ಓಂ ನಮೋ ಭಗವಂತ, ಎಂಬ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು


















ಆದಿಶಂಕರರ ವಿಶ್ಲೇಷಣೆಯಂತೆ ಒಟ್ಟಾರೆ ೧೦ ಉಪನಿಷತ್ತುಗಳು ಪ್ರಾಮುಖ್ಯವಾದುವುಗಳೆಂದು ಅವು ಹೆಚ್ಚು  ಪ್ರಸ್ತುತವಾಗಿವೆ,  ಪಂಡಿತರು ೧೮, ೧೦೮ ಉಪನಿಷತ್ತುಗಳಿವೆ ಎಂದು ಭಾವಿಸುತ್ತಾರೆ.   ಒಂದು ಗಂಟೆಯ ಉಪನ್ಯಾಸಕ್ಕಾಗಿ ಶ್ರೀಕೃಷ್ಣರು   ಮುಖ್ಯವಾದ ಕೆಲವೇ ಉಪನಿಷತ್ತುಗಳನ್ನು ಆಯ್ದುಕೊಂಡಿದ್ದಾರೆ. ಅವುಗಳು :
೧. ಈಶೋಪನಿಷತ್ತು ೨. ಕಾಠೋಪನಿಷತ್ತು ೩. ಬೃಹದಾರಣ್ಯಕಪೋನಿಷತ್ತು ೪. ತೈತ್ತರೋಪನಿಷತ್ತು 

ಪ್ರತಿಯೊಂದು ಉಪನಿಷತ್ತನ್ನು ಬ್ರಾಹ್ಮಣ ಅರಣ್ಯಕ, ಮೊದಲಾದ ರೀತಿಯಲ್ಲಿ ವಿಂಗಡಿಸಿದ್ದಾರೆ.  
ಇತರರ ಹಿತಾಸಕ್ತಿಗಳಿಗೆ ಧಕ್ಕೆ ಬಾರದಂತೆ ವರ್ತಿಸುವುದು ಆವಶ್ಯಕ. ಆರ್ತರಿಗೆ ಸಹಾಯ, ಕರುಣೆ, ಅತಿಯಾಸೆ ಬೇಡ, ಸಮಾನತೆ ಧಾರ್ಮಿಕ ವರ್ತನೆ, ಎಲ್ಲವನ್ನು ವಿಚಾರಣೆ ಮಾಡಿ ಒಂದು ಒಳ್ಳೆಯ ನಿರ್ಧಾರ ತೆಗೆದುಕೊಳ್ಳಬೇಕು ಉಪನಿಷತ್ತು ವೇದಾಂತ ಸಾರುವುದು ಅದನ್ನೇ 'ಸರ್ವಂ ಖಲ್ವಿದಂ ಬ್ರಹ್ಮಂ'.   ನೂರು ವರ್ಷ ಸುದೀರ್ಘ ಅರ್ಥಪೂರ್ಣ, ನೀತಿಯುತ, ಪರೋಪಕಾರಿ  ಬಾಳ್ವೆಯ ಕಲ್ಪನೆ ಒಳ್ಳೆಯದು. ನಮ್ಮ ಸ್ವಾರ್ಥಕ್ಕೆ ಬೇರೆಯವರನ್ನು ಬಳಸಿಕೊಳ್ಳುವುದು ಧರ್ಮವಲ್ಲ. ಸಮಾಜ ಎಲ್ಲ ವರ್ಗದವರನ್ನು ಪ್ರೀತಿಸಿ ಗೌರವಿಸುವ ಸಮಭಾವತ್ವವನ್ನು ಹೊಂದಬೇಕು. ಸರ್ವಧರ್ಮಸಮಭಾವ,  ಇತ್ಯಾಧಿಗಳ ಬಗ್ಗೆ ಕಾನೂನಿನ ಚೌಕಟ್ಟು, ಹಾಗೂ  ತಮ್ಮ ವೈಯಕ್ತಿಕ ಅನಿಸಿಕೆಗಳನ್ನು ಎಲ್ಲರೊಂದಿಗೆ ಹಂಚಿಕೊಂಡರು.
ನೇಸರು ವಿಶೇಷ ಸಂಚಿಕೆ ಫೆಬ್ರವರಿ, ೨೦೧೭


ವಿಶಯಾನುಕ್ರಮಣಿಕೆ :
1. ಕಾರಂತರು ಬದುಕನ್ನೇ ಪ್ರಯೋಗಶಾಲೆಯನ್ನಾಗಿಸಿದವರು -ಡಾ. ಬಿ. ಎ.ವಿವೇಕ್ ರೈ ಪು. ೨
2. ಸಂಪಾದಕೀಯ-೩ 
3. ಅಸೋಸಿಯೇಷನ್ ಮತ್ತು ಕನ್ನಡ ಪರಿಚಾರಿಕೆ,ಜಿ.ಎನ್.ಉಪಾಧ್ಯ-ಪು. ೪
4. ನಿವೃತ್ತ ನ್ಯಾಯಮೂರ್ತಿ,ಬಿ.ಎನ್.ಶ್ರೀಕೃಷ್ನ ಜೊತೆ ಸಂದರ್ಶನ-ವೈ.ವಿ.ಮಧುಸೂದನ,ಮತ್ತು  ಕೆ.ಎಸ್.ರಾವ್-ಪು. ೫-೭
5. ಡಾ.ಬಿ.ಎ.ವಿವೇಕ್ ರೈ ಅವರಜೊತೆ ಸಂದರ್ಶನ-ಡಾ.ಜ್ಯೋತಿ ಸತೀಶ್,ಪು. ೮-೧೦
6. ಮೈಸೂರ್ ಅಸೋಸಿಯೇಷನ್ ನಲ್ಲಿ ದತ್ತಿ ಉಪನ್ಯಾಸ ಮಾಲಿಕೆ (೧೯೮೨-೨೦೧೬)
೭. ಜನವರಿ, ೧೯೮,  ಡಾ. ಎಚ್.ಕೆ ರಂಗನಾಥ್, ಉಪನ್ಯಾಸಮಾಲೆಯ ಉದ್ಘಾಟನೆ, ಕನ್ನಡ ನಾಟಕ ವಿಷಯ-ಕಲೆ ಪು. ೧೧
೮. ಜನವರಿ ೨೯, ೩೦, ೩೧, ೧೯೮೩, ಡಾ. ಕೀರ್ತಿನಾಥ ಕುರ್ತುಕೋಟಿ-ಬೆಂದ್ರೆಯವರ  ಕಾವ್ಯಮುಖಗಳು ಮತ್ತು ಬೆಂದ್ರೆ ಹೊನಲು.ಪು.  ೧೨-೧೩ 
೯. ಜನವರಿ ೭,೮,೯, ೧೯೮೪,ಡಾ.ಕೆ. ಶಿವರಾಮಕಾರಂತ -ಕನ್ನಡದಲ್ಲಿ ಜಾನಪದ ಸಾಹಿತ್ಯ ಮತ್ತು ಕಲೆಪು. ೧೪-೧೫ 
೧೦. ಜನವರಿ, ೫,೬, ೧೯೮೫, ಆದ್ಯರಂಗಾಚಾರ್ಯ -ಭಾರತೀಯ ನಾಟಕ ಪರಂಪರೆ ಹಾಗೂ ಕನ್ನಡ ರಂಗಭೂಮಿಯ ಮೇಲೆ ಅದರ ಪ್ರಭಾವ ಪು. ೧೬
೧೧.  ಮಾರ್ಚ್, ೧೯೮೬, ಪ್ರಾ.ದೇ.ಜವರೇಗೌಡ ಸ್ಥಳ ನಾಮಗಳು (ಕರ್ನಾಟಕವನ್ನು ಅನುಲಕ್ಷಿಸಿ)ಪು. ೧೭
೧೨.  ಮಾರ್ಚ್, 5,6,7, ೧೯೮೮, ಡಾ.ಚಂದ್ರಶೇಖರ ಕಂಬಾರರ ಉಪನ್ಯಾಸ-ಪರಂಪರೆ ಹಾಗೂ ಇಂದಿನ ರಂಗ ಭೂಮಿ -ಪು.೧೭,೧೮
೧೩. ಜನವರಿ, ೧೪,೧೫,೧೬, ೧೯೮೯,ಡಾ. ಸೂರ್ಯನಾಥ ಕಾಮತ್, ಭಾರತೀಯ ಪರಂಪರೆಯಸಂರಕ್ಷಣೆಗೆ ವಿಜಯನಗರದ ಕೊಡುಗೆ ಪು. ೧೮
೧೪.  ಜನವರಿ ೪,೫,೬, ೧೯೯೧ಪ್ರೊ.ಜಿ.ಟಿ.ನಾರಾಯಣ ರಾವ್ -ವೈಜ್ಞಾನಿಕ ಮನೋಧರ್ಮ, ಮತ್ತು ವಿಶ್ವ ವಿಕಾಸ 
೧೫.   ಜನವರಿ ೧೯೯೨, ಡಾ.ಕೆ.ಕೃಷ್ಣ ಮೂರ್ತಿ-ಕನ್ನಡ-ಸಂಸ್ಕೃತ ಸಂಬಂಧ ಕಾವ್ಯ, ನಾಟಕ ಶಾಸ್ತ್ರ. 
೧೬.  ಮಾರ್ಚ್ ೧೯೯೪, ಡಾ.ಎಮ್.ಎಮ್.ಕಲುಬುರ್ಗಿಯವರ ಉಪನ್ಯಾಸ-ಕರ್ನಾಟಕದಲ್ಲಿ ದೇವಾಲಯಗಳ ನಿರ್ಮಾಣ, ವಿನಾಶ ಮತ್ತು ನಿರಾಕರಣೆ 
೧೭.  ನವೆಂಬರ್ ೧೯೯೫, ಡಾ.ಜಿ.ಎಸ್.ಶಿವರುದ್ರಪ್ಪನವರ-ಶ್ರೀ. ರಾಮಾಯಣ ದರ್ಶನ ಒಂದು ಆಧುನಿಕ ಮಹಾಕಾವ್ಯ ಮತ್ತು ಕುವೆಂಪು ವೈಚಾರಿಕತೆ. 
೧೮. ಮಾರ್ಚ್ ೧೪,೧೫, ೧೯೯೮,ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್-ಕನ್ನಡದ ಪ್ರಸಿದ್ಧಕವಿ ಸಂತ ಶುಶುನಾಳ ಶರೀಫರ ಕೃತಿಗಳು 
೧೯. ಏಪ್ರಿಲ್, ೧೬,೧೯೯೯, ಡಾ.ಯು.ಆರ್.ಆನಂತ ಮೂರ್ತಿ-ಕನ್ನಡ ಸಂಸ್ಕೃತಿಯ ಆಶೋತ್ತರಗಳು ಮತ್ತು ಮುನ್ನೋಟ. 
೨೦. ಡಿಸೆಂಬರ್,೧೭,೧೮, ೧೯೯೯, ಡಾ. ಹಾ.ಮಾ.ನಾಯಕ-ತಳುಕಿನ ವೆಂಕಣ್ಣಯ್ಯನವರ ಬದುಕು ಬರಹ 
೨೧. ಡಿಸೆಂಬರ್, ೨೧,೨, ೨೦೦೧, ಡಾ.ಎಸ್.ಕೆ.ರಾಮಚಂದ್ರರಾಯರು-ಸಂಗೀತ, ಶಿಲ್ಪಿ, ಹಾಗೂ ವೇದಾಂತ. 
೨೨.  ೨೦೦೨-೦೩,ಪ್ರೊ. ಲಕ್ಷ್ಮೀ ತಾತಾಚಾರ್ಯ-ವಿಶಿಷ್ಟಾದ್ವೈತ 
೨೩. ೨೦೦೪  ಡಾ. ಮತ್ತೂರು ಕೃಷ್ಣ ಮೂರ್ತಿ, ಯಕ್ಷ ಪ್ರಶ್ನೆ- ಮಹಾಭಾರತದಲ್ಲಿ ಮಾಸ್ಟರ್ ಮೈಂಡ್ 
೨೪.  ಫೆಬ್ರವರಿ ೨೦೦೫, ಶತಾವಧಾನಿ ಡಾ.ಆರ್.ಗಣೇಶ್-ಅಭಿಜ್ಞಾನ ಶಾಕುಂತಲಂ 
೨೫. ೨೦೦೬,ಪ್ರೊ.ಎಮ್.ಎಚ್.ಕೄಷ್ಣಯ್ಯ- ಡಿ.ವಿ.ಜಿ.ಯವರ ಜೀವನ ಧರ್ಮ ಯೋಗ 
೨೬. ಜನವರಿ ೨೦೦೭,ಪ್ರೊ.ಎಲ್.ಎಸ್.ಶೇಷಗಿರಿರಾವ್ -ಕನ್ನಡ ಕಾದಂಬರಿಗಳಲ್ಲಿ ಸಾಮಾಜಿಕ ಮೌಲ್ಯ 
೨೭. ಜನವರಿ ೨೦೦೮,ಡಾ.ಎಸ್.ಎಲ್.ಭೈರಪ್ಪ-ಸಾಹಿತ್ಯ ಮತ್ತು ಜೀವನದ ಇತರ ಮೌಲ್ಯಗಳು 
೨೮.  ಜನವರಿ ೨೦೦೯,೨೦. ಚನ್ನವೀರ ಕಣವಿ-ವರಕವಿ ಬೆಂದ್ರೆ ಮತ್ತು ನಾನು ಒಂದು ಸೃಜನಶೀಲ ಪ್ರತಿಕ್ರಿಯೆ 
೨೯. ಡಾ.ಕಮಲಾ ಹಂಪನಾ ಡಾ.ಹಂಪನಾ ನಾಗರಾಜಯ್ಯ,೨೧.ಜನವರಿ ೨೦೧೦-ಆಚಾರ್ಯ ತ್ರಯರು 
೩೦. ಡಾ.ಕೆ.ಎಸ್. ನಿಸ್ಸಾರ್ ಅಹ್ಮೆದ್ ಅವರ ಉಪನ್ಯಾಸ,೨೨.  ಜನವರಿ ೨೦೧೧-ಆಧುನಿಕ ಸಾಹಿತ್ಯ 
೩೧. ಪ್ರೊ.ಚಿದಾನಂದ ಮೂರ್ತಿ  ಜನವರಿ ೨೦೧೨೨, ಆದಿಕವಿ ಪಂಪ 
೩೩. ದತ್ತಿ ಉಪನ್ಯಾಸ ಫೆಬ್ರವರಿ ೨೦೧೩,ಡಾ.ಎಚ್.ಎಸ್.ವೆಂಕಟೇಶಮೂರ್ತಿ-ಆಧುನಿಕ ಕನ್ನಡ ಕಾವ್ಯ. 
೩೩. ಡಾ. ವಿವೇಕ ರೈ ೨೦೧೪-ಶತಮಾನದ ಹಿನ್ನೆಲೆಯಲ್ಲಿ ಶಿವರಾಮ ಕಾರಂತರು ಮತ್ತು ಜರ್ಮನಿಯ ಒಳಗಿಂದ-ರಂಗಭೂಮಿ ಮತ್ತು ಸಂಸ್ಕೃತಿ
೩೪. ೨೦೧೫. ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಮತ್ತು ಡಾ. ರಜನಿ ನರಹಳ್ಳಿ -ಸಮಕಾಲೀನ ಸಾಹಿತ್ಯ ಸಾಹಿತ್ಯ ಸಂದರ್ಭ 
೩೫. ೨೦೧೬-ಡಾ. ಜಯಂತ್  ಕಾಯ್ಕಿಣಿ-ಕುವೆಂಪು-ಕವಿ ನೆನಪಿನ ಸವಿಯಾನ 
೩೬. ಬೆಂದ್ರೆ  ಕಾವ್ಯದ ಕುಹುಕ್ಕೂ -ಡಾ.ಚನ್ನವೀರ ಕಣವಿ,ಮೈಸೂರು ಅಸೋಸಿಯೇಹನ್ ಬಂಗಾರ ಹಬ್ಬದ ದತ್ತಿ ೨೫. ಉಪನ್ಯಾಸಮಾಲೆ,  ಮಧ್ಯಮ ವರ್ಗದ ಚರಿತ್ರೆಯನ್ನು ಹೇಳುವಕಾವ್ಯ; ಮೈಸೂರು ಮಲ್ಲಿಗೆ -ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ,
೩೭. ಬಂಗಾರದ ಹಬ್ಬದ ದತ್ತಿ ಉಪನ್ಯಾಸ ಕಾರ್ಯಕ್ರಮ. ಶ್ರೀ ಜಯಂತ್ ಕಾಯ್ಕಿಣಿಯವರ ಉಪನ್ಯಾಸ
೩೮.  ಜಸ್ಟಿಸ್ ಶ್ರೀ. ಬಿ.ಏನ್. ಶ್ರೀಕೃಷ್ಣ, (೨೮ ಮತ್ತು ೨೯, ಫೆಬ್ರವರಿ,೨೦೧೭)- ಗಾಂಧಿಯವರ ವಿಚಾರಧಾರೆಗಳ ಪ್ರಸ್ತುತತೆ ಹಾಗೂ ಉಪನಿಷತ್ತುಗಳಲ್ಲಿ ಮಾನವೀಯತೆ. 



  


Comments

Popular posts from this blog

"ನೇಸರು ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆ-2022ರ ಬಹುಮಾನ ವಿತರಣೆ ಹಾಗೂ ಕನ್ನಡ ನಾಟಕ- "ಚಿಟ್ಟೆ" ಪ್ರದರ್ಶನ !

ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ' !

Mysore association, Mumbai, Swarna Gauri & Ganesh pujotsav (2023) !