ಡಾ. ಬಿ.ಆರ್.ಮಂಜುನಾಥರ ಗೀತೆಗಳು :

ಗಣೇಶನಿಗೆ ಆರತಿ 
ಮೈಸೂರ್ ಅಸೋಸಿಯೇಶನ್ ಸ್ವರ್ಣ ಗೌರಿ-ಗಣೇಶನ ಹಬ್ಬದ ಆಚರಣೆಯ ನಂತರ ವಿಸರ್ಜನೆ ಮಾಡುತ್ತಿರುವುದು  
ಗೌರಿ ಮಾತೆ-ಗಣೇಶ ಉತ್ಸವ ಮೂರ್ತಿಗಳನ್ನು ಬೀಳ್ಕೊಡುವ  ಸಡಗರದಲ್ಲಿ !
ಗೌರಿ-ಗಣೇಶ ಮೂರ್ತಿಗಳನ್ನು ವಿಸರ್ಜನೆಗಾಗಿ ವಾಹನದಲ್ಲಿ  ಕೂಡಿಸಿದ್ದಾರೆ.  ಮಂಜುನಾಥ್,  ಆರುತಿ ಬೆಳಗುತ್ತಿರುವುದು. 
ಗೌರಿ-ಗಣಪತಿ  ವಿಸರ್ಜನೆಗೆ ಮೊದಲು ಅಸೋಸಿಯೇಶನ್ ಸದಸ್ಯರೆಲ್ಲಾ  ಮಂಜುನಾಥರ ಜೊತೆ  " ಅವ್ವ ನಿನ್ನ ಮೊಗ ಚೆಂದ " ಎಂಬ ಗೀತೆಗೆ ದನಿಗೂಡಿಸುತ್ತಿದ್ದಾರೆ. 

ಮುಂಬಯಿನಗರದ ನಿವಾಸಿ,ವಿಜ್ಞಾನಿ, ಅತ್ಯುತ್ತಮ ಸಂಘಟಕ, ಸಮಾನಮನಸ್ಕರನ್ನು ಒಟ್ಟುಗೂಡಿಸಿ ಅವರೆಲ್ಲರ ಸಹಯೋಗದಿಂದ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಸಮರ್ಥವಾಗಿ ನಡೆಸಿಕೊಂಡು ಬರುತ್ತಿರುವ ಸಾಹಸಿ, ಶ್ರೀ.ಬಿ.ಆರ್.ಮಂಜುನಾಥರು, ಕನ್ನಡನಾಟಕಗಳನ್ನು ಬರೆದು ಆಡಿಸಿ ತಾವೇ ಅಭಿನಯಿಸಿ, ನಿರ್ದೇಶಿಸಿ, ಅವನ್ನು ಪ್ರಸ್ತುತಪಡಿಸುತ್ತಾ ಬಂದಿದ್ದಾರೆ. ಮಂಜುನಾಥರು ತಮ್ಮ ನಾಟಕಕೃತಿಗಳಿಗೆ ತಕ್ಕದಾದ ಹಾಡುಗಳನ್ನು ರಚಿಸಿದ್ದಾರೆ. ಇದಲ್ಲದೆ ಕೆಲವು ಗೀತೆಗಳನ್ನೂ ಬರೆದು ಸಮಯಕ್ಕನುಸಾರವಾಗಿ ಹಾಡಿದ್ದಾರೆ. (ಪ್ರಾರ್ಥನಾ ಗೀತೆಗಳು ಇತ್ಯಾದಿ) ಇವೆಲ್ಲಾ ಮೈಸೂರ್ ಅಸೋಸಿಯೇಷನ್, ಮುಂಬಯಿಸಂಸ್ಥೆಯ ಅಡಿಯಲ್ಲಿ ಮಾಡಿದ ಸಾಧನೆಗಳು. 

ಮೊದಲು ಮಂಜುನಾಥರೇ  ಬರೆದುಕೊಟ್ಟ ಹಾಡುಗಳು  :

ದೇವ ದೇವ ಮಮದೇವ ದೇವ
ಅಳವಿಗೆ ನಿಲುಕದೆ ಎದೆಯಲಿ ತುಡಿಯುತೆ
ಅರವಿನ ಅಂಚಲಿ  ಅರೆಚಣ ಮಿಂಚುವೆ ||ದೇವದೇವ||
ಒಳಹೊರಗಿರವಿನ ತಿಳಿವಿಗೆ ನಿಲುಕದೆ
ಅರಿವಿನ ಪರಿಧಿಯ ಮೀರುತೆ ನಿಲ್ಲುವೆ
ಹೊಳಹಿನ ಮಾರುತಿ ಸುಳಿವೆಯೊ ಮನದಲಿ ||ದೇವ ದೇವ||

ಇರವಿದು ಕನಸೋ ಕನಸೇ ನೆನಸೋ
ಚಂಚಲ ಮನವನು ನಿಶ್ಚಲಗೊಳಿಸೋ
ತುರೀಯ ನೆಲೆಯಲಿ ಮನವನು ನಿಲಿಸೆಲೋ |ದೇವ|

ಪ್ರೇರಣೆ :  -ಮಾಂಡೋಕ್ಯ ಉಪನಿಷತ್ತು


ಕೆಳಗೆ ನಮೂದಿಸಿರುವ ಗೀತೆಯನ್ನು ಮುಖ್ಯವಾಗಿ  ಗಣಪತಿಹಬ್ಬದ ಸಮಯದಲ್ಲಿ, ಗೌರಿ ಪೂಜೆಯ ಸಮಯದಲ್ಲಿ  ಡಾ.  ಮಂಜುನಾಥರ ಜೊತೆಯಲ್ಲಿ ನಾವೆಲ್ಲಾ  ಹಾಡುತ್ತೇವೆ. 

ಅವ್ವ ನಿನ್ನ ಮೊಗಚೆಂದ
ಮಗ್ಗಿನ ಜಡೆ ಚಂದ
ಅಕ್ಕ ಕರಿಯವ್ವ, ತಂಗಿ ಭದ್ರಕಾಳಿ ||
ಕರಿಕುದುರೆಗೆ ಬಿಳಿಸೂರಿಪಾನ
ಕೆರೆಯೇರಿ ಮ್ಯಾಗೆ ಬರುವೋಳೆ
ಕೆರೆಯೇರಿಮ್ಯಾಗೆ ಬರುವ ಕರಿಯವ್ವಗೆ
ದೊರೆ ಕೈಯ್ಯ ಮುಗಿದಾನೆ ||

ಕಪ್ಪಿನ ಕೊಡಲಿ ಕೆಂಪಿನ ಗುಡಾರ
ಸಂಪಿಗೆ ಹೂವೇ ತಲೆಮ್ಯಾಗೆ
ಸಂಪಿಗೆ ಹೂವೇ ತಲೆಮ್ಯಾಗೆ ಕರಿಯವ್ವನ
ಸಂಪಿಗೆ ಮುಡಿಗೆ ಬಿಸಿಲೆಂದು ||
ಅಕ್ಕ ಕರಿಯವ್ವನ ಸಂಪಿಗೆ ಮುಡಿಮ್ಯಾಗೆ
ತೆಕ್ಕೆ ಗೊಂಡಾನೆ ಎಳೆನಾಗಿ ಕರಿಯವ್ವನ
ತಾವರೆ ಅಡಿಗೆ ಮುಗಿದಾನೆ ||

Some References of Mumbai cultural activities :


http://sampada.net/article/17257 ೧೩ ನೇ ಅಖಿಲಭಾರತ ಕುವೆಂಪು ಸ್ಮಾರಕ ಕನ್ನಡ ಏಕಾಂಕ ನಾಟಕ ಸ್ಪರ್ಧೆ "-೨೦೦೯ venkatesh on February 24, 2009]


Comments

C S Dinesh said…
very nbice indeed Good tributes to the hero

Popular posts from this blog

"ನೇಸರು ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆ-2022ರ ಬಹುಮಾನ ವಿತರಣೆ ಹಾಗೂ ಕನ್ನಡ ನಾಟಕ- "ಚಿಟ್ಟೆ" ಪ್ರದರ್ಶನ !

ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ' !

Mysore association, Mumbai, Swarna Gauri & Ganesh pujotsav (2023) !