ವರ್ಷ ೨೦೧೫-೧೬ ರ ಸಾಲಿನ ಮೈಸೂರ್ ಅಸೋಸಿಯೇಶನ್, ಮುಂಬಯಿ, ಬಂಗಾರದ ಹಬ್ಬದ ದತ್ತಿ ಉಪನ್ಯಾಸ ಕಾರ್ಯಕ್ರಮ !
ಮೈಸೂರ್ ಅಸೋಸಿಯೇಷನ್ ಮುಂಬಯಿ ಹಾಗೂ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಸಂಯುಕ್ತವಾಗಿ ಆಯೋಜಿಸುತ್ತಿರುವ ದತ್ತಿ ಉಪನ್ಯಾಸಕ್ಕೆ ಹೆಸರಾಂತ ಕನ್ನಡದ ಕವಿ, ಡಾ. ಜಯಂತ್ ಕಾಯ್ಕಿಣಿಯವರು ಈ ವರ್ಷದ ಆಹ್ವಾನಿತ ಉಪನ್ಯಾಸಕಾರರು : (ಎರಡನೆಯ ದಿನ, ೧೭,ರವಿವಾರ, ಜನವರಿ, ೨೦೧೬)
Link : http://www.daijiworld.com/news/news_disp.asp?n_id=376952
ಪದ್ಮನಾಭ ಸ್ವಾಗತ ಗೀತೆ ಹಾಡುತ್ತಿದ್ದಾರೆ. ಸ್ವಾಗತಗೀತೆ, ಪದ್ಮನಾಭ್ ರಿಂದ, ದೀಕ್ಷಿತರ ಕೃತಿ - ಸರಸ್ವತಿ ವಿಧಿ ಯುವತಿ - ರಾಗ, ಹಿಂದೊಳ. ರೂಪಕ ತಾಳ ಪಲ್ಲವಿ :
ಮುತ್ತುಸ್ವಾಮಿದೀಕ್ಷಿತರ ಕೀರ್ತನೆಯ ಲಿಂಕ್ :
https://www.youtube.com/watch?feature=player_embedded&v=7PKSxhsEbWI
ಪೂರ್ಣಿಮಾ ಶೆಟ್ಟಿ ಸಂಚಾಲಕಿಯವರು, ಡಾ.ಜಿ.ಎನ್.ಉಪಾದ್ಯರವರಿಂದ ಪ್ರಾಸ್ತಾವಿಕ ಭಾಷಣಕ್ಕೆ ಕರೆನೀಡಿದರು ಡಾ. ಉಪಾಧ್ಯ ಮಾತನಾಡುತ್ತಾ ಮೈಸೂರ್ ಅಸೋಸಿಯೇಶನ್ ಮತ್ತು ಮುಂಬಯಿ ವಿ.ವಿ. ದ ಕನ್ನಡ ವಿಭಾಗದ
ಧಾರವಾಡದಲ್ಲಿ ವಿದ್ಯಾಭ್ಯಾಸ :
ಧಾರವಾಡದಲ್ಲಿ ನಡೆದ ಮುಂದಿನ ವಿದ್ಯಾಭ್ಯಾಸದಲ್ಲಿ ದಿಢೀರನೆ ಕನ್ನಡದಿಂದ ಇಂಗ್ಲೀಷ್ ಮೀಡಿಯಮ್ ಗೆ ತಿರುಗಿ ಒಂದು ಹೊಸ ಆಯಾಮವನ್ನೇ ತಂದಿತ್ತು. ಬಸ್ ಸ್ಟಾಂಡ್ ನಲ್ಲಿ ನಿಂತು ಊರಿಗೆ ಹೋಗುವ ಬಸ್ಸುಗಳನ್ನು ನೋಡಿ ಸಂತಸ ಪಡುತ್ತಿದ್ದೆವು. ಇದೇ ಮುಂದೆ ಮುಂಬಯಿನ ಸಯಾಂನಲ್ಲಿ ಊರಿನಿಂದ ಬರುವ ಮತ್ತೆ ಊರಿಗೆ ಹೋಗುವ ಬಸ್ಸನ್ನು ನೋಡುವ ಹಂಬಲ ಇದ್ದೇ ಇತ್ತು.ಧಾರವಾಡ ಸಂಕೃತಿಕ ನಗರಿ.ಬೇಂದ್ರೆ, ಚಿತ್ತಾಲ್ ರ ಜೊತೆಆಗಾಗ ಪರೋಕ್ಷವಾಗಿ ಸಂಬಂಧ ಇತ್ತು.
ಮುಂಬಯಿ ನಗರಕ್ಕೆ ಪಾದಾರ್ಪಣೆ :
ಮುಂಬಯಿ ನಗರದ ಉಪನಗರಗಳನ್ನು ಸೇರಿಸುವ ಲೋಕಲ್ ಟ್ರೇನ್ ಪ್ರಯಾಣ, ಅಲ್ಲಿನ ಜಗಳ, ಜನರ ಸಂಘರ್ಷಮಯ ಜೀವನ ಮೆಚ್ಚುಗೆಯಾಯಿತು. ಇನ್ನೊಂದು ಆಸ್ಪತ್ರೆ ಅವರಿಗೆ ಬಲು ಪ್ರಿಯ. ಒಬ್ಬ ವ್ಯಕ್ತಿ ಮತ್ತೊಬ್ಬನ ನೋವನ್ನು ಕಡಿಮೆಮಾಡಲು ಪ್ರಯತ್ನಿಸುವ ಪರಿ ಅವರಿಗೆ ಬಲು ಪ್ರಿಯ ಬಸ್ ಸ್ಟಾಪ್ ನಲ್ಲಿ ನಿಂತಾಗ ಕಾಣಿಸುವ ಸೆಕ್ಸ್ ವರ್ಕರ್ಸ್ ಗಳು . ತಮ್ಮ ಕೈಹಿಡಿದು ಕೈ ಗಡಿಯಾರದ ಟೈಮ್ ನೋಡಿದರು. ಇದೊಂದು ಅನುಭವ.
ತೇಜಸ್ವಿ, ತಿರುಮಲೇಶ್, ಎ.ಕೆ.ರಾಮಾನುಜಮ್, ಪ್ರಭಾವ ಹೆಚ್ಚು.ದಾದರ್ ಬೀಚಿನ ಬಳಿ ಎಪಿಲಪ್ಸಿ(ಧನುರ್ವಾಯು) ಪೀಡಿತ ವ್ಯಕ್ತಿ ತನ್ನ ಕೈನಲ್ಲಿ ಒಂದು ಹಾಳೆಯಲ್ಲಿ ಅರ್ಧ ಅಸ್ಪಷ್ಟ ಪೆನ್ಸಿಲ್ ಗುರುತನ್ನು ಜನರಿಗೆ ತೊರಿಸುತ್ತಿದ್ದ. ಆದರೆ ಅಲ್ಲಿ ನೆರೆದಿದ್ದ ಜನ ಭಾವಿಸಿದ್ದು ಅವನೊಬ್ಬ ಆತಂಕವಾದಿಯೆಂದು. ಯಾರಿಗೂ ಅರ್ಥವಾಗದೇ ಗೊಂದಲದಲ್ಲಿದ್ದಾಗ ಕೊನೆಗೆ ಅಲ್ಲಿನ ಚಿಕ್ಕ ಹುಡುಗ ಹೇಳಿದ , ಅದು ಒಂದು ಮಾಪು ಎಂದು. ತನ್ನ ಮಗನ ಚಪ್ಪಲಿ ತರಲು ಆತ ಹಾಕಿದ್ದಿರಬೇಕು ನಮ್ಮ ಮನಸ್ಸಿನಲ್ಲಿ ಕಸ ತುಂಬಿದೆ. ಓದುವಾಗ ಬರೆಯುವಾಗ ಮಾತ್ರ ಸಾಹಿತಿ.ಬರೆಯುವಾಗ ಮಾತ್ರ ಸಾಹಿತಿ.ಚಿತ್ತಾಲರನ್ನು ನೋಡಲು ಹೋದಾಗ ಅವರು ಬರೆಯಲು ಸಾಧ್ಯವಿಲ್ಲ. 'ಬದುಕಿತಾನೇ ಏನು ಪ್ರಯೋಜನ' ಎಂದರು.ಬಹುಭಾಷಾ ಸಂವೇದನೆ ಸಿಕ್ಕಿತು.ಸೆನ್ದ್ ಥಮೆ ತೊ ಮ್ಯ್ ನೊವೆಲ್ ಇಫ಼್ ಥೆಯ್ ಅಗ್ರೀ.ದೊಡ್ಡಮ್ಮನಿಗೆ ಮಕ್ಕಳಿಲ್ಲ.ಬೆರೆಯವರ ಮನೆ ಅಡುಗೆ ಬಾಣಂತನ,ಮನೆಕೆಲಸ್ ಇತ್ಯಾದಿ ಮಾಡೆತಮ್ಮ ಜೀವನ ಮುಗಿಸಿದರು.ಗಂಡ ಎಲ್ಲೋ ಹೋಗೋರು ತಿಂಗಳುಗಟ್ಟಲೆ ಮನೆಗೆ ಬರುತ್ತಲೇ ಇರಲಿಲ. ಕಾಗದ ಬಂತು.ಲಂಬಾಣಿಕೇರಿಯಲ್ಲಿ ತೀರಿಕೊಂಡ.ವಿಷಯ ಒದಿ ಕಂಗಾಲಾದರು. ತಿಳಿಸಲಿಲ್ಲ.ಆದರೆ ಹೇಗೋ ಇಲ್ಲದಿದ್ದಾಗ ಓದಿದರು.ಅಮ್ಮನಿಗೆ ಒಬ್ಬ ಮನೆ ನರ್ಸ್ ವ್ಯವಸ್ಥೆ ಮಾಡಲು ಆಶ್ರಮಕ್ಕೆ ಹೋದರು.
ಡಾ. ಜಿ. ಎನ್. ಉಪಾಧ್ಯ ಪ್ರಾಸ್ತಾವಿಕ ಭಾಷಣ ಮಾಡುತ್ತಿದ್ದಾರೆ.
ರಮಾ ಉಡುಪ, ಡಾ. ಮಮತಾ ರಾವ್ ಬರೆದ ಪುಸ್ತಕ 'ಜಯಂತ್ ಕಾಯ್ಕಿಣಿ ರವರ ಕಥಾನಾವರಣ' ಪುಸ್ತಕದ ಬಗ್ಗೆ ಕೃತಿ ಪರಿಚಯ ಮಾಡುತ್ತಿದ್ದಾರೆ. ರಮಾ ಉಡುಪರ ಲೇಖನ, ನೇಸರು ಸಂಚಿಕೆಯಲ್ಲಿ (ಜನವರಿ, ೨೦೧೬, ಪುಟ-೯&೧೦) ಓದಿ. https://www.facebook.com/photo.php?fbid=762815770519513&set=pcb.548706338629914&type=3&theater Nesaru, January, 2016, ಜಯಂತ್ ಕಾಯ್ಕಿಣಿಯವರ ಕಥನಾವರಣ, ಕೃತಿಕಾರರು-ಡಾ. ಮಮತಾ ರಾವ್, ಕೃತಿಯನ್ನು ಕುರಿತು : ರಮಾ ಉಡುಪ, ಸಹ ಸಂಶೋಧಕಿ, ಮುಂಬಯಿ ವಿಶ್ವವಿದ್ಯಾಲಯ
ಮುಂಬಯಿಯ ಕಥೆಗಳಲ್ಲಿ ಕಂಡು ಬರುವ ವಸ್ತುಗಳನ್ನು ಕೆಳಗೆ ಕಂಡ ರೀತಿಯಲ್ಲಿ ವಿಂಗಡಿಸಿದ್ದಾರೆ.
* ಗೆಳೆತನ,
* ಪುಟಾಣಿ ಲೋಕ,
* ಬದುಕಿನ ಪಯಣದಲ್ಲಿ ಭಿನ್ನ ಮಾರ್ಗದ ಶೋಧನೆ,
* ಸಾಮಾನ್ಯರ ಅಸಮಾನ್ಯಕಥೆಗಳು ಎಂಬುದಾಗಿ,
* ನಗರ ಸಂವೇದನೆಗಳನ್ನೊಳಗೊಂಡ ವಿಶಿಷ್ಟ ಕಥೆಗಳು
ಮುಂಬಯಿಗೆ ಬರುವ ಪರ್ಯಟಕನೊಬ್ಬನಿಗೆ ಮುಂಬಯಿಕೊಡುವ ದರ್ಶನ ಬಿನ್ನ. ವಿಶ್ವದ ಕೊಳಕುಗಲ್ಲಿಗಳಲ್ಲಿ ಅತಿ ದೊಡ್ಡದೆಂದು ಹೆಸರುಮಾಡಿರುವ ಧಾರಾವಿಯ ಜನಸಂದಣಿಯ ಅಂಕುಡೊಂಕಿನ ಗರ್ದಿ ಗಲ್ಲಿಗಳು, ಟ್ರಾಫಿಕ್, ಕೊಳಕು, ಧೂಳು, ಬಿಸಿಲು, ಬೆವರು ಆದರೆ ಜನರಿಗೆ ಕಾಣುವ ರೀತಿ ಅನನ್ಯವಾದದ್ದು. ಕಾಯಕದ ಕೈಲಾಸದಂತೆ. ಬಹುವಚನದ ನಗರಿಯಾಗಿದ್ದು ಏಕವಚನದಲ್ಲಿ ಮಾತನಾಡುತ್ತದೆ. ಕಾಯಕದಿಂದಾಗಿ ಈನಗರದ ಜನಜಾತಿ,ಮತ ಧರ್ಮ ಅಂತಸ್ತುಗಳ ಗೋಡೆಯನ್ನು ದಾಟುತ್ತದೆ. ಅಪರಿಚಿತರ ಮುಖಗಳನ್ನು ಪರಿಚಯಿಸಿಕೊಳ್ಳುವಲ್ಲಿ ಅವರ ಮನೋವ್ಯಾಪಾರಗಳಲ್ಲಿ ಆಸಕ್ತಿ.
ಸಣ್ಣಪುಟ್ಟ ಗ್ರಾಮಗಳಿಂದ ರಂಗುರಂಗಿನ ಕನಸುಗಳನ್ನು ಹೊತ್ತು ಮುಂಬಯಿಗೆ ಓಡಿಬಂದವರನೇಕರು. ಇಂತಹ ಸನ್ನಿವೇಷಗಳನ್ನು ಆಧರಿಸಿ ಕಥೆಯಾಗಿಸುವಬಗ್ಗೆ ಜಯಂತರ ಆಸಕ್ತರಲ್ಲ. ಬಂದ ಜನ ತಮ್ಮ ಬದುಕನ್ನು ಎಷ್ಟರಮಟ್ಟಿಗೆ ಒಡ್ಡಿಕೊಂಡರು ಎನ್ನುವುದು ಅವರಿಗೆ ಪ್ರಿಯವಾಗುತ್ತದೆ. ತಮ್ಮ ಸೂಕ್ಷ್ಮಗ್ರಾಹಿ ಕಣ್ಣುಗಳು ಅವೆಲ್ಲವನ್ನೂ ಗುರುತಿಸುತ್ತವೆ. ತಮ್ಮ ಕಣ್ಣಿಗೆ ಬಿದ್ದ ಹಲವಾರು ಮನುಷ್ಯರ ಪಾಡನ್ನು ಅರಿಯುವ ಆಸೆ ಅವರದು :
೧. ಸಿನಿಮಾ ಲೋಕದ ಮಿನುಗುತಾರೆಯರ ಹಿಂದಿರುವ ಸ್ಟಂಟ್ ಕಲಾವಿದರು, ಎಕ್ಸ್ ಟ್ರಾಗಳು, ಸರ್ಕಸ್ ನ ಜೋಕರ್ ಗಳು, ಟ್ರೆಪೀಜ್ ಆರ್ಟಿಸ್ಟ್ಸ್, ಮೃತ್ಯುಕೂಪದಲ್ಲಿ ಮೋಟರ್ ಸೈಕಲ್ ನಡೆಸುವವರು,
೨. ಅಂಗವಿಕಲರು, ಭಂಗಾರು ದುಕಾನಿನಲ್ಲಿದ್ದು ಕನಸುಕಾಣುವ ಮುಚ್ಚೀಮಿಯಾನಂತಹವರು, ರಾತ್ರಿ ರಸ್ತೆಬದಿಯಲ್ಲಿದಣಿದವರಿಗೆ ಹೊಟ್ಟೆತುಂಬಾ ಊಟ ನೀಡುವ ತಳ್ಳುಗಾಡಿಯವರು,ಚಹಾವಾಲಾಗಳು, ಥಿಯೇಟರ್ ನಲ್ಲಿ ಕತ್ತಲಲ್ಲಿ ಬ್ಯಾಟರಿಯ ಪ್ರಕಾಶ ಬೀರಿ ಸೀಟು ತೋರಿಸುವವರು,
೩. ಕೆಂಪುದೀಪದ ಬೀದಿಯಲ್ಲಿರುವ ಪಂಜರದಂತಹ ಸಲಾಕೆ ಗೂಡುಗಳಲ್ಲಿ ಮೈಮಾರಿ ಬದುಕುವ ಹೆಣ್ಣುಜೀವಿಗಳು, ರಸ್ತೆ ಬದಿಯ ಬದಿಯಜೋಪಡಿಯಲ್ಲಿ ವಾಸಿಸುವ ಜನರು,
೪. ನಾಜೂಕಾಗಿ ಅನಾನಸು ಕೆತ್ತಿ ಬೇಡವಾದ ಭಾಗಗಳನ್ನು ಮಕ್ಕಳಿಗಾಗಿಕಾದಿರಿಸುವ ಮುದುಕ,
೫. ರಸ್ತೆಯಲ್ಲಿ ಚಿತ್ರಿಸಿದ ಸೀಮೆಸುಣ್ಣದ ಸಾಯಿಬಾಬಾರನ್ನು ಉಳಿಸಲು ಮಳೆಯಲ್ಲಿ ನೆನೆಯುತ್ತಾ, ಹೆಣೆಗಾಡುವ ಪುಟ್ಟ ಬಾಲಕಿ,
೬. ತನ್ನ ಅವಿವಾಹಿತ ಮಗಳ ಕನ್ಯತ್ವದ ದಾಖಲೆಯನ್ನು ಹಿಡಿದುಕೊಂಡು ಊರಿಡಿ ತಿರುಗುವ ಕನ್ಯಾಪಿತೃ,
೭. ಸಮಾಜದಲ್ಲಿ ತುಸು ಮೇಲ್ಮಟ್ಟ ಪಡೆದ ಕೂಡಲೇ ತನ್ನನ್ನುದೂರ ಮಾಡುವವನ ಸೇವೆಯನ್ನು ನಿರ್ವಂಚನೆಯಿಂದ ಮಾಡುವರೂಮ್ ಪಾರ್ಟ್ನರ್,
೮. ಬಿಯರ್ ಬಾರ್ ನಲ್ಲಿ ಕುಣಿಯುವ ದಾನ್ಸ್ ಬಾಲೆಯರು,
೯. ರಿಕ್ಷಾ-ಟ್ಯಾಕ್ಸಿ-ಟ್ರಕ್ ಡ್ರೈವರ್ ಗಳು,
ಇಂತಹ ಹಲವಾರು ಸನ್ನಿವೇಶಗಳು ಜಯಂತರ ಕೃತಿಗಳಲ್ಲಿ ಜೀವಂತಿಕೆಯಿಂದ ಮಿಂಚುತ್ತಾರೆ.ತಾವು ಕಂಡ ಪ್ರತಿವ್ಯಕ್ತಿಯಮೂಲಕ ಮನುಜಕುಲದ ಪಾಡನ್ನು ತಿಳಿಯುವ ದಾಹ ಕಾಣುತ್ತದೆ. ಅದರಿಂದ ವಿಶಿಷ್ಟ ಭಾಷೆ ಮತ್ತು ರೂಪಕಗಳನ್ನೊಳಗೊಂಡ ನಗರ ಪ್ರಜ್ಞೆಯ ಕತೆಗಳು ಜಯಂತರ ಸರಕಿನಲ್ಲಿ ಹೇರಳವಾಗಿ ದೊರೆಯುತ್ತವೆ. ಕನ್ನಡಕ್ಕೆ ಅಪರಿಚಿತ ಮುಖಗಳ ಪರಿಚಯ ಮಾಡಿಕೊಡುತ್ತಾರೆ. ಅವರ ಕತೆಗಳು ಒಂದು ’ದೊಡ್ಡ ಕೊಲೇಜ್’ ತರಹ ಮಹತ್ವವನ್ನು ಪಡೆದಿದೆ. ಅದರಲ್ಲಿ ಕಾಣಿಸಿಕೊಳ್ಳುವ ಕತೆಗಳ ಸೂಕ್ಷ್ಮ ಸಂವೇದನೆಗಳ ಸಂಖ್ಯೆ ಅಪಾರ.
ಜಯಂತ್ ಕಾಯ್ಕಿಣಿಯವರ ವಿಶೇಷತೆ :
ಎಲ್ಲವನ್ನೂ ತೆರೆದಕಣ್ಣುಗಳಿಂದ ಮಗುವಿನ ಕುತೂಹಲದಿಂದ ನೋಡುವ ಪರಿ ಅನನ್ಯ. ತಮ್ಮ ಸ್ನೇಹಪರ ಮನೋಭಾವನೆಗಳಿಂದ ಅತ್ಯಂತ ಭಿನ್ನವಾದ ಆಶಯಗಳನ್ನು ತಮ್ಮ ಕತೆಗಳಲ್ಲಿ ನೀಡುವ ಪ್ರಯತ್ನದಲ್ಲಿ ಸಫಲರಾದರು.
ಜಯಂತರ ಅಸಾಧಾರಣ ಪ್ರತಿಭೆಯನ್ನು ಒಬ್ಬ ಮುಕ್ತ ಓದುಗರಾಗಿ ಗುರುತಿಸಿದ ಮಮತಾ ರಾವ್ ಕತೆಗಳ ಪಾತ್ರಗಳನ್ನಷ್ಟೆ ಅಲ್ಲದೆ ಅವರ ವ್ಯಕ್ತಿತ್ವದ ಬಗ್ಗೆಯೂ ಬೆಳಕು ಚೆಲ್ಲಿದ್ದಾರೆ. "ಕೆಲವೊಮ್ಮೆ ಕರ್ನಾಟಕದಲ್ಲಿ ತಮ್ಮ ಸಮಗ್ರ ಕೃತಿಗಳ ಬಗ್ಗೆ ಆಳವಾಗಿ ವಿಮರ್ಶೆಗಳು ನಡೆದಿಲ್ಲ" ಎನ್ನುವ ಜಯಂತರ ಅಂತರಂಗದ ತುಸು ವಿಷಾದ ನುಡಿಯ ಅಪವಾದದಂತೆ ಡಾ. ಮಮತಾ ರಾವ್ ಜಯಂತ ಕಾಯ್ಕಿಣಿಯವರ 'ಕಥನಾವರಣ'ದಲ್ಲಿ ಅತ್ಯುತ್ತಮ ವಿಮರ್ಶೆಮಾಡಿ, ಆ ಕೊರತೆಯನ್ನು ನೀಗಿಸಿದ್ದಾರೆ", ಎನ್ನುವುದು ಅವರ ಗೆಳತಿ 'ರಮಾ ಉಡುಪ'ರ ಅಂಬೋಣ.
ಜಯಂತ್ ಡಾ. ವ್ಯಾಸರಾವ್ ನಿಂಜುರ್ ರವರನ್ನು ಅಭಿನಂದಿಸುತ್ತಿದ್ದಾರೆ.
ಡಾ ಮಮತಾ ರಾವ್ ಕೃತಿ ಬಿಡುಗಡೆಡಾ. ಜಯಂತ್ ಕಾಯ್ಕಿಣಿ ತಮ್ಮ ಭಾಷಣದಲ್ಲಿ ಮಗ್ನರಾಗಿದ್ದಾರೆ.
ಡಾ. ವ್ಯಾಸರಾವ್ ನಿಂಜುರ್ ಮಾತನಾಡುತ್ತಿದ್ದಾರೆ.
ಕಾರ್ಯಕ್ರದ ಕೊನೆಯಲ್ಲಿ ನಾರಾಯಣ ನವಿಲೇಕರ್ ವಂದನಾರ್ಪಣೆ ಮಾಡುತ್ತಿದ್ದಾರೆ.
Comments