ಡಾ. ಟಿ. ಎಸ್. ಸತ್ಯವತಿಯವರ ಅಮೋಘ ಕರ್ನಾಟಕ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು !

ಕನ್ನಡ ಸಾಹಿತ್ಯ ಪರಿಷತ್ ಮಹಾರಾಷ್ಟ್ರ ಘಟಕದ ಅಧ್ಯಕ್ಷ ರಾದ ಶ್ರಿ. ಎಚ್. ಬಿ. ಎಲ್. ರಾವ್ ಮೈಸೂರು ಅಸೋಸಿಯೇಶನ್ ಸಭಾಂಗಣದಲ್ಲಿ  ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.  ಅದರಲ್ಲಿ ದಿನದ ಕೊನೆಯ ಕಾರ್ಯಕ್ರಮ, ಕರ್ನಾಟಕ ಸಂಗೀತ.  ಡಾ. ಟಿ.ಎಸ್. ಸತ್ಯವತಿ ಮತ್ತು ಸಂಗಡಿಗರಿಂದ  ಎಪ್ರಿಲ್, ೩, ೨೦೧೫ ಶುಕ್ರವಾರದಂದು

                   (೦೩, ಏಪ್ರಿಲ್ ೨೦೧೫ ರಿಂದ ೦೫ ಏಪ್ರಿಲ್ ೨೦೧೫ ರ ವರೆಗೆ )

ಶ್ರೀ. ಎಚ್. ಬಿ. ಎಲ್. ರಾವ್ ಕಲಾವಿದರನ್ನು ಸಭೆಯ ಸಂಗೀತ ಪ್ರೇಮಿಗಳಿಗೆ ಪರಿಚಯಿಸುತ್ತಿರುವುದು. 

ಸ್ವಲ್ಪ ತಡವಾಗಿ ಕಾರ್ಯಕ್ರಮ ಶುರುವಾದರೂ  ಡಾ ಸತ್ಯವತಿಯವರು ೪ ಕಿರ್ತನೆಗಳನ್ನು ಸುಶ್ರಾವ್ಯವಾಗಿ ಹಾಡಿ, ಸಂಗೀತ ರಸಿಕರ ಮನಸ್ಸನ್ನು ರಂಜಿಸಿದರು !

ಡಾ. ಟಿ. ಎಸ್.  ಸತ್ಯವತಿಯವರು ಹಾಡಿದ ಕೀರ್ತನೆಗಳು :

೧. ರಾಮನೀ ಪೈತನಕು ಪ್ರೇಮ ಎಂಬ ತ್ಯಾಗರಾಜರ ಕೃತಿಯಿಂದ ಪ್ರಾರಂಭಿಸಿದರು
೨ .ಶ್ರಿ. ಪುರುಂದರದಾಸರ ಕೃತಿ- ನೀನೆ ದಯಾಳು ನಿರ್ಮಳಚಿತ್ತ ಗೋವಿಂದ, ಮಿಶ್ರ ಛಾಪ ತಾಳ,
೩. ಶ್ರಿ. ಮುತ್ತುಸ್ವಾಮಿ ದೀಕ್ಷಿತರ ಕೃತಿ- ಆನಂದಾಮೃತ ಕರ್ಷಿನಿ, ಅಮೃತ ವರ್ಷಿಣಿ
೪. ಶ್ರೀ.  ನಾರಾಯಣ ತೀರ್ಥರ ರಚನೆ-ಶರಣಂಭವ ಕರಣ ಹರಿ ಕುರುದೀನ ದಯಾಳೋ
ಸಾಹಿತ್ಯ 'ಶರಣಂ ಭವ ಕರುಣಾಂ ಮಯಿ ಕುರು' - ನಾರಾಯಣತೀರ್ಥರು



ಶರಣಮುಪಗತೋಽಹಂ ತ್ವಾಂ ಶರಣ್ಯಂ ಜನಾನಾಂ
ನಿಖಿಲಭಯವಿಯೋಗಂ ಯೋಗಿಚಿಂತ್ಯಂ ಮಹಾಂತಂ |
ಸುರರಿಪುಗಣಭಾರಂ ದುಃಸಹಂ ದುರ್ಭರಂ ಮೇ
ಪರಿಹರ ಪರಮಾತ್ಮನ್ ಭಕ್ತಿ ಸಿಧ್ಯೈಕಮೂರ್ತೇ ||

ರಾಗ: Saurashtram
ತಾಳ: ಆದಿ

1. ಶರಣಂ ಭವ ಕರುಣಾಂ ಮಯಿ ಕುರು ದೀನದಯಾಲೋ
      ಕರುಣಾರಸ-ವರುಣಾಲಯ ಕರಿರಾಜಕೃಪಾಲೋ |
     ಅಧುನಾ ಖಲು ವಿಧಿನಾ ಮಯಿ ಸುಧಿಯಾಸುರ ಭರಿತಂ
     ಮಧುಸೂದನ ಮಧುಸೂದನ ಹರ ಮಾಮಕ ದುರಿತಂ ||

2. ವರನೂಪುರಧರ ಸುಂದರ ಕರಶೋಭಿತವಲಯ
      ಸುರಭೂಸುರಭಯವಾರಕ ಧರಣೀಧರ ಕೃಪಯಾ |
      ತ್ವರಯಾ ಹರ ಪರಮೇಶ್ವರ ಸುರವರ್ಯ ಮದೀಯಂ
     ಮಧುಸೂದನ ಮಧುಸೂದನ ಹರ ಮಾಮಕ ದುರಿತಂ ||

3. ಘೃಣಿಮಂಡಲ ಮಣಿಕುಂಡಲ ಫಣಿಮಂಡಲ-ಶಯನ
       ಅಣಿಮಾದಿ ಸುಗುಣಭೂಷಣ ಮಣಿಮಂಡಪ-ಸದನ |
      ವಿನತಾಸುತ-ಘನವಾಹನ ಮುನಿಮಾನಸ-ಭವನ
     ಮಧುಸೂದನ ಮಧುಸೂದನ ಹರ ಮಾಮಕ ದುರಿತಂ ||

4. ಅತಿಭೀಕರ ಹಲಿಸೋದರ ಪರಿಪೂರ್ಣಸುಖಾಬ್ಧೇ
       ನರಕಾಂತಕ ನರಪಾಲಕ ಪರಿಪಾಲಿತ ಜಲಧೇ |
      ಹರಿಸೇವಕ ಶಿವ ನಾರಾಯಣತೀರ್ಥ ಪರಾತ್ಮನ್
      ಮಧುಸೂದನ ಮಧುಸೂದನ ಹರ ಮಾಮಕ ದುರಿತಂ || 

https://youtu.be/iLrwWI7Z3kA ' ಶರಣಂ ಭವ- ಡಾ.  ಬಾಲಮುರುಳಿ ಕೃಷ್ಣ

೫. ಮಂಗಳ

1.   ರಾಮನೀ ಪೈತನಕು ಪ್ರೇಮ ಎಂಬ ತ್ಯಾಗರಾಜರ ಕೃತಿ

ಪಲ್ಲವಿ : 
ರಾಮ ನೀಪೈ ತನಕು ಪ್ರೇಮ ಪೋದು  ಸೀತಾ
ಅನುಪಲ್ಲವಿ :
ತಮರಸ ನಯನಾ ನೀಡೆಮೋ ಮಾಯಾಕಾನಿ  (ರಾಮಾ )
Show Details O Lotus Eyed! No matter howsoever be your illusion, my love towards you shall never wane.

Charanams Combined :

ಮನಸು ನೀ ಪಾದಮುಲುನೆ  ಜೇರಾ
ಕನಲು  ನೀ  ರುಪಮುನೇ  ಕೋರಾ
ವಿನು ನೀ ಪೆರುಲಕೆ  ನೋರುರಾ
 ತನಪೈ ಇದಿ ನೀ ಕರುಣಾರಾ  (ರಾಮಾ)

ಜನಾನಿ ಜನಕಾಪ್ತುಲನ್ಯಲು
ಧನ ಕನಕ ಗುರು ವೆಪುಲು
ದಿನಮು ನಿವೇಯನು ಮಾತಲು
ಅನಘಾನಿವಿ ನಾ ಭುಸನಮುಲು  (ರಾಮಾ)

ಭೊಗಾನು ಭಾವಮುಲಂದು
ಬಾಗುಗ ಬುದ್ಧಿ  ನಿಯಂದು
ತ್ಯಾಗರಾಜುನಿ  ಹೃದಯ ಮಂದು
ವಾಗಿಶಾನಂದ ಮನಂದು  (ರಾಮಾ)

2. ಆನಂದಾಮೃತವರ್ಶಿನಿ : 

ರಚನಕಾರ   – ಶ್ರೀ ಮುತ್ತು ಸ್ವಾಮಿ ಭಾಗವತರು  

ರಾಗ  – ಅಮೃತ ವರ್ಷಿಣಿ  

ಪಲ್ಲವಿ : 

ಅನಂದಾಮೃತ ವರ್ಷಿಣಿ  ಅಮೃತವರ್ಷಿಣಿ  
ಹರಾದಿ ಪುಜಿತೇ ಶಿವೆ ಭವಾನಿ 

Oh Bhavani, the consort of Shiva, who captivates the nectar like bliss, showers the nectar like rain, 
worshipped by Shiva and other Gods.

ಚರಣ :
ಶ್ರಿ. ನಂದನಾದಿ  ಸಂರಕ್ಷಿಣಿ
ಶ್ರಿ. ಗುರುಗುಹಾ ಜನನಿ ಚಿತ್ರುಪಿಣಿ 
ಸಾನಂದ ಹೃದಯೆ ನಿಲಯೇ ಸದಯೇ 
ಸದ್ಯ ಸುವ್ರುಷ್ಟಿ ಹೇತವೇ ತ್ವಂ 
ಸಂತತಂ ಚಿಂತಯೇ ಅಮ್ರುತೆಶ್ವರಿ 
ಸಲಿಲಂ ವರ್ಶಯ ವರ್ಶಯ ವರ್ಶಯ 
Link :

Read more:   http://amrithavarshini.proboards.com/thread/558/ananda-    amrutaakarshini#ixzz3WMWC0vzu

Link :

http://sangeetasagaram.blogspot.in/2013/03/sharanam-bhava-karunamayi-flute-recital.html

ರಾಗ : Anandabhairavi
ತಾಳ : Mishrachapu
ರಚನಾಕಾರ : Purandaradasa
ಭಾಷೆ  : Kannada
-------------------------------------------------------------------------------
ನೀನೆ ದಯಾಳು ನಿರ್ಮಲ ಚಿತ್ತ ಗೋವಿಂದ-ಪುರಂದರದಾಸರ ಕೀರ್ತನೆ 
ನೀನೆ ದಯಾಳು ನಿರ್ಮಲ ಚಿತ್ತ ಗೋವಿಂದ   
ನಿಗಮ ಗೋಚರ ಮುಕುಂದ
ಜ್ಞಾನಿಗಳರಸ  ನೀನಲ್ಲದೆ  ಜಗಕಿನ್ನು
ಮಾನದಿಂದಲಿ  ಕಾಯ್ವ ದೊರೆಗಳ ನಾಕಾಣೆ

ದಾನವಾಂತಕ  ದೀನ ಜನ ಮಂದಾರನೆ ಧ್ಯಾನಿಪರ ಮನ ಸಂಚಾರನೆ
ಮೌನನಾದೆನು ನಿನ್ನ ಧ್ಯಾನದಿಂದೀಗ ಸಾನುರಾಗದಿ ಕಾಯೋ ಸನಕಾದಿ ವಂದ್ಯನೆ
ಬಗೆಯಲಿ ನಿನ್ನ  ಸ್ತುತಿಪೆನೊ  ನಗಧರ ಖಗಪತಿ ವಾಹನನೆ
ಮಗುವಿನ ಮಾತೆಂದು ನಗುತ ಕೇಳಿ ನೀನು ಬೇಗದಿಂದಲಿ ಕಾಯೋ ಸಾಗರ ಶಯನನೆ
ಮಂದರಧರ ಅರವಿಂದ ಲೋಚನ ನಿನ್ನ ಕಂದ ನಂದೆಣಿಸೋ ಎನ್ನ
ಸಂದೇಹವೇಕಿನ್ನು  ಸ್ವಾಮಿ ಮುಕುಂದನೆ ಬಂದೆನ್ನ ಕಾಯೋ ಶ್ರಿ. ಪುರಂದರ ವಿಠಲ

Link : http://sangitasopana.blogspot.in/2013/07/nine-dayalo.html

ಈ ಕಾರ್ಯಕ್ರಮದ ಮೊದಲು, ಒಂದು ಕವಿಗೋಷ್ಠಿಯನ್ನು ಆಯೋಜಿಸಲಾಗಿತ್ತು. ಅದರಲ್ಲಿ ಭಾಗವಹಿಸಿದವರು, 
೧. ಶ್ರೀನಿವಾಸ ಜೋಕಟ್ಟೆ,
೨. ಡಾ. ಭರತ್ ಕುಮಾರ್ ಪೊಲಿಪು
೩ . ಮಹಿಳೆ ಉಪನ್ಯಾಸಕಿ (ಹೆಸರು ಮರೆತಿದ್ದೆನೆ. ಕ್ಷಮಿಸಿ)
ಈ ಕವಿಗೋಷ್ಠಿಯನ್ನು ನಡೆಸಿಕೊಟ್ಟವರು, ಡಾ. ವ್ಯಾಸರಾವ್ ನಿಂಜುರ್

                                              ಕವಿಗೊಷ್ಟಿಯ ಉದ್ಘೋಷಕ, ಶ್ರಿ. ಮಧುಸುಧನ್
ಶ್ರೀನಿವಾಸ ಜೋಕಟ್ಟೆಯವರು ಬಂಡಾಯ ಸಾಹಿತ್ಯ ನಡೆದುಬಂದ ರೀತಿ, ಇಂದಿನ ಸ್ಥಿತಿ ಗತಿಗಳ ಬಗ್ಗೆ ಸಮೀಕ್ಷೆ ಮಾಡಿದರು
                     ಡಾ ಭರತ್ ಕುಮಾರ್ ಪೊಲಿಪುರವರನ್ನು ಶ್ರಿ. ಎಚ್. ಬಿ. ಎಲ್. ರಾಯರು ಗೌರವಿಸುತ್ತಿದ್ದಾರೆ.
ಕೊನೆಯ ಲೇಖಕಿ, ಅತ್ಯಂತ ಸೊಗಸಾಗಿ ತಮ್ಮ ವಿಷಯವನ್ನು ಮಂಡಿಸಿದರು. ಅವರಿಗೆ ಹೂಗುಚ್ಛವನ್ನು ನೀಡಿ ಗೌರವಿಸಲಾಯಿತು 

Comments

Popular posts from this blog

ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ' !

99th Foundation day of Mysore association Mumbai-2024 !

ಬಿ. ಎಂ. ಶ್ರೀ. ಪ್ರತಿಷ್ಠಾನ, ಎಂ. ವಿ. ಸೀ. ಸ್ನಾತಕೋತ್ತರ ಸಂಶೋಧನಾ ಕೇಂದ್ರ. ನರಸಿಂಹರಾಜ ಕಾಲೋನಿ, ಬೆಂಗಳೂರು .