ಮುಂಬೈನ ಮೈಸೂರ್ ಅಸೋಸಿಯೇಷನ್ ಒಳಗೆ, ಎಚ್ಚೆಸ್ವಿಯವರು.......
ಏಪ್ರಿಲ್, ೧೯, ೨೦೧೩ ರ ರಾಮನವಮಿಯ ಪಾವನದಿನದಂದು ಮೈಸೂರ್ ಅಸೋಸಿಯೇಷನ್ ಮುಂಬಯಿನಲ್ಲಿ "ಹನುಮ ಧ್ಯಾನದ ಹರಿಕಥಾ ಕಾರ್ಯಕ್ರಮ" ವನ್ನು ಶ್ರೀಮತಿ. ವೀಣಾ ನಾಗರಾಜ್ ನಡೆಸಿಕೊಟ್ಟರು. ವೀಣಾ ನಾಗರಾಜ್ ಅವರು ಸಂಸ್ಕೃತ ವಿದ್ವಾಂಸರು ಹಾಗೂ ಕರ್ನಾಟಕ ಸಂಗೀತದಲ್ಲೂ ಪ್ರವೀಣರು. ಅವರ ಪತಿ, ಡಾ. ನಾಗರಾಜ್ ಮುಂಬಯಿ ಐ. ಐ. ಟಿ. ಇನ್ ಸ್ಟಿಟ್ಯೂಟ್ ನಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಸಾಮಾನ್ಯವಾಗಿ ನಾವೆಲ್ಲಾ ಅಸೋಸಿಯೇಷನ್ ನ ಸದಸ್ಯರು, ಶ್ರೀರಾಮ ಭಜನೆಯನ್ನು ಮಾಡುತ್ತಿದ್ದೆವು. ಆದರೆ ಈ ಬಾರಿ ವೀಣಾರವರು ಆಗಮಿಸಿ, "ಹನುಮಧ್ಯಾನ ಹರಿಕಥಾಮೃತದ ಅಮೃತಪಾನ ಮಾಡಿಸಿ ನಮ್ಮನ್ನೆಲ್ಲಾ ಕೃತಾರ್ಥರನ್ನಾಗಿಸಿದರು". ಅವರಿಗೆ ಮೈಸೂರು ಅಸೋಸಿಯೇಶನ್ನು ಅಭಿನಂದಿಸುತ್ತಿದೆ.
Nesaru of May, 2013 has reported this event :
Comments