ಜನಪದದಲ್ಲಿ  ಹಾಡುಗಳದ್ದೆ  ಸಿಂಹಪಾಲು - ಪದ್ಮಜಾ ಮಣ್ಣೂರ :

                  
                     Link :  https://www.daijiworld.com/news/newsDisplay?newsID=1168706

ನಗರದ ಹೆಸರಾಂತ ಲೇಖಕಿ-ಅನುವಾದಕಿ, ಸೃಜನಾ ಬಳಗದ ಮಾಜಿ ಸಂಚಾಲಕಿ ಶ್ಯಾಮಲಾ ಮಾಧವ್ ಕನ್ನಡ ಭಾಷಾಂತರಿಸಿದ ಬಾಲ್ಯಕಲಾ ಮಾಯಾಚಲ (ಡಾ.ಸಾವಿತ್ರಿ ಬಾಬುಲ್ಕರ್ ಇಂಗ್ಲಿಷ್ ಮೂಲ) ಸ್ಮೃತಿ ಕಥಾವನ್ನು ಡಾ.ಲಕ್ಷಿ ಬಿಡುಗಡೆಗೊಳಿಸಿ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಯೋಜಕಿ ಪದ್ಮಜಾ ಮಣ್ಣೂರ ವಹಿಸಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅತಿಥಿಗಳಾಗಿ ಆಗಮಿಸಿದ್ದ ದಯಾಸಾಗರ ಚೌಟ ಅವರು ಶ್ಯಾಮಲಾ ಮಾಧವ ಅವರ ಆತ್ಮಕಥನ, (ನಾಳೆ ಇನ್ನು ಕಾದಿದೆ) ‘ನಾಳೆ ಇನ್ನೂ ಕಾಯುತ್ತದೆ...’ ಪುಸ್ತಕವನ್ನು ಬಿಡುಗಡೆ ಮಾಡಿ ಪುಸ್ತಕ ಪರಿಚಯಿಸಿದರು. ಬೃಹನ್ಮುಂಬಯಿ ಬರಹಗಾರರಾದ ಸೃಜನ ಅವರ ರಚನೆಗಳು ಸಾಹಿತ್ಯಕವಾಗಲು ಇದು ವೇದಿಕೆಯಾಗಿದೆ. ಅವರ ಬರಹಗಳನ್ನು ಓದಿದಾಗ ಅದರ ಅರ್ಥ ಮತ್ತು ಆಪ್ತತೆಯನ್ನು ಅನುಭವಿಸಬಹುದು. ಹಾಗಾಗಿಯೇ ಮುಂಬೈ ಕನ್ನಡಿಗರು ಹೆಚ್ಚು ಕನ್ನಡಿಗರು. ಇದು ಸಮೀಪ ದೃಷ್ಟಿಯ ಲಕ್ಷಣವಾಗಿದೆ ಎಂದು ಹೇಳಿದರು. ಅಕ್ಷಯ ಮಾಸಪತ್ರಿಕೆಯ ಪ್ರಧಾನ ಸಂಪಾದಕ ಡಾ.ಈಶ್ವರ ಅಲೆವೂರು ಮಾತನಾಡಿ, ಉಪನ್ಯಾಸಕ್ಕೆ ಕೃತಿಯ ಕಾರಣ ಹುಡುಕುವ ವಿಮರ್ಶಕರ ಅಗತ್ಯವಿದೆ. ವಿಮರ್ಶೆಯು ಕೆಲಸದ ಮೌಲ್ಯಮಾಪನ ಮಾನದಂಡಗಳನ್ನು ಪರಿಗಣಿಸುತ್ತದೆ. ಟೀಕಾಕಾರರಲ್ಲಿ ಜನಪರ ಕಾಳಜಿ ಅಗತ್ಯ ಎಂದರು. ಜಾನಪದ ಗೀತೆಗಳು ವೇದಗಳಿಗಿಂತ ಹಳೆಯ ಶೈಲಿಯವು. ಅಧ್ಯಕ್ಷೀಯ ಭಾಷಣದಲ್ಲಿ ಪದ್ಮಜಾ ಮಣ್ಣೂರ ಮಾತನಾಡಿ, ಇಂತಹ ಜಾನಪದ ಗೀತೆಗಳು ಮನುಕುಲದ ಬದುಕು. ಕಾರ್ಯಕ್ರಮದಲ್ಲಿ ಬೃಹನ್‌ಮುಂಬೈನ ಸಂಸ್ಥಾಪಕಿ, ಹಿರಿಯ ಸಾಹಿತಿ ಸೃಜನಾ, ಡಾ.ಸುನೀತಾ ಎಂ.ಶೆಟ್ಟಿ, ಸದಸ್ಯರಾದ ಲಕ್ಷೀ ಹೇರೂರು, ಡಾ.ರಜನಿ ವಿ.ಪೈ, ಸುಶೀಲಾ ಎಸ್‌.ದೇವಾಡಿಗ, ಯಶೋದಾ ಶೆಟ್ಟಿ, ಲಲಿತಾ ಪ್ರಭು ಅಂಗಡಿ, ಮಿತ್ರ ವೆಂಕಟರಾಜ್‌ ಉಪಸ್ಥಿತರಿದ್ದರು. ಜಂಟಿ ಕೋಶಾಧಿಕಾರಿ ಸರೋಜಾ ಅಮಾತಿ ಪ್ರಾರ್ಥಿಸಿದರು. ಪದ್ಮಜಾ ಮಣ್ಣೂರ ಸ್ವಾಗತಿಸಿದರು. ದೀಪಾ ಶೆಟ್ಟಿ, ಕೋಶಾಧಿಕಾರಿ ಡಾ.ದಾಕ್ಷಾಯಣಿ ಯಡಹಳ್ಳಿ, ಶೋಭಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಗೌರವ ಕಾರ್ಯದರ್ಶಿ ಮುದ್ದುಮನೆ ಲತಾ ಸಂತೋಷ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಜಂಟಿ ಕಾರ್ಯದರ್ಶಿ ಕುಸುಮಾ ಚಂದ್ರ ಪೂಜಾರಿ ವಂದಿಸಿದರು.


ಸೃಜನಾ  ಮುಂಬಯಿ ಕನ್ನಡ ಲೇಖಕಿಯರ ಬಳಗದಿಂದ ಸಾಹಿತ್ಯ ವಿಮರ್ಶೆ,   ಕೃತಿ ಲೋಕಾರ್ಪಣೆ, ಜನಪದ ಹಾಡುಗಳ  ಪ್ರಸ್ತುತಿ 
ಮುಂಬಯಿ  20 :  ಜನಪದದಲ್ಲಿ ‌ಹಾಡುಗಳದ್ದೇ  ಸಿಂಹಪಾಲು. ಇದು ಹಳ್ಳಿಯ ಜನರ ಸಂಗೀತ .ಇದು  ವೇದಕಾಲದಷ್ಟು  ಪುರಾತನವಾದುದು . ಇಂತಹ ಜನಪದವು ಮನುಕುಲದ  ಜೀವನವಾಗಿತ್ತು. ಕನ್ನಡ ಸಾಹಿತ್ಯ ರತ್ನ ಗರ್ಭಿತ ಕಡಲಿಗೆ ಸಮಾನ.ಈ ಸಾಹಿತ್ಯದಲ್ಲಿ  ಹುದುಗಿದ  ಸಂಪತ್ತನ್ನು ಹೆಕ್ಕಿ ತೆಗೆದು  ಬೆಳಕಿಗೆ  ತರುವ ಕೆಲಸ ನಾವು ಮಾಡಬೇಕಾಗಿದೆ. ಹೊಸ ಪೀಳಿಗೆಯಲ್ಲಿ ಆಸಕ್ತಿ ಮತ್ತು ಆದ್ಯತೆಗಳು  ಬದಲಾಗುತ್ತಿದ್ದು ಜನಪದ ಗೀತೆಗಳು ತೆರೆಮರೆ ಸರಿಯುತ್ತಿದೆ.ಇಂತಹ  ಕಾಲ ಘಟ್ಟದಲ್ಲಿ "ಸೃಜನಾದಲ್ಲಿ" ಜನಪದಕ್ಕೆ  ಮಹತ್ವ ಕೊಟ್ಟಿದ್ದು ಸ್ತುತ್ಯವಾಗಿದೆ. ಸೃಜನಾ ಮುಂಬಯಿ ಕನ್ನಡ ಲೇಖಕಿಯರ‌ ಬಳಗದ ಸಂಚಾಲಕಿ ಪದ್ಮಜಾ ಮಣ್ಣೂರ ಸಭೆಯನ್ನುದ್ದೇಶಿಸಿ  ಮಾತನಾಡಿದರು.
        ಸೃಜನಾ  ಮುಂಬಯಿ ಕನ್ನಡ ಲೇಖಕಿಯರ ಬಳಗದಲ್ಲಿ ಸಾಹಿತ್ಯ ವಿಮರ್ಶೆ, ಕೃತಿ ಲೋಕಾರ್ಪಣೆ ಜನಪದ ಹಾಡುಗಳ  ಪ್ರಸ್ತುತಿ ಕಾರ್ಯಕ್ರಮವು  ಮೈಸೂರು ಅಸೋಸಿಯೇಷನ್ ನ ಮೊದಲ ಮಹಡಿಯ  ಕಿರು ಸಭಾಗೃಹ,   ಬಾವುಧಾಜಿ ರಸ್ತೆ, ಮಾಟುಂಗಾ ಪೂರ್ವ ,ಮುಂಬಯಿ  ಇಲ್ಲಿ  ಫೆಬ್ರವರಿ 17 ರ ಶನಿವಾರದಂದು  ನಡೆದ  ಕಾರ್ಯಕ್ರಮದಲ್ಲಿ  
 ಸಭಾ ಅಧ್ಯಕ್ಷತೆಯನ್ನು   ಪದ್ಮಜಾ ಮಣ್ಣೂರವಹಿಸಿಕೊಂಡಿದ್ದು. ದೀಪ ಬೆಳಗಿಸಿ ‌ಕಾರ್ಯಕ್ರಮಕ್ಕೆ  ಚಾಲನೆ ಇತ್ತು   ಸ್ವಾಗತಿಸಿ  ಪ್ರಾಸ್ತಾವಿಕ ‌ನುಡಿಗಳನ್ನಾಡಿದರು.
            ಸೃಜನಾ ಬಳಗ ಹಮ್ಮಿಕೊಂಡ ಸಾಹಿತ್ಯ ವಿಮರ್ಶೆಯ ಬಗ್ಗೆ  ಉಪನ್ಯಾಸ ನೀಡಲು  ಆಗಮಿಸಿದ ಡಾ.ಈಶ್ವರ ಅಲೆವೂರು, ಸಾಹಿತಿ, ಅಕ್ಷಯ ಮಾಸಪ್ರತಿಕೆಯ ಮುಖ್ಯ ಸಂಪಾದಕರು ವಿಮರ್ಶೆಯ ಕುರಿತು ಉಪನ್ಯಾಸ ‌ನೀಡಿ ಕೃತಿಯ  ಔಚಿತ್ಯವನ್ನು ಹೇಳುತ್ತಾರೆ.  ವಿಮರ್ಶಕ . ವಿಮರ್ಶಕ ಕವಿ ಹೃದಯದವನಾಗಿರಬೇಕು.  ಜನಪರ ಕಾಳಜಿ ಹಾಗೂ ಸೂಕ್ಷ್ಮತೆಯನ್ನು ಹೊಂದಿರಬೇಕು. ವಿಮರ್ಶಕ ರಸಾನುಭವ ಸಾಧನೆಯ ಮತ್ತು ಇತಿಮಿತಿಯ ವಿದ್ವತ್ತನ್ನು ಹೊಂದಿರಬೇಕು. ಮೌಲ್ಯ ನಿರ್ಣಯ, ಪರಸ್ಪರ ಹೋಲಿಕೆ ಹೊಗಳುವುದು, ತೆಗಳುವುದು ವಿಮರ್ಶೆ ಅಲ್ಲ  ಒಂದು ಕೃತಿಯ ಕಳಪೆಗೂ ಹಲವಾರು ಕಾರಣಗಳಿವೆ.  ಪ್ರಾಯೋಗಿಕ ಮತ್ತು ತೌಲನಿಕ ಹೀಗೆ ಎರಡು ವಿಧಗಳುಂಟು.ವಿಮರ್ಶಕ ಒಬ್ಬ ಗೆಳೆಯನಂತೆ ಸಲಹೆ,ಸೂಚನೆ ನೀಡಬೇಕು. ವ್ಯಕ್ತಿತ್ವ ವಿಮರ್ಶೆ ನೀತಿ ನಿಷ್ಠೆ ವಿಮರ್ಶೆ ಸಮಾಜವಾಚಕ ವಿಮರ್ಶೆ. ವಿಮರ್ಶಕರಲ್ಲಿ ವಿನಯ ಇರಬೇಕು"ಸಾಹಿತ್ಯ ವಿಮರ್ಶೆ ಎಂದರೆ ಸಾಹಿತ್ಯವನ್ನು ಒಳಗೊಂಡ ಸಮೀಕ್ಷೆ"   ವಿಮರ್ಶೆ ಓರೆಗೆ ಹಚ್ಚಿ ಉಜ್ಜಿ ನೋಡುವುದು. ಉತ್ತಮ ಸಾಹಿತ್ಯ ವಿಮರ್ಶೆ ಉತ್ತಮ ಸಾಂಸ್ಕೃತಿಕ ವಿಮರ್ಶೆ ಆಗಿರುತ್ತದೆ ಮತ್ತು  ಸಾಹಿತ್ಯ ಚರಿತ್ರೆಯನ್ನು ಗುರುತಿಸುವುದಾಗಿರುತ್ತದೆ ಎಂಬ ಅನೇಕ ವಿಚಾರ ,ವಿಷಯವನ್ನೊಳಗೊಂಡ ಮಾಹಿತಿ ನೀಡಿ ತಮ್ಮ  ವಿಷಯಕ್ಕೆ ನ್ಯಾಯ ಒದಗಿಸಿದ್ದಾರೆ.

          ಗೌರವ ಅತಿಥಿಯಾಗಿ  ಆಗಮಿಸಿದ ಡಾ. ಸಿ. ಎಸ್. ಲಕ್ಷ್ಮಿ  ಡೈರೆಕ್ಟರ್  ಸ್ಪ್ಯಾರೋ  ತನ್ನ ಹಾಗೂ ಸೃಜನಾದ  ಅವಿನಾಭಾವನಂಟನ್ನು  ಹಂಚಿಕೊಳ್ಳುತ್ತಾ. ಸೃಜನಾ ಕನ್ನಡ ಲೇಖಕಿಯರ ಬಳಗ ನನಗೆ ಚಿರಪರಿಚಿತ. ಬಹಳಷ್ಟು ಹಳೆಯ ಪರಿಚಯ ನನಗೆ  ಸೃಜನದ್ದು. ನಾನು ಸೃಜನಾದ ಇಂತಹ ಸೃಜನಶೀಲ ಕಾರ್ಯಕ್ರಮಗಳಲ್ಲಿ ಎರಡನೇ ಸಲ ಭಾಗವಹಿಸುತ್ತಿದ್ದೇನೆ. ಶಾಮಲಾ ಅವರು ಒಳ್ಳೆಯ ಲೇಖಕಿ ಮತ್ತು ಅನುವಾದಕಿ. ಸಾಹಿತ್ಯದಲ್ಲಿ ಬಹಳಷ್ಟು ಸಾಧನೆ ಮಾಡಿದ ಅವರಿಗೆ ಸ್ಪ್ಯಾರೋ ಸಾಹಿತ್ಯ ಪ್ರಶಸ್ತಿ ದೊರೆತಿದೆ. ಇಂದು ಅವರ ಕೃತಿಗಳು ಲೋಕಾರ್ಪಣೆಗೊಂಡಿವೆ. ಇದು ಬಹಳ ಸಂತೋಷದ ವಿಷಯ ಮತ್ತು ನಮಗೆಲ್ಲ ಹೆಮ್ಮೆ ಮತ್ತು ಅಭಿನಂದನೀಯ ಸಂಗತಿ.  ಈ ಮೂಲಕ ಶ್ಯಾಮಲಾ ಮಾಧವ್ ಅವರು ಇನ್ನೂ ಹೆಚ್ಚಿನದನ್ನು ಸಾಧಿಸಲಿ ಎಂದು   ನುಡಿದರು.
  ಅಂದು  ಮುಂಬಯಿಯ  ಖ್ಯಾತ ಲೇಖಕಿ, ಅನುವಾದಕಿ, ಸೃಜನಾದ  ಮಾಜಿ  ಸಂಚಾಲಕಿ  ಶ್ಯಾಮಲ  ಮಾಧವ ಅವರು ಆಂಗ್ಲಮೂಲದ ಡಾ.ಸಾವಿತ್ರಿ ಬಾಬುಲ್ ಕರ್ ಕೃತಿಯನ್ನು  ಕನ್ನಡಕ್ಕೆ ಅನುವಾದಿಸಿದ " ಬಾಲ್ಯಕಾಲ ಮಾಯಾಜಾಲ" - ಸ್ಮೃತಿ ಚಿತ್ರಕೃತಿಯನ್ನು ಡಾ. ಸಿ ಎಸ್  ಲಕ್ಷ್ಮಿ ಲೋಕಾರ್ಪಣೆ ಗೊಳಿಸಿ ಕೃತಿ ಬಿಡುಗಡೆ ಗೊಳಿಸಲು ಅನುವು ಮಾಡಿಕೊಟ್ಟ ಸೃಜನಾ ಬಳಗ ಹಾಗೂ ಲೇಖಕಿ  ಶ್ಯಾಮಲ ಮಾಧವರಿಗೆ  ಅಭಿನಂದನೆ  ಸಲ್ಲಿಸಿದರು.
        ಮುಖ್ಯ ಅತಿಥಿ   ಪತ್ರಕರ್ತ, ಸಾಂಸ್ಕೃತಿಕ ಸಂಘಟಕ ದಯಾಸಾಗರ ಚೌಟ   ನಾಳೆ "ಇನ್ನೂ ಕಾದಿದೆ " ಶ್ಯಾಮಲಾ  ಮಾಧವ ಅವರ ಆತ್ಮ ಕಥನ‌‌ ಕೃತಿಯನ್ನು ಬಿಡುಗಡೆಗೊಳಿಸಿ 
 ಅಂದು ಬಿಡುಗಡೆಗೊಂಡ ಎರಡು ಕೃತಿಗಳ ಪರಿಚಯಿ ಸುತ್ತಾ,  ಮೊರೆವ ಕಡಲು, ಹರಿವ ನದಿ ಹಕ್ಕಿ ,ಪಿಕ್ಕಿಗಳ ಕಲರವ  ಅಕ್ಷರಗಳಲ್ಲಿ ಬರೆಯಲಾಗದನ್ನು ಹೇಳುವ ಕೃತಿ ಇದು.ಒಂದು ಕಾಲಘಟ್ಟದ ಭಾವತ್ವವನ್ನು, ಸ್ನೇಹವನ್ನು, ಪ್ರೀತಿಯನ್ನು ಕಟ್ಟಿಕೊಡುವ ಕೃತಿ ನಾಳೆ ಇನ್ನೂ ಕಾದಿದೆ. ಸಜ್ಜನಿಕೆ ಸದ್ದು ಗದ್ದಲವಿಲ್ಲದೆ ಬರುವ ಶಾಮ ಭಾಮ ಅಂಟಿ,ಹೀಗೆ ಕೃತಿ ಓದುತ್ತಿದ್ದಂತೆ ಎಲ್ಲವೂ ಇಷ್ಟವಾಗುತ್ತ ಹೋಗಿ  ಆಪ್ತವಾಗುತ್ತದೆ.  ಒಂದು ಕಾಲದ ಜನಾಂಗಗಳ ಕಥನವಿದು. ಆತ್ಮಕ್ಕೆ ಹತ್ತಿರವಾಯಿತು ಈ ಆತ್ಮ ಕಥನ. ಎಲ್ಲವನ್ನು ಸಹಜವಾಗಿ ಸಂಬಂಧದೊಳಗೆ ಭಾವ ಬಂಧಗಳನ್ನು ಕಾಪಿಟ್ಟು ಕೊಡುವುದು. ಮತದ, ಧರ್ಮದ ಪರಿವರ್ತನೆ. ಇಡೀ ಕೃತಿಯಲ್ಲಿ ಮುಂಬೈ ಕುರಿತು ಅನೇಕ ಬರಹಗಳಿವೆ. ಶ್ಯಾಮಲಾ ಅವರ ಮನೆ ಸಾಹಿತ್ಯದ ಮನೆ!. ಒಟ್ಟು ಕೃತಿ ಅಪ್ಯಾಯಮಾನ ಗಾಳಿಯಾಗಿ ನನ್ನೊಳಗೆ ಸುಳಿದಾಡುತ್ತಿದೆ.
    ಒಂದು ಹಿಡಿ ಪ್ರೀತಿ, ಒಂದಷ್ಟು ಮೈತ್ರಿ, ಒಂದಷ್ಟು ತಾಳ್ಮೆ ಸಮತೆ, ಮಮತೆ, ಕ್ಷಮತೆ ಕೈಗೂಡುತ್ತದೆ. ಬಿಡಿಯಲ್ಲೇ ಇಡೀ ಬದುಕನ್ನು ಕಟ್ಟಿಕೊಟ್ಟ ಕೃತಿ *ಬಾಲ್ಯಕಾಲ ಮಾಯಾಜಾಲ* ಅಪ್ಪನಲ್ಲದ ವ್ಯಕ್ತಿ ಅಪ್ಪನಾಗಿ ಅಮ್ಮನಲ್ಲದ ವ್ಯಕ್ತಿ ಅವ್ವಳಾಗುತ್ತಾಳೆ. ಏಳರ ಬಾಲೆ ದಾರ್ಶನಿಕ ಭಾವ ತೋರುವ ಮುಗ್ಧತೆಯಲ್ಲಿ ಆ ಪಡುವಣ ಗಾಳಿಗೆ ಮೈ ಒಡ್ಡಿ ನಿಂತಂತ ಮನೆ. ಹೃದ್ಯ, ಗದ್ಯ, ಪದ್ಯವಾಗಿ ಲೇಖಕಿಯ ಕೃತಿ ನಮ್ಮೊಂದಿಗೆ ಬೆರೆಯುತ್ತದೆ. ಎರಡು ಕೃತಿಗಳು ‌ಮನ ಮುಟ್ಟುತ್ತವೆ  ಎಂದು ಅರುಹಿದರು.
      ಶ್ಯಾಮಲ ಮಾಧವ ತಮ್ಮ ಮನದಾಳದ ‌ಮಾತಿನಲ್ಲಿ ತನ್ನ  ಎರಡೂ ‌ಕೃತಿಗಳು ಇಂದು ಇಲ್ಲಿ‌ ಬೆಳಕು‌ಕಾಣುವುದನ್ನು  ಕಣ್ಣ್ ತುಂಬಿಸಿಕೊಳ್ಳಲು  ಆಗಮಿಸಿದ ನಿಮಗೆಲ್ಲಾ  ನಾನು  ಅಭಾರಿ,  ಇಂದು ಹೃದಯ ತುಂಬಿ ಬಂದಿದೆ. ದಯಾಸಾಗರ ಅವರ ಮಾತು ಕೇಳಿ,ಹೃದ್ಯವಾಗಿ ತಿಳಿಸುವ ಅವರ ನಲ್ನುಡಿಗಳು ಮನಸ್ಸಿಗೆ ಇನ್ನೂ ಹತ್ತಿರವಾದವು. ಕೃತಿ 2021 ರಲ್ಲಿ ಅವಧಿಯಲ್ಲಿ ಆನ್ಲೈನ್ ಮೂಲಕ ಪ್ರಕಟಗೊಂಡಿತ್ತು. ಮುನ್ನಡಿ ಬರೆದಂತಹ ವೈದೇಹಿ ಅವರಿಗೂ ಕೂಡ ತುಂಬು ಹೃದಯದ ಧನ್ಯವಾದಗಳು. ಡಾ. ಸಿ ಎಸ್  ಲಕ್ಷ್ಮಿಯವರಿಗೆ  ವಂದನೆಗಳು .ಸೃಜನ ಗೆಳತಿಯರೆಲ್ಲರಿಗೂ ಧನ್ಯವಾದಗಳು ಎಂದು ನುಡಿದರು.
ಸೃಜನಾ ಬಳಗದ ಸದಸ್ಯೆಯರು ಸಾಹಿತ್ಯಕ್ಷೇತ್ರದ ಸಾಧನೆಗಾಗಿ ವಿವಿಧ ಪ್ರಶಸ್ತಿಗಳಿಸಿದ್ದು
ಮಿತ್ರಾ ವೆಂಕಟ್ರಾಜ್ - ಕರ್ಕಿ ಪ್ರಶಸ್ತಿ, ಡಾ ದಾಕ್ಷಾಯಣಿ ಯಡಹಳ್ಳಿ -ಸುಶೀಲ ಶೆಟ್ಟಿ  ಕಥಾ  ಪ್ರಶಸ್ತಿ, ಶ್ಯಾಮಲ ಮಾಧವ -ಸ್ಪ್ಯಾರೋ ಪ್ರಶಸ್ತಿ, ಸರ್ವ ಮಂಗಳ ಅರಸ - ಸಾಹಿತ್ಯ ರತ್ನ ಪ್ರಶಸ್ತಿ, ಲತಾ ಸಂತೋಷ್ - ತುಳು ನಾಡ ಐಸಿರಿ ಪ್ರಶಸ್ತಿ ಈ  ಎಲ್ಲರನ್ನು  ಗ್ರಂಥ ಹಾಗೂ ಪುಷ್ಪಗೌರವ ನೀಡಿ ಗೌರವಿಸಲಾಯಿತು.


    ಸೃಜನಾ ಬಳಗದ ಸದಸ್ಯರಾದ  ಲಕ್ಷ್ಮಿ ಹೆರೂರು, ರಜನಿ  ಪೈ, ಡಾ.  ದಾಕ್ಷಾಯಣಿ ಯಡಹಳ್ಳಿ, ಸುಶೀಲಾ ದೇವಾಡಿಗ, ಶೋಭಾ ಶೆಟ್ಟಿ,  ಯಶೋದಾ ಶೆಟ್ಟಿ, ಲಲಿತಾ ಪ್ರಭು ಅಂಗಡಿ, ಸರೋಜಾ ಅಮಾತಿ,ರಶ್ಮಿ ಭಟ್ಟ್  ಜನಪದ ಹಾಡುಗಳ ‌ಪ್ರಸ್ತುತಿ ನಡೆಸಿಕೊಟ್ಟರು. 
         ಸೃಜನಾ ಬಳಗಕ್ಕೆ ಸ್ಫೂರ್ತಿಯ ಸೆಲೆಯಾದ ಡಾ.  ಸುನೀತಾ ಶೆಟ್ಟಿ  ಶ್ಯಾಮಲ ಮಾಧವರನ್ನು  ಗ್ರಂಥ ಹಾಗು ‌ಪುಷ್ಪದೊಂದಿಗೆ  ಗೌರವಿಸಿದರು. ಮುಖ್ಯ ಅತಿಥಿಗಳನ್ನು  ಸಂಚಾಲಕಿ   ಪದ್ಮಜಾ ‌ಮಣ್ಣೂರ, ಕೋಶಾಧಿಕಾರಿ  ಡಾ. ದಾಕ್ಷಾಯಣಿ ಯಡಹಳ್ಳಿ  ಮತ್ತು ಕಾರ್ಯದರ್ಶಿ ಲತಾ ಸಂತೋಷ್ ‌ಮುದ್ದುಮನೆ  ಸ್ಮರಣಿಕೆ, ಗ್ರಂಥ ಹಾಗೂ ಪುಷ್ಪವಿತ್ತು  ಗೌರವಿಸಿದರು.
ಜೊತೆ ಕೋಶಾಧಿಕಾರಿ ಸರೋಜ ಅಮಾತಿಯವರ  ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಅತಿಥಿ ಗಣ್ಯರನ್ನು ಡಾ. ದಾಕ್ಷಾಯಣಿ ಯಡಹಳ್ಳಿ, ದೀಪಾ ಶೆಟ್ಟಿ,  ಶೋಭಾ ಶೆಟ್ಟಿ ಪರಿಚಯಿಸಿದರು. ಜೊತೆ ಕಾರ್ಯದರ್ಶಿ ಕುಸುಮ ಚಂದ್ರ ಧನ್ಯವಾದಗೈದರು. ಕಾರ್ಯದರ್ಶಿ ಲತಾ ಸಂತೋಷ್ ಶೆಟ್ಟಿ ಮುದ್ದುಮನೆ  ಕಾರ್ಯಕ್ರಮ ನಿರೂಪಿಸಿದರು .





























Comments

I was supposed to be present on 17th for Srujana program. Sorry could not make it.

Popular posts from this blog

ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ' !

99th Foundation day of Mysore association Mumbai-2024 !

ಬಿ. ಎಂ. ಶ್ರೀ. ಪ್ರತಿಷ್ಠಾನ, ಎಂ. ವಿ. ಸೀ. ಸ್ನಾತಕೋತ್ತರ ಸಂಶೋಧನಾ ಕೇಂದ್ರ. ನರಸಿಂಹರಾಜ ಕಾಲೋನಿ, ಬೆಂಗಳೂರು .