Mysore association, Mumbai, Swarna Gauri & Ganesh pujotsav (2023) !

ಮೈಸೂರು ಅಸೋಸಿಯೇಶನ್ ಮಾತುಂಗ ಮುಂಬಯಿನಲ್ಲಿ ವರ್ಷ ೨೦೨೩ ರ ಸೆಪ್ಟೆಂಬರ್,  ೧೮, ರಿಂದ ೨೪, ಸೆಪ್ಟೆಂಬರ್ ೨೦೨೩ ರ ವರೆಗೆ ಸ್ವರ್ಣ ಗೌರಿ ಹಾಗೂ ಶ್ರೀ ಮಹಾಗಣಪತಿ ಪೂಜಾ ಮಹೋತ್ಸವವನ್ನು ಅತ್ಯಂತ ವಿಜೃಂಭಣೆ ಹಾಗೂ ವಿಧಿ ವಿಧಾನಗಳಿಂದ  ನೆರೆವೇರಿಸಲಾಯಿತು. 

      https://youtu.be/sCTzVvc-Thw?si=ZCJUSwc6RCbQ7ADP















ಪ್ರತಿವರ್ಷದಂತೆ ಈ ವರ್ಷವೂ  ಮುಂಬಯಿ ಮಹಾನಗರದ ಮೈಸೂರು ಅಸೋಸಿಯೇಷನ್ ನಲ್ಲಿ ಸ್ವರ್ಣ ಗೌರಿಯನ್ನು ೧೮, ಸೋಮವಾರ, ಸೆಪ್ಟೆಂಬರ್, ೨೦೨೩ ರಂದು ಪ್ರತಿಷ್ಠಾಪಿಸಲಾಯಿತು. ಮಹಾಗಣಪತಿಯನ್ನು ೧೯, ಮಂಗಳವಾರ ಸೆಪ್ಟೆಂಬರ್, ೨೦೨೩ ರಂದು ಪ್ರತಿಷ್ಠಾಪಿಸಲಾಯಿತು. ಪ್ರತಿದಿನವೂ ಮಹಾಗಣಪತಿ ಮತ್ತು ಸ್ವರ್ಣಗೌರಿಗೆ ಪೂಜೆಗಳನ್ನು ವಿಧಿವತ್ತಾಗಿ ನೆರೆವೇರಿಸಲಾಗುತ್ತಿದೆ. ೨೨  ಶುಕ್ರವಾರದಂದು  ಅಸೋಸಿಯೇಶನ್ ನಲ್ಲಿ  ಮಹಿಳೆಯರಿಗೆ ಅರಿಶಿನ-ಕುಂಕುಮ  ಕಾರ್ಯಕ್ರಮದಲ್ಲಿ ಬಹಳಷ್ಟು ಮಹಿಳೆಯರು ಭಾಗವಹಿಸಿ ಕಾರ್ಯಕ್ರಮವನ್ನು ಚಂದಗಾಣಿಸಿದರು. 

೨೪,  ರವಿವಾರ, ಸೆಪ್ಟೆಂಬರ್ ೨೦೨೩ ರಂದು ಬೆಳಿಗ್ಯೆ ಅರ್ಚನೆ,  ಗಣಪತಿಗೆ ಭಜನೆ, ನೃತ್ಯ ಮೊದಲಾದ ಪೂಜಾವಿಧಾನಗಳ ನಂತರ ಮಹಾ ಮಂಗಳಾರತಿಯ ನಂತರ ಗಣಪತಿ ಮತ್ತು ಸ್ವರ್ಣ ಗೌರಿಮೂರ್ತಿಗಳನ್ನು ಮುಂಬಯಿಯ ದಾದರ್ ಸಮುದ್ರ ಬೀಚ್ ನಲ್ಲಿ ವಿಸರ್ಜಿಸಲಾಯಿತು. ತದನಂತರ ಪ್ರಸಾದ ವಿನಿಯೋಗ, ಮೊದಲಾದ ಕಾರ್ಯಕ್ರಮಗಳಿಂದ ಕಾರ್ಯಕ್ರಮ ಸಂಪನ್ನ ಗೊಂಡಿತು. 

ಮೈಸೂರು ಅಸೋಸಿಯೇಷನ್ ನ ಸದಸ್ಯರೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ  ಶ್ರೀ  ಸ್ವರ್ಣ ಗೌರಿ ಹಾಗೂ  ಶ್ರೀ ಮಹಾ ಗಣಪತಿಯ ಕೃಪೆಗೆ ಪಾತ್ರರಾದರು. 




















Comments

As an annual event, "Ganesh pooja mahotsav" has been a regular feature, one of the main events of the year, was celebrated with traditional fervour, and gaiety. Members from far away places of metropolis, came in very large numbers and attended the program. The Ganapati visarjan program incluing the pooja, bhajan, singing of "Devaranamas" by the Devotees, was a memorable event, to be cherished for a long time. Jai Shri. Ganesha....

Popular posts from this blog

ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ' !

99th Foundation day of Mysore association Mumbai-2024 !

ಬಿ. ಎಂ. ಶ್ರೀ. ಪ್ರತಿಷ್ಠಾನ, ಎಂ. ವಿ. ಸೀ. ಸ್ನಾತಕೋತ್ತರ ಸಂಶೋಧನಾ ಕೇಂದ್ರ. ನರಸಿಂಹರಾಜ ಕಾಲೋನಿ, ಬೆಂಗಳೂರು .