Shri Subraya chokkadi, spoke at the kannada division of Mumbai university Kalina campus, Mumbai !
ಶ್ರೀ ಸುಬ್ರಾಯ ಚೊಕ್ಕಾಡಿಯವರ ಉಪಸ್ಥಿತಿ ; ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ !
ಶ್ರೀ. ಸುಬ್ರಾಯ ಚೊಕ್ಕಾಡಿಯವರ ಹೆಚ್ಚುಗಾರಿಕೆ ಇರುವುದು, ನವ್ಯ ಕಾವ್ಯ ಪರಂಪರೆಯನ್ನು ಆಲಿಂಗಿಸಿದರೂ ತಮ್ಮತನ, ಮತ್ತು ತಮ್ಮದೇ ಆದ ವರ್ಚಸ್ಸನ್ನು ಬೆಳೆಸಿಕೊಂಡು ಕಾಯ್ದಿಟ್ಟುಕೊಂಡಿದ್ದು. ಹೀಗೆ ಮುಂದುವರೆದ ಅವರು ಡಾ. ಜಿ. ಎಸ್.ಎಸ್, ಡಾ. ನಿಸಾರ್ ಅಹ್ಮದ್, ಡಾ. ಎಚ್ಚೆಸ್ವಿ , ನಾಡೋಜ ಚನ್ನವೀರ ಕಣವಿ, ಮೊದಲಾದವರ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಾರೆ.
ಅವರ ಬಾಲ್ಯ ಹಾಗೂ ಜೀವನದ ಬಗ್ಗೆ ಒಂದು ನೋಟ :
ಸುಬ್ರಾಯ ಚೊಕ್ಕಾಡಿಯವರು (ಜೂನ್ ೨೯, ೧೯೪೦) ಶಿಕ್ಷಕ, ಕವಿ, ವಿಮರ್ಶಕ, ನಾಟಕಕಾರ, ಸುಳ್ಯ ತಾಲೂಕಿನ ಚೊಕ್ಕಾಡಿಯಲ್ಲಿ ಜನಿಸಿದರು. ಯಕ್ಷಗಾನ ಭಾಗವತರಾಗಿ ಹೆಸರುಗಳಿಸಿದ್ದ ಗಣಪಯ್ಯನವರು ಇವರ ತಂದೆ. ತಾಯಿ ಸುಬ್ಬಮ್ಮ, ಪ್ರಾಥಮಿಕ ವಿದ್ಯಾಭ್ಯಾಸಗಳಿಸಿದ್ದು ಹುಟ್ಟಿದೂರಿನಲ್ಲೇ. ಹೈಸ್ಕೂಲು ವಿದ್ಯಾಭ್ಯಾಸ ಪಂಜದಲ್ಲಿ. ಮುಂದೆ ಕನ್ನಡದಲ್ಲಿ ಎಂ. ಎ ಪದವಿಗಳಿಸಿದ್ದು ಮೈಸೂರು ವಿ. ವಿ. ನಿಲಯದ ಅಂಚೆ ತೆರಪಿನ ಶಿಕ್ಷಣ ಸಂಸ್ಥೆಯ ನೆರವಿನಿಂದ. ಶಿಕ್ಷಕನಾಗಿ ಸೇವೆಸಲ್ಲಿಸುವುದು ಅವರ ಕನಸುಗಳಲ್ಲೊಂದು. ಅದರಲ್ಲೇ ತೃಪ್ತಿಹೊಂದಿ ೩೯ ವರ್ಷ ದುಡಿದು, ಮುಖ್ಯೋಪಾಧ್ಯಾಯರಾಗಿ ನಿವೃತ್ತರಾದರು. ಸುಬ್ರಾಯ ಅವರಿಗೆ ಕವನ ಬರೆಯುವ ಗೀಳು ಬಾಲ್ಯದಿಂದ ಬಂದಿದ್ದು ; ಅದು ತಮ್ಮ ತಂದೆಯವರ ಕೊಡುಗೆ ಎಂದೇ ಅವರು ಭಾವಿಸುತ್ತಾರೆ. ಸುಬ್ರಾಯ ಚೊಕ್ಕಾಡಿಯವರ ಕವಿತೆಗಳನ್ನು ಪಟ್ಟಿಮಾಡಿದರೆ : ಅವು : ತೆರೆ, ಬೆಟ್ಟವೇರಿದ ಮೇಲೆ, ನಿಮ್ಮವೂ ಇರಬಹುದು, ಮೊನ್ನೆ ಸಿಕ್ಕವರು, ಇದರಲ್ಲಿ ಅದು, ಇನ್ನೊಂದು ಬೆಳಗು, ಮಾಗಿಯ ಕೋಗಿಲೆ. ಗೀತೆಗಳು-ಹಾಡಿನ ಲೋಕ, ಬಂಗಾರದ ಹಕ್ಕಿ ಪ್ರಮುಖವಾದವುಗಳು.
ವಿಮರ್ಶೆಗಳಲ್ಲಿಯೂ ಸಾಕಷ್ಟು ಕೈಯಾಡಿಸಿದ್ದಾರೆ ; ಅವುಗಳು ಹೀಗಿವೆ :
ಕಾವ್ಯ ಸಮೀಕ್ಷೆ, ಕೃತಿಶೋಧ, ಒಳಹೊರಗು ಮತ್ತು ಕಾದಂಬರಿಯಾಗಿ ಸಂತೆಮನೆ ಹೆಸರುಗಳಿಸಿವೆ.
ಬೇರೆಕವಿಗಳ ಜತೆ ಸೇರಿ ಸಂಪಾದಿತ ಕೃತಿಗಳು : ೧೯೦೧ರಿಂದ ೧೯೭೬ರವರೆಗೆ ದಕ್ಷಿಣ ಕನ್ನಡ ಕಾವ್ಯ.
ಸುಬ್ರಾಯರವರ ಬರಹಗಳ ಆಧಾರಿತ ಕ್ಯಾಸೆಟ್ ಹಾಗೂ ಸಿಡಿಗಳು ಹೊರಬಂದಿವೆ.
ಮಿಲನ, ಮಾನಸ, ಬೆಣ್ಣೆ ಕದ್ದ ನಮ್ಮ ಕೃಷ್ಣ, ವನಸಿರಿ, ಅನುರಾಗ, ಸಲ್ಲಾಪ, ಹುಣ್ಣಿಮೆ, ನೂಪುರ, ಸಿರಿಗನ್ನಡ, ದೀಪ, ಭಾವ ಚಿತ್ತಾರ, ನಿನ್ನ ಬಾಂದಳದಂತೆ ಜನಮನ್ನಣೆಯನ್ನು ಗಳಿಸಿವೆ.
ಚೊಕ್ಕಾಡಿಯವರಿಗೆ ದೊರೆತ ಗೌರವ ಪ್ರಶಸ್ತಿಗಳು :
* ೬೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ,
* ವರ್ಧಮಾನ ಪ್ರಶಸ್ತಿ, ಮುದ್ದಣ ಪ್ರಶಸ್ತಿ,
* ಮೃತ್ಯುಂಜಯ ಸಾರಂಗ ಮಠ ಪ್ರಶಸ್ತಿ,
* ಸಾಹಿತ್ಯ ಕಲಾನಿ ಪ್ರಶಸ್ತಿ,
* ಕರ್ನಾಟಕ ಶ್ರೀ ಪ್ರಶಸ್ತಿ ಮೊದಲಾದವುಗಳು
* ಸುಳ್ಯ ತಾಲ್ಲೂಕು ೫ ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ,
* ದಕ್ಷಿಣ ಕನ್ನಡ ಜಿಲ್ಲಾ ೧೫ ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ,
* ಅವರ ಸಾಹಿತ್ಯ ಪ್ರೇಮಿಗಳೆಲ್ಲಾ ಸೇರಿ ಅರ್ಪಿಸಿದ ಗೌರವ ಗ್ರಂಥ : 'ಮುಕ್ತ ಹಂಸ'
ಸೌಜನ್ಯತೆ -ಕನ್ನಡ ವಿಕಿಪೀಡಿಯ
ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದಿಂದ ಪದ್ಮಭೂಷಣ ಪುರಸ್ಕೃತ, ಡಾ. ಎಸ್. ಎಲ್. ಭೈರಪ್ಪನವರಿಗೆ ಗ್ರಂಥ ಗೌರವ ಸಮರ್ಪಣೆ : ೨೧, ಶುಕ್ರವಾರ ಜುಲೈ ೨೦೨೩ ರ ಮಧ್ಯಾನ್ಹದಂದು !
Comments