"The Kannada division of Mumbai university", is celebrating 45th year !

   ಮುಂಬಯಿನಗರದ ಕನ್ನಡ ದಿನಪತ್ರಿಕೆಯ ೯, ಏಪ್ರಿಲ್, ೨೯೨೩ ರ  "ಕರ್ನಾಟಕ ಮಲ್ಲ" ಕಂಡಂತೆ :

ಮುಂಬಯಿ ಮೆಟ್ರೋಪಾಲಿಟನ್ ನ  "ಪ್ರತಿಷ್ಠಿತ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ"ದ ಕಾರ್ಯ ವಿಸ್ತಾರ ಅತ್ಯಂತ ರೋಚಕ, ಹಾಗೂ ಅನುಕರಣೀಯ ; ಈಗ ಅದು ಅತ್ಯಂತ ಹೆಮ್ಮೆ ಹಾಗೂ ಸಂಭ್ರಮಗಳಿಂದ  ತನ್ನ ೪೫ ರ ಜನುಮದಿನವನ್ನು ಆಚರಿಸಿಕೊಳ್ಳುತ್ತಿದೆ. ಆ ಸಾರ್ಥಕ, ಹೃದಯಸ್ಪರ್ಶಿ ಸಂದರ್ಭದಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳು ಹಲವಾರು. 

'ಅಜೆಕಾರು ಕಲಾಭಿಮಾನಿ ಬಳಗ, ಮುಂಬಯಿ (೨೦೨೩)' ಪ್ರಸ್ತುತ ಪಡಿಸಿದ ಕಾರ್ಯಕ್ರಮಗಳು ವೀಕ್ಷಕರ ಮನಸ್ಸನ್ನು ಸೂರೆಗೊಂಡವು.  




ಮುಂಬಯಿ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗಕ್ಕೆ ೪೫ ವರ್ಷದ ಸಂಭ್ರಮ !  ಅದನ್ನು ತಮ್ಮ ಸಹ-ಕಾರ್ಯಕರ್ತರ ಸಹಕಾರದಿಂದ ಅತ್ಯದ್ಭುತವಾಗಿ ಆಯೋಜಿಸಿದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಿ. ಏನ್. ಉಪಾಧ್ಯ ವಂದನೀಯರು. ಕಾರ್ಯಕ್ರಮದ ಎಲ್ಲಾ ವಿಧಿಗಳೂ ಕರಾರುವಾಕ್ಕಾಗಿ ಗಡಿಯಾರದ ಚಲನೆಯನ್ನು ಹೋಲುತ್ತಿದ್ದವು. ಸ್ವಯಂ ಸೇವಕರ ಕಾರ್ಯನಿರ್ವಹಣೆ ಅತ್ಯಂತ ಸಮರ್ಪಕವಾಗಿತ್ತು. 


ಮುಂಬಯಿ ವಿಶ್ವವಿದ್ಯಾಲಯದ ಗೀತೆಯನ್ನು ಕೇಳಲು ಕೆಳಗಿನ ಕೊಂಡಿಯನ್ನು ಜಗ್ಗಿ 



ಮುಂಬಯಿ ಕನ್ನಡ ವಿಭಾಗದ ಸಹ-ಪ್ರಾಧ್ಯಾಪಕಿ, ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ, ಕಾರ್ಯಕ್ರಮ ನಿರೂಪಕಿಯಾಗಿ, ಮತ್ತು ಹಲವಾರು ಸಂಬಂಧ ಪಟ್ಟ ವಿಷಯಗಳಲ್ಲೂ ಸಮರ್ಪಕವಾಗಿ ತಮ್ಮ ವಿದ್ಯಾರ್ಥಿಗಳಿಂದ ಸಹಕಾರವನ್ನು ಪಡೆದು, ಒಟ್ಟಾರೆ ದಿನದ ಎಲ್ಲಾ ಕಾರ್ಯಕ್ರಮಗಳನ್ನು ಸುಂದರವಾಗಿ ಚೆಂದಗಾಣಿಸಲು ನೆರವಾದರು. 



















ಮುಂಬಯಿ ನಗರದ ಸಾಧಕ ಕನ್ನಡಿಗರೆಂದು ಡಾ. ಜಿ. ಏನ್. ಉಪಾಧ್ಯ ರವರಿಂದ ಗುರುತಿಸಲ್ಪಟ್ಟ  ೪೫ ಜನರು ಕಾರ್ಯಕ್ರಮಕ್ಕೆ ಆಗಮಿಸಿ "ದೀಪ ಪ್ರಜ್ವಲನ ವಿಧಿ" ಯಲ್ಲಿ ಭಾಗಿಗಳಾಗಿದ್ದರು. 









ಇಂದಿನ ಕಾರ್ಯಕ್ರಮದ ಅತಿಥಿಗಳು :

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಬರೋಡಾದ  ಹೆಸರಾಂತ ಉದ್ಯಮಿ, ದಯಾನಂದ, ಬೋಂಟ್ರ, ಬಂಟರ ಸಂಘದ ಉಪಾಧ್ಯಕ್ಷರಾದ ರತ್ನಾಕರ ಶೆಟ್ಟಿ,  ಮುಂಡ್ಕೂರು,  "ಬಂಟರ ವಾಣಿ ಪತ್ರಿಕೆ" ಯ ಕಾರ್ಯಾಧ್ಯಕ್ಷ ರವೀಂದ್ರನಾಥ  ಭಂಡಾರಿ. 






















ಸವಿತಾ ಅರುಣ್ ಶೆಟ್ಟಿ, ಎಂ. ಎ; (ಎರಡನೆಯ ವರ್ಷ) ವರ್ಷ ೨೦೨೩ ರ ಬಲ್ಲಾಳ್ ಪ್ರಶಸ್ತಿ ವಿಜೇತೆ.  














                          ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ, ಡಾ. ಉಮಾರಾವ್ ಮತ್ತು ಕಾರ್ಯ ನಿರ್ವಾಹಕ ತಂಡ 




Comments

'ಕೋವಿಡ್ ಮಹಾಮಾರಿ'ಯ ಸಮಯದಿಂದ ಇಂದಿನವರೆಗೆ ಮುಂಬಯಿ ವಿಶ್ವವಿದ್ಯಾಲಯ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವ್ಯವಸ್ಥಿತವಾಗಿ ನಡೆಸಿಕೊಂಡು ಬಂದಿದೆ. ಕನ್ನಡ ವಿಭಾಗದ ೪೫ ರ ಸಂಭ್ರಮ ನಿಜಕ್ಕೂ ಒಂದು ದೊಡ್ಡ ಕಾರ್ಯಕ್ರಮ. ಅನೇಕ ಪ್ರಮುಖರು. ಗೌರವ ಸಮರ್ಪಣೆಯೇ ಕಾರ್ಯಕ್ರಮದ ಒಂದು ದೊಡ್ಡ ಭಾಗವಾಗಿತ್ತು. ಅವೆಲ್ಲಾ ಗತಿವಿಧಿಗಳನ್ನು ಡಾ. ಪೂರ್ಣಿಮಾ ಶೆಟ್ಟಿ ಮತ್ತು ಸಂಗಡಿಗರು ಅತ್ಯಂತ ಸುಗಮ ರೀತಿಯಲ್ಲಿ ನಡೆಸಿಕೊಟ್ಟರು. ಅತಿಥಿಗಳ ಗೌರವ ಸಮರ್ಪಣೆಯ ಸಮಯದಲ್ಲಂತೂ ವಿಭಾಗದ ಮುಖ್ಯಸ್ಥರಾದ ಡಾ. ಜಿ. ಏನ್ ಉಪಾಧ್ಯ ಮಾತ್ರ, ಕುರ್ಚಿತಂದು ಅನುವುಮಾಡಿ ಕೊಡುವುದರಿಂದ ಹಿಡಿದು ವ್ಯವಸ್ಥಿತವಾಗಿ ಎಲ್ಲರ ಮನಸ್ಸು ಒಪ್ಪುವತರಹ ಮಾತನಾಡಿ ಕಾರ್ಯಕ್ರಮದ ಸೌಂದರ್ಯವನ್ನು ವೃದ್ಧಿಸುವಲ್ಲಿ ನೆರವಾದರು.
-ಎಚ್ಚಾರೆಲ್

Popular posts from this blog

ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ' !

99th Foundation day of Mysore association Mumbai-2024 !

ಬಿ. ಎಂ. ಶ್ರೀ. ಪ್ರತಿಷ್ಠಾನ, ಎಂ. ವಿ. ಸೀ. ಸ್ನಾತಕೋತ್ತರ ಸಂಶೋಧನಾ ಕೇಂದ್ರ. ನರಸಿಂಹರಾಜ ಕಾಲೋನಿ, ಬೆಂಗಳೂರು .