98th, Foundation day of The Mysore Association celebrated on 4th, March, 2023 !

98th Foundation day of the Mysore association, Matunga, Mumbai, was celebrated on 4th, Sat, March, 2023 !

Members  participated in the events,  like dancing and singing !

ಮೈಸೂರು ಅಸೋಸಿಯೇಷನ್  ನ ಹಿರಿಯ ಸದಸ್ಯೆ,  ಶ್ರೀಮತಿ. ರಮಾ ವಸಂತ್ ಕಾರ್ಯಕ್ರಮ ನಿರೂಪಿಸುತ್ತಿರುವುದು. 


ಮೈಸೂರು ಅಸೋಸಿಯೇಷನ್ ನ ಹಿರಿಯ ಸದಸ್ಯೆ, ಶ್ರೀಮತಿ ಲಕ್ಷ್ಮೀ ಸೀತಾರಾಮ್ ಸಭೆಯನ್ನುದ್ದೇಶಿಸಿ ಮಾತನಾಡುತ್ತಿರುವುದು 


ಶ್ರೀಮತಿ ಕಮಲಾ ಕಾಂತರಾಜ್ (ಅಸೋಸಿಯೇಷನ್ ಅಧ್ಯಕ್ಷೆ) ಶತಮಾನೋತ್ಸವವನ್ನು ಆಚರಿಸುವ  ಬಗ್ಗೆ ಮತ್ತು ನಂತರದ ಸವಾಲುಗಳು,  ಆದ್ಯತೆಗಳ ಬಗ್ಗೆ ಬೆಳಕು ಚೆಲ್ಲುತ್ತಿದ್ದಾರೆ.  


ಮೈಸೂರು ಅಸೋಸಿಯೇಷನ್ ನ ಗೌರವ ಕಾರ್ಯದರ್ಶಿ ಡಾ. ಗಣಪತಿ ಶಂಕರಲಿಂಗ,  ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಿರುವುದು. 


ಮೈಸೂರು ಅಸೋಸಿಯೇಷನ್ ನ ಹಿರಿಯ ಸದಸ್ಯ, ಅಭಿಯಂತ, ಸಮರ್ಥ ಸಂಘಟಕ,  ನಟ, ಒಳ್ಳೆಯ ವಾಗ್ಮಿ, ಶ್ರೀ. ಕೆ. ಮಂಜುನಾಥಯ್ಯ ತಮ್ಮ ಆದ್ಯತೆಗಳನ್ನು ಸ್ಪಷ್ಟವಾಗಿ ಎಲ್ಲರೊಂದಿಗೆ ಹಂಚಿಕೊಂಡರು.  


ಮೈಸೂರು ಅಸೋಸಿಯೇಷನ್ ನ ಸಂಗೀತ ವಿದುಷಿ, ಶ್ರೀಮತಿ ಶ್ಯಾಮಲಾ ರಾಧೇಶ್ ಒಂದು ಗೀತೆಯನ್ನು ಪ್ರಸ್ತುತಪಡಿಸುತ್ತಿರುವುದು. 
 
  
ಶ್ರೀ. ಫಾಲ್ಗುಣ ರುದ್ರಪಟ್ಣ, ಶ್ರೀಮತಿ ದೀಪ್ತಿ ರುದ್ರಪಟ್ಣ, ಅವರ ಮಗ, ಚಿ. ಸುವ್ರತ ತನ್ನ ಕೌಶಲತೆಯನ್ನು ಪ್ರದರ್ಶಿಸುತ್ತಿರುವುದು.  ಅಸೋಸಿಯೇಷನ್ ಗಣಪತಿ ಪೂಜೆಯ ದಿನ ಅವನ ತಂದೆ-ತಾಯಿಗಳು ಸಂಕಲ್ಪ ಮಾಡಿ,  ಗಣಪತಿಯ ಪೂಜೆಯನ್ನು ಮಾಡಿದ್ದರು. 
                                   


                                 ಆಹ್ವಾನಿತ  ಅಮೆರಿಕನ್ನಡಿತಿ ಶ್ರೀಮತಿ.  ಒಂದು ಗೀತೆಯನ್ನು ಹಾಡುತ್ತಿದ್ದಾರೆ. 


ಮೈಸೂರು ಅಸೋಸಿಯೇಷನ್ ನ ಲಲಿತಕಲಾ ವಿಭಾಗದ ಸದಸ್ಯೆಯರು ಒಂದು ನೃತ್ಯದಲ್ಲಿ ಪಾಲ್ಗೊಂಡಿದ್ದಾರೆ. 


ನೃತ್ಯಾಂಗನೆ ಚಿ. ಕ್ಷಮಾ ಹಾಗೂ ಶ್ರೀಮತಿ. ಗಿರಿಜಾ ಕಾರ್ಯಕ್ರಮ ವೀಕ್ಷಿಸುತ್ತಿರುವುದು. 


ಅಸೋಸಿಯೇಷನ್ ನ ಲಲಿತಕಲಾ ವಿಭಾಗದ ಸದಸ್ಯೆಯರು ತಮ್ಮ ಅದ್ಭುತ ನೃತ್ಯ ಪ್ರದರ್ಶನ ಮಾಡುತ್ತಿರುವುದು 



ನೃತ್ಯ ಸಂಯೋಜಕಿ,  ಶ್ರೀಮತಿ ಗಿರಿಜಾರವರ ಜೊತೆಯಲ್ಲಿ 



ಅಸೋಸಿಯೇಷನ್ ನಡೆದುಬಂದ ಹಾದಿಯ ಒಂದು  ವೃತ್ತಚಿತ್ರವನ್ನು ನಿರ್ಮಿಸಲಾಗಿತ್ತು. ಕಂಠದಾನ : ಶ್ರೀಮತಿ ಶೀಲಾ.
 ಶ್ರೀ.  ಜಯಚಾಮರಾಜೇಂದ್ರ ವೊಡೆಯರ್ ರವರು ಜನರನ್ನು ಸಂಬೋಧಿಸಿ ಮಾತಾಡುತ್ತಿರುವುದು.   


 ಶ್ರೀ ದೊರೈಸ್ವಾಮಿಯವರು ಅಧ್ಯಕ್ಷರಾಗಿದ್ದ ಸಮಯದಲ್ಲಿ ಕರ್ನಾಟಕ ಸರ್ಕಾರದಿಂದ ಸಂಸ್ಕೃತಿ, ಸಾಹಿತ್ಯ, ನಾಟಕ, ಮೊದಲಾದವುಗಳಲ್ಲಿ ಮೇರು ಮಟ್ಟದ ಕೊಡುಗೆ ನೀಡುತ್ತಿದ್ದ  ಹೊರನಾಡು ಕನ್ನಡ ಸಂಸ್ಥೆಯಾಗಿದ್ದ  ಮೈಸೂರು ಅಸೋಸಿಯೇಷನ್ ಗೆ  ಪ್ರಶಸ್ತಿ ದೊರೆಯಿತು. 


ಮೈಸೂರು ಅಸೋಸಿಯೇಷನ್  ನ ಹಿರಿಯ ಕಾರ್ಯಕರ್ತ, ವಿಜ್ಞಾನಿ, ಸಮರ್ಥ ಸಂಘಟಕ, ನಾಟಕ ಕರ್ತೃ, ಹಾಗೂ ನಟ,  ಡಾ. ಬಿ. ಆರ್. ಮಂಜುನಾಥ್ ಮೈಸೂರು ಅಸೋಸಿಯೇಷನ್ ಬಗ್ಗೆ ಸಂಕ್ಷಿಪ್ತ ವಿವರಣೆಯನ್ನು ಕೊಟ್ಟು ಮಾತಾಡಿದಾಗ.. 


  ಚಿ. ಕ್ಷಮಾ, ಕಥಕ್ ನೃತ್ಯ ಪಟು, ವೇದಿಕೆಯ  ಮೇಲೆ ಬರುವುದಕ್ಕೆ ಮೊದಲು 


ಚಿ. ಕ್ಷಮಾ, ಕಥಕ್ ನೃತ್ಯವನ್ನು ಪ್ರಸ್ತುತಪಡಿಸಿದರು. ಕೆಳಗಿನ ಚಿತ್ರಗಳಲ್ಲಿ ನೃತ್ಯದ ಹಲವು ವಿಶೇಷ ಸುಂದರ ಭಂಗಿಗಳನ್ನು ನೋಡಬಹುದು.  








ಸ್ಟೇಜ್ ಕೆಲಸಗಳನ್ನೆಲ್ಲಾ (ಬೆಳಕು, ಶಬ್ದ,  ಇತ್ಯಾದಿಗಳು) ಚೆನ್ನಾಗಿ ಮಾಡುವುದರ ಜೊತೆಗೆ  ಡಾ. ಜಿ. ಎಸ್.  ಶಿವರುದ್ರಪ್ಪನವರ ಗೀತೆಯನ್ನು ಸುಂದರವಾಗಿ ಹಾಡಿದ ಚಿ. ಶ್ರೀಧರ್ ಗೆ ಶುಭಾಶಯಗಳು.  


ಶ್ರೀಮತಿ ಒಂದು ಗೀತೆಯನ್ನು ಪ್ರಸ್ತುತಪಡಿಸುತ್ತಿದ್ದಾರೆ


ಮುಂದಿನ ಕುರ್ಚಿಗಳಲ್ಲಿ ಕುಳಿತವರು :

ಅಸೋಸಿಯೇಷನ್ ನ ಹಿರಿಯ ಸದಸ್ಯ/ಸದಸ್ಯೆಯರಾದ, ಶ್ರೀಮತಿ ಲೀಲಾ ಕೃಷ್ಣಸ್ವಾಮಿ  ಬನವಾಸಿ,  ಶ್ರೀ. ವಸಂತ್, ಶ್ರೀ. ವೆಂಕಟೇಶ್ (ಎಚ್ಚಾರೆಲ್) ಮತ್ತು ಶ್ರೀ. ಗಣೇಶ್. ಹಿಂದೆ,  ಶ್ರೀ ಶೇಷಕುಮಾರ್ ಅಲ್ಲದೆ ಹಲವಾರು ಸದಸ್ಯರು ಆಸೀನರಾಗಿದ್ದಾರೆ. 

                                        
              ಅಸೋಸಿಯೇಷನ್ ನ ಗೀತೆಯನ್ನು ಹಾಡಿದಾಗ,  ಸದಸ್ಯರೆಲ್ಲಾ ಎದ್ದು ನಿಂತು ಗೌರವ ಸೂಚಿಸುತ್ತಿರುವುದು.  


ಶ್ರೀಮತಿ. ವೀಣಾ ಕೃಷ್ಣಮೂರ್ತಿ ಭಾವಗೀತೆಯೊಂದನ್ನು ಹಾಡುತ್ತಿರುವುದು. (ಶ್ರೀಮತಿವೀಣಾ ಕೃಷ್ಣಮೂರ್ತಿದಂಪತಿಗಳು, "ಇದುವರೆವಿಗೂ ಹಾಡಲಿಲ್ಲ; ಇದೇ ಮೊದಲು" ಎಂದು ಹೇಳಿದ್ದನ್ನು  ಅವರ ಹಾಡಿನ ಪ್ರಸ್ತುತಿಯನ್ನು ಆಲಿಸಿದವರು ನಂಬಬೇಕಲ್ಲವೇ  ? !) ಏನಂತೀರೀ !?

                         
                            ಶ್ರೀ. ಕೃಷ್ಣಮೂರ್ತಿಯವರು ಒಂದು ಗೀತೆಯನ್ನು ಪ್ರಸ್ತುತಪಡಿಸುತ್ತಿರುವುದು. 



ಶ್ರೀಮತಿ/ಶ್ರೀ ವೀಣಾ ಕೃಷ್ಣ ಮೂರ್ತಿದಂಪತಿಗಳು  ಸಭಾಗೃಹದಲ್ಲಿ.  ಅವರ ಪಕ್ಕದಲ್ಲಿ ಶ್ರೀ ವೆಂಕಟೇಶ್ ಮತ್ತು ಗೆಳೆಯರು ಆಸೀನರಾಗಿದ್ದಾರೆ. 


ಶ್ರೀ. ಪಾರ್ಥಸಾರಥಿಯವರಿಗೂ ಮತ್ತು ಇತರ ರಸಿಕ ಬಾಂಧವರಿಗೂ ಈ ಕಾರ್ಯಕ್ರಮ ಇಷ್ಟವಾಗಿರಬೇಕು !



ಅಸೋಸಿಯೇಷನ್ ನ ಗೀತೆಯನ್ನು ಹಾಡಿದಾಗ,  ಸದಸ್ಯರೆಲ್ಲಾ ಎದ್ದು ನಿಂತು ಗೌರವ ಸೂಚಿಸುತ್ತಿರುವುದು 




ಕಥಕ್ ನೃತ್ಯಪಟು, ಚಿ. ಕ್ಷಮಾ ಜೊತೆಯಲ್ಲಿ ಚಿ. ಶ್ರೀಧರ್, ಸೌ. ಶೀಲಾ, ಸೌ. ಸರೋಜಾ ವೆಂಕಟೇಶ್ (ಅಸೋಸಿಯೇಷನ್ ನ ಹಿರಿಯ ಸದಸ್ಯೆ) ಮತ್ತು ಶ್ರೀ. 



ಅಸೋಸಿಯೇಷನ್ ನ ಗೀತೆ :

"ಕಾಯೌ ಶ್ರೀ ಗೌರಿ ಕರುಣಾಲಹರಿ ಗೀತೆ"

ಹಾಡಿದವರು : ಡಾ. ಗಣಪತಿ ಶಂಕರಲಿಂಗ, ಡಾ. ಬಿ. ಆರ್. ಮಂಜುನಾಥ್, ಶ್ರೀ ಶಶಿಕಾಂತ ಜೋಶಿಯವರುಗಳು 


ಫೋಟೋಗಳು  : ಎಚ್ಚಾರೆಲ್ 

"ಕಾಯೌ ಶ್ರೀ ಗೌರಿ ಕರುಣಾಲಹರಿ ಗೀತೆ"ಯು ಮೈಸೂರು ರಾಜ್ಯದ 'ರಾಜ್ಯ ಗೀತೆ'ಯಾಗಿತ್ತು.

ಕಾಯೌ ಶ್ರೀ ಗೌರಿ ಕರುಣಾಲಹರಿ
ತೊಯಜಾಕ್ಷಿ ಶಂಕರೀಶ್ವರಿ
೧. ವೈಮಾನಿಕ ಭಾಮಾರ್ಚಿತ ಕೋಮಲಕರ ಪಾದೇ
ಶ್ರೀಮಾನ್ವಿತ ಭೂಮಾಸ್ಪದೆ ಕಾಮಿತ ಫಲದೇ

೨. ಶುಂಭಾದಿಮ ದಾಂಭೋನಿಧಿ ಕುಂಭಜ ನಿಭ ದೇವೀ
ಜಂಭಾಹಿತ ಸಂಭಾವಿತೆ ಶಾಂಭವಿ ಶುಭವೇ

೩. ಶ್ರೀ ಜಯಚಾಮುಂಡಿಕೆ ಶ್ರೀ ಜಯಚಾಮೆಂದ್ರ
ನಾಮಾಂಕಿತ ಭೂಮೀಂದ್ರ ಲಲಾಮನ ಮುದದೆ"

"ಕಾಯೌ ಶ್ರೀ ಗೌರಿ ಕರುಣಾಲಹರಿ ಗೀತೆ"ಯು ಮೈಸೂರು ರಾಜ್ಯದ ರಾಜ್ಯ ಗೀತೆಯಾಗಿತ್ತು. ಮೈಸೂರು ವೊಡೆಯರ ವಂಶದ ರಾಜರು ಈ ಗೀತೆಯನ್ನು ತಪ್ಪದೆ ಹಾಡುತ್ತಾ ಬಂದರು. ಈ ಗೀತೆಯನ್ನು ರಚಿಸಿದವರು, ಶ್ರೀ ಬಸವಪ್ಪ ಶಾಸ್ತ್ರಿಗಳು ; ಮೈಸೂರು ಆಸ್ಥಾನ ಕವಿಯಾಗಿದ್ದರು. ಚಾಮರಾಜ ಒಡೆಯರ ಆಳ್ವಿಕೆಯಲ್ಲಿದ್ದ ಕಾಲದಲ್ಲಿದ್ದರು (೧೮೪೩-೧೮೯೧), ೧೮೬೮-೧೮೯೪ ವರೆಗೆ ರಾಜ್ಯಭಾರ ವಹಿಸಿದ್ದರು. 

ಆ ರಾಜ್ಯಗೀತೆಯನ್ನು 'ಯೂಟ್ಯೂಬ್' ನಲ್ಲಿ ಅವಲೋಕಿಸಬಹುದು. ಅದೇ ಗೀತೆಯನ್ನು ಮೈಸೂರು ಅಸೋಸಿಯೇಷನ್ ಸದಸ್ಯರು ಪ್ರೀತಿಯಿಂದ ತಮ್ಮ ಸಂಸ್ಥೆಯ ಗೀತೆಯನ್ನಾಗಿ ಅಳವಡಿಸಿಕೊಡಿದ್ದಾರೆ. 

ಅದರ ಕೊಂಡಿಯನ್ನು ಒತ್ತಿ ನೋಡಿ  :    https://youtu.be/N-UkdYT9ay0




















Comments

This comment has been removed by a blog administrator.
ಸದಸ್ಯರಾದ ನಾವೆಲ್ಲಾ ತೆಗೆದುಕೊಳ್ಳಬೇಕಾಗಿರುವ ಒಂದು ಪ್ರತಿಜ್ಞೆ : (ನನ್ನಂತಹ, ಇಲ್ಲವೇ ನನಗಿಂತ ತೀರಾ ಹಿರಿಯ ಸದಸ್ಯರಿಗೆ, ಸ್ವಲ್ಪ ರಿಯಾಯಿತಿ ತೋರಿಸಬೇಕಲ್ಲವೇ ?)



ಯಾವುದೇ ಒಂದು ಸಂಸ್ಥೆ ನಿರಂತರವಾಗಿ ಕಾರ್ಯಶೀಲವಾಗಿದ್ದು, ಕನ್ನಡ ಕಟ್ಟುವ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡು ಮುಂದುವರೆಯುವ ದೃಶ್ಯ ನೋಡುವುದು ಬಹಳ ಮುದಕೊಡುವ ಸಂಗತಿ. ನಾವು ಈಗ ನಮ್ಮ ಮುಂಬಯಿಯ ಪ್ರತಿಷ್ಠಿತ ಕನ್ನಡ ಸಂಸ್ಥೆಗಳಲ್ಲೊಂದಾದ ಮೈಸೂರು ಅಸೋಸಿಯೇಷನ್ ಬಗ್ಗೆ ಮಾತಾಡುತ್ತಿದ್ದೇವೆ. ೯೮ ಸಾರ್ಥಕ ವರ್ಷಗಳು ಸಂದಿವೆ. ಕರ್ನಾಟಕದಿಂದ ಮುಂಬಯಿಗೆ ನೌಕರಿಗಾಗಿ ಬರುತ್ತಿದ್ದ ಕನ್ನಡಿಗರಿಗೆ ಒಂದು ಆಶ್ರಯ ತಾಣವಾಗಿ ಮೊದಲು ಶುರುಮಾಡಿದ್ದು, ನಂತರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಒಳನಾಡಿಗಿಂತ ಹೆಚ್ಚಿನ ಮಟ್ಟದಲ್ಲಿ ತನ್ನ. ಕೊಡುಗೆಯನ್ನು ಕೊಟ್ಟು, ದಾಪುಗಾಲುಗಳನ್ನು ಹಾಕುತ್ತಾ ಶತಮಾನೋತ್ಸದವಾದ ಕಡೆಗೆ ಕಂಪ್ಯೂಟr Mouse ನ ವೇಗದಲ್ಲಿ ಧಾವಿಸುತ್ತಿರುವ ಈ ನಮ್ಮ ಹೆಮ್ಮೆಯ ಸಂಸ್ಥೆ ಕಳೆದ ದಶಕಗಳಿಂದ ತನ್ನದೇ ಆದ ಅತ್ಯುತ್ತಮ ಹವಾನಿಯಂತ್ರಿತ ಸಭಾಂಗಣಗಳನ್ನು ಹೊಂದಿದೆ. (ಒಂದು ಮಿನಿ , ಮತ್ತೊಂದು ವಿಶಾಲ ಸಭಾಂಗಣ) 

ಗಳಿಸುತ್ತಿರುವ ಬಾಡಿಗೆಮೊದಲಾದ ಆದಾಯಗಳಿಂದ ಅಸೋಸಿಯೇಷನ್ ತನ್ನ ಸ್ವಂತ ನಿರ್ವಹಣೆಯ ಸ್ಥಿತಿಯನ್ನು ಮುಟ್ಟಿದೆ, ಮತ್ತು ಈ ನಗರದ ಸ್ಥಾನೀಯ ವಿದ್ಯಾರ್ಥಿಗಳಿಗೆ ಹಲವಾರು ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರಿಗೆ ಪ್ರಶಸ್ತಿಗಳನ್ನು ಪ್ರದಾನಮಾಡುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಮತ್ತಷ್ಟು ಹೆಚ್ಚಿನ ಕೆಲಸ ಮಾಡುವ ಬಗ್ಗೆ ಮಾರ್ಚ್ ೪, ೨೦೨೩ ರಂದು ನಡೆದ ಸಮಾರಂಭದಲ್ಲಿ ಕಾರ್ಯಕಾರಿ ಸಮಿತಿಯವರು, (೯೮ ನೆಯ Foundation ದಿನದಂದು) ತಮ್ಮ ವಿಚಾರಗಳನ್ನು ಮಂಡಿಸಿ ಮಾತನಾಡಿದರು.



ಆಶಯಗಳು :

 ಬರುವ ದಿನಗಳು ಶುಭಪ್ರದವಾಗಲಿ. ಮೈಸೂರು ಅಸೋಸಿಯೇಷನ್ ವತಿಯಿಂದ ಹೆಚ್ಚು-ಹೆಚ್ಚು ಕನ್ನಡ ಸೇವೆಗಳು ನಿರಂತರವಾಗಿ ನೆರವೇರಲಿ. ಶುಭವಾಗಲಿ. 
ಇಷ್ಟೇ ಹೇಳಿದರೆ ಸಾಕೇ ? ಇಲ್ಲ; ಇಲ್ಲಿ ಸ್ವಲ್ಪ ಪರಾಮರ್ಶೆಯ ಅಗತ್ಯವಿದೆ :



೧. ಅಸೋಸಿಯೇಷನ್ ನ ಯಾವುದೇ ಕಾರ್ಯಕ್ರಮಗಳಿಗೆ ಸದಸ್ಯರುಗಳು ಹೆಚ್ಚು-ಹೆಚ್ಚಾಗಿ ಭಾಗವಹಿಸುವುದು, ಅತ್ಯಂತ ಮುಖ್ಯ. ತಮ್ಮ ಅನಿಸಿಕೆಗಳನ್ನು ಬಿಚ್ಚುಮಾತಿನಿಂದ ಕಾರ್ಯಕಾರಿ ಸಮಿತಿಯ ಸದಸ್ಯರೊಡನೆ ಹಂಚಿಕೊಳ್ಳುವುದು 
೨. ಉತ್ತಮ ಕನ್ನಡ ವ್ಯಕ್ತಿಗಳನ್ನು ಹೊಸದಾಗಿ ಅಸೋಸಿಯೇಷನ್ ಗೆ ಪರಿಚಯಿಸುವುದು. ಇವೆರಡನ್ನೂ ನಾವು ತಪ್ಪದೆ ಮಾಡಬೇಕಾಗಿದೆ.

ಗಮನವಿರಲಿ : ಇದು ಕೇವಲ ಉಪದೇಶವಂತೂ ಅಲ್ಲವೇ ಅಲ್ಲ.

Popular posts from this blog

ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ' !

99th Foundation day of Mysore association Mumbai-2024 !

ಬಿ. ಎಂ. ಶ್ರೀ. ಪ್ರತಿಷ್ಠಾನ, ಎಂ. ವಿ. ಸೀ. ಸ್ನಾತಕೋತ್ತರ ಸಂಶೋಧನಾ ಕೇಂದ್ರ. ನರಸಿಂಹರಾಜ ಕಾಲೋನಿ, ಬೆಂಗಳೂರು .