ಮೈಸೂರು ಅಸೋಸಿಯೇಷನ್ ಮುಂಬಯಿ ನಲ್ಲಿ, ಶ್ರೀ ರಂಗ ರಂಗೋತ್ಸವ - 2022, ಆಯೋಜಿಸಲ್ಪಟ್ಟಿತ್ತು !

 ಅಸೋಸಿಯೇಷನ್ ಮುಂಬಯಿ, ನಲ್ಲಿ ಶ್ರೀ ರಂಗ ರಂಗೋತ್ಸವ -೨೦೨೨, ಆಯೋಜಿಸಲ್ಪಟ್ಟಿತ್ತು  !

ಮೇ ೦೨, ೨೦೨೨ ಸಂಜೆ ೬-೩೦ ಕ್ಕೆ 'ಸಾಕಾರ' ಎಂಬ ನಾಟಕ ಮೈಸೂರು ಅಸೋಸಿಯೇಷನ್ ಲಲಿತಕಲಾ ವಿಭಾಗದ ಕಲಾವಿದರಿಂದ,  ಬರೆದು ಪ್ರಸ್ತುತಪಡಿಸಿದವರು  : ಡಾ. ಬಿ. ಆರ್. ಮಂಜುನಾಥ್ ರವರು. 

ಮೇ ೦೩, ೨೦೨೨ ಸಂಜೆ ೬-೩೦ ಕ್ಕೆ,  ಮರಾಠಿ ನಾಟಕ, Most welcome, ಬರೆದು ಪ್ರಸ್ತುತಪಡಿಸುವವರು, ನಿಷಿಗಂಧ ಮತ್ತು ಕಲಾಸಾಧನ ಮುಂಬಯಿ.  ಬರೆದು ನಿರ್ದೇಶನ : ಶ್ರೀ. ಸುನಿಲ್ ಹರಿಶ್ಚಂದ್ರ 

ಮೇ ೦೪, ೨೦೨೨, ಸಂಜೆ, ೬-೩೦ ಕ್ಕೆ, ಹಿಂದಿ ನಾಟಕ, "ಮೈ ಲೋಕಮಾನ್ಯ ಟಿಳಕ್ ಹೂ" ಎಂಬ ಹಿಂದಿ ನಾಟಕದ  ಪ್ರದರ್ಶನವಾಗಲಿದೆ. 

   ಶ್ರೀಮತಿ ಕಮಲಾ ಕಾಂತರಾಜ್ (ಅಧ್ಯಕ್ಷೆ, ಮೈ. ಅಸೋಸಿಯೇಶನ್) ಡಾ. ಶ್ರೀಮತಿ. ಉಷಾ ದೇಸಾಯಿಯವರಿಗೆ  ಪುಷ್ಪಗುಚ್ಛವಿತ್ತು  ಗೌರವಿಸುತ್ತಿದ್ದಾರೆ. ವೇದಿಕೆಯ ಮೇಲೆ ಡಾ. ಭರತ್ ಕುಮಾರ್ ಪೊಲಿಪುರವರೂ ಇದ್ದಾರೆ. 

 ಡಾ. ಭರತ್ ಕುಮಾರ್ ಪೊಲಿಪುರವರು ಶ್ರೀರಂಗರ ಬಗ್ಗೆ  ಸಭಿಕರನ್ನು ಸಂಬೋಧಿಸಿ ಮಾತಾಡುತ್ತಿದ್ದಾರೆ. 


ಡಾ. ಶ್ರೀಮತಿ. ಉಷಾ ದೇಸಾಯಿಯವರು ಪ್ರೇಕ್ಷಕರನ್ನು ಸಂಬೋಧಿಸಿ ಮಾತಾಡುತ್ತಿದ್ದಾರೆ. 














         
    ಯುವ ನಿರ್ದೇಶಕ ಶ್ರೀ. ಹರಿಶ್ಚಂದ್ರರಿಗೆ ಡಾ. ಉಷಾ ದೇಸಾಯಿಯವರು ಪುಷ್ಪಗುಚ್ಛ ಕೊಟ್ಟು ಸತ್ಕರಿಸುತ್ತಿದ್ದಾರೆ . 




ದಿನಾಂಕ ೦೪, ಬುಧವಾರ, ಮೇ ೨೦೨೨ ರ ಸಂಜೆ ೬-೩೦ ಕ್ಕೆ "ಮೈ ಲೋಕಮಾನ್ಯ ಟಿಳಕ್ ಹೂ" ಎಂಬ ಹಿಂದಿ ನಾಟಕ, ಐಡಿಯಲ್ ನಾಟಕ ತಂಡದವರಿಂದ ಪ್ರದರ್ಶಿಸಲ್ಪಟ್ಟಿತು. ರಚನೆ : ಖಾಜಿ ಮುಸ್ತಾಕ್ ಅಹ್ಮದ್, ನಿರ್ದೇಶನ : ಮುಜೀಬ್ ಖಾನ್ 


ಶ್ರೀ. ಬಾಲಗಂಗಾಧರ್ ತಿಲಕ್ ರವರ ಪಾತ್ರವನ್ನು ಅತ್ಯದ್ಭುತವಾಗಿ ಅಭಿನಯಿಸಿದ ಶ್ರಿಯವರಿಗೆ ಡಾ. ಉಷಾದೇಸಾಯಿರವರು ಪುಷ್ಪಗುಚ್ಛವಿತ್ತು  ಗೌರವಿಸುತ್ತಿದ್ದಾರೆ. 
















ಸುಪ್ರಸಿದ್ಧ ನಾಟಕಕಾರ ಶ್ರೀರಂಗರವರ ಸ್ಮರಣಾರ್ಥವಾಗಿ ಅವರ ಪುತ್ರಿ ಶ್ರೀಮತಿ ಉಷಾ ದೇಸಾಯ್, ಮತ್ತು ಮೈಸೂರು ಅಸೋಸಿಯೇಷನ್ ಜಂಟಿಯಾಗಿ ಆಯೋಜಿಸಿದ ನಾಟಕಮಾಲೆ, 'ಶ್ರೀರಂಗ ರಂಗೋತ್ಸವ-೨೦೨೨ '!

ಪ್ರತಿವರ್ಷದಂತೆ ಈ ವರ್ಷವೂ ಶ್ರೀರಂಗ ರಂಗೋತ್ಸವದ ನಾಟಕಗಳು ಬಹಳ ಕಳೆಕಟ್ಟಿದ್ದವು. ಕಲಾರಸಿಕರು ಹೆಚ್ಚು ಹೆಚ್ಚಾಗಿ ಬಂದು, ನಾಟಕಗಳನ್ನು ನೋಡಿ ಆನಂದಿಸಿದರು. ಮೈಸೂರು ಅಸೋಸಿಯೇಷನ್ ನ ಲಲಿತ ಕಾಲ ವಿಭಾಗದ ಕಲಾವಿದರು ಪ್ರಸ್ತುತಪಡಿಸಿದ ಮೊದಲನೆಯ ದಿನದ ನಾಟಕ, "ಸಾಕಾರ", ಪುರಂದರದಾಸರ ಕೀರ್ತನೆಗಳನ್ನು ಅನುಕರಿಸಿದ್ದು. ಗಮ್ಮತ್ತೆಂದರೆ, ಕಲಾವಿದರೂ ನಟಿಸುವ ಸಮಯದಲ್ಲಿ ಹಿಮ್ಮೇಳದ ಜತೆಗೆ ಹಾಡಿ, ನಾಟಕಕ್ಕೆ ಕಳೆ ತಂದುಕೊಟ್ಟರು. ಸಮರ್ಥ ರಂಗಕರ್ಮಿ, ಅಭಿನಯ ಕರ್ತ ಶ್ರೀ ರಂಗನಾಥ್, ಶ್ರೀಮತಿ ಲಕ್ಷ್ಮೀ ಸೀತಾರಾಂ, ಸಂಗೀತ ವಿದುಷಿ. ಶ್ರೀಮತಿ ಶ್ಯಾಮಲಾ ರಾಧೇಶ್, ನುರಿತ ರಂಗ ತಜ್ಞ, ಶ್ರೀ. ಕೆ. ಮಂಜುನಾಥಯ್ಯ, ಹಾಗೂ ಪ್ರತಿಭಾನ್ವಿತ ಶಶಿಕಾಂತ ಜೋಶಿ ದಂಪತಿಗಳು, ಮತ್ತು ಅನೇಕ ಯುವ ಪ್ರತಿಭೆಗಳು ನಾಟಕಕ್ಕೆ 'ಹೊಸ ಜೋಶ್' ತಂದುಕೊಟ್ಟಿದ್ದರು. ನುರಿತ ರಂಗ ಪಟ್ಕಥಾ ಲೇಖಕ, ನಟ, ನಿರ್ದೇಶಕ, ಪಾರ್ಶ್ವ ಗಾಯಕ, ವಿಜ್ಞಾನಿ, ಡಾ. ಬಿ. ಆರ್. ಮಂಜುನಾಥ್ ನಿರ್ದೇಶನ, ಸೊಗಸಾಗಿತ್ತು. 

ಎರಡನೆಯ ದಿನದ ನಾಟಕ (ಮರಾಠಿಭಾಷೆಯಲ್ಲಿ) ೩, ಮೇ, ೨೦೨೨.

ನಿಷಿಗಂಧ ಮತ್ತು ಕಲಾಸದನದ ತಂಡದವರ ಪ್ರಸ್ತುತಿ. ರಚನೆ, ನಿರ್ದೇಶನ : ಸುನೀಲ್ ಹರಿಶ್ಚಂದ್ರ 
ನಾಟಕದ ಶೀರ್ಷಿಕೆ ಇಂಗ್ಲೀಷಿನದು. 'Most welcome'. ಆದರೆ ಕಥಾವಸ್ತು ಪ್ರಸ್ತುತಿ ಮರಾಠಿಯಲ್ಲಿ. ಬಹಳ ಸುಂದರವಾಗಿ ಮೂಡಿಬಂತು. ಪ್ರಸ್ತುತ ಸಾಮಾಜಿಕ ಪಿಡುಗನ್ನು ಕಥಾವಸ್ತುವನ್ನಾಗಿರಿಸಿ ಅದರ ಬಗ್ಗೆ ತೀವ್ರ ಚಿಂತನೆಗೆ ನಮ್ಮೆಲ್ಲರನ್ನೂ ಒಡ್ಡಿದ ನಾಟಕವಿದು. 

ಕೊನೆಯ ದಿನದ ನಾಟಕ : (ಹಿಂದಿಭಾಷೆಯಲ್ಲಿ) ೩, ಮೇ, ೨೦೨೨. 

"ಮೈ ಬಾಲಗಂಗಾಧರ್ ಟಿಳಕ್ ಹೈ" ಅತ್ಯುತ್ತಮ ಪಟ್ಕಥೆ, ಭವ್ಯವಾದ ರಂಗ ಸಜ್ಜಿಕೆ, ಬೆಳಕು ವಿನ್ಯಾಸ, ಅದ್ಭುತವಾದ ಅಭಿನಯಗಳಿಂದ ಕಲಾಪ್ರೇಮಿಗಳ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ಸನ್ನು ಗಳಿಸಿತು. ಬಾಲಗಂಗಾಧರ್ ಟಿಳಕ್ ಪಾತ್ರಧಾರಿಯವರ ಮಾತಿನ ಶೈಲಿ, ಬಹಳ ಸಹಜವಾಗಿ ಮೂಡಿಬಂತು. ಅವರ ಜತೆಗೆ ಅಭಿನಯಿಸಿದ ಬೇರೆ ಪೋಷಕ ಪಾತ್ರಗಳೂ ಬಹಳ ಪರ್ಯಾಪ್ತವಾಗಿದ್ದು ನಾಟಕಕ್ಕೆ ಕಳೆತಂದುಕೊಟ್ಟಿತ್ತು. ಐಡಿಯಲ್ ನಾಟಕ ತಂಡದವರ ಪ್ರಸ್ತುತಿಯಲ್ಲಿ ಖಾಜಿ ಮುಸ್ತಾಕ್ ಅಹ್ಮದ್ ರವರ ರಚನೆ, ಮತ್ತು ಮುಜೀಬ್ ಖಾನ್ ರವರ ನಿರ್ದೇಶನದಲ್ಲಿ ಪ್ರದರ್ಶಿಸಲ್ಪಟ್ಟ ನಾಟಕ ನುರಿತಕಲಾವಿದರ ಅಭಿನಯದಿಂದ ರಸಿಕರಿಗೆಲ್ಲಾ ಮುದನೀಡಿತು.


Comments

All the 3 dramas were very good
Among the three v good dramas, Lokamanya balaganghadhar's drama, "Mai Balagangadhar tilak hai" was very appealing to me. The excellent script, stage, Light, arrengements were superb. The actor who played the Tilak's role just 'LIVED IN TIALK'S MOODS, IN REALITY" I do not how much he might have practised ! It was really a brillinat drama.....

Popular posts from this blog

ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ' !

99th Foundation day of Mysore association Mumbai-2024 !

ಬಿ. ಎಂ. ಶ್ರೀ. ಪ್ರತಿಷ್ಠಾನ, ಎಂ. ವಿ. ಸೀ. ಸ್ನಾತಕೋತ್ತರ ಸಂಶೋಧನಾ ಕೇಂದ್ರ. ನರಸಿಂಹರಾಜ ಕಾಲೋನಿ, ಬೆಂಗಳೂರು .