ಏನ್. ಕೆ. ಇ. ಎಸ್. ವಡಾಲ ಮುಂಬಯಿನಗರದ ಪದವಿ ಕಾಲೇಜ್ ನಲ್ಲಿ ಘಟಿಕೋತ್ಸವ ಸಮಾರಂಭ !
ಕಾರ್ಯಕ್ರಮದ ಶುಭಾರಂಭವನ್ನು ದೀಪ ಪ್ರಜ್ವಲನದಿಂದ ಪ್ರಾರಂಭಿಸಲಾಯಿತು. ಕರ್ನಾಟಕ ಮಲ್ಲ ದಿನ ಪತ್ರಿಕೆಯ ವರದಿ : ವಡಾಲ ರಾಷ್ಟೀಯ ಕನ್ನಡ ಶಿಕ್ಷಣ ಸಮಿತಿ ಕಲಾ, ವಾಣಿಜ್ಯ, ಹಾಗೂ ವಿಜ್ಞಾನ ವಿಭಾಗದ ಪದವಿ ಕಾಲೇಜಿನ ವಿದ್ಯಾರ್ಥಿಗಳ ಪ್ರಥಮ ಪದವಿ ಸಮಾರಂಭ (ಘಟಿಕೋತ್ಸವ-ಏಪ್ರಿಲ್, ೧೧, ೨೦೨೨ ರಂದು, ಸೋಮವಾರ ಕಾಲೇಜಿನ ಸಭಾಗೃಹದಲ್ಲಿ ನೆರವೇರಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಸ್ಥೆಯ ವಿಶ್ವಸ್ಥರಾದ ಡಾ. ಬಿ. ಆರ್. ಮಂಜುನಾಥ್ ವಿದ್ಯಾರ್ಥಿಗಳಿಗೆ ಪದವಿ ಪದವಿ ಪತ್ರಗಳನ್ನು ಪ್ರದಾನಿಸಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿಶೇಷ ಪುರಸ್ಕಾರಗಳನ್ನೂ ವಿತರಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ಅವರ ಆಸಕ್ತಿಯ, ಅಭಿರುಚಿಯ ವಿಚಾರಗಳತ್ತ ಹೆಚ್ಚಿನ ಗಮನ ನೀಡಿ ತಮ್ಮ ಗುರಿಯನ್ನು ತಲುಪಲು ಪ್ರಯತ್ನಿಸಬೇಕು ಎಂದು ನುಡಿದರು. ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಶ್ರೀ. ಶಶಿಕಾಂತ ಜೋಶಿಯವರು ಮಾತನಾಡುತ್ತಾ, ಪದವಿ ವಿದ್ಯಾಲಯವನ್ನು ಪ್ರಾರಂಭ ಮಾಡಲು ಪ್ರಯತ್ನಿಸಿದ ಎಲ್ಲರನ್ನೂ ಸ್ಮರಿಸಿ, ಅವರ ಅವಿರತ ಹೋರಾಟದ ಫಲವಾಗಿ ಈ ದಿನ ಘಟಿಕೋತ್ಸವ ಕಾಣುವಂತಾಗಿದೆ ಎಂದು ತಿಳಿಸಿದರು. ಹಾಗೆಯೇ ಮುಂದುವರೆದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ, ಮುಂಬರುವ ಶೈಕ್ಷಣಿಕ ವರ್ಷದಿಂದ ಕಾಲೇಜು ಹಮ್ಮಿಕೊಂಡಿರುವ ವಿವಿಧ ಯೋಜನೆಗಳ ಕುರಿತು ಬೆಳಕು ಚೆಲ್ಲುತ್ತಾ ಕಾಲೇಜಿನಲ್ಲಿ ಜರಗುವ ಕ್ಯಾಂಪಸ್ ನೇಮಕಾತಿ (ಕ್ಯಾಂಪಸ್ ರಿ...