ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ಆಯೋಜಿಸಿದ ಪ್ರಕಾಶಕರ ಸಮ್ಮೇಳನದಲ್ಲಿ ಗೌರವ ಪುರಸ್ಕಾರ ಪ್ರದಾನ ಸಮಾರಂಭ !
ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ಆಯೋಜಿಸಿದ ಪ್ರಕಾಶಕರ ಸಮ್ಮೇಳನದಲ್ಲಿ ಗೌರವ ಪುರಸ್ಕಾರ ಪ್ರದಾನ ಸಮಾರಂಭ.
ಸ್ಥಳ : ಶತಮಾನೋತ್ಸವ ಭವನ, ಮಹಾರಾಜಾ ಕಾಲೇಜ್ ಆವರಣ, ಮೈಸೂರು.
ತಾರೀಖು : ೧೫, ಮಾರ್ಚ್, ೨೦೨೨
ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಪ್ರಕಾಶನ ಸಂಸ್ಥೆಯ ಗೌರವ ಪುರಸ್ಕಾರವನ್ನು ಸ್ವೀಕರಿಸಲು ಡಾ. ಶ್ಯಾಮಲಾ ಪ್ರಕಾಶ್ ಹಾಜರಿದ್ದರು.
ಡಾ. ಶ್ಯಾಮಲಾ ಪ್ರಕಾಶ್, ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಂದರ್ಶಕ ಪ್ರಾಧ್ಯಾಪಕರು. ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರದ ದ್ವಿತೀಯ ಸಮ್ಮೇಳನದಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪರವಾಗಿ ಡಾ. ಶ್ಯಾಮಲಾ ಪ್ರಕಾಶ್ ಭಾಗವಹಿಸಿದ್ದರು.
ಡಾ. ಶ್ಯಾಮಲಾ ಪ್ರಕಾಶ್ ಅವರು ಮೈಸೂರಿನ ಸಮುದಾಯ ಬಾನುಲಿ ಕೇಂದ್ರದ ಜ್ಞಾನ ಧ್ವನಿ ೯೦. ೮ F.M ಗೆ ಭೇಟಿ ನೀಡಿ ಮಾತಾಡಿದ್ದರು.
Comments