ಮೈಸೂರ್ ಅಸೋಸಿಯೇಷನ್ ಮುಂಬಯಿ, ಹಾಗೂ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ, ಜಂಟಿಯಾಗಿ ಆಯೋಜಿಸಿದ 'ಸಾಹಿತ್ಯ ಸಂಭ್ರಮ ಕಾರ್ಯಕ್ರಮ' !
'ಕರ್ನಾಟಕ ಮಲ್ಲ ದಿನಪತ್ರಿಕೆ'ಯ ೨೧, ಡಿಸೆಂಬರ್ ೨೦೨೧ ರ ಪ್ರತಿಯ ಕೊಂಡಿಯನ್ನು ತಟ್ಟಿ :
http://www.karnatakamalla.com/imageview_26063_1353839_4_137_21-12-2021_9_i_1_sf.html
https://www.karnatakamalla.com/
'ವ್ಯಾಪಕವಾದ ಓದು ಬರವಣಿಗೆಗೆ ಪೂರಕ '~ ಡಾ. ರಮಾ ಉಡುಪ.
ಮೈಸೂರ್ ಅಸೋಸಿಯೇಷನ್ ಮುಂಬಯಿ, ಹಾಗೂ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ, ಜಂಟಿಯಾಗಿ ಆಯೋಜಿಸಿದ 'ಸಾಹಿತ್ಯ ಸಂಭ್ರಮ ಕಾರ್ಯಕ್ರಮ', ಡಿಸೆಂಬರ್ ೨೦೨೧ ರಂದು, 'ಮೈಸೂರ್ ಅಸೋಸಿಯೇಷನ್ ನ ಕಿರು ಸಭಾಗೃಹ'ದಲ್ಲಿ ಜರುಗಿತು. ಮೊದಲು ಯಕ್ಷಗಾನ ಭಾಗವತಿಕೆಯನ್ನು ಪ್ರಭಾಕರ ದೇವಾಡಿಗ ನಡೆಸಿಕೊಟ್ಟರು. ನಂತರ ಕುಮಾರವ್ಯಾಸನ ಕಥಾಮಂಜರಿಯ ಆಯ್ದ ಭಾಗಗಳನ್ನು ಶೈಲಜಾ ಹೆಗಡೆಯವರು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದರು.
ತಾವು ರಚಿಸಿದ ೨ ಕವಿತೆಗಳನ್ನುಅನಿತಾ ಪಿ. ತಾಕೊಡೆ ವಾಚಿಸಿದರು. ಅವುಗಳು ಹೀಗಿವೆ : ೧. " ಕವಿಸಮಯದಲ್ಲಿ ಅಡುಗೆಮನೆಯೂ ಬದಲಾಗಿದೆ" ೨. "ಸುಮ್ಮನೆ ನಗುತ್ತೇನೆ".
ವಿದ್ಯಾರ್ಥಿಗಳು ನಡೆಸಿಕೊಟ್ಟ ಈ ವಿಶಿಷ್ಠ ಸಾಹಿತ್ಯ ಸಮ್ಮೇಳನದಲ್ಲಿ, ಕೆ. ಕಮಲಾ, ಮಧುಸೂಧನ್, ದಾಕ್ಷಾಯಣಿ ಎಡೆಹಳ್ಳಿ, ನಿತ್ಯಾನಂದ ಕೋಟ್ಯಾನ್, ಡಾ. ಈಶ್ವರ್ ಅಲೆವೂರ್, ರಂಗ ಎಸ್. ಪೂಜಾರಿ, ಮೋಹನ್ ಮಾರ್ನಾಡ, ವಿವೇಕ್ ಶಾನ್ ಭಾಗ್, ಡಾ. ಭರತ್ ಕುಮಾರ್ ಪೊಲಿಪು, ಮನೋಹರ್ ತೋನ್ಸೆ, ಏನ್. ಟಿ. ಪೂಜಾರಿ, ನಾರಾಯಣ ನವಿಲೇಕರ್, ಲತಾ ಸಂತೋಷ್ ಶೆಟ್ಟಿ, ಸವಿತಾ ಶೆಟ್ಟಿ, ಪದ್ಮನಾಭ ಶೆಟ್ಟಿ, ಕೆ. ಎಂ. ಕೋಟ್ಯಾನ್, ಹಾಗೂ ಸಾ. ದಯಾ ಉಪಸ್ಥಿತರಿದ್ದರು. ಕಾರ್ಯಕ್ರಮದ ವಿವರಗಳು ಕೆಳಗಿನ ಕೊಂಡಿಯಲ್ಲಿ ಲಭ್ಯವಿದೆ.
(ಕರ್ನಾಟಕ ಮಲ್ಲ, ದಿನಪತ್ರಿಕೆ, ೨೧, ಡಿಸೆಂಬರ್, ೨೦೨೧, ಪುಟ : ೦೯)
Comments
ಸೂಚನೆ :
ಕರ್ನಾಟಕ ಮಲ್ಲ, ಮುಂಬಯಿ ದಿನಪತ್ರಿಕೆಯ ಇಂಟರ್ ನೆಟ್ ಆವೃತ್ತಿ ಮದ್ಯಾನ್ಹ ೧೨ ಗಂಟೆಯಮೇಲೆ ಲಭ್ಯವಾಗುತ್ತದೆ. ಅದರಲ್ಲಿ ಕಾರ್ಯಕ್ರಮದ ಎಲ್ಲಾ ಮಾಹಿತಿಗಳನ್ನೂ ಓದಿ ತಿಳಿಯಬಹುದು. -hrl