Shri. Purundaradasa's 456th year is being celebrated by Mumbai kannada sangha !
ದಾಸಶ್ರೇಷ್ಠ ಶ್ರೀ. ಪುರುಂದರ ದಾಸರ ೪೫೬ ನೆಯ ಆರಾಧನಾ ಮಹೋತ್ಸವ At. The Mysore Association, Matunga, Mumbai-19 ತಳಮಹಡಿಯಲ್ಲಿರುವ " ಗಣೇಶ ದರ್ಬಾರ್ ಹಾಲಿನಲ್ಲಿ ಕಾರ್ಯಕ್ರಮಗಳೆಲ್ಲಾ ಜರುಗಿದವು. ೨೩, ರವಿವಾರ, ಫೆಬ್ರವರಿ, ೨೦೨೦ ರಂದು, ಶ್ರೀ. ಜಿ. ಎಸ್ ನಾಯಕರ ಅಧ್ಯಕ್ಷತೆಯಲ್ಲಿ ಜರುಗಿದ ಪುರುಂದರದಾಸರ ೪೫೬ ನೆಯ ಆರಾಧನಾ ಮಹೋತ್ಸವ. ಮೊದಲು ಸಂಘದ ಪದಾಧಿಕಾರಿಗಳು ದೀಪ ಪ್ರಜ್ವಲನೆ ಮಾಡುವ ಮೂಲಕ ಮಹೋತ್ಸವಕ್ಕೆ ಅಧಿಕೃತ ಚಾಲನೆ ನೀಡಿದರು. ಗಾಯನ ಸ್ಪರ್ಧೆಯಲ್ಲಿ ಮುಂಬಯಿ ಮಹಾನಗರದ ಬಹುಭಾಷಾ ಪ್ರತಿಭೆಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು ವಿದ್ವಾನ್ ಟಿ. ಏನ್. ಅಶೋಕ್ ಅವರು ಸ್ಪರ್ಧೆಯ ತೀರ್ಪುಗಾರರಾ ಗಿ ಕಾರ್ಯಕ್ರಮ ನಡೆಸಿಕೊಟ್ಟರು . ಮುಖ್ಯ ಅತಿಥಿಗಳು : ಡಾ. ಸುರೇಂದ್ರಕುಮಾರ್ ಹೆಗ್ಡೆ. ರಂಗ ಕಲಾವಿದರು, ಹಾಗೂ ಸಮಾಜ ಸೇವಕರು. (ಅಧ್ಯಕ್ಷರು, ಮಹಾರಾಷ್ಟ್ರ ಕನ್ನಡ ಕಲಾವಿದರ ಪರಿಷತ್ತು, ಮುಂಬಯಿ) ತಮ್ಮ ಭಾಷಣದಲ್ಲಿ ಕನ್ನಡ ಸಂಘದ ಸೇವಾ ವೈಖರಿಯನ್ನು ಶ್ಲಾಘಿಸಿದರು. ಕಾರ್ಯಕ್ರಮದ ಪ್ರಯೋಜಕರನ್ನು ಗೌರವಿಸಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪಾರಿತೋಷಕಗಳನ್ನು ಪ್ರದಾನಮಾಡಿದರು ಕನ್ನಡ ಸಂಘದ ಉಪಾಧ್ಯಕ್ಷ, ಡಾ. ಎಸ್ ಕೆ. ಭವಾನಿಯವರು ಎಲ್ಲರನ್ನೂ ಸ್ವಾಗತಿಸಿದರು ಕುಮಾರಿ. ಎಂ. ಆರ್. ಚಿತ್ರರಥ್ ಎಂ. ಆರ್. ಎಸ್ ಹರ್ಷ ಪ್ರಾರ್ಥನಾ ಗೀತೆಯನ್ನು ಹಾಡಿದರ...