ಮುಂಬಯಿನ ಸಾಂತಾಕ್ರೂಸ್ ನಲ್ಲಿರುವ ಪೇಜಾವರ ಮಠದಲ್ಲಿ ಶ್ರೀಕೃಷ್ಣಾಷ್ಟಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು
ಶ್ರೀ ವಿದ್ಯಾಭೂಷಣ್ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರಮುಖರಿಗೆ ಶಾಲು ಹೊದಿಸಿ ಸನ್ಮಾನ ಮಾಡಿದರು.
ಪೂರ್ಣ ಪ್ರಜ್ಞಾ ವಿದ್ಯಾ ಪೀಠ ಪ್ರತಿಷ್ಠಾನದ ಡಾ. ಎ. ಎಸ್. ರಾವ್, ಡಾ. ಸುರೇಶ್ ಎಸ್. ರಾವ್, ಕಟೀಲು, ಬಿ. ಆರ್. ಗುರುಮೂರ್ತಿ,ಅವಿನಾಶ್ ಶಾಸ್ತ್ರಿ, ಉದ್ಯಮಿ, ಬಿ.ಆರ್. ಶೆಟ್ಟಿ, ಐ ಐ ಟಿ ಸಿ. ನಿರ್ದೇಶಕ, ವಿಕ್ರಾಂತ್ ಉರ್ವಾಲ್, ಸಂಜಯ್ ಮಿಸ್ತ್ರಿ,ರವಿ ಸುವರ್ಣ,ಅನೂಪ್ ಶೆಟ್ಟಿ, ಪೇಜಾವರ ಮಠ ಮುಂಬಯಿ ಶಾಖೆಯ ಪ್ರಬಂಧಕರುಗಳಾದ ಪ್ರಕಾಶ ಆಚಾರ್ಯ ರಾಮಕುಂಜ. ಡಾ. ರಾಮದಾಸ್ ಉಪಾಧ್ಯಾಯ ರೆಂಜಾಳ, ಹರಿಭಟ್ ಪುತ್ತಿಗೆ, ನಿರಂಜನ್ ಗೋಗ್ವೆ, ವಾಸುದೇವ ಉಡುಪ, ವಿದ್ವಾನ್ ಅರವಿಂದ ಬನ್ನಿಂತಾಯ,ಸುನಂದಾ ಉಪಾಧ್ಯಾಯ, ಆರ್. ಎಲ್. ಭಟ್,ಶೇಖರ್ ಜೆ. ಸಾಲ್ಯಾನ್, ಸುರೇಂದ್ರ ಕುಮಾರ್ ಹೆಗ್ಡೆ, ಗೀತಾ ಆರ್. ಭಟ್,ಮುಕುಂದ ಬೈತ್ತ ಮಂಗಳ್ಕರ್, ವಿಷ್ಣು ಮೂರ್ತಿ ಸಾಲಿ, ವಿದ್ವಾನ್ ಅರವಿಂದ ಬನ್ನಿಂತಾಯ ,ಸುಧೀರ್ ಆರ್. ಎಲ್. ಭಟ್, ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಶ್ರದ್ಧಾಳುಗಳು ಉಪಸ್ಥಿತರಿದ್ದರು. ವಿದ್ಯಾಭೂಷಣರ ಗಾನಸುಧಾ ಕಾರ್ಯಕ್ರಮದ ನಂತರ, ಶ್ರೀ ಕೃಷ್ಣಮೂರ್ತಿಗೆ ಮಹಾ ಮಂಗಳಾರತಿ ಮತ್ತು ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನ ಗೊಂಡಿತು.
ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠ,ಮುಂಬಯಿ ಶಾಖೆ ಸಾಂತಾಕೄಝ್ (ಪೂ) ದ ಶ್ರೀ ಪೇಜಾವರ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಸಂಪ್ರದಾಯ ಬದ್ಧ ವಿಟ್ಲ ಪಿಂಡಿ ಉತ್ಸವನ್ನು ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಗಸ್ಟ್ ೨೪ ರಂದು ಸಂಭ್ರಮದಿಂದ ಆಚರಿಸಲಾಯಿತು. ಸಂಜೆ ಮಠದಿಂದ ಪ್ರಭಾತ್ ಕಾಲೋನಿ ಮೂಲಕ ದಿನೇಶ್ ವಿ.ಕೋಟ್ಯಾನ್ ಜೆರಿಮೆರಿ ತಂಡದ ಸಾಕ್ಸೋಫೋನ್ ವಾದ್ಯ ಬ್ಯಾಂಡ್ ಚೆಂಡೆಗಳ ನಿನಾದ, ಗೊಂಬೆಯಾಟ,ಭವ್ಯ ಶೋಭಾಯಾತ್ರೆ ಜರುಗಿತು. ಎಸ್.ಕೆ.ಊರ್ವಾಳ್, ಪ್ರಫುಲ್ಲ ರ್ವಾಳ್, ಬಿ.ಆರ್.ರೆಸ್ಟೋರೆಂಟ್, ಬಿ.ಆರ್.ಶೆಟ್ಟಿ ಮತ್ತು ಚಂಚಲಾ ಶೆಟ್ಟಿ, ಬಳಗ,ದ ಪ್ರಾಯೋಜಕತ್ವದಲ್ಲಿ ಸಂಗೀತನಿಧಿ ಶ್ರೀ ವಿದ್ಯಾಭೂಷಣ ಮತ್ತು ಜೊತೆಯವರಿಂದ ದಾಸವಾಣಿ ಸಂಗೀತಕಾರ್ಯಕ್ರಮ ಸುಮಾರು ೨ ಗಂಟೆಗಳ ಕಾಲ ಸತತವಾಗಿ
ನೆರವೇರಿತು. ಕಲಾವಿದರು : ೧. ಮೃದಂಗ : ನಿಶ್ಚಿತ್ ಪುತ್ತೂರ್ ೨. ತಬಲಾ : ಸೌರಭ್ ಕರಡೀಕರ್, ೩ ವಯೊಲಿನ್ : ಪ್ರದೇಶ ಆಚಾರ್ಯ.
ಪೇಜಾವರ ಮಠ ಮುಂಬಯಿ ಹಾಗೂ ಪೂರ್ಣಪ್ರಜ್ಞ ವಿದ್ಯಾಪೀಠದ ವತಿಯಿಂದ ಶ್ರೀಕೃಷ್ಣ ಲೀಲೋತ್ಸವ, ಶ್ರೀಕೃಷ್ಣ ವೇಷ ಸ್ಪರ್ಧೆ ನಡೆಯಿತು ಎಲ್ಲಾ ಸ್ಪರ್ಧಿಮಕ್ಕಳಿಗೂ ಶ್ರೀ ವಿದ್ಯಾಭೂಷಣರು ಬಹುಮಾನಗಳನ್ನು ವಿತರಿಸಿ ಶುಭಾಶೀರ್ವಾದಮಾಡಿದರು.
-ವರದಿ : ಎಚ್.ಆರ್. ಎಲ್.
Comments