ಮುಂಬಯಿನಲ್ಲಿ "ಅಷ್ಟಾಕ್ಷರ ಮಹಾಹೋಮ"ವನ್ನು ಮಾರ್ಚ್ ೧೩ ರಂದು ನೆರೆವೇರಿಸಲಾಯಿತು.

ಮುಂಬಯಿ ಮಹಾನಗರದ ಉಪನಗರಗಳಲ್ಲೊಂದಾದ ಜೋಗೇಶ್ವರಿ (ಪ) ದ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದಲ್ಲಿ "ಅಷ್ಟಾಕ್ಷರ ಮಹಾಹೋಮ"ವನ್ನು ಮಾರ್ಚ್ ೧೩ ರಂದು ನೆರೆವೇರಿಸಲಾಯಿತು.

ಗುರುಸಾರ್ವಭೌಮರ ಹುಟ್ಟು ಹಬ್ಬದ ಪ್ರಯುಕ್ತ ಶ್ರೀ ರಾಘವೇಂದ್ರ ಅಷ್ಟಾಕ್ಷರ ಮಹಾಹೋಮವು ೧೩ ರಂದು ವಿವಿಧ ಧಾರ್ಮಿಕ ಹೋಮಗಳಿಂದ ಜರುಗಿತು.
೧. ಬೆಳಿಗ್ಯೆ ೭ ಗಂಟೆ ಗುರುರಾಯರಿಗೆ ವಿಶೇಷ ಪಂಚಾಮೃತ ಅಭಿಷೇಕ, ವಿಶೇಷ ಪುಷ್ಪಾರ್ಚನೆ,
೨. ಬೆಳಿಗ್ಯೆ ೮-೩೦ ರಿಂದಶ್ರೀ ರಾಘವೇಂದ್ರ ಅಷ್ಟಾಕ್ಷರ ಮಹಾಹೋಮ.
೩. ಬೆಳಿಗ್ಯೆ ೧೦ ರಿಂದ ಶ್ರೀ ರಾಘವೇಂದ್ರ ಭಜನಾಮಂಡಳಿಯವರಿಂದ ಭಜನೆ.
೪. ಮದ್ಯಾನ್ಹ ೧೧ ರಿಂದ ಭಜನಕಾರ ಹಾರ್ಮೋನಿಯಮ್ ವಾದಕ ಕಿಶೋರ್ ಕರ್ಕೇರ ಹೆಜಮಾಡಿ ರವರ ನೇತೃತ್ವದಲ್ಲಿ ರಾಯರ ಬಳಗಮೀರಾರೋಡ್ ರವರಿಂದ ಭಜನ ಸಂಕೀರ್ತನೆ ನಡೆಯಿತು.
ರಾಯರ ಬಳಗದ ಸದಸ್ಯರಿಂದ ವಿಶೇಷ ಅಲಂಕಾರ ಸೇವೆ, ಮಹಾಮಂಗಳಾರತಿ ಅನ್ನದಾನ ಕಾರ್ಯಕ್ರಮಗಳು ನೆರವೇರಿದವು. ಮೇಲಿನ ಎಲ್ಲಾ ಕಾರ್ಯಕ್ರಮಗಳೂ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಥಾಧೀಶರಾಗಿರುವ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮಿಗಳವರ ಶುಭಾಶೀರ್ವಾದಗಳಿಂದ ಯಶಸ್ವಿಯಾಗಿ ಜರುಗಿತು-ಪ್ರಧಾನ ಅರ್ಚಕ ಶ್ರೀ ಗುರುರಾಜಾಚಾರ್, ಮಠದ ಮ್ಯಾನೇಜರ್,ಶ್ರೀಪ್ರಹ್ಲಾದಾಚಾರ್.
ಭಕ್ತಾದಿಗಳು ಬಹಳ ಸಂಖ್ಯೆಯಲ್ಲಿ ನೆರೆದಿದ್ದು ಕಾರ್ಯಕ್ರಮಗಳೆಲ್ಲಾ ಸಾಂಗವಾಗಿ ನಡೆಯಿತು.
Photo : hrl









ಭಜನಾ ಸೇವೆಯಲ್ಲಿ ಹಾರ್ಮೋನಿಯಂ ನಲ್ಲಿ ಕಿಶೋರ್ ಕರ್ಕೇರ, ತಬಲಾದಲ್ಲಿ ಗಗನ್ ಮೆಂಡನ್, ಮಾಧವ ಮೊಗವೀರ, ಗಿರೀಶ್ ಕರ್ಕೇರ, ಸುರೇಶ ಸಾಲ್ಯಾನ್, ಪುರುಷೋತ್ತಮ ಮಂಚಿ, ಕೃಷ್ಣ ಬಂಗೇರ, ವಿನೋದ್ ಸಾಲ್ಯಾನ್, ದೇವದಾಸ್ ಕರ್ಕೇರ, ಚೇತನ್ ಸಾಲ್ಯಾನ್,


Comments

Popular posts from this blog

"ನೇಸರು ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆ-2022ರ ಬಹುಮಾನ ವಿತರಣೆ ಹಾಗೂ ಕನ್ನಡ ನಾಟಕ- "ಚಿಟ್ಟೆ" ಪ್ರದರ್ಶನ !

ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ' !

Mysore association, Mumbai, Swarna Gauri & Ganesh pujotsav (2023) !