Saturday, April 9, 2016

ಮೈಸೂರ್ ಅಸೋ. ಮುಖ ಪತ್ರಿಕೆ "ನೇಸರು" ನ ಮೂಲಕ ಆಯೋಜಿಸಿದ ನೇಸರು ಜಾಗತಿಕ ಕನ್ನಡ ಕವನ ಸ್ಪರ್ಧೆ-೨೦೧೬ !

ಮೈಸೂರ್ ಅಸೋಸಿಯೇಷನ್ ತನ್ನ ೯೦ ರ ವಸಂತದ ಆಚರಣೆಯನ್ನು ಅಂತಾರಾಷ್ಟ್ರೀಯ ಕನ್ನಡ ಕವನ ಸ್ಪರ್ಧೆಯೊಂದನ್ನು ಏರ್ಪಡಿಸುವ ಮೂಲಕ ಆಚರಿಸಿಕೊಂಡು ಸಾರ್ಥಕತೆಯನ್ನು ಪಡೆದುಕೊಂಡಿದೆ.

ಮೈಸೂರ್ ಅಸೋ. ಮುಖ ಪತ್ರಿಕೆ "ನೇಸರು" ನ ಮೂಲಕ ಆಯೋಜಿಸಿದ ನೇಸರು ಜಾಗತಿಕ ಕನ್ನಡ ಕವನ ಸ್ಪರ್ಧೆ-೨೦೧೬

ಕವಿತಾ ಸ್ಪರ್ಧೆಯಲ್ಲಿ ಬಂದ ಕವಿತೆಗಳು  : ೨೭೯ ಇವನ್ನು ಕೂಲಂಕುಷವಾಗಿ ಪರಿಶೀಲಿಸಿ ಉತ್ತಮ ಕವಿತೆಗಳನ್ನು ಆಯ್ಕೆ ಮಾಡಲು ರಚಿಸಿದ  'ತೀರ್ಪುಗಾರರ  ಸಮಿತಿ'  :


"ಜಾಗತಿಕ ನೇಸರು ಕನ್ನಡ ಕವನ ಸ್ಪರ್ಧೆ-೨೦೧೬ ಯ ತೀರ್ಪುಗಾರರ ಸಮಿತಿ" ಯೊಂದನ್ನು ರಚಿಸಲಾಗಿದ್ದು, ಅವರ ಹೆಸರುಗಳು ಹೀಗಿವೆ :


೧. ಮುಂಬಯಿನಗರದ ಹಿರಿಯ ಖ್ಯಾತ ಕವಿ, ಡಾ ಬಿ. ಎಸ್. ಕುರ್ಕಾಲ್, 


೨.  ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ , ಡಾ ಗಣೇಶ್ ಎನ್. ಉಪಾಧ್ಯ, 


೩. ನಾಡಿನ ಹೆಸರಾಂತ ಬಹುಮುಖ ವ್ಯಕ್ತಿತ್ವದ ಬಹು ಬೇಡಿಕೆಯ ಕವಿ, ಡಾ ಎಚ್ಚೆಸ್ವಿ ಎಂದೇ ಪ್ರಸಿದ್ಧಿಗಳಿಸಿರುವ, ಡಾ ಎಚ್. ಎಸ್. ವೆಂಕಟೇಶ ಮೂರ್ತಿ. 

ಪ್ರಥಮ ಬಹುಮಾನ : (೧೦ ಸಾವಿರ ರೂಪಾಯಿ ನಗದು ಬಹುಮಾನ) 'ದಣಪೆಯ ಈಚೆ ಬದಿಗೆ' ಎಂಬ ಶೀರ್ಷಿಕೆಯ ಕವನ ಪ್ರಥಮ ಬಹುಮಾನ ಗಿಟ್ಟಿಸಿದೆ. ಇದನ್ನು ಬರೆದವರು, ಚಿತ್ರಿಕ ಶ್ರೀಧರ್ ಹೆಗಡೆ, ಸಿದ್ಧಾಪುರ.

ಎರಡನೆಯ ಬಹುಮಾನ ವಿಜೇತೆ,  (೫ ಸಾವಿರ ರೂಪಾಯಿ ನಕದು ಬಹುಮಾನ) 'ಅಪರೂಪಕ್ಕೊಮ್ಮೊಮ್ಮೆ' ಎಂಬ ಶೀರ್ಷಿಕೆಯ ಕವನಕ್ಕೆ ದೊರೆಯಿತು. ಬೆಂಗಳೂರಿನ ಉಪನಗರವಾಸಿ, ಛಾಯಾ ಭಗವತಿಯವರಿಗೆ ದೊರೆತಿದೆ. 

ತೃತೀಯ ಬಹುಮಾನ  (೩ ಸಾವಿರ ರೂಪಾಯಿ ನಕದು ಬಹುಮಾನ) 'ಹೆಣ್ಣಾಗಬೇಕು'  ಎಂಬ ತಲೆಬರಹದ ಕವನಕ್ಕೆ ಸಿಕ್ಕಿದೆ. ಇದನ್ನು ಬರೆದವರು, ವೀಣಾ ಬಡಿಗೇರ್. 

ಪ್ರೋತ್ಸಾಹಕರ ಬಹುಮಾನಗಳು : (ತಲಾ ಒಂದು ಸಾವಿರ ರೂಪಾಯಿ ನಗದು ಬಹುಮಾನ)

೧. ಉಡುಪಿಯ ಶ್ರೀ ಗಣಪತಿ ದಿವಾಣರ, 'ನಾನೊಬ್ಬನೇ ಇದ್ದೇನೆ' ಇನ್ನುವ ಶೀರ್ಷಿಕೆಯ ಕವನಕ್ಕೆ.

೨. ದ. ಕ. ಜಿಲ್ಲೆಯ ಮೂಡುಬಿದರೆಯ ಶ್ರೀ ರಾಮಚಂದ್ರ ಪೈರವರ 'ಎಲೆ ಎಲೆಯ ಎದೆಯ ದನಿ' ಎನ್ನುವ ಕವಿತೆಗೆ ದೊರೆತಿದೆ. 

https://www.facebook.com/photo.php?fbid=806324336168656&set=a.255644791236616.64715.100003732927988&type=3&theater

"ವಸಂತೋತ್ಸವ ಕಾರ್ಯಕ್ರಮ" :

ಮುಂಬಯಿನಗರದಲ್ಲಿರುವ ಮೈಸೂರ್ ಅಸೋಸಿಯೇಶನ್ ನಲ್ಲಿ ೨೦೧೬ ರ ಎಪ್ರಿಲ್ ೯ ರಂದು ಸಾಯಂಕಾಲ ೭ ಗಂಟೆಗೆ ವಸಂತೋತ್ಸವ ಕಾರ್ಯಕ್ರಮ ಆರಂಭವಾಯಿತು. ಕನ್ನಡದ ಖ್ಯಾತ ಕವಿ, ಲೇಖಕ, ಡಾ ಎಚ್ಚೆಸ್ವಿ ಯವರು ಪ್ರಮುಖ ಅತಿಥಿಯಾಗಿ ಆಗಮಿಸಿದ್ದರು ಮೈಸೂರು ಅಸೋಸಿಯೇಶನ್ ನ ಅಧ್ಯಕ್ಷೆ ಶ್ರೀಮತಿ ಕೆ. ಕಮಲಾ, ಹಿರಿಯ ಸದಸ್ಯ ಶ್ರೀ ಕೆ ಮಂಜುನಾಥಯ್ಯ ಹಾಗು ಮುಂಬಯಿಯ ಚಿನ್ಮಯ ನಾದಬಿಂದು ಸಂಗಿತಾಲಯದ ನಿರ್ದೇಶಕಿ, ಗಾನಕೊಕಿಲ ಪ್ರಶಸ್ತಿ ವಿಜೇತೆ ಶ್ರೀಮತಿ ಪ್ರಮೋದಿನಿ ರಾವ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಇವರೆಲ್ಲಾ ದೀಪ ಪ್ರಜ್ವಲನ ಮಾಡುವ ಮೂಲಕ ವಸಂತೋತ್ಸವ ಕಾರ್ಯಕ್ರಮವನ್ನು ವಿಧ್ಯುಕ್ತವಾಗಿ ಉದ್ಘಾಟಿಸಿದರು.

ಮೊದಲು, ಪ್ರಾಸ್ತಾವಿಕ ಭಾಷಣವನ್ನು ಕೆ. ಮಂಜುನಾಥಯ್ಯನವರು ಮಾಡುತ್ತಾ, ಅಸೋಸಿಯೇಶನ್ ಹಿಂದಿನಿಂದಲೂ ತನ್ನದೇ ಆದ ಸಭಾಗೃಹವಿಲ್ಲದಿದ್ದ ಕಾಲದಿಂದಲೂ ಹೇಗೆ ಕಾರ್ಯಕ್ರಮಗಳನ್ನೂ, ಹಾಗೂ ವಿಶೇಷ ಕಾರ್ಯಕ್ರಮಗಳನ್ನೂ ನಡೆಸುತ್ತಾ ಬಂದಿದೆ, ಎನ್ನುವ ವಿಚಾರಗಳನ್ನು ಹೆಮ್ಮೆಯಿಂದ ಸಭಿಕರಿಗೆ ಮನದಟ್ಟುಮಾಡಿಕೊಟ್ಟರು. 

ಅಸೋಸಿಯೇಶನ್ ನ ಮುಂದಿನ ಯೋಜನೆಗಳ ಬಗ್ಗೆಯೂ ಬೆಳಕು ಚೆಲ್ಲಿದರು. ತದನಂತರ, ಮೈಸೂರ್ ಅಸೋಸಿಯೇಶನ್ ಗೆ ೯೦ ವರ್ಷ ತುಂಬಿದ ಸವಿ ನೆನಪಿಗಾಗಿ,  ಅಸೋಸಿಯೇಶನ್ ನ ಮುಖ ಪತ್ರಿಕೆ, ನೇಸರುವಿನ  ವಿಶೇಷ ಸಂಚಿಕೆಯನ್ನು ಡಾ ಎಚ್ಚೆಸ್ವಿ ಹಾಗೂ ವೇದಿಕೆಯ ಮೇಲೆ ಉಪಸ್ಥಿತರಿದ್ದ ಗಣ್ಯರು ಬಿಡುಗಡೆ ಮಾಡಿದರು.

ಇದಾದ ಬಳಿಕ, ಮೈಸೂರ್ ಅಸೋಸಿಯೇಷನ್ ಆಯೋಜಿಸಿದ್ದ 'ಜಾಗತಿಕ ನೇಸರು ಕನ್ನಡ ಕವನ ಸ್ಪರ್ಧೆ-೨೦೧೬' ಯ ವಿಜೇತರ ಹೆಸರುಗಳನ್ನು ಪ್ರಕಟಿಸಲಾಯಿತು. ಅಸೋಸಿಯೇಶನ್ ನ ಕಾರ್ಯಕಾರಿ ಸಮಿತಿಯ ಸದಸ್ಯರಲ್ಲೊಬ್ಬರಾಗಿರುವ ಶ್ರೀ. ನಾರಾಯಣ ನವಿಲೇಕರ್, ಸಭಿಕರಿಗೆ ಪರಿಚಯಿಸಿದರು.

ಡಾ ಎಚ್ಚೆಸ್ವಿ, ಅಸೋಸಿಯೇಷನ್ ಅಧ್ಯಕ್ಷೆ ಕೆ. ಕಮಲಾ ಶಾಲು ಹೊದಿಸಿ ಪುಷ್ಪ ಗೌರವವನ್ನು ನೀಡಿ ಸನ್ಮಾನಿಸಿದರು. ಜಾಗತಿಕ ನೇಸರು ಕನ್ನಡ ಕವನ ಸ್ಪರ್ಧೆ-೨೦೧೬ ರ 'ನೀಲ ನಕ್ಷೆ'ಯನ್ನು ತಯಾರಿಸಿ ಪ್ರಸ್ತುತ ಪಡಿಸಿದ ಖ್ಯಾತ ಶ್ರೀ ನಾರಾಯಣ ನವಿಲೇಕರ್, ಹಾಗೂ ಮೈಸೂರ್ ಅಸೋಸಿಯೇಷನ್  ನ ಮುಖ ಪತ್ರಿಕೆ, 'ನೇಸರು'ವಿನ ವಿಶೇಷ ಸಂಚಿಕೆಯನ್ನು ಅತ್ಯಂತ ಸುಂದರವಾಗಿಯೂ ಮಾಹಿತಿಪೂರ್ಣವಾಗಿಯೂ ಹೊರತರಲು ಶ್ರಮಿಸಿದ ಪತ್ರಿಕೆಯ ಸಂಪಾದಕಿ, ಶ್ರೀ ಮತಿ.  ಜ್ಯೋತಿ ಸತೀಶ್ ರನ್ನು ವೇದಿಕೆಯ ಮೇಲೆ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. 

ಡಾ ಎಚ್. ಎಸ್. ವೆಂಕಟೇಶ  ಮೂರ್ತಿಯವರು,  ಸಭೆಯನ್ನುದ್ದೇಶಿಸಿ ಮಾತನಾಡುತ್ತಾ  ಯುವ ಕವಿಗಳನ್ನು ಶ್ಲಾಘಿಸಿದರು.  ಮೊದಲ ೩ ಪ್ರಶಸ್ತಿಗಳನ್ನು ಮಹಿಳೆಯರೇ ಗೆದ್ದಿದ್ದಾರೆ. ಇದು ಒಂದು ಒಳ್ಳೆಯ ಶುಭಾರಂಭ.  ಇಂದಿನ ನವ ಯುಗದ ಜಾಗತಿತ ಪರಿಸರದಲ್ಲಿ ಮಹಿಳೆಯರು ಹೆಚ್ಹು ಹೆಚ್ಹು ಕ್ಷೇತ್ರಗಳಲ್ಲಿ ಗಮನಾರ್ಹವಾದ ಯೋಗದಾನ ಮಾಡುತ್ತಿದ್ದಾರೆ. ಇಲ್ಲೂ ಅದೇ ಮಾದರಿಯನ್ನು ನಾವು ಕಾಣುತ್ತಿರುವುದು ಎಲ್ಲರಿಗೂ ಮುದಕೊಡುವ ಸಂಗತಿ.  ಅಂದರೆ ಇದರ ಅರ್ಥ; "ಈಗಾಗಲೇ ನಮ್ಮ ಹಿರಿಯಕವಿಗಳು ಹಾಕಿಕೊಟ್ಟ ಕಾವ್ಯ ಪರಂಪರೆಯನ್ನು ಸುರಕ್ಷಿತವಾಗಿ ಮುಂದುವರೆಸಿಕೊಂಡು ಹೋಗುವ ಸಕ್ಷಮ ಹಾಗು ಗಟ್ಟಿಯಾದ  ಮಹಿಳಾ ಧ್ವನಿ ರುಪುಗೊಳ್ಳುತ್ತಿರುವುದರ ಸಂಕೇತವಾಗಿದೆ", ಎಂದು ತಮ್ಮ ಸಂತೋಷ ವ್ಯಕ್ತಪಡಿಸಿದರು. ಮುಂದೆ ಮಹಿಳೆಯರ ಜವಾಬ್ದಾರಿ ಹೆಚ್ಚಾಗುತ್ತಿದೆ. ಹೊಸ ಕವಿಗಳು ತಮ್ಮ ಕಾವ್ಯ ಸೃಸ್ಥಿಸುವ ಹಾದಿ ಸುಗಮಗೊಳ್ಳಿಸಿಕೊಂಡು ಮುಂದುವರೆಯಬೇಕಾದರೆ ನಮ್ಮಪ್ರಾಚೀನ, ಸುದೀರ್ಘ ಕಾವ್ಯ ಪರಂಪರೆಯನ್ನು ಚೆನ್ನಾಗಿ ಅಭ್ಯಾಸಮಾಡಿ ತಕ್ಕಮಟ್ಟಿಗಾದರೂ ಅರಗಿಸಿಕೊಳ್ಳುವುದು ಅನಿವಾರ್ಯವೆಂಬ ಮಾತನ್ನು ಒತ್ತಿಹೇಳಿದರು. ಪಂಪ, ರನ್ನ, ಕುಮಾರವ್ಯಾಸ, ಬಸವಣ್ಣ, ಅಕ್ಕಮಹದೇವಿ, ಪುರುಂದರ ದಾಸರು, ಮೊದಲಾದವರುಗಳನ್ನಲ್ಲದೆ, ಬೇಂದ್ರೆ, ಪು.ತಿ. ನ,  ಕೆ. ಎಸ್. ನರಸಿಂಹಸ್ವಾಮಿ,  ಗೋಪಾಲಕೃಷ್ಣ ಅಡಿಗ,  ಕುವೆಂಪು, ಮೊದಲಾದ ಕವಿಗಳನ್ನೂ  ಓದುವುದು ಅತಿಮುಖ್ಯವೆಂಬ  ಕಿವಿಮಾತು ಹೇಳಿದರು       

ಛಲ ಬೇಕು ಜೀವಕ್ಕೆ :

ಮೈಸೂರು ಅಸೋಸಿಯೇಶನ್ ಅಧ್ಯಕ್ಷೆ, ಕೆ. ಕಮಲಾರವರು, ಬಹುಮಾನ ವಿಜೇತ ಯುವ ಪ್ರತಿಭೆಗಳಿಗೆ  ಕೆಲವು ಬುದ್ಧಿಮಾತುಗಳನ್ನು ಹೇಳುತ್ತಾ,  ಪ್ರತಿ ವ್ಯಕ್ತಿಗೂ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲ ಅನಿವಾರ್ಯ. ಇದು ಎಲ್ಲಾ ಕ್ಷೇತ್ರಗಳಿಗೂ ಅನ್ವಯಿಸುತ್ತದೆ. ಈ ಗುಣವನ್ನು ಲೇಖಕಿಯರೂ ಮೈಗೂಡಿಸಿಕೊಳ್ಳಬೇಕು ಎಂದು ನುಡಿದರು.    

'ರಸಮಂಜರಿ ಕಾರ್ಯಕ್ರಮ' : 

ಕಾರ್ಯಕ್ರಮದ ಕೊನೆಯಲ್ಲಿ 'ರಸಮಂಜರಿ ಕಾರ್ಯಕ್ರಮ'ವನ್ನು ಹಮ್ಮಿಕೊಳ್ಳಲಾಗಿತ್ತು. ಇದನ್ನು ನಡೆಸಿಕೊಟ್ಟವರು, 'ಮುಂಬಯಿನಗರದ ಚಿನ್ಮಯ ನಾದಬಿಂದು ಸಂಗೀತಾಲಯದ ನಿರ್ದೇಶಕಿ, ಗಾನ ಕೋಕಿಲ ಪ್ರಶಸ್ತಿ ವಿಜೇತೆ, ಶ್ರೀಮತಿ ಪ್ರಮೋದಿನಿ ರಾವ್ ಹಾಗೂ ತಂಡದವರು' ಮನೋಜ್ಞವಾಗಿ ನಡೆಸಿಕೊಟ್ಟರು. 

'ವಸಂತೋತ್ಸವದ ಕಾರ್ಯಕ್ರಮ ನಿರೂಪಣೆ'ಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದವರು, ಅಸೋಸಿಯೇಷನ್  ನ ಹಿರಿಯ ಸದಸ್ಯೆ, ಶ್ರೀಮತಿ ರಮಾ ವಸಂತ್. 

'ನೇಸರು',  ಮೈಸೂರು ಅಸೋಸಿಯೇಷನ್ ಮುಂಬೈ, ಎಪ್ರಿಲ್, ೨೦೧೬ 

https://lookaside.fbsbx.com/file/Nes-April-2016-F.pdf?token=AWxjZkucnbJlHgQqPDMrpHh-qCxFz-iQHLAzPT3pGGv3prPhWoKJgjxd0UrmM3Ikbda_OooblKEQC6_-38chUpDoW1CWpU5_uOPB18BcHd_a42bKgS5FFT4k8C-szRtapp8  


ವಿಷಯಾನುಕ್ರಮಣಿಕೆ :


೧. ಜಾಗತಿಕ ಕನ್ನಡ ಕವನ ಸ್ಪರ್ಧೆ-ನಾರಾಯಣ ನವಿಲೇಕರ್, ಪುಟ. ೪೨. ಮುಂಬಯಿ ಮೈಸೂರು ಅಸೋಸಿಯೇಷನ್ ನ ಒಂದು ಸವಿ ನೆನಪು-ಬಿ.ಗೋಪಾಲಯ್ಯ-ಪು-೫-೯೩.  ನಾನು ಮತ್ತು ಮೈಸೂರು ಅಸೋಸಿಯೇಷನ್-ವೈಣಿಕ ವಿದ್ವಾನ್. ಸಿ.ಕೆ.ಎಸ್.ರಾವ್ ಪುಟ.  ೧೦-೧೩೪. ಅಸೋಸಿಯೇಷನ್ ಮತ್ತು ಕನ್ನಡ ಪರಿಚಾರಿಕೆ, ಡಾ. ಗಣೇಷ ಉಪಾಧ್ಯ. ಪುಟ-೧೩-೧೪೫. ಕನ್ನಡ ಕವಿತಾ ಸ್ಪರ್ಧೆಯ ಫಲಿತಾಂಶಗಳು ಮತ್ತು ಕವಿಗಳ ಕಿರುಪರಿಚಯ. ಪು-೧೫-೧೭೬. ನೇಸರು ಜಾಗತಿಕ ಕನ್ನಡ ಕವನ ಸ್ಪರ್ಧೆ-೨೦೧೬ ತೀರ್ಪುಗಾರರ ಅನಿಸಿಕೆ,ಡಾ.ಎಚ್.ಎಸ್.ವಿ.ಮೂರ್ತಿ, ಮತ್ತು ಬಿ.ಎಸ್.ಕುರ್ಕಾಲ್. ಪು-೧೮೭. ನಾನು ಮುಂಬಯಿ ಸೇರಿದೆ- ಜಯಮ್ಮ ಸಿ.ಕೆ.ಎಸ್.ರಾವ್, ಪು-೧೯-೨೦


೮.  ಅಸೋಸಿಯೇಷನ್ ನ ಹಳೆಯ ಮಧುರ ನೆನಪುಗಳು ಸಚಿತ್ರ, ಪು-೨೧.


೯. ಮೈಸೂರು ಅಸೋಸಿಯೇಷನ್ ನಡೆದುಬಂದ ದಾರಿ ಡಾ. ಬಿ.ಆರ್. ಮಂಜುನಾಥ್ ಪು- ೨೧-೨೫


೧೦. ಮುಂಬಯಿನ ಸಾಂಸ್ಕೃತಿ ಬೆಳವಣಿಗೆಯಲ್ಲಿ ಮೈಸೂರು ಅಸೋಸಿಯೇಷನ್ ನ ಪಾತ್ರ. ಡಾ. ಲೀಲಾ.ಬಿ.ಮುಂಬೈ. ಪು-೨೬-೩೦


೧೧.  ಹಂಪಿಗೆ ಸಾಂಸ್ಕೃತಿಕ ಸತ್ವವಿದೆ.ಪ್ರೊ.ಚಿದಾನಂದ ಮೂರ್ತಿ. ಪು-೩೧


ಮೈಸೂರು ಅಸೋಸಿಯೇಷನ್ ಗೆ ೯೦ ವರ್ಷದ ಹುಟ್ಟುಹಬ್ಬದ ಸಡಗರ- ಪತ್ರಿಕೆಯ ಹೊರ ಕವಚ.


                                   ಶ್ರೀ.  ಪದ್ಮನಾಭ, ಪ್ರಾರ್ಥನಾ ಗೀತೆಯನ್ನು ಪ್ರಸ್ತುತಪಡಿಸಿದರು.

ಪ್ರಾಸ್ತಾವಿಕ ಭಾಷಣವನ್ನು ಕೆ. ಮಂಜುನಾಥಯ್ಯ ಮಾಡಿದರು 
                                                                    ಶ್ರಿ. ಮಂಜುನಾಥಯ್ಯ
                     ಕಾರ್ಯಕ್ರಮದ ಶುರುವಾತು ದೀಪ ಪ್ರಜ್ವಲನದಿಂದ-ಮೊದಲು  ಡಾ ಎಚ್ಚೆಸ್ವಿರವರಿಂದ 

                                           ದೀಪ ಪ್ರಜ್ವಲನ ಶ್ರೀಮತಿ. ಪ್ರಮೋದಿನಿ ರಾವ್ ರವರಿಂದ 
ಮೈ. ಅಸೋ. ಅಧ್ಯಕ್ಷೆ,  ಶ್ರೀಮತಿ ಕಮಲಾರವರಿಂದ 
                            ಮೈ. ಅಸೋ ಮುಖ ಪತ್ರಿಕೆ, ವಿಶೇಷ ನೇಸರು ಸಂಚಿಕೆಯ ಬಿಡುಗಡೆ 
ಪ್ರಥಮ ಬಹುಮಾನ ವಿಜೇತೆ-ಚೈತ್ರಿಕಾ ಶ್ರೀಧರ್ ಹೆಗಡೆ, ಸಿದ್ಧಾಪುರ 
ದ್ವಿತೀಯ ಬಹುಮಾನ ವಿಜೇತೆ, ಛಾಯಾ ಭಗವತಿ, ವಿಜಯಪುರ 
                  ಡಾ ಜ್ಯೋತಿ, (ಸಂಪಾದಕಿ, ನೇಸರು ಪತ್ರಿಕೆ), ಗೆ ಪುಷ್ಪ-ಗುಚ್ಛ, ಡಾ ಎಚ್ಚೆಸ್ವಿರವರಿಂದ  
                            ಶ್ರೀ ನಾರಾಯಣ ನವಿಲೇಕರ್  ರಿಗೆ ಪುಷ್ಪ ಗುಚ್ಛ ಸನ್ಮಾನ-ಡಾ ಎಚ್ಚೆಸ್ವಿರವರಿಂದ 
                                                  ನೇಸರು ಪತ್ರಿಕೆಯನ್ನು ವೀಕ್ಷಿಸುತ್ತಿರುವುದು 
                                                             ಮೈ. ಅಸೋ ಪ್ರೇಕ್ಷಕವೃಂದ 
                      ಶ್ರೀಮತಿ. ಪ್ರಮೋದಿನಿ ರಾವ್ ಪ್ರಮುಖ ಕವಿಗಳ ಗೀತೆಗಳನ್ನು ಹಾಡುತ್ತಿರುವುದು
ಶ್ರೀಮತಿ ಪ್ರಮೋದಿನಿ ರಾವ್ ರನ್ನು ಮೈ. ಅಸೊ. ಅಧ್ಯಕ್ಷೆ ಶ್ರೀಮತಿ ಕಮಲಾರವರು ಸನ್ಮಾನಿಸುತ್ತಿರುವುದು. 
                                     ಪಕ್ಕವಾದ್ಯ ಕಲಾವಿದೆ (ಹಾರ್ಮೋನಿಯಂ) ಯನ್ನು ಸನ್ಮಾನಿಸುತ್ತಿರುವುದು 
                                          ತಬಲಾ ಕಲಾವಿದೆಯನ್ನು ಸನ್ಮಾನಿಸುತ್ತಿರುವುದು. 
ಅಧ್ಯಕ್ಷರ ಭಾಷಣ 
                                                               ಆಹ್ವಾನಿತ ಪ್ರೇಕ್ಷಕರು 
                                                                 ಆಹ್ವಾನಿತ ಪ್ರೇಕ್ಷಕರು 
                                         ಶ್ರೀ. ಮಂಜುನಾಥಯ್ಯ, ಶ್ರೀಮತಿ. ಕೆ. ಕಮಲಾ, ಮತ್ತು  ಶ್ರೀ. ದಿನೇಶ್ 
                                                                    ಆಹ್ವಾನಿತ ಪ್ರೇಕ್ಷಕರು 
                                                           ೩  ಜನ ಬಹುಮಾನಿತರ ಜೊತೆ 
ಶ್ರೀ. ಮಧು, ಶ್ರೀ. ಉಮೇಶ್, ಜೊತೆಗೆ, ಗೆಳೆಯರು 
ಡಾ ಸುಧೀಂದ್ರ ಭವಾನಿಯವರು, ಶ್ರಿ. ಕೆ. ಮಂಜುನಾಥಯ್ಯ, ಡಾ ಎಚೆಸ್ವಿ, ಶ್ರೀ ಎಚ್. ಆರ್. ಎಲ್, ಮತ್ತು ಶ್ರೀ ಕಾಂತ ಮಿಶ್ರಿಕೋಟಿಯವರ ಜೊತೆಯಲ್ಲಿ...
ಡಾ ಸುಧಿಂದ್ರ ಭವಾನಿಯವರು ತಮ್ಮ ವಿಚಾರಗಳನ್ನು ಡಾ ಎಚ್ಚೆಸ್ವಿಯವರ ಜೊತೆ ಹಂಚಿಕೊಳ್ಳುತ್ತಿದ್ದಾರೆ (ಪಕ್ಕದಲ್ಲಿ ಶ್ರಿ. ಕೆ. ಮಂ. ಮತ್ತು ಶ್ರೀಮತಿ ಭವಾನಿ)

References :

1 comment:

Holalkere Laxmivenkatesh said...

Dr. H.S.V. congratulated the young poets. But to have deeper knowledge, one has to read the great poets, like Dr. K.V.Puttappa, Dr. Bendre, Shri. Pu. Ti. narasimhachar, Dr. Gopalakrishna adiga, Dr. K.S.N, and others.