ಡಾ. ಟಿ. ಎಸ್. ಸತ್ಯವತಿಯವರ ಅಮೋಘ ಕರ್ನಾಟಕ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು !
ಕನ್ನಡ ಸಾಹಿತ್ಯ ಪರಿಷತ್ ಮಹಾರಾಷ್ಟ್ರ ಘಟಕದ ಅಧ್ಯಕ್ಷ ರಾದ ಶ್ರಿ. ಎಚ್. ಬಿ. ಎಲ್. ರಾವ್ ಮೈಸೂರು ಅಸೋಸಿಯೇಶನ್ ಸಭಾಂಗಣದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಅದರಲ್ಲಿ ದಿನದ ಕೊನೆಯ ಕಾರ್ಯಕ್ರಮ, ಕರ್ನಾಟಕ ಸಂಗೀತ. ಡಾ. ಟಿ.ಎಸ್. ಸತ್ಯವತಿ ಮತ್ತು ಸಂಗಡಿಗರಿಂದ ಎಪ್ರಿಲ್, ೩, ೨೦೧೫ ಶುಕ್ರವಾರದಂದು ! (೦೩, ಏಪ್ರಿಲ್ ೨೦೧೫ ರಿಂದ ೦೫ ಏಪ್ರಿಲ್ ೨೦೧೫ ರ ವರೆಗೆ ) ಶ್ರೀ. ಎಚ್. ಬಿ. ಎಲ್. ರಾವ್ ಕಲಾವಿದರನ್ನು ಸಭೆಯ ಸಂಗೀತ ಪ್ರೇಮಿಗಳಿಗೆ ಪರಿಚಯಿಸುತ್ತಿರುವುದು. ಸ್ವಲ್ಪ ತಡವಾಗಿ ಕಾರ್ಯಕ್ರಮ ಶುರುವಾದರೂ ಡಾ ಸತ್ಯವತಿಯವರು ೪ ಕಿರ್ತನೆಗಳನ್ನು ಸುಶ್ರಾವ್ಯವಾಗಿ ಹಾಡಿ, ಸಂಗೀತ ರಸಿಕರ ಮನಸ್ಸನ್ನು ರಂಜಿಸಿದರು ! ಡಾ. ಟಿ. ಎಸ್. ಸತ್ಯವತಿಯವರು ಹಾಡಿದ ಕೀರ್ತನೆಗಳು : ೧. ರಾಮನೀ ಪೈತನಕು ಪ್ರೇಮ ಎಂಬ ತ್ಯಾಗರಾಜರ ಕೃತಿಯಿಂದ ಪ್ರಾರಂಭಿಸಿದರು ೨ .ಶ್ರಿ. ಪುರುಂದರದಾಸರ ಕೃತಿ- ನೀನೆ ದಯಾಳು ನಿರ್ಮಳಚಿತ್ತ ಗೋವಿಂದ, ಮಿಶ್ರ ಛಾಪ ತಾಳ, ೩. ಶ್ರಿ. ಮುತ್ತುಸ್ವಾಮಿ ದೀಕ್ಷಿತರ ಕೃತಿ- ಆನಂದಾಮೃತ ಕರ್ಷಿನಿ, ಅಮೃತ ವರ್ಷಿಣಿ ೪. ಶ್ರೀ. ನಾರಾಯಣ ತೀರ್ಥರ ರಚನೆ-ಶರಣಂಭವ ಕರಣ ಹರಿ ಕುರುದೀನ ದಯಾಳೋ ಸಾಹಿತ್ಯ 'ಶರಣಂ ಭವ ಕರುಣಾಂ ಮಯಿ ಕುರು' - ನಾರ...