ಮುಂಬಯಿಯ ಶ್ರೀನಿವಾಸ ಜೋಕಟ್ಟೆಯವರ , "ದೇವರುಗಳ ನ್ಯಾಯಾಲಯ", ಮತ್ತು "ಎಲ್ಲಿಗೋ ಪಯಣ ಯಾವುದೋ ದಾರಿ" ! ಕ್ರಮವಾಗಿ ೪೦ ಹಾಗೂ ೪೧ ನೆಯ ಕೃತಿಗಳ ಲೋಕಾರ್ಪಣೆ !
ಮುಂಬಯಿಯ ಖ್ಯಾತ ಸಾಹಿತಿ, ಅಂಕಣಕಾರ, ಉಪಸಂಪಾದಕ, ಶ್ರೀನಿವಾಸ ಜೋಕಟ್ಟೆಯವರ ವಿರಚಿತ, "ದೇವರುಗಳ ನ್ಯಾಯಾಲಯ", ಮತ್ತು "ಎಲ್ಲಿಗೋ ಪಯಣ ಯಾವುದೋ ದಾರಿ" ! ಕ್ರಮವಾಗಿ ೪೦ ಹಾಗೂ ೪೧ ನೆಯ ಕೃತಿಗಳ ಲೋಕಾರ್ಪಣೆ !
ಸ್ಥಳ : ಮೈಸೂರು ಅಸೋಸಿಯೇಷನ್, ಸಭಾಗೃಹದಲ್ಲಿ, ಮಾತುಂಗ ಮುಂಬೈ-೪೦೦೦ ೧೯
ತಾರೀಖು ಮತ್ತು ಸಮಯ : ೮, ರವಿವಾರ, ಅಕ್ಟೊಬರ್, ೨೦೨೩, ಮಧ್ಯಾನ್ಹ ೨ ಗಂಟೆಗೆ
ಕ'ರ್ನಾಟಕ ಮಲ್ಲ ದಿನಪತ್ರಿಕೆಯ ವರದಿ' :
ಸಮಾರಂಭದ ಅಧ್ಯಕ್ಷರಾಗಿ ಬಿ. ಎಸ್. ಕೆ. ಬಿ. ಅಸೋಸಿಯೇಷನ್ ಅಧ್ಯಕ್ಷ ಡಾ. ಸುರೇಶ ರಾವ್ ತಮ್ಮ ಭಾಷಣದಲ್ಲಿ ಶ್ರೀ. ಶ್ರೀನಿವಾಸ ಜೋಕಟ್ಟೆಯವರ ಕ್ರಿಯಾಶೀಲತೆಯನ್ನು ಕಂಡು ಅವರಿಗೆ ಡಾ. ವ್ಯಾಸರಾಯ ನಿಂಜೂರ್ ರವರ ನಿವೃತ್ತಿಯ ನಂತರ, ಬಿ. ಎಸ್ ಕೆ. ಬಿ ಅಸೋಸಿಯೇಷನ್ ನ 'ಗೋಕುಲ ವಾಣಿ'ಪತ್ರಿಕೆಯ ಸಂಪಾದಕತ್ವವನ್ನು ಕಳೆದ ವರ್ಷ ನೀಡಿದ್ದು ಈಗ ಆವರು ಯಶಸ್ವಿಯಾಗಿ ನಿರ್ವಹಿಸುತ್ತಿರುವುದನ್ನು ಉಲ್ಲೇಖಿಸಿದರು. "ಸಮಾಜದಲ್ಲಿ ಯಾರು ಪರಮಾತ್ಮನಿಗೆ ಬೇಕಾದಂತಹ ಒಳ್ಳೆಯ ಕೆಲಸಗಳನ್ನು ಮಾಡುತ್ತಾರೋ ಅವರೇ ಭಾಗ್ಯಶಾಲಿಗಳು ; ಒಳ್ಳೆಯ ಕೆಲಸಗಳನ್ನು ಭಕ್ತಿ-ಶ್ರದ್ಧಾಸಕ್ತಿಗಳಿಂದ ಮಾಡುತ್ತಿದ್ದರೆ ಅವು ಸಾರ್ಥಕತೆಯನ್ನು ಪಡೆಯುತ್ತವೆ. ನಾವೆಲ್ಲಾ ಚಿಂತನೆಗಳನ್ನು ಒಳ್ಳೆಯ ಕೆಲಸಗಳಿಗೆ ವಿನಿಯೋಗಿಸುತ್ತಿದ್ದರೆ ದೇವರ ಅನುಗ್ರಹ ದೊರೆಯುವುದರಲ್ಲಿ ಸಂಶಯವಿಲ್ಲ" ವೆಂದು ನುಡಿದರು.
ಪ್ರೇಮ ತತ್ವವನ್ನು ಮಾನವ ಪ್ರೀತಿಯನ್ನು, ಸಾರುವುದು ಸಾಹಿತ್ಯದ ಕೆಲಸವಾಗಬೇಕು -ಡಾ. ಭರತ್ ಕುಮಾರ್ ಪೊಲಿಪು
"ಸಾಹಿತ್ಯದ ಉದ್ದೇಶ, ಜವಾಬ್ದಾರಿಯನ್ನು ನಮ್ಮ ಓದುಗರಲ್ಲಿ ಮೂಡಿಸುವುದು. ಆಧುನಿಕ ಜೀವನದಲ್ಲಿ ಹಿಂಸೆ ನಮ್ಮೆಲ್ಲರನ್ನೂ ಆವರಿಸಿರುವುದು ಸತ್ಯ ಸಂಗತಿಯಾಗಿದೆ. ಇಂತಹ ಸಮಯದಲ್ಲಿ ಒಳ್ಳೆಯ ಪುಸ್ತಕದ ಓದು ನಮ್ಮಲ್ಲಿ ಮಾನವ ಪ್ರೀತಿ, ಜೀವನೋತ್ಸಾಹ, ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಮೂಡಿಸುತ್ತವೆ. ನಮ್ಮ ಕೃತಿಗಳು ಮನುಷ್ಯ ಪ್ರೀತಿಯನ್ನು ಹರಡುವಲ್ಲಿ ಕೆಲಸಮಾಡಬೇಕು ;ವರ್ತಮಾನದ ಸಮಸ್ಯೆಗಳಿಗೆ ಸ್ಪಂದಿಸಬೇಕು". "ಈ ಆಶಯಗಳನ್ನು ಶ್ರೀನಿವಾಸ ಜೋಕಟ್ಟೆಯವರು ತಮ್ಮ ಸಮಗ್ರ ಕೃತಿಗಳಲ್ಲಿ ಬೆಸೆಯುವ ನೆಲೆಯಲ್ಲಿ ಮಹತ್ವದ ಕೆಲಸ ಮಾಡುತ್ತಿದ್ದಾರೆ" ಎಂದು ಹೇಳುತ್ತಾ , ಅವರಿಗೆ ತಮ್ಮ ಧನ್ಯವಾದಗಳನ್ನು ಹೇಳಿದರು.
Comments