Posts

Showing posts from September, 2023

Mysore association, Mumbai, Swarna Gauri & Ganesh pujotsav (2023) !

Image
ಮೈಸೂರು ಅಸೋಸಿಯೇಶನ್ ಮಾತುಂಗ  ಮುಂಬಯಿನಲ್ಲಿ ವರ್ಷ ೨೦೨೩ ರ ಸೆಪ್ಟೆಂಬರ್,  ೧೮, ರಿಂದ ೨೪, ಸೆಪ್ಟೆಂಬರ್ ೨೦೨೩ ರ ವರೆಗೆ ಸ್ವರ್ಣ ಗೌರಿ ಹಾಗೂ ಶ್ರೀ ಮಹಾಗಣಪತಿ ಪೂಜಾ ಮಹೋತ್ಸವವನ್ನು ಅತ್ಯಂತ ವಿಜೃಂಭಣೆ ಹಾಗೂ ವಿಧಿ ವಿಧಾನಗಳಿಂದ  ನೆರೆವೇರಿಸಲಾಯಿತು.         https://youtu.be/sCTzVvc-Thw?si=ZCJUSwc6RCbQ7ADP ಪ್ರತಿವರ್ಷದಂತೆ ಈ ವರ್ಷವೂ  ಮುಂಬಯಿ ಮಹಾನಗರದ ಮೈಸೂರು ಅಸೋಸಿಯೇಷನ್ ನಲ್ಲಿ ಸ್ವರ್ಣ ಗೌರಿಯನ್ನು ೧೮, ಸೋಮವಾರ, ಸೆಪ್ಟೆಂಬರ್, ೨೦೨೩ ರಂದು ಪ್ರತಿಷ್ಠಾಪಿಸಲಾಯಿತು. ಮಹಾಗಣಪತಿಯನ್ನು ೧೯, ಮಂಗಳವಾರ ಸೆಪ್ಟೆಂಬರ್, ೨೦೨೩ ರಂದು ಪ್ರತಿಷ್ಠಾಪಿಸಲಾಯಿತು. ಪ್ರತಿದಿನವೂ ಮಹಾಗಣಪತಿ ಮತ್ತು ಸ್ವರ್ಣಗೌರಿಗೆ ಪೂಜೆಗಳನ್ನು ವಿಧಿವತ್ತಾಗಿ ನೆರೆವೇರಿಸಲಾಗುತ್ತಿದೆ. ೨೨  ಶುಕ್ರವಾರದಂದು  ಅಸೋಸಿಯೇಶನ್ ನಲ್ಲಿ  ಮಹಿಳೆಯರಿಗೆ ಅರಿಶಿನ-ಕುಂಕುಮ  ಕಾರ್ಯಕ್ರಮದಲ್ಲಿ ಬಹಳಷ್ಟು ಮಹಿಳೆಯರು ಭಾಗವಹಿಸಿ ಕಾರ್ಯಕ್ರಮವನ್ನು ಚಂದಗಾಣಿಸಿದರು.  ೨೪,  ರವಿವಾರ, ಸೆಪ್ಟೆಂಬರ್ ೨೦೨೩ ರಂದು ಬೆಳಿಗ್ಯೆ ಅರ್ಚನೆ,  ಗಣಪತಿಗೆ ಭಜನೆ, ನೃತ್ಯ ಮೊದಲಾದ ಪೂಜಾವಿಧಾನಗಳ ನಂತರ ಮಹಾ ಮಂಗಳಾರತಿಯ ನಂತರ ಗಣಪತಿ ಮತ್ತು ಸ್ವರ್ಣ ಗೌರಿಮೂರ್ತಿಗಳನ್ನು ಮುಂಬಯಿಯ ದಾದರ್ ಸಮುದ್ರ ಬೀಚ್ ನಲ್ಲಿ ವಿಸರ್ಜಿಸಲಾಯಿತು. ತದನಂತರ ಪ್ರಸಾದ ವಿನಿಯೋಗ, ಮೊದಲಾದ ಕಾರ್ಯಕ್ರಮಗಳಿಂದ ಕಾರ್ಯಕ್ರಮ ಸಂಪನ್ನ ಗೊಂಡಿತು.  ಮೈಸೂರು ಅಸೋಸಿಯೇಷನ್ ನ ಸದಸ್ಯರೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ

Shri krishna janmastami (2023) celebrated at Mumbai !

Image
On 6th, Sept, 2023 : Link :  https://www.youtube.com/live/8syjg0hC-tU?si=aJ-lSg3Qv5iqqihn Janmastami celebrated with traditional fervour and gaiety, at Gopala krishna mandir, Sion, Mumbai                   Smt/Shri. Dr. Suresh rao is performing the pooja of Lord Krishna.  Link : Courtesy :   * https://www.daijiworld.com/index.php/news/newsDisplay?newsID=1117943  Link : Courtesy :  https://www.speakingtree.in/allslides/shrikrishna-janmastami-celebrated-at-mumbai  Link : 7th, Sept, 2023 :  https://www.youtube.com/live/mBb5hWnCEFA?si=KSxO9bEhE67ELgQO

ಶ್ರೀ. ಗುರು ರಾಘವೇಂದ್ರ ತೀರ್ಥರ ೩೫೨ ನೆಯ ಆರಾಧನಾ ಮಹೋತ್ಸವ ಮುಂಬಯಿನಲ್ಲಿ !

Image
ಮುಂಬಯಿಯ ಜೋಗೇಶ್ವರಿ ಜಿಲ್ಲೆಯ ಗುಲ್ಷನ್ ನಗರದಲ್ಲಿರುವ  ರಾಯರ ಅಭಿನವ ಮಂತ್ರಾಲಯ ಮಠದ  ಶಾಖೆಯ ಪ್ರಬಂಧಕ ಶ್ರೀ ಸ್ವಾಮಿರಾಯ ಜೋಶಿ,  ಆಡಳಿತ ವರ್ಗ,ಹಾಗೂ ಅರ್ಚಕ ವೃಂದದವರು ಮಾಡಿರುವ ಪ್ರಕಟಣೆಯ ಪ್ರಕಾರ :  ಶ್ರೀ. ವೆಂಕಟೇಶ್ವರ ಸ್ವಾಮಿ, ಶ್ರೀದೇವಿ, ಭೂದೇವಿ, ಲಿಂಗ ಸ್ವರೂಪಿ ಶಿವ, ಹನುಮಾನ್, ಮತ್ತು ಗಣಪತಿಯನ್ನು ಆರಾಧಿಸುವುದರ ಜೊತೆಗೆ ಶ್ರೀ. ಮಂಚಾಲಮ್ಮ ದೇವಿ, ನವಗ್ರಹ ಪ್ರತಿಬಿಂಬಗಳು ಆರಾಧಿಸಲ್ಪಟ್ಟವು. ರಾಯರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತೀರ್ಥ, ಪ್ರಸಾದ ಮಂತ್ರಾಕ್ಷತೆಗಳನ್ನು ಸ್ವೀಕರಿಸಿ ರಾಯರ ಅನುಗ್ರಹಕ್ಕೆ ಪಾತ್ರರಾಗಲು ಕೋರಿದೆ.  ಶ್ರೀ.  ಗುರು ರಾಘವೇಂದ್ರ ತೀರ್ಥರ ೩೫೨ ನೆಯ ಆರಾಧನಾ ಮಹೋತ್ಸವವು  ಆಗಸ್ಟ್ ೩೧ ರಂದು ಪ್ರಾರಂಭವಾಗಿ, ೨ ಸೆಪ್ಟೆಂಬರ್ ತಿಂಗ ಳವರೆಗೆ  ಶ್ರೀಮಧ್ವಾ ಚಾರ್ಯ ಮೂಲ ಸಂಸ್ಥಾನದ  ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ, ಶ್ರೀ ಸುಭುದೇಂದ್ರ ತೀರ್ಥರ ಮಾರ್ಗದರ್ಶನದಲ್ಲಿ ಜೋಗೇಶ್ವರಿ ಪಶ್ಚಿಮದಲ್ಲಿರುವ ಒಶಿವಾರ ರಿಲೀಫ್ ಝೋನ್ ನ ಗುಲ್ಶನ್ ನಗರದ  ಮಂತ್ರಾಲಯ ಶಾಖೆಯ ರಾಯರ ಅಭಿನವ ಮಂತ್ರಾಲಯ ಮಠದಲ್ಲಿ ಜರುಗಿತು.  ಆಗಸ್ಟ್ ೩೧ ರಂದು ಪೂರ್ವಾರಾಧನೆ, ಸೆಪ್ಟೆಂಬರ್, ೧ ರಂದು ಮಧ್ಯಾರಾಧನೆ, ಮತ್ತು ಸೆಪ್ಟೆಂಬರ್ ೨ ರಂದು ಉತ್ತರಾ ರಾ ಧನೆ ಪೂಜೆಗಳು ವಿಜೃಂಭಣೆಯಿಂದ ಜರುಗಿದವು. ಈ ಮೂರುದಿನ ರಾಯರ ಬೃಂದಾವನದಲ್ಲಿ ಬೆಳಿಗ್ಯೆ ೫ ರಿಂದ ನೈರ್ಮಲ್ಯ ವಿಸರ್ಜನೆ, ವೇದಪಾರಾಯಣ, ಫಲ ಪಂಚಾಮೃತ ಅ