ಶ್ರೀ. ಗುರು ರಾಘವೇಂದ್ರ ತೀರ್ಥರ ೩೫೨ ನೆಯ ಆರಾಧನಾ ಮಹೋತ್ಸವ ಮುಂಬಯಿನಲ್ಲಿ !

ಮುಂಬಯಿಯ ಜೋಗೇಶ್ವರಿ ಜಿಲ್ಲೆಯ ಗುಲ್ಷನ್ ನಗರದಲ್ಲಿರುವ  ರಾಯರ ಅಭಿನವ ಮಂತ್ರಾಲಯ ಮಠದ  ಶಾಖೆಯ ಪ್ರಬಂಧಕ ಶ್ರೀ ಸ್ವಾಮಿರಾಯ ಜೋಶಿ,  ಆಡಳಿತ ವರ್ಗ,ಹಾಗೂ ಅರ್ಚಕ ವೃಂದದವರು ಮಾಡಿರುವ ಪ್ರಕಟಣೆಯ ಪ್ರಕಾರ : 

ಶ್ರೀ. ವೆಂಕಟೇಶ್ವರ ಸ್ವಾಮಿ, ಶ್ರೀದೇವಿ, ಭೂದೇವಿ, ಲಿಂಗ ಸ್ವರೂಪಿ ಶಿವ, ಹನುಮಾನ್, ಮತ್ತು ಗಣಪತಿಯನ್ನು ಆರಾಧಿಸುವುದರ ಜೊತೆಗೆ ಶ್ರೀ. ಮಂಚಾಲಮ್ಮ ದೇವಿ, ನವಗ್ರಹ ಪ್ರತಿಬಿಂಬಗಳು ಆರಾಧಿಸಲ್ಪಟ್ಟವು. ರಾಯರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತೀರ್ಥ, ಪ್ರಸಾದ ಮಂತ್ರಾಕ್ಷತೆಗಳನ್ನು ಸ್ವೀಕರಿಸಿ ರಾಯರ ಅನುಗ್ರಹಕ್ಕೆ ಪಾತ್ರರಾಗಲು ಕೋರಿದೆ. 

ಶ್ರೀ. ಗುರು ರಾಘವೇಂದ್ರ ತೀರ್ಥರ ೩೫೨ ನೆಯ ಆರಾಧನಾ ಮಹೋತ್ಸವವು  ಆಗಸ್ಟ್ ೩೧ ರಂದು ಪ್ರಾರಂಭವಾಗಿ, ೨ ಸೆಪ್ಟೆಂಬರ್ ತಿಂಗಳವರೆಗೆ  ಶ್ರೀಮಧ್ವಾ ಚಾರ್ಯ ಮೂಲ ಸಂಸ್ಥಾನದ  ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ, ಶ್ರೀ ಸುಭುದೇಂದ್ರ ತೀರ್ಥರ ಮಾರ್ಗದರ್ಶನದಲ್ಲಿ ಜೋಗೇಶ್ವರಿ ಪಶ್ಚಿಮದಲ್ಲಿರುವ ಒಶಿವಾರ ರಿಲೀಫ್ ಝೋನ್ ನ ಗುಲ್ಶನ್ ನಗರದ  ಮಂತ್ರಾಲಯ ಶಾಖೆಯ ರಾಯರ ಅಭಿನವ ಮಂತ್ರಾಲಯ ಮಠದಲ್ಲಿ ಜರುಗಿತು. 

ಆಗಸ್ಟ್ ೩೧ ರಂದು ಪೂರ್ವಾರಾಧನೆ, ಸೆಪ್ಟೆಂಬರ್, ೧ ರಂದು ಮಧ್ಯಾರಾಧನೆ, ಮತ್ತು ಸೆಪ್ಟೆಂಬರ್ ೨ ರಂದು ಉತ್ತರಾರಾಧನೆ ಪೂಜೆಗಳು ವಿಜೃಂಭಣೆಯಿಂದ ಜರುಗಿದವು. ಈ ಮೂರುದಿನ ರಾಯರ ಬೃಂದಾವನದಲ್ಲಿ ಬೆಳಿಗ್ಯೆ ೫ ರಿಂದ ನೈರ್ಮಲ್ಯ ವಿಸರ್ಜನೆ, ವೇದಪಾರಾಯಣ, ಫಲ ಪಂಚಾಮೃತ ಅಭಿಷೇಕ, ಪಾದಪೂಜೆ, ಮಹಾಪೂಜೆ, ಸರ್ವಸೇವಾ ಕನಕ ಮಹಾಪೂಜೆ, ರಥೋತ್ಸವವನ್ನು ಗಜರಥದಲ್ಲಿ  ರಾಯರ ಪ್ರತಿಬಿಂಬದೊಂದಿಗೆ ಬೃಂದಾವನದ ವೃತ್ತದಲ್ಲಿ ಚೆಂಡೆ-ಭಜನೆಯೊಂದಿಗೆ  ನೆರವೇರಿಸಲಾಯಿತು. ಶ್ರೀ. ಪ್ರಹ್ಲಾದರಾಯರ  ಬ್ರಾಹ್ಮಣ ಅಲಂಕಾರ, ಕನಕಮ್ಮ ಪೂಜೆ, ಹಷ್ಟೋದಕವಿಧಿಗಳು ನೆರವೇರಿದ ಬಳಿಕ,  ಮದ್ಯಾನ್ಹ ೧೨-೩೦ ಕ್ಕೆ ಮಹಾ ಮಂಗಳಾರತಿ, ಮೊದಲಾದ ವಿಧಿ-ವಿಧಾನಗಳು ಕ್ರಮವಾಗಿ ನಡೆದವು. ಪ್ರಬಂಧಕ ಸ್ವಾಮಿರಾಯ ಜೋಶಿಯವರು ಭಕ್ತರೆಲ್ಲರಿಗೆ ರಾಯರಿಂದ ಅನುಗ್ರಹಿಸಲ್ಪಟ್ಟ ಮಂತ್ರಾಕ್ಷತೆಯನ್ನು ನೀಡಿದರು. ದೀಪಕ್ ವೈದ್ಯ, ಮತ್ತು ರಾಘು ಆಚಾರ್ಯ ಮತ್ತಿತರ ಅರ್ಚಕರು ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಿದರು.  ನಂತರ ಅನ್ನ ಸಂತರ್ಪಣೆ ನಡೆಯಿತು. 

ರಾಯರ ಮಠದ ಆರಾಧನೆಯನ್ನು ಮುಂಬಯಿಯ ಒಶಿವಾರದ ಮಠದಲ್ಲಿ ೩೫೨ ನೆಯ ಮಹೋತ್ಸವವೆಂದು ಕರ್ನಾಟಕ ಮಲ್ಲ ದೈನಿಕದಲ್ಲಿ ಪ್ರಕಟಿಸಿದ್ದಾರೆ. ಕರ್ನಾಟಕದ ೫ ಮಠಗಳೂ ೩೫೨ ನೆಯ ಆರಾಧನಾ ಮಹೋತ್ಸವವೆಂದು ದಾಖಲು ಮಾಡಿವೆ. ಆದರೆ ಮುಂಬಯಿನಿಂದ ಪ್ರಕಟವಾಗುವ ಉದಯವಾಣಿ ಪತ್ರಿಕೆ  ಮುಂಬಯಿನಗರದ ಜೋಗೇಶ್ವರಿ ಮಠದ ಬಗ್ಗೆ ಬರೆಯುತ್ತಾ  ೩೫೧ ನೆಯ ಮಹೋತ್ಸವವೆಂದು ವರದಿಮಾಡಿದೆ.  : (೦೫-೦೯-೨೦೨೩, ಮಂಗಳವಾರ, ಮುಂಬಯಿ)


    ರಾಯರ ಬೃಂದಾವನಕ್ಕೆ ಪೂಜೆಮಾಡಿದ ನಂತರ. 















Comments

On the mornig of 2nd Sept. 2023, we proceeded to Shri. Raghavendra swamy abhinava mantrala mutt, Gulshan nagar, and participated in the day long Pooja programs. Large number of devotees all over the metropolis came and participated in the parikrama. We were blessed.

-Venkatesh, Smt. Saroja venkatesh.

Popular posts from this blog

ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ' !

Mysore association, Mumbai, Swarna Gauri & Ganesh pujotsav (2023) !

Shri Subraya chokkadi, spoke at the kannada division of Mumbai university Kalina campus, Mumbai !