Shri Subraya chokkadi, spoke at the kannada division of Mumbai university Kalina campus, Mumbai !
ಶ್ರೀ ಸುಬ್ರಾಯ ಚೊಕ್ಕಾಡಿಯವರ ಉಪಸ್ಥಿತಿ ; ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ! ಶ್ರೀ. ಸುಬ್ರಾಯ ಚೊಕ್ಕಾಡಿಯವರು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಹಮ್ಮಿಕೊಂಡ " ಕಾವ್ಯ ಸಂವಾದ ಕಾರ್ಯಕ್ರಮ" ದಲ್ಲಿ ಆಹ್ವಾನಿತರಾಗಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಿ. ಏನ್. ಉಪಾಧ್ಯ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಅವರು ತಮ್ಮ ವಿಚಾರವನ್ನು ಮಂಡಿಸುತ್ತಾ 'ಯುವ ಕವಿಗಳು ಕವಿತೆ ಬರೆಯುವುದನ್ನು ಲಘುವಾಗಿ ಪರಿಗಣಿಸಬಾರದು. ಛಂದಸ್ಸು ಬಹಳ ಮುಖ್ಯ. ಇಂದಿನ ಯುಗದಲ್ಲಿ ಲಯಕ್ಕೆ ಹೆಚ್ಚು ಮಹತ್ವ ಕೊಡುತ್ತಿಲ್ಲ. ಅದು ಸಲ್ಲದು 'ಎಂದು ನುಡಿದರು. ಮುಂದುವರೆಯುತ್ತಾ " ಯುವ ಕವಿಗಳ ಎಲ್ಲ ಧ್ವನಿಯಲ್ಲೂ ಲಯ ಇದ್ದೇ ಇರುತ್ತದೆ. ಸಾಮಾನ್ಯವಾಗಿ ಖುಷಿಗಿಂತ ನೋವಿನಲ್ಲೇ ಅತ್ಯಂತ ಪರಿಣಾಮಕಾರಿಯಾದ ಕವಿತೆಗಳು ಅರಳಿವೆ ಎನ್ನುವುದು ತಮ್ಮ ಅನಿಸಿಕೆ" ಎಂದು ಹೇಳಿದರು ಶ್ರೀ. ಸುಬ್ರಾಯ ಚೊಕ್ಕಾಡಿಯವರ ಹೆಚ್ಚುಗಾರಿಕೆ ಇರುವುದು, ನವ್ಯ ಕಾವ್ಯ ಪರಂಪರೆಯನ್ನು ಆಲಿಂಗಿಸಿದರೂ ತಮ್ಮತನ, ಮತ್ತು ತಮ್ಮದೇ ಆದ ವರ್ಚಸ್ಸನ್ನು ಬೆಳೆಸಿಕೊಂಡು ಕಾಯ್ದಿಟ್ಟುಕೊಂಡಿದ್ದು. ಹೀಗೆ ಮುಂದುವರೆದ ಅವರು ಡಾ. ಜಿ. ಎಸ್.ಎಸ್, ಡಾ. ನಿಸಾರ್ ಅಹ್ಮದ್, ಡಾ. ಎಚ್ಚೆಸ್ವಿ , ನಾಡೋಜ ಚನ್ನವೀರ ಕಣವಿ, ಮೊದಲಾದವರ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರ ಬಾಲ್ಯ...