'ಬುದ್ಧ ಚರಣ' - ಡಾ. ಎಚ್. ಎಸ್. ವೆಂಕಟೇಶ ಮೂರ್ತಿ !
'ಶ್ರೀಮತಿ. ರಾಜಲಕ್ಷ್ಮಿ ಮೂರ್ತಿ ಮತ್ತು ಎಚ್ಚೆಸ್ವಿ ಯವರ ಆನಂದದ ಜೊತೆಫೋಟೋ' ! (ಗೋಡೆಯ ಮೇಲೆ) ಡಾ . ಎಚ್. ಎಸ್. ವೆಂಕಟೇಶ ಮೂರ್ತಿಯವರು ತಮ್ಮ ಪ್ರೀತಿಯ ತಾಯಿ ನಾಗರತ್ನಮ್ಮನವರ ಜೊತೆ. ಅವರ ಆಪ್ತ ಗೆಳೆಯರು ೧. ಜಿ. ಎಸ್. ಶಂಕರ ನಾರಾಯಣ, ೨. ಎಚ್. ಆರ್. ಎಲ್. ವೆಂಕಟೇಶ, ೩. ಕೆ. ಟಿ. ಶಂಕರನಾರಾಯಣ ಅಂತಃಕರಣದ ಕವಿ ಡಾ. ಎಚ್. ಎಸ್. ವೆಂಕಟೇಶ ಮೂರ್ತಿ ಅವರ ಇಪ್ಪತ್ತು ವರ್ಷಗಳ ಅವಿರತ ತಪಸ್ಸಿನ ಫಲವಾಗಿ ಜನ್ಮತಾಳಿದ ಮಹಾಕಾವ್ಯ ಬುದ್ಧಚರಣ. ಬುದ್ಧನ ಕತೆಯನ್ನು ಕಾವ್ಯದಲ್ಲಿ ಕಟ್ಟಿಕೊಟ್ಟಿರುವ ಎಚ್ಚೆಸ್ವಿಯವರ ಈ ಪುಸ್ತಕ ಇಂದು ವರ್ಚುಯಲ್ ಸಮಾರಂಭದಲ್ಲಿ ಲೋಕಾರ್ಪಣೆ ಆಗುತ್ತಿದೆ. ಕನ್ನಡಿಗರಿಗೆ ಓದಿಗೆ ಸಿಕ್ಕಲಿದೆ.ಅಂಕಿತ ಪುಸ್ತಕ ಹೊರತಂದಿರುವ ಈ ಮಹಾಕಾವ್ಯದ ಹೊತ್ತಿಗೆಯನ್ನು ಬುಕ್ ಬ್ರಹ್ಮ ಫೇಸ್ ಬುಕ್ ಲೈವ್ ನಲ್ಲಿ ಹೆಸರಾಂತ ವಿಮರ್ಶಕ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಬಿಡುಗಡೆ ಮಾಡಲಿದ್ದಾರೆ. ಕವಿ ಎಚ್. ಎಸ್ ವೆಂಕಟೇಶ ಮೂರ್ತಿ ಮತ್ತು ಎಂ. ಆರ್. ದತ್ತಾತ್ರಿ ಅವರು ನಂತರ ನಡೆಯುವ ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಈ ಪುಸ್ತಕದ ಒಂದು ಭಾಗವನ್ನು ಕನ್ನಡ ಪ್ರೆಸ್ ಓದುಗರಿಗೆ ಇಲ್ಲಿ ಸಾದರ ಪಡಿಸುತ್ತಿದ್ದೇವೆ. Courtesy : ಅಂಕಿತ ಪುಸ್ತಕ ಹೊರತಂದಿರುವ ಈ ಮಹಾಕಾವ್ಯದ ಹೊತ್ತಿಗೆಯನ್ನು 'ಬುಕ್ ಬ್ರಹ್ಮ ಫೇಸ್ ಬುಕ್ ಲೈವ್' ನಲ್ಲಿ...