Posts

Showing posts from 2019

Sugama sangeet karyakram at Mumbai !

Image
೨೦೧೯ ರ ಅಕ್ಟೊಬರ್ ೧೯ ನೇ ತಾರೀಖಿನ ಶನಿವಾರದಂದು, ವಿದುಷಿ ಶ್ರೀಮತಿ ರಷ್ಮಿ ಕಾಖಂಡಕಿಯವರಿಂದ ಸುಗಮ ಸಂಗೀತ ಕಾರ್ಯಕ್ರಮವಿತ್ತು.  ಸ್ಥಳ : ಮೈಸೂರ್ ಅಸೋಸಿಯೇಷನ್, ಮಾಟುಂಗಾ, ಮುಂಬಯಿ-೧೯ ಸಮಯ :  ಸಾಯಂಕಾಲ : ೬-೩೦ ರಿಂದ -೮-೪೦ ರವರೆಗೆ  ಮೊದಲು, ಅಸೋಸಿಯೇಷನ್ ಹಿರಿಯ ಸದಸ್ಯೆ, ಶ್ರೀಮತಿ. ಲಕ್ಷ್ಮೀ ಸೀತಾರಾಮ್ ಅವರು ವಿದುಷಿ,  ರಷ್ಮಿ ಕಾಖಂಡಕಿ ಅವರನ್ನು ಹಾಗೂ ಅವರ ತಂಡದವರನ್ನು  ಸಭಿಕರಿಗೆ ಪರಿಚಯಿಸಿದರು. ಅಸೋಸಿಯೇಷನ್ ಅಧ್ಯಕ್ಷೆ ಶ್ರೀಮತಿ ಕಮಲಾ ಅವರು ಗಾಯಕಿ, ರಷ್ಮಿ  ಕಾಖಂಡಕಿ, ಹಾಗೂ  ತಂಡದವರಿಗೆ ಪುಷ್ಪ ಗುಚ್ಛ ನೀಡಿ ಗೌರವಿಸಿದರು.   ವಿದುಷಿ.ಶ್ರೀಮತಿ ರಷ್ಮಿ ಕಾಖಂಡಕಿಯವರು ಹಿಂದುಸ್ತಾನಿ ಸಂಗೀತದಲ್ಲಿ ವಿಶಾರದ ಪದವಿಗಳಿಸಿದ್ದಾರೆ. ಮಿರಜ್ ನಗರದ ಗಂಧರ್ವ ಸಂಗೀತ ವಿಶ್ವವಿದ್ಯಾಲಯದ ಕೊನೆಯ ವರ್ಷದ ಅಲಂಕಾರ್ ಪರೀಕ್ಷೆಗೆ ಸಿದ್ಧರಾಗುತ್ತಿದ್ದಾರೆ. ರಷ್ಮಿಯವರು ಸಂಗೀತಕಾರ, ಪಂ. ಮಹೇಶ್ ಕುಲಕರ್ಣಿ ಅವರ ಶಿಷ್ಯೆ. ಮಹಾರಾಷ್ಟ್ರದ ಡೊಂಬಿವಲಿಯಲ್ಲಿ ವಾಸವಾಗಿರುವ ವಿದುಷಿ.ರಷ್ಮಿ  ಕಾಖಂಡಕಿಯವರು ೩೦ ವಿದ್ಯಾರ್ಥಿಗಳಿಗೆ  ಮಿರಜ್ ನ ಗಂಧರ್ವ ಸಂಗೀತ ವಿದ್ಯಾಲಯದ ಪರೀಕ್ಷೆಗೆ ಪರಿಣಿತಿ ನೀಡುತ್ತಿದ್ದಾರೆ.  ತಮ್ಮ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಸುಗಮ ಸಂಗೀತ್, ಮತ್ತು ಮರಾಠಿ ಲೋಕ್ ಸಂಗೀತ್ ನಲ್ಲಿ ಹೆಚ್ಚು ಒತ್ತ...

ಮುಂಬಯಿನ ಸಾಂತಾಕ್ರೂಸ್ ನಲ್ಲಿರುವ ಪೇಜಾವರ ಮಠದಲ್ಲಿ ಶ್ರೀಕೃಷ್ಣಾಷ್ಟಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು

Image
ಶ್ರೀ ವಿದ್ಯಾಭೂಷಣ್ ಅವರು ಕಾರ್ಯಕ್ರಮಕ್ಕೆ ಆಗಮಿ ಸಿದ್ದ ಪ್ರಮುಖರಿಗೆ ಶಾಲು ಹೊದಿಸಿ ಸನ್ಮಾನ ಮಾಡಿದರು. ಪೂರ್ಣ ಪ್ರಜ್ಞಾ ವಿದ್ಯಾ ಪೀಠ ಪ್ರತಿಷ್ಠಾನದ ಡಾ. ಎ. ಎಸ್. ರಾವ್, ಡಾ. ಸುರೇಶ್ ಎಸ್. ರಾವ್, ಕಟೀಲು, ಬಿ. ಆರ್. ಗುರುಮೂರ್ತಿ,ಅವಿನಾಶ್ ಶಾಸ್ತ್ರಿ, ಉದ್ಯಮಿ, ಬಿ.ಆರ್. ಶೆಟ್ಟಿ, ಐ ಐ ಟಿ ಸಿ. ನಿರ್ದೇಶಕ, ವಿಕ್ರಾಂತ್ ಉರ್ವಾಲ್, ಸಂಜಯ್ ಮಿಸ್ತ್ರಿ,ರವಿ ಸುವರ್ಣ,ಅನೂಪ್ ಶೆಟ್ಟಿ, ಪೇಜಾವರ ಮಠ ಮುಂಬಯಿ ಶಾಖೆಯ ಪ್ರಬಂಧಕರುಗಳಾದ ಪ್ರಕಾಶ ಆಚಾರ್ಯ ರಾಮಕುಂಜ. ಡಾ. ರಾಮದಾಸ್ ಉಪಾಧ್ಯಾಯ ರೆಂಜಾಳ, ಹರಿಭಟ್ ಪುತ್ತಿಗೆ, ನಿರಂಜನ್ ಗೋಗ್ವೆ, ವಾಸುದೇವ ಉಡುಪ, ವಿದ್ವಾನ್ ಅರವಿಂದ ಬನ್ನಿಂತಾಯ,ಸುನಂದಾ ಉಪಾಧ್ಯಾಯ, ಆರ್. ಎಲ್. ಭಟ್,ಶೇಖರ್ ಜೆ. ಸಾಲ್ಯಾನ್, ಸುರೇಂದ್ರ ಕುಮಾರ್ ಹೆಗ್ಡೆ, ಗೀತಾ ಆರ್. ಭಟ್,ಮುಕುಂದ ಬೈತ್ತ ಮಂಗಳ್ಕರ್, ವಿಷ್ಣು ಮೂರ್ತಿ ಸಾಲಿ, ವಿದ್ವಾನ್ ಅರವಿಂದ ಬನ್ನಿಂತಾಯ ,ಸುಧೀರ್ ಆರ್. ಎಲ್. ಭಟ್, ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಶ್ರದ್ಧಾಳುಗಳು ಉಪಸ್ಥಿತರಿದ್ದರು. ವಿದ್ಯಾಭೂಷಣರ ಗಾನಸುಧಾ ಕಾರ್ಯಕ್ರಮದ ನಂತರ, ಶ್ರೀ ಕೃಷ್ಣಮೂರ್ತಿಗೆ ಮಹಾ ಮಂಗಳಾರತಿ ಮತ್ತು ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನ ಗೊಂಡಿತು. ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠ,ಮುಂಬಯಿ ...

ಮುಂಬಯಿ ಮಹಾನಗರದ ಮೈಸೂರು ಅಸೋಸಿಯೇಷನ್ ನಲ್ಲಿ ೭ ಮೇ ೨೦೧೯ ರಂದು ಅಕ್ಷಯ ತೃತೀಯಾ ಹಬ್ಬವನ್ನು ಹರ್ಷೋಲ್ಲಾಸ ದಿಂದ ಆಚರಿಸಲಾಯಿತು.

Image
ಮುಂಬಯಿ ಮಹಾನಗರದ ಮೈಸೂರು ಅಸೋಸಿಯೇಷನ್ ನಲ್ಲಿ ೭ ಮೇ ೨೦೧೯ ರಂದು ಅಕ್ಷಯ ತೃತೀಯಾ ಹಬ್ಬವನ್ನು ಹರ್ಷೋಲ್ಲಾಸ ದಿಂದ ಆಚರಿಸಲಾಯಿತು. ಅಸೋಸಿಯೇಷನ್ ಸದಸ್ಯರಲ್ಲದೆ ಮುಂಬಯಿನ ಹಲವಾರು ಭಕ್ತರು ಆಗಮಿಸಿ ಪೂಜೆ-ಹವನ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಮಲಾ , ಡಾ. ಬಿ. ಆರ್. ಮಂಜುನಾಥ್, ಜಿ. ಮಂಜುನಾಥಯ್ಯ, ಡಾ. ಗಣಪತಿ ಶಂಕರಲಿಂಗ, ನಾರಾಯಣ ನವಿಲೆಕರ್, ಭವಾನಿ ಡಾ. ಶ್ರೀನಿವಾಸ್, ವಸಂತ್,ಮೊದಲಾದವರು ಹಾಜರಿದ್ದರು.                                           https://photos.app.goo.gl/Q9jbMvaCw1PDPG3B8  ೧.  https://photos.app.goo.gl/u6DRhqmm8HSd6TAp7 ಶ್ರೀಮತಿ ಕಮಲಾ ಕಾಂತರಾಜು ರವರು ಗಜಾನನ ಗಜವದನ ವೆಂಬ ಕೃತಿಯನ್ನು ಹಾಡಿದರು. ೨ https ://photos.app.goo.gl/pXHhNjRnqjnkxNEW9  ಡಾ. ಬಿ. ಆರ್. ಮಂಜುನಾಥ್ ರವರು "ಮುದ್ದು ಗಣಪಾ" ಎಂಬ ಅಸೋಸಿಯೇಷನ್ ನಲ್ಲಿ ಸಾಕಷ್ಟು ಜನರಿಗೆ ಗೊತ್ತಿರುವ ಕೃತಿಯನ್ನು ರಾಗವಾಗಿ ಪ್ರಸ್ತುತಿಪಡಿಸಿದ್ದಲ್ಲದೇ  ಅದಕ್ಕೆ ತಕ್ಕ ನೃತ್ಯಸೇವೆಯನ್ನೂ ಮಾಡಿ ಗಜಾನನನನ್ನು ವಂದಿಸಿದರು. ಭಕ್...