ಮೈಸೂರ್ ಅಸೋ. ಮುಖ ಪತ್ರಿಕೆ "ನೇಸರು" ನ ಮೂಲಕ ಆಯೋಜಿಸಿದ ನೇಸರು ಜಾಗತಿಕ ಕನ್ನಡ ಕವನ ಸ್ಪರ್ಧೆ-೨೦೧೬ !
ಮೈಸೂರ್ ಅಸೋಸಿಯೇಷನ್ ತನ್ನ ೯೦ ರ ವಸಂತದ ಆಚರಣೆಯನ್ನು ಅಂತಾರಾಷ್ಟ್ರೀಯ ಕನ್ನಡ ಕವನ ಸ್ಪರ್ಧೆಯೊಂದನ್ನು ಏರ್ಪಡಿಸುವ ಮೂಲಕ ಆಚರಿಸಿಕೊಂಡು ಸಾರ್ಥಕತೆಯನ್ನು ಪಡೆದುಕೊಂಡಿದೆ. ಮೈಸೂರ್ ಅಸೋ. ಮುಖ ಪತ್ರಿಕೆ "ನೇಸರು" ನ ಮೂಲಕ ಆಯೋಜಿಸಿದ ನೇಸರು ಜಾಗತಿಕ ಕನ್ನಡ ಕವನ ಸ್ಪರ್ಧೆ-೨೦೧೬ ಕವಿತಾ ಸ್ಪರ್ಧೆಯಲ್ಲಿ ಬಂದ ಕವಿತೆಗಳು : ೨೭೯ ಇವನ್ನು ಕೂಲಂಕುಷವಾಗಿ ಪರಿಶೀಲಿಸಿ ಉತ್ತಮ ಕವಿತೆಗಳನ್ನು ಆಯ್ಕೆ ಮಾಡಲು ರಚಿಸಿದ 'ತೀರ್ಪುಗಾರರ ಸಮಿತಿ' : "ಜಾಗತಿಕ ನೇಸರು ಕನ್ನಡ ಕವನ ಸ್ಪರ್ಧೆ-೨೦೧೬ ಯ ತೀರ್ಪುಗಾರರ ಸಮಿತಿ" ಯೊಂದನ್ನು ರಚಿಸಲಾಗಿದ್ದು, ಅವರ ಹೆಸರುಗಳು ಹೀಗಿವೆ : ೧. ಮುಂಬಯಿನಗರದ ಹಿರಿಯ ಖ್ಯಾತ ಕವಿ, ಡಾ ಬಿ. ಎಸ್. ಕುರ್ಕಾಲ್, ೨. ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ , ಡಾ ಗಣೇಶ್ ಎನ್. ಉಪಾಧ್ಯ, ೩. ನಾಡಿನ ಹೆಸರಾಂತ ಬಹುಮುಖ ವ್ಯಕ್ತಿತ್ವದ ಬಹು ಬೇಡಿಕೆಯ ಕವಿ, ಡಾ ಎಚ್ಚೆಸ್ವಿ ಎಂದೇ ಪ್ರಸಿದ್ಧಿಗಳಿಸಿರುವ, ಡಾ ಎಚ್. ಎಸ್. ವೆಂಕಟೇಶ ಮೂರ್ತಿ. ಪ್ರಥಮ ಬಹುಮಾನ : (೧೦ ಸಾವಿರ ರೂಪಾಯಿ ನಗದು ಬಹುಮಾನ) 'ದಣಪೆಯ ಈಚೆ ಬದಿಗೆ' ಎಂಬ ಶೀರ್ಷಿಕೆಯ ಕವನ ಪ್ರಥಮ ಬಹುಮಾನ ಗಿಟ್ಟಿಸಿದೆ. ಇದನ್ನು ಬರೆದವರು, ಚಿತ್ರಿಕ ಶ್ರೀಧರ್ ಹೆಗಡೆ, ಸಿದ್ಧಾಪುರ. ಎರಡನೆಯ ಬಹುಮಾನ ವಿಜೇತೆ, (೫ ಸಾವಿ...