ಮುಂಬೈ ಕನ್ನಡ ಸಂಘದ ಅಮೃತ ಮಹೋತ್ಸವದ ಸಮಾರೋಪ ಸಮಾರಂಭ -೨೦೧೧-೨೦೧೨ !
ದಿನಾಂಕ ೧೭, ಮಾರ್ಚ್, ೨೦೧೨ ರ ಶನಿವಾರ ಮತ್ತು ೧೮ ಮಾರ್ಚ್, ೨೦೧೨ ಆದಿತ್ಯವಾರ ಸಮಯ : ೪-೩೦ ಕ್ಕೆ, ಮುಂಬೈನ ಮಾತುಂಗ ಪದ ಮೊಗಲ್ ಲೇನ್ ನಲ್ಲಿರುವ ಕರ್ನಾಟಕ ಸಂಘದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಡಾ. ಪಿ. ದಯಾನಂದ ಪೈರವರು (ಕಾರ್ಯಾಧ್ಯಕ್ಷರು, ಸೆಂಚ್ಯುರಿ ಸಮೂಹ ಸಂಸ್ಥೆಗಳು ಬೆಂಗಳೂರು) ಮುಖ್ಯ ಅತಿಥಿಯಾಗಿದ್ದರು. ಗೌರವಾನ್ವಿತ ಅತಿಥಿಗಳು ಧರ್ಮದರ್ಶಿ ಶಿ ಹರಿಕೃಷ್ಣ ಪುನರೂರು, ಮುಲ್ಕಿ, (ಮಾಜಿ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು) ಡಾ.ಕೆ.ಎಸ್.ರಾಜು, (ಸ್ಥಳೀಯ ನಿರ್ದೇಶಕರು, ಸಿಂಘಾನಿಯಾ ವಿ.ವಿ.ರಾಜಾಸ್ಥಾನ.) ಶ್ರೀ.. ಭಾಸ್ಕರ ಎಸ್ ಶೆಟ್ಟಿ, (ನಿರ್ದೇಶಕ, ಲಯನ್ಸ್ ಕ್ಲಬ್ ವಸೈ, ಉಪಾಧ್ಯಕ್ಷ, ವಿರಾರ್ ನಾಲಾ ಸೋಪಾರ ಕರ್ನಾಟಕ ಸಂಸ್ಥೆ) ಜಿ.ಎಸ್ ನಾಯಕ್, (ಅಧ್ಯಕ್ಷರು) ಏನ್.ಸತೀಶ್ ನಾಯಕ್ (ಕಾರ್ಯಾಧ್ಯಕ್ಷರು) ಬಿ.ನಾಗಭೂಷಣ್, (ಗೌ. ಪ್ರಧಾನ ಕಾರ್ಯದರ್ಶಿ) ರಾಜೇಂದ್ರ ಗಡಿಯಾರ, (ಗೌ. ಕೋಶಾಧಿಕಾರಿ) ಮುಂಬೈ ಕನ್ನಡ ಸಂಘ ಕಾರ್ಯಕಾರಿ ಸಮಿತಿಯ ಸದಸ್ಯರು. ಯು .ವೆಂಕಟರಾಜ ರಾವ್, ಏನ್.ಆರ್. ರಾವ್, ಕಮಲಾಕ್ಷ ಜಿ.ಸರಾಪ್, ಡಾ. ಬಿ.ಆರ್.ಮಂಜುನಾಥ್, ಕೆ.ಮಂಜುನಾಥಯ್ಯ ಅಮೃತ ಮಹೋತ್ಸವದ ಕಾರ್ಯಕಾರಿ ಸಮಿತಿಯ ಸದಸ್ಯರು, ಶ್ರೀ. ಪರಾರಿಯವರು ಮೊ...