ಮುಂಬಯಿಯ ಖ್ಯಾತ ಸಾಹಿತಿ, ಅಂಕಣಕಾರ, ಉಪಸಂಪಾದಕ, ಶ್ರೀನಿವಾಸ ಜೋಕಟ್ಟೆಯವರ ವಿರಚಿತ, "ದೇವರುಗಳ ನ್ಯಾಯಾಲಯ", ಮತ್ತು "ಎಲ್ಲಿಗೋ ಪಯಣ ಯಾವುದೋ ದಾರಿ" ! ಕ್ರಮವಾಗಿ ೪೦ ಹಾಗೂ ೪೧ ನೆಯ ಕೃತಿಗಳ ಲೋಕಾರ್ಪಣೆ ! ಸ್ಥಳ : ಮೈಸೂರು ಅಸೋಸಿಯೇಷನ್, ಸಭಾಗೃಹದಲ್ಲಿ, ಮಾತುಂಗ ಮುಂಬೈ-೪೦೦೦ ೧೯ ತಾರೀಖು ಮತ್ತು ಸಮಯ : ೮, ರವಿವಾರ, ಅಕ್ಟೊಬರ್, ೨೦೨೩, ಮಧ್ಯಾನ್ಹ ೨ ಗಂಟೆಗೆ ಕ'ರ್ನಾಟಕ ಮಲ್ಲ ದಿನಪತ್ರಿಕೆಯ ವರದಿ' : ಸಮಾರಂಭದ ಅಧ್ಯಕ್ಷರಾಗಿ ಬಿ. ಎಸ್. ಕೆ. ಬಿ. ಅಸೋಸಿಯೇಷನ್ ಅಧ್ಯಕ್ಷ ಡಾ. ಸುರೇಶ ರಾವ್ ತಮ್ಮ ಭಾಷಣದಲ್ಲಿ ಶ್ರೀ. ಶ್ರೀನಿವಾಸ ಜೋಕಟ್ಟೆಯವರ ಕ್ರಿಯಾಶೀಲತೆಯನ್ನು ಕಂಡು ಅವರಿಗೆ ಡಾ. ವ್ಯಾಸರಾಯ ನಿಂಜೂರ್ ರವರ ನಿವೃತ್ತಿಯ ನಂತರ, ಬಿ. ಎಸ್ ಕೆ. ಬಿ ಅಸೋಸಿಯೇಷನ್ ನ 'ಗೋಕುಲ ವಾಣಿ'ಪತ್ರಿಕೆಯ ಸಂಪಾದಕತ್ವವನ್ನು ಕಳೆದ ವರ್ಷ ನೀಡಿದ್ದು ಈಗ ಆವರು ಯಶಸ್ವಿಯಾಗಿ ನಿರ್ವಹಿಸುತ್ತಿರುವುದನ್ನು ಉಲ್ಲೇಖಿಸಿದರು. "ಸಮಾಜದಲ್ಲಿ ಯಾರು ಪರಮಾತ್ಮನಿಗೆ ಬೇಕಾದಂತಹ ಒಳ್ಳೆಯ ಕೆಲಸಗಳನ್ನು ಮಾಡುತ್ತಾರೋ ಅವರೇ ಭಾಗ್ಯಶಾಲಿಗಳು ; ಒಳ್ಳೆಯ ಕೆಲಸಗಳನ್ನು ಭಕ್ತಿ-ಶ್ರದ್ಧಾಸಕ್ತಿಗಳಿಂದ ಮಾಡುತ್ತಿದ್ದರೆ ಅವು ಸಾರ್ಥಕತೆಯನ್ನು ಪಡೆಯುತ್ತವೆ. ನಾವೆಲ್ಲಾ ಚಿಂತನೆಗಳನ್ನು ಒಳ್ಳೆಯ ಕೆಲಸಗಳಿಗೆ ವಿನಿಯೋಗಿಸುತ್ತಿದ್ದರೆ ದೇವರ ಅನುಗ್ರಹ ದೊರೆಯುವುದರಲ್ಲಿ ಸಂಶಯವಿಲ್ಲ" ವೆಂದು ನುಡಿದರು. ಪ್ರೇಮ ತ...