Posts

Showing posts from May, 2023

"ನೇಸರು ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆ-2022ರ ಬಹುಮಾನ ವಿತರಣೆ ಹಾಗೂ ಕನ್ನಡ ನಾಟಕ- "ಚಿಟ್ಟೆ" ಪ್ರದರ್ಶನ !

Image
  *"ನೇಸರು ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆ-2022ರ ಬಹುಮಾನ ವಿತರಣೆ ಹಾಗೂ ಕನ್ನಡ ನಾಟಕ "ಚಿಟ್ಟೆ" ಪ್ರದರ್ಶನ* - *ಮೈಸೂರು ಅಸೋಸಿಯೇಷನ್, ಮುಂಬಯಿ* ವತಿಯಿಂದ ನಡೆದ 2022ನೇ ಸಾಲಿನ ನೇಸರು ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮವು ನಾಳೆ ( *28/05/2023*) *ಸಂಜೆ 6* ರಿಂದ *ಮೈಸೂರು ಅಸೋಸಿಯೇಷನ್ ಸಭಾಗೃಹದಲ್ಲಿ* ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಖ್ಯಾತ ರಂಗ ನಿರ್ದೇಶಕಿ, ರಂಗನಟಿ *ಅಹಲ್ಯಾ ಬಲ್ಲಾಳ್* ಭಾಗವಹಿಸಲಿದ್ದಾರೆ. ಮೈಸೂರು ಅಸೋಸಿಯೇಷನ್ ನ ಅಧ್ಯಕ್ಷೆ *ಕಮಲಾ ಕೆ.* ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಬೆಂಗಳೂರಿನ ಹೆಸರಾಂತ ಬಾಲಕಲಾವಿದ ಮಾಸ್ಟರ್ *ಗೋಕುಲ ಸಹೃದಯ* ಅವರಿಂದ *ಚಿಟ್ಟೆ* ಎಂಬ ವಿಶೇಷ ಏಕವ್ಯಕ್ತಿ ಕನ್ನಡ ನಾಟಕ ಪ್ರದರ್ಶನಗೊಳ್ಳಲಿದೆ. *"ಚಿಟ್ಟೆ"* ಎಂಬ ನಾಟಕವು ಭಾರತೀಯ ರಂಗಭೂಮಿಯಲ್ಲಿ ತುಂಬಾ ವಿಶಿಷ್ಟವಾದ ನಾಟಕ ಪ್ರಯೋಗವಾಗಿದೆ. *ಗೋಕುಲ ಸಹೃದಯ* ಎಂಬ ಬಾಲಕ ಬಾಲ್ಯದಿಂದಲೂ ರಂಗಭೂಮಿಯ ಕಲಾವಿದನಾಗಿದ್ದು ಹಲವು ಪಾತ್ರಗಳಲ್ಲಿ ಅಭಿನಯಿಸಿ ತನ್ನ ಹತ್ತನೇ ವಯಸ್ಸಿನಲ್ಲಿ ಒಂದು ಗಂಟೆ 10 ನಿಮಿಷಗಳ ಕಾಲ ಒಬ್ಬನೇ ಅಭಿನಯಿಸುವ ಏಕ ವ್ಯಕ್ತಿ ಪ್ರಯೋಗವನ್ನು ಇಡೀ ಭಾರತಾದ್ಯಂತ 84 ಪ್ರಯೋಗಗಳನ್ನು ಮಾಡಿದ್ದಾನೆ. ಭಾರತೀಯ ರಂಗಭೂಮಿಯ ಇತಿಹಾಸದಲ್ಲಿ ಇಷ್ಟು ಪುಟ್ಟ ಬಾಲಕ ಅತ್ಯಂತ ಸಮರ್ಥ ಅಭಿನಯದಿಂದ ಏಕವ್ಯಕ್ತಿ ರಂಗ ಪ್ರಯೋಗವನ್ನು ಮಾಡ...