ಕರ್ನಾಟಕ ಸಂಘದ ಮುಂಬಯಿ ಕಲಾಭಾರತಿ ; ಲಕ್ಷ್ಮಿ ಸುಧೀಂದ್ರ ೬ ನೆಯ ಪುಣ್ಯ ಸ್ಮೃತಿ ಪ್ರಯುಕ್ತ ಸಂಗೀತ ಕಾರ್ಯಕ್ರಮ
ಮುಂಬಯಿಯ ಸುವರ್ಣ ಕರ್ನಾಟಕ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಘ ಮುಂಬಯಿಯ ಕಲಾವೇದಿಕೆ, ಕಲಾಭಾರತಿ ಹಾಗೂ ಭವಾನಿ ಮೀರ್ ಮೀರಾ ಪರಿವಾರದ ವತಿಯಿಂದ ಲಕ್ಷ್ಮಿ ಸುಧೀಂದ್ರರವರ ೬ ನೆಯ ಪುಣ್ಯ ಸ್ಮೃತಿಯ ಅಂಗವಾಗಿ ವರ್ಷ ೨೦೨೧ರ ಫೆಬ್ರವರಿ ೧೯ ರ ಬೆಳಿಗ್ಯೆ, ೧೦-೩೦ ರಿಂದ ಮುಂಬಯಿನ ಪ್ರತಿಷ್ಠಿತ ಮೈಸೂರು ಅಸೋಸಿಯೇಷನ್ ನ ಸುಸಜ್ಜಿತ ಸಭಾಗೃಹದಲ್ಲಿ ಅಂತಾರಾಷ್ಟ್ರೀಯ ಕಿರಾಣಾ ಘರಾಣದ ಸುಪ್ರಸಿದ್ಧ ಗಾಯಕ ಪಂ. ಜಯತೀರ್ಥ ಮೇವುಂಡಿ (ಕನ್ನಡಿಗರು) ಹಾಗೂ ತಂಡದವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಆಯೋಜಿಸಲ್ಪಟ್ಟಿತ್ತು. ಪಕ್ಕವಾದ್ಯದಲ್ಲಿ ತಬಲಾ : ಮಂದಾರ್ ಪುರಾಣಿಕ, ಸಾರಂಗಿ : ಫಾರಿಕ್ ಲತೀಫ್ ಖಾನ್. ಸಂವಾದಿನಿ : ಜ್ಞಾನೇಶ್ವರ್ ಸೋನಾವಣೆ, ಜಯಂತ್ ನಾಯ್ಡು, ಹಾಗೂ ತಾನ್ಪುರದಲ್ಲಿ ಪ್ರಕಾಶ್ ನಾಯಿಕ್ ಜೊತೆಯಲ್ಲಿದ್ದರು. ಕಾರ್ಯಕ್ರಮದ ಆಯೋಜಕರಾಗಿದ್ದ ಡಾ ಭವಾನಿಯವರು ಮೊದಲು ಆಹ್ವಾನಿತರಾಗಿ ಆಗಮಿಸಿದ ಸಂಗೀತಕಾರ ಡಾ. ಮೇವುಂಡಿಯವರ ಅನೇಕ ಕಲಾಭಿಮಾನಿಗಳನ್ನೂ ಕಲಾಕಾರರನ್ನೂ ಮತ್ತು ದಿವಂಗತ ಶ್ರೀಮತಿ ಲಕ್ಷ್ಮಿ ಸುಧೀಂದ್ರರವರ ಹಳೆಯ ವಿದ್ಯಾರ್ಥಿಗಳನ್ನೂ ಸ್ವಾಗತಿಸಿದರು. ಸಂಗೀತಕಾರ ಡಾ. ಮೇವುಂಡಿಯವರ ಅನೇಕ ಕಲಾಭಿಮಾನಿಗಳನ್ನು ಕಲಾಕಾರರನ್ನು ವಿ...