Posts

Showing posts from October, 2019

Sugama sangeet karyakram at Mumbai !

Image
೨೦೧೯ ರ ಅಕ್ಟೊಬರ್ ೧೯ ನೇ ತಾರೀಖಿನ ಶನಿವಾರದಂದು, ವಿದುಷಿ ಶ್ರೀಮತಿ ರಷ್ಮಿ ಕಾಖಂಡಕಿಯವರಿಂದ ಸುಗಮ ಸಂಗೀತ ಕಾರ್ಯಕ್ರಮವಿತ್ತು.  ಸ್ಥಳ : ಮೈಸೂರ್ ಅಸೋಸಿಯೇಷನ್, ಮಾಟುಂಗಾ, ಮುಂಬಯಿ-೧೯ ಸಮಯ :  ಸಾಯಂಕಾಲ : ೬-೩೦ ರಿಂದ -೮-೪೦ ರವರೆಗೆ  ಮೊದಲು, ಅಸೋಸಿಯೇಷನ್ ಹಿರಿಯ ಸದಸ್ಯೆ, ಶ್ರೀಮತಿ. ಲಕ್ಷ್ಮೀ ಸೀತಾರಾಮ್ ಅವರು ವಿದುಷಿ,  ರಷ್ಮಿ ಕಾಖಂಡಕಿ ಅವರನ್ನು ಹಾಗೂ ಅವರ ತಂಡದವರನ್ನು  ಸಭಿಕರಿಗೆ ಪರಿಚಯಿಸಿದರು. ಅಸೋಸಿಯೇಷನ್ ಅಧ್ಯಕ್ಷೆ ಶ್ರೀಮತಿ ಕಮಲಾ ಅವರು ಗಾಯಕಿ, ರಷ್ಮಿ  ಕಾಖಂಡಕಿ, ಹಾಗೂ  ತಂಡದವರಿಗೆ ಪುಷ್ಪ ಗುಚ್ಛ ನೀಡಿ ಗೌರವಿಸಿದರು.   ವಿದುಷಿ.ಶ್ರೀಮತಿ ರಷ್ಮಿ ಕಾಖಂಡಕಿಯವರು ಹಿಂದುಸ್ತಾನಿ ಸಂಗೀತದಲ್ಲಿ ವಿಶಾರದ ಪದವಿಗಳಿಸಿದ್ದಾರೆ. ಮಿರಜ್ ನಗರದ ಗಂಧರ್ವ ಸಂಗೀತ ವಿಶ್ವವಿದ್ಯಾಲಯದ ಕೊನೆಯ ವರ್ಷದ ಅಲಂಕಾರ್ ಪರೀಕ್ಷೆಗೆ ಸಿದ್ಧರಾಗುತ್ತಿದ್ದಾರೆ. ರಷ್ಮಿಯವರು ಸಂಗೀತಕಾರ, ಪಂ. ಮಹೇಶ್ ಕುಲಕರ್ಣಿ ಅವರ ಶಿಷ್ಯೆ. ಮಹಾರಾಷ್ಟ್ರದ ಡೊಂಬಿವಲಿಯಲ್ಲಿ ವಾಸವಾಗಿರುವ ವಿದುಷಿ.ರಷ್ಮಿ  ಕಾಖಂಡಕಿಯವರು ೩೦ ವಿದ್ಯಾರ್ಥಿಗಳಿಗೆ  ಮಿರಜ್ ನ ಗಂಧರ್ವ ಸಂಗೀತ ವಿದ್ಯಾಲಯದ ಪರೀಕ್ಷೆಗೆ ಪರಿಣಿತಿ ನೀಡುತ್ತಿದ್ದಾರೆ.  ತಮ್ಮ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಸುಗಮ ಸಂಗೀತ್, ಮತ್ತು ಮರಾಠಿ ಲೋಕ್ ಸಂಗೀತ್ ನಲ್ಲಿ ಹೆಚ್ಚು ಒತ್ತ...