Posts

Showing posts from December, 2018

ಮುಂಬಯಿ ಮಹಾನಗರದಲ್ಲಿ "ಕನ್ನಡಕ್ಕೆ ಅನ.ಕೃ.ರವರ ಕೊಡುಗೆಯ ಬಗ್ಗೆ ವಿಚಾರ ಸಂಕಿರಣ" ಕಾರ್ಯಕ್ರಮವಿತ್ತು

Image
    ಮುಂಬಯಿ ಮಹಾನಗರದಲ್ಲಿ "ಕನ್ನಡಕ್ಕೆ ಅ .ನ.ಕೃರವರ  ಕೊಡುಗೆಯ ಬಗ್ಗೆ ವಿಚಾರ ಸಂಕಿರಣ"  ಕಾರ್ಯಕ್ರಮವಿತ್ತು  ಸಮಯ : ೨೨, ಶನಿವಾರ,  ಡಿಸೆಂಬರ್, ೨೦೧೮ ರ  ಸಾಯಂಕಾಲ ೫-೩೦ಕ್ಕೆ  ಸ್ಥಳ : ಮೈಸೂರು ಅಸೋಸಿಯೇಷನ್, ಮುಂಬಯಿ, ಮೈಸೂರು ಅಸೋಸಿಯೇಷನ್, ಮುಂಬಯಿ   ಮತ್ತು ಕನ್ನಡ ಸಾಹಿತ್ಯ ಪರಿಷತ್ (ಮುಂಬಯಿ ವಿಭಾಗ) ಜಂಟಿಯಾಗಿ ಈ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿತ್ತು.   ಮೊದಲು ಶ್ರೀಮತಿ ಹೆಗ್ಗಡೆಯವರಿಂದ ಡಾ. ನರಹಳ್ಳಿಯವರ ಪರಿಚಯ  ಡಾ. ಗಣಪತಿ ಶಂಕರಲಿಂಗರವರು, "ಮುಂಬಯಿ ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಉಗಮ"ದ ಬಗ್ಗೆ ಸಭಿಕರಿಗೆ ಪರಿಚಯ  ಮಾಡಿದರು.  ಆ.ನ.ಕೃ ಬಗ್ಗೆ ಪ್ರಾಸ್ತಾವಿಕ ಭಾಷಣವನ್ನು ಡಾ. ಭರತ್ ಕುಮಾರ್ ಪೊಲಿಪುರವರು ಮಾತಾಡಿದರು.  ಡಾ. ಜಿ. ಏನ್. ಉಪಾಧ್ಯರವರು ಮಾತಾಡಿದರು.  ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯರವರ ಉಪನ್ಯಾಸ  ಅ .ನ.ಕೃರವರ ಬಗ್ಗೆ ಸಾಕಷ್ಟು ಮಾಹಿತಿ ಹೊಂದಿರುವ ಅವರು ಕನ್ನಡಕ್ಕೆ ಅವರ ಕೊಡುಗೆಗಳನ್ನು ಸವಿಸ್ತಾರವಾಗಿ ಹಲವು ಉದಾಹರಣೆಗಳ ಸಹಿತ,ವಿದ್ವತ್ಪೂರ್ಣ ಭಾಷಣವನ್ನು ಮಂಡಿಸಿದರು. ಇದಾದ ಬಳಿಕ ಸಂವಾದದ ಕಾರ್ಯಕ್ರಮದಲ್ಲೂ ಹೆಚ್ಚು ಜನ ಸಾಹಿತ್ಯಾಭಿಲಾಷಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಚಂದಗಾಣಿಸಿದರು  ವಂದನಾರ್ಪಣೆಯ ಬಳಿಕ  ಗಣಪತಿ ದರ್ಬಾರ್ ಹಾಲಿನಲ್ಲಿ...