ಖ್ಯಾತ ಸಿನಿಮಾಟೋಗ್ರಾಫರ್, ವಿ. ಕೆ. ಮೂರ್ತಿಯವರು ಹಲವಾರು ಪ್ರಖ್ಯಾತ ಚಿತ್ರನಿರ್ಮಾಪಕರು, ನಿರ್ದೇಶಕರು, ಕಲಾವಿದರುಗಳೊಂದಿಗೆ ಕೆಲಸಮಾಡಿದ್ದಾರೆ. ಇವೆಲ್ಲದರ ಬಗ್ಗೆ ಬೆಳಕುಚೆಲ್ಲುವ ಒಂದು ’ಚಿತ್ರಪ್ರದರ್ಶನವನ್ನು ಆಯೋಜಿಸಲಾಗಿತ್ತು !
’(ಮೈಸೂರ್ ಅಸೋಸಿಯೇಷನ್ ಸೌಜನ್ಯದಿಂದ )’ ವಿ. ಕೆ. ಮೂರ್ತಿಯವರು ಚಿತ್ರೀಕರಿಸಿದ ಹಲವಾರು ಹಿಂದಿ-ಚಲನಚಿತ್ರಗಳ ವಿಶೇಷ ಸಂದರ್ಭಗಳನ್ನು ಪ್ರಸ್ತುತಪಡಿಸುವ ’ಚಿತ್ರಪ್ರದರ್ಶನ,’ ಚಿತ್ರ-ರಸಿಕರಿಗೆ ಮುದಕೊಟ್ಟಿತು. ’ಮೈಸೂರ್ ಅಸೋಸಿಯೇಷನ್,’ ಮತ್ತು ಕೆಳಗೆ ನಮೂದಿಸಿದ ಸಂಘ-ಸಂಸ್ಥೆಗಳು ಅವರನ್ನು ಸನ್ಮಾನಿಸಲು ಜಂಟಿಯಾಗಿ ಭಾಗವಹಿಸಿವೆ. ಮೈಸೂರ್ ಅಸೋಸಿಯೇಶನ್ ಜೊತೆಯಲ್ಲಿ ಹೆಗಲಿಗೆ ಹೆಗಲು ಕೊಟ್ಟು ಸಹಕರಿಸಿದ ಸಂಘ ಸಂಸ್ಥೆಗಳು. ಕಾರ್ಯಕ್ರಮ ಮೊದಲು, ಅಸೋಸಿಯೇಷನ್ ಯುವ ಪ್ರತಿಭೆ, ಪದ್ಮನಾಭ ಶೆಟ್ಟಿಯವರಿಂದ, ’ವಂದೇ ಶಾರದೆ ವೀಣಾಧಾರಿಣಿ ಮಾತಾ,’ ಎಂಬ ಸುಂದರ ಗೀತೆಯೊಂದಿಗೆ ಆರಂಭವಾಯಿತು ! ಮೂರ್ತಿಯವರ ಛಾಯಾಗ್ರಹಣದ ಪಾಲುದಾರರ ಜೊತೆ.... ಗ್ರೆಗೊರಿ ಪೆಕ್, ಮತ್ತು ಮೂರ್ತಿ, ಹಾಗೂ ಗೆಳೆಯ, ಗ್ರೀಸ್ ನಲ್ಲಿ... ’ಮೈಸೂರ್ ಅಸೋಸಿಯೇಷನ್ ” ನ, ಹಿರಿಯ-ಸಮರ್ಥ ಕಾರ್ಯಕರ್ತರುಗಳಲ್ಲೊಬ್ಬರಾದ, ಶ್ರೀ. ಕೆ. ಮಂಜುನಾಥಯ್ಯನವರು, ಕಾರ್ಯಕ್ರಮದ ಕೊನೆಯಲ್ಲಿ ವಂದನಾರ್ಪಣೆ ಮಾಡಿದರು. ಮೈಸೂರ್ ಅಸೋಸಿಯೇಷನ್ ನ ಇತಿಹಾಸದ ಬಗೆಗೆ, ಅಧಿಕೃತವಾಗಿ ಮಾತಾಡಬಲ್ಲ ಹಿರಿಯ ಸದಸ್ಯರಲ್ಲಿ, ಮಂಜುನಾಥಯ್ಯನವರು ಮುಂದಿದ್ದಾರೆ.. ವೇದಿಕೆಯ ಮೇಲೆ, ಶ್ರೀಮತಿ. ಉಮಾ ಪ್ರಭಾಕರ್ ರಾವ್, ಬೆನೆಗಲ್, ಮೂರ್ತಿ, ಮತ್ತು ಮನಮೋಹನ್ ಶೆಟ್ಟಿಯವರು... ಸಭಾಂಗಣದಲ್ಲಿ ಕಾರ್ಯಕ್ರಮವನ್ನು ವೀಕ್ಷಿಸುತ್ತಿರುವವರ...