Maghi Ganpati, and Satyanarayana swamy maha pooja, were conducted at The Mysore association, hall !
ಪ್ರತಿವರ್ಷದಂತೆ, ಮುಂಬಯಿನ ಮೈಸೂರು ಅಸೋಸಿಯೇಷನ್ ನಲ್ಲಿ "ಮಾಘಿ ಗಣಪತಿ ಹಾಗೂ ಸತ್ಯನಾರಾಯಣ ಸ್ವಾಮಿ ಮಹಾ ಪೂಜೆ"ಯನ್ನು ೨೦೨೩ ರ ಜನವರಿ ೨೫ ನೆಯ ತಾರೀಖು ಆಚರಿಸಲಾಯಿತು.
ಬೊಂಬಾಯಿ ಮಹಾ ನಗರದ ದೂರ-ದೂರ ಸ್ಥಳಗಳಿಂದ ಅಸೋಸಿಯೇಷನ್ ನ ಸದಸ್ಯರೆಲ್ಲಾ ಪೂಜೆಯ ಸಮಯದಲ್ಲಿ ಆಗಮಿಸಿ, ದೇವರ ಅನುಗ್ರಹಕ್ಕೆ ಪಾತ್ರರಾದರು. ಸಾಯಂಕಾಲ ೬ ಕ್ಕೆ ಶುರುವಾದ ಪೂಜಾ ವಿಧಿ ಸದಸ್ಯರ ಗಣಪತಿ ವಂದನೆ, ಮತ್ತು ಮಂತ್ರ ಪುಷ್ಪ ವಿಧಿಗಳಿಂದ ಪೂಜಾಗೃಹ ಧನ್ಯನೆಯ ಬೀಡಾಗಿ ಪರಿವರ್ತಿತಗೊಂಡಿತ್ತು. ವರ್ಷ ೨೦೨೩ ಸುಂದರವಾಗಿ ಪಾದಾರ್ಪಣೆ ಮಾಡಿದಂತಾಗಿದೆ.
ಈ ಬಾರಿ ಪೂಜೆಮಾಡಲು ಶ್ರೀಮತಿ. ಗಾಯತ್ರಿ ಮತ್ತು ಶ್ರೀ. ನಾಗೇಂದ್ರ ದಂಪತಿಗಳು ಮುಂದೆಬಂದು ಸಹಕರಿಸಿದರು.
ಶ್ರೀ. ಎಂ. ಏನ್. ರಾವ್ ರವರು ವಡಾಲಾದಲ್ಲಿರುವ ಏನ್. ಕೆ. ಇ. ಎಸ್ ಹೈಸ್ಕೂಲಿನ ಮಾಜಿ ಪ್ರಾಂಶುಪಾಲೆ, ಶ್ರೀಮತಿ. ಸರೋಜಾ ರಾವ್ ರವರ ತಂದೆಯವರು. ಇವರು ಮಾಘಿ ಗಣಪತಿ ಪೂಜೆಯ ಸಮಯದಲ್ಲಿ ಆಗಮಿರುವುದು ಅಸೋಸಿಯೇಷನ್ ಸದಸ್ಯರಿಗೆಲ್ಲ ಬಹಳ ಮುದನೀಡಿದೆ.
ಶ್ರೀ. ಕೆ. ಮಂಜುನಾಥಯ್ಯ ನವರಿಗೆ ಶಾಲು ಹೊದಿಸಿ ಆಶೀರ್ವದಿಸಿದ ಶ್ರೀ. ಎಂ. ಏನ್. ರಾವ್ ರವರು ಏನ್. ಕೆ. ಇ. ಎಸ್ ಹೈಸ್ಕೂಲಿನ ಮಾಜಿ ಪ್ರಾಂಶುಪಾಲೆ, ಶ್ರೀಮತಿ. ಸರೋಜಾ ರಾವ್ ರವರ ತಂದೆಯವರು.
ಡಾ. ಬಿ. ಆರ್. ಮಂಜುನಾಥ್ ರವರಿಗೆ ಶ್ರೀ. ಎಂ. ಏನ್. ರಾವ್ ರವರು ಶಾಲು ಹೊದಿಸಿ ಗೌರವಿಸಿದವರು, ವಡಾಲಾ ದಲ್ಲಿರುವ ಏನ್. ಕೆ. ಇ. ಎಸ್ ಹೈಸ್ಕೂಲಿನ ಮಾಜಿ ಪ್ರಾಂಶುಪಾಲೆ, ಶ್ರೀಮತಿ. ಸರೋಜಾ ರಾವ್ ರವರ ತಂದೆಯವರು. ಜೊತೆಯಲ್ಲಿ ಶ್ರೀ. ಹಿರಿಯ ಸದಸ್ಯರಾದ ಶ್ರೀ. ಕೆ. ಮಂಜುನಾಥಯ್ಯ, ಮತ್ತು ಡಾ. ಗಣಪತಿ ಶಂಕರ ಲಿಂಗ ರವರು ಇದ್ದಾರೆ.
ಪ್ರೊ. ಶ್ರೀ. ಟಿ. ಎಸ್. ವೆಂಕಟೇಶ್ ಮತ್ತು ಗೆಳೆಯರು : ಮೊದಲನೆಯವರು ಶ್ರೀ. ದಿಲೀಪ್ ತಲ್ವಾಯಿ, (ಈಗ ನೆರೂಲ್ ನಲ್ಲಿ ವಾಸವಾಗಿದ್ದಾರಂತೆ) ಇನ್ನೊಬ್ಬರು ಶ್ರೀ. ಶಂಕರ ನಾರಾಯಣ, ಟೈಮ್ಸ್ ಆಪ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದೆ, ಎಂದು ಅವರು ಹೇಳಿದ್ದನ್ನು ಕೇಳಿದ್ದೆ. (ನನ್ನ ಕಿವಿ ಸ್ವಲ್ಪ ಸುಮಾರು)
Comments