ಬಿ. ಎಂ. ಶ್ರೀ. ಪ್ರತಿಷ್ಠಾನ, ಎಂ. ವಿ. ಸೀ. ಸ್ನಾತಕೋತ್ತರ ಸಂಶೋಧನಾ ಕೇಂದ್ರ. ನರಸಿಂಹರಾಜ ಕಾಲೋನಿ, ಬೆಂಗಳೂರು .
ಬಿ. ಎಂ. ಶ್ರೀ. ಪ್ರತಿಷ್ಠಾನ, ಎಂ. ವಿ. ಸೀ. ಸ್ನಾತಕೋತ್ತರ ಸಂಶೋಧನಾ ಕೇಂದ್ರ. ನರಸಿಂಹರಾಜ ಕಾಲೋನಿ, ಬೆಂಗಳೂರು .
ಶ್ರೀ. ಬಿ. ಎಸ್. ಗೋಪಾಲರಾವ್, ಮತ್ತು ಶ್ರೀಮತಿ. ವೇದವತಿ ಬಾಯಿ, ದತ್ತಿ ಕಾರ್ಯಕ್ರಮ,
ತಾ. ೧೩, ಜನವರಿ, ೨೦೨೪ ರ ಸಾಯಂಕಾಲ ೫ ಗಂಟೆಗೆ
ಶ್ರೀಮತಿ. ಡಾ. ಶ್ಯಾಮಲಾ ಪ್ರಕಾಶ್, ಗಾಯಕಿ, ಉಪನ್ಯಾಸಕಿ, ಮತ್ತು ಲೇಖಕಿ, ಮತ್ತು ವ್ಯಾಖ್ಯಾನ , ವಿದ್ವಾನ್ ಸಿ. ಆರ್. ಸುಬ್ಬಣ್ಣ, ಶಾಸ್ತ್ರಜ್ಞರು ಹಾಗೂ ವಾಗ್ಮಿಗಳಿಂದ,
ವಿಷಯ : 'ಕರ್ಣಭೇದನ'
Comments
ಸಂಗೀತ ವಿದುಷಿ ಶ್ಯಾಮಲಮ್ಮನವರಿಗೆ,
ನಿಮ್ಮ ಬಿಡುವಿಲ್ಲದ ಸಂಗೀತ ದಾಸೋಹವನ್ನು ಎಡೆಬಿಡದೆ ಮಾಡುತ್ತಿದ್ದೀರಿ. ಅದನ್ನು ಕಣ್ಣಾರೆ ಕಂಡವರಲ್ಲಿ ನನ್ನ ಅಣ್ಣನ ಮಗ ಚಿ ಶ್ರೀಧರ ಮತ್ತು ಅವನ ಪ್ರೀತಿಯ ಪತ್ನಿ ಉಷಾ. ಅವರಿಂದ ನಿಮ್ಮ ಕಚೇರಿಯ ವಿಷಯ ತಿಳಿಯುತ್ತಿರುತ್ತದೆ.
ದೇವರು ನಮಗೆ ಇವೆಲ್ಲಾ ನಡೆಸಿಕೊಂಡು ಹೋಗುವಷ್ಟು ದೇಹಧಾರಢ್ಯ ಕರುಣಿಸಲಿ. ನಿಮ್ಮ ಪತಿರಾಯರ ಸಹಕಾರವನ್ನು ನಾನು ಊಹಿಸಲೂ ಸಾಧ್ಯವಿಲ್ಲ. ಪ್ರತಿ ಪ್ರತಿಭಾನ್ವಿತ ಪತ್ನಿಯ ಹಿಂದೆ ಒಬ್ಬ ಪ್ರಕಾಶರಂತಹ ಸಹಕಾರ ಪುರುಷರು ಇದ್ದೇ ಇರುತ್ತಾರೆ ! ಅವರಿಗೆ ನನ್ನ ನಮನಗಳು.
ಹಿಂದೆ, ಬೆಂಗಳೂರಿನಲ್ಲಿ ಜರುಗುತ್ತಿದ್ದ ಪ್ರತಿ ರಾಮನವಮಿ ಸಂಗೀತ ಕಾರ್ಯಕ್ರಮದಲ್ಲೂ ಶೇಷಾದ್ರಿಪುರಂ ಹೈ ಸ್ಕೂಲಿನಿಂದ ಗಾಯನಸಮಾಜ, ಮತ್ತು ಏನ್. ಆರ್ ಕಾಲೋನಿಗಳ ಸಂಗೀತ ಕಾರ್ಯಕ್ರಮಗಳಲ್ಲಿ ತಪ್ಪದೆ ಪಾಲ್ಗೊಳ್ಳುವವರಲ್ಲಿ ನಾನೂ ಒಬ್ಬನಾಗಿದ್ದೆ. (ಹಿಂದೆ ೫೦-೬೦ ರ ದಶಕದಲ್ಲಿ) ಅದರಲ್ಲೂ ನಮ್ಮ ಮುಂಬಯಿ ವಿದುಷಿ ಡಾ. ಶ್ಯಾಮಲಮ್ಮನವರ ಸಂಗೀತವಿರುವಾಗ, ನನಗೆ ಕೇಳುವ ಆಶೆ. ಆದರೆ ನನಗೆ ಆ ಪುಣ್ಯವೆಲ್ಲಿ ?
ನಮಸ್ಕಾರಗಳು.
-ಎಚ್ಚಾರೆಲ್