"ನೇಸರು ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆ-2022ರ ಬಹುಮಾನ ವಿತರಣೆ ಹಾಗೂ ಕನ್ನಡ ನಾಟಕ- "ಚಿಟ್ಟೆ" ಪ್ರದರ್ಶನ !
*"ನೇಸರು ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆ-2022ರ ಬಹುಮಾನ ವಿತರಣೆ ಹಾಗೂ ಕನ್ನಡ ನಾಟಕ "ಚಿಟ್ಟೆ" ಪ್ರದರ್ಶನ* -
*ಮೈಸೂರು ಅಸೋಸಿಯೇಷನ್, ಮುಂಬಯಿ* ವತಿಯಿಂದ ನಡೆದ 2022ನೇ ಸಾಲಿನ ನೇಸರು ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮವು ನಾಳೆ ( *28/05/2023*) *ಸಂಜೆ 6* ರಿಂದ *ಮೈಸೂರು ಅಸೋಸಿಯೇಷನ್ ಸಭಾಗೃಹದಲ್ಲಿ* ನಡೆಯಲಿದೆ.
*"ಚಿಟ್ಟೆ"* ಎಂಬ ನಾಟಕವು ಭಾರತೀಯ ರಂಗಭೂಮಿಯಲ್ಲಿ ತುಂಬಾ ವಿಶಿಷ್ಟವಾದ ನಾಟಕ ಪ್ರಯೋಗವಾಗಿದೆ. *ಗೋಕುಲ ಸಹೃದಯ* ಎಂಬ ಬಾಲಕ ಬಾಲ್ಯದಿಂದಲೂ ರಂಗಭೂಮಿಯ ಕಲಾವಿದನಾಗಿದ್ದು ಹಲವು ಪಾತ್ರಗಳಲ್ಲಿ ಅಭಿನಯಿಸಿ ತನ್ನ ಹತ್ತನೇ ವಯಸ್ಸಿನಲ್ಲಿ ಒಂದು ಗಂಟೆ 10 ನಿಮಿಷಗಳ ಕಾಲ ಒಬ್ಬನೇ ಅಭಿನಯಿಸುವ ಏಕ ವ್ಯಕ್ತಿ ಪ್ರಯೋಗವನ್ನು ಇಡೀ ಭಾರತಾದ್ಯಂತ 84 ಪ್ರಯೋಗಗಳನ್ನು ಮಾಡಿದ್ದಾನೆ. ಭಾರತೀಯ ರಂಗಭೂಮಿಯ ಇತಿಹಾಸದಲ್ಲಿ ಇಷ್ಟು ಪುಟ್ಟ ಬಾಲಕ ಅತ್ಯಂತ ಸಮರ್ಥ ಅಭಿನಯದಿಂದ ಏಕವ್ಯಕ್ತಿ ರಂಗ ಪ್ರಯೋಗವನ್ನು ಮಾಡಿರುವುದು ಇದೇ ಮೊದಲು. ಈ ಬಾಲಕನ ಅದ್ಭುತ ಪ್ರತಿಭೆಗೆ ಕನ್ನಡ ನಾಡಿನ ಹಿರಿಕಿರಿಯ ರಂಗಕರ್ಮಿಗಳು ಪ್ರೇಕ್ಷಕರ ರಂಗ ಬಂಧುಗಳು ಮೆಚ್ಚುಗೆಯ ಸುರಿಮಳೆಯನ್ನೇಗರದಿದ್ದಾರೆ. ಕರ್ನಾಟಕದ ಎಲ್ಲ ಭಾಗಗಳಲ್ಲೂ *"ಚಿಟ್ಟೆ"* ನಾಟಕ ಪ್ರಯೋಗ ಗೊಂಡಿದೆ ಸಾವಿರಾರು ಜನ ಪ್ರೇಕ್ಷಕರು ಈ ನಾಟಕವನ್ನು ಕಣ್ತಂಬಿಕೊಂಡಿದ್ದಾರೆ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಹಲವಾರು ಲೇಖನಗಳು ಈ ನಾಟಕವನ್ನು ಕುರಿತು ಬಂದಿದೆ.ರಂಗ ನಿರ್ದೇಶಕರಾದ *ಕೃಷ್ಣಮೂರ್ತಿ ಕವತ್ತಾರ* ಅವರು ಮಾಡಿದ್ದು ನಾಟಕ ರಚನೆಯನ್ನು ಖ್ಯಾತ ಲೇಖಕ ಮತ್ತು ರಂಗಕರ್ಮಿ *ಡಾ. ಬೇಲೂರು ರಘುನಂದನ್* ಅವರು ಮಾಡಿದ್ದಾರೆ. ಈ ನಾಟಕದ ರಂಗ ಪ್ರಯೋಗವನ್ನು *ಕಾಜಾಣ ರಂಗತಂಡ* ಪ್ರಸ್ತುತಪಡಿಸಿದೆ. *28/05/2023 ರಂದು ಸಂಜೆ 6 ಗಂಟೆಗೆ ನಮ್ಮ ಮೈಸೂರು ಅಸೋಸಿಯೇಷನ್ ಮುಂಬೈ ನ ಸಭಾಗೃಹದಲ್ಲಿ* ಈ ನಾಟಕ ಪ್ರಯೋಗಗೊಳ್ಳಲಿದೆ.
*ಮಕ್ಕಳು, ರಂಗಾಸಕ್ತರು, ಕಲಾಭಿಮಾನಿಗಳು* ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಕೋರಿಕೆ.
*ಕಾರ್ಯಕ್ರಮದ ನಂತರ ಪ್ರಿತಿಭೋಜನವಿದೆ*
*ಡಾ. ಗಣಪತಿ ಶಂಕರಲಿಂಗ*
*ಗೌ.ಕಾರ್ಯದರ್ಶಿ*
*ಮೈಸೂರು ಅಸೋಸಿಯೇಷನ್, ಮುಂಬೈ*
ನೇಸರು ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆಯಲ್ಲಿ ವಿಜೇತರು
ಮೈಸೂರು ಅಸೋಸಿಯೇಷನ್ ಅಧ್ಯಕ್ಷೆ ಶ್ರೀಮತಿ ಕಮಲಾ ಕಾಂತರಾಜು, ಆಹ್ವಾನಿತ ಶ್ರೀಮತಿ. ಅಹಲ್ಯಾ ಬಲ್ಲಾಳ್ ಜೊತೆಯಲ್ಲಿ ಶ್ರೀಮತಿ. ಶಶಿಕಾಂತ ಜೋಶಿ, ಮತ್ತು ನಾಟಕ ರಚನಾ ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಾಳುಗಳು ಮಾತಿನಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ
ಬೊಂಬಾಯಿನ ಮೈಸೂರು ಅಸೋಸಿಯೇಷನ್ ನ ತಳ-ಮಹಡಿಯ ಹಾಲ್ ನಲ್ಲಿ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮುಂಬಯಿ ಮಹಾನಗರದ ಖ್ಯಾತ ರಂಗ ನಿರ್ದೇಶಕಿ, ರಂಗನಟಿ *ಅಹಲ್ಯಾ ಬಲ್ಲಾಳ್* ಪ್ರಶಸ್ತಿಗಳನ್ನು ವಿತರಿಸಲು ಆಗಮಿಸಿದ್ದರು. ಮೈಸೂರು ಅಸೋಸಿಯೇಷನ್ ನ ಅಧ್ಯಕ್ಷೆ *ಕಮಲಾ ಕೆ.* ರವರು ಶ್ರೀಮತಿ ಅಹಲ್ಯ ಬಲ್ಲಾಳರಿಗೆ ಪುಷ್ಪ ಗುಚ್ಛವನ್ನು ನೀಡಿ ಗೌರವಿಸಿ ಆಹ್ವಾನಿಸಿದರು. ಶ್ರೀ. ನಾರಾಯಣ ನವಿಲೆಕರ್ ಮತ್ತು ಶ್ರೀಮತಿ ಲಕ್ಷ್ಮೀ ಸೀತಾರಾಮ್ ಉಪಸ್ಥಿತರಿದ್ದರು.
ಹೊಳಪಿನ ಕಣ್ಣಿನ ಗೋಕುಲ ಸಹೃದಯ, ತನ್ನ " ಚಿಟ್ಟೆ"ಏಕಪಾತ್ರಾಭಿನಯದ ಯಶಸ್ಸಿನಿಂದ ಸಂಭ್ರಮಿಸುತ್ತಿದ್ದಾನೆ.
ಕಿರಿಯ ಕಲಾವಿದನ ಜೊತೆಯಲ್ಲಿ ಶ್ರೀಮತಿ. ಅಹಲ್ಯ ಬಲ್ಲಾಳ್ ಡಾ. ಜಿ. ವಿ. ಕುಲಕರ್ಣಿ, ಅವರ ಶ್ರೀಮತಿ ಮತ್ತು ಮೊಮ್ಮಗಳು ಕಾರ್ಯಕ್ರಮವನ್ನು ವೀಕ್ಷಿಸಲು ಬಂದಿದ್ದರು. ಪ್ರಶಸ್ತಿವಿಜೇತೆಯ ಪಕ್ಕದಲ್ಲಿ ನಿಂತಿರುವವರು, ಶ್ರೀ. ಮಾರ್ನಾಡ್ ರವರು.
ಬಣ್ಣದ ಚಿಟ್ಟೆಯನ್ನು ಪ್ರತಿನಿಧಿಸುವ ಬಣ್ಣದ ಛತ್ರಿ
-ಮೈಸೂರು ಅಸೋಸಿಯೇಷನ್ ನ ಲಲಿತಕಲಾ ವಿಭಾಗ.
Comments