Shri. Svarna Gauri and Ganesh pooja, Mysore Association, Mumbai !

                         ಮೈಸೂರು ಅಸೋಸಿಯೇಷನ್, ಮುಂಬೈ. 

                        ಶ್ರೀ. ಸ್ವರ್ಣ ಗೌರಿ ಮತ್ತು ಶ್ರೀ ಮಹಾಗಣಪತಿ ಪೂಜಾ ಮಹೋತ್ಸವ. 
                        ಶ್ರೀ. ಶುಭಕೃತ್ ನಾಮ ಸಂವತ್ಸರ, ಶಾಲಿವಾಹನ ಶಕೆ, ೧೯೪೫ (೨೦೨೨)                                                                       
                                                        

೩೦, ಆಗಸ್ಟ್, ೨೦೨೨ ರಂದು ನಮ್ಮ ಅಸೋಸಿಯೇಷನ್ ನ ಸದಸ್ಯೆಯರೆಲ್ಲಾ ಸೇರಿ ಶ್ರೀ. ಸ್ವರ್ಣ ಗೌರಿಯನ್ನು ಪ್ರತಿಷ್ಠಾಪಿಸಿ, ವಿಧಿವತ್ತಾಗಿ ಪೂಜಿಸುವುದರ ಮೂಲಕ ಈ ವರ್ಷದ ಮಹಾಗಣಪತಿಯ ಗಣೇಶ ಪೂಜೆಯ ಶುಭಾರಂಭ ಮಾಡಿದ್ದಾರೆ. 

                                                         ಗಣೇಶ ಮತ್ತು ಗೌರಮ್ಮ !

                                             
                                      ಅಸೋಸಿಯೇಷನ್ ನಲ್ಲಿ ವಿಧಿವತ್ತಾಗಿ ಗೌರಮ್ಮನಿಗೆ ಪ್ರತಿದಿನವೂ ಪೂಜೆ. 
 

ಶ್ರೀಮತಿ ಕಮಲಾ ಕಾಂತ ರಾಜ್ ರವರಿಂದ ಹಿಡಿದು, ಸದಸ್ಯೆಯರೆಲ್ಲಾ ಪೂಜೆಯ ನಂತರ ನಗುಮುಖದಲ್ಲಿ ನಿಂತು ನಮಗೂ ಪೂಜೆಯಲ್ಲಿ ಭಾಗವಹಿಸುವ ಸಂದೇಶವನ್ನು ಕೊಡುತ್ತಿದ್ದಾರೆ. ಅವರೆಲ್ಲರ ಮುಖದಲ್ಲಿ ಭಾವುಕತೆ, ಮತ್ತು  ಧನ್ಯತಾಭಾವ, ಮಿನುಗುತ್ತಿರುವುದನ್ನು ನೋಡಲು ಎಷ್ಟು ಚೆನ್ನಾ ?!


ಗಣಪತಿ ಪೂಜೆನೂ ಮಾಡಿ ಕೂತಿದ್ದಾರೆ ನೋಡಿ ಭೂಪರು !ಎಲ್ಲರೂ ಕಾಣಿಸ್ತಿದ್ದಾರೆ. ಆದ್ರೆ, ಪೂಜೆಗೆ ಕೂತಿದ್ದ ದಂಪತಿಗಳು ಕಾಣಿಸ್ತಿಲ್ವಾಲ್ಲಾ ? ವಿಡಿಯೋದಲ್ಲಿ ಅವರು ಪೂಜೆ ಮಾಡ್ತ್ತಿದ್ದಿದ್ದನ್ನು ನೋಡಿದ್ದೆ.  


ನಿಜವಾಗಿ ಹೇಳಬೇಕೆಂದರೆ ಈ ಮಂಗಳ ಮೂರ್ತಿಗಳ ವಿದಾಯ ಒಂದು ಭಾವುಕ, ಕಣ್ಣಿರುತರಿಸುವ ಪ್ರಸಂಗ. ಆಗಸ್ಟ್ ೩೦ ರಿಂದ ಸೆಪ್ಟೆಂಬರ್ ೪ ವರೆಗೆ ನಮ್ಮೊಡನೆ  ಪ್ರತಿದಿನವೂ ಪೂಜೆ, ಸಂಗೀತ, ನೃತ್ಯಗಳಲ್ಲಿ ಪಾಲ್ಗೊಂಡು ನಮ್ಮೆಲ್ಲರಿಗೂ ಮನರಂಜನೆ ನೆಮ್ಮದಿ ಕೊಡುತ್ತಿದ್ದ ತಾಯಿ-ಮಗ ಮತ್ತೆಬರುವುದು ಮುಂದಿನ ವರುಷವೇ ! ಅಸೋಸಿಯೇಷನ್ ಸದಸ್ಯರೆಲ್ಲ ಭಾಗವಹಿಸಿ ಧನ್ಯರಾಗಿದ್ದಾರೆ. ಈ ಬಾರಿ ಪೂಜೆಗೆ ಕುಳಿತಿರುವ ದಂಪತಿಗಳು : ಶ್ರೀ. ಫಾಲ್ಗುಣ ರುದ್ರಪಟ್ಣ, ಶ್ರೀಮತಿ ದೀಪ್ತಿ ರುದ್ರಪಟ್ಣ, ಮತ್ತು ಅವರ ಮಗ ಚಿ. ಸುವ್ರತ 




https://youtu.be/Zbsq-1K6Mo0 (Link of Chi. Raksha, performs dance)



"ಅವ್ವ ನಿನ್ನ ಮೊಗ ಚೆಂದ" ಎಂಬ  ಭಕ್ತಿ ಗೀತೆಯನ್ನು  ಸಾಮೂಹಿಕವಾಗಿ ಹಾಡಿದಾಗ  ... https://youtu.be/TMhu6kzgitM





 ಕಾರ್ಯಕ್ರಮಗಳ ವಿವರಗಳು ಹೀಗೆ ಕೆಳಗೆ ಕಂಡಂತಿವೆ   :  ಗೌರಿ ಗಣೇಶ ದೇವರುಗಳ ವಿಸರ್ಜನೆಯ ಮೊದಲ ಹಂತ :

ಸದಸ್ಯರೆಲ್ಲಾ ಮೈಸೂರು ಅಸೋಸಿಯೇಷನ್ ನಿಂದ ಸಾಮೂಹಿಕವಾಗಿ ದೇವರ ಜತೆಯಲ್ಲಿ ಭಜನೆ ಗೀತಗಳನ್ನು ಹಾಡುತ್ತಾ, ಮಹೇಶ್ವರಿ ಉದ್ಯಾನದ ವರೆವಿಗೂ ಬಂದು ದೇವರನ್ನು ಕಳಿಸಿಕೊಡುವ ಸಂಪ್ರದಾಯವಿದೆ.  ಇದಾದ ಬಳಿಕ, ದಾದರ್ ಕಡಲ ತೀರಿದವರೆಗೂ ಹೋಗಿ ಮೂರ್ತಿಗಳನ್ನು ನೀರಿನಲ್ಲಿ ವಿಸರ್ಜನಾ ವಿಧಿಯನ್ನು ಮಾಡಿ ಬರಲು ದೇಹಧಾರಢ್ಯ ವಿರುವವರು ವ್ಯಾನ್ ಜೊತೆಯಲ್ಲೇ ಹೋದರು. ಉಳಿದವರು ಅಸೋಸಿಯೇಷನ್ ಗೆ ವಾಪಸ್ ಬಂದರು. ಅಲ್ಲಿ ಪ್ರಸಾದ ವಿನಿಯೋಗದ ಕಾರ್ಯಕ್ರಮ ಎಲ್ಲರಿಗೂ  ಆಯೋಜಿಸಲಾಗಿತ್ತು. 


ಇಲ್ಲಿ ದೇವರುಗಳಿಗೆ ಭಕ್ತಿ ಶ್ರದ್ದೆಗಳಿಂದ  ಮಂಗಳಾರತಿ ಬೆಳಗಿ ಕಳಿಸಿಕೊಡುವ ಸಂಪ್ರದಾಯವನ್ನು ನೆರೆವೇರಿಸಲಾಯಿತು. 


ಮುಂಬಯಿನ ಶಿವಾಜಿ ಪಾರ್ಕ್ ಬಳಿಯಲ್ಲಿರುವ ದಾದರ್ ಕಡಲ ತೀರದನೀರಿನಲ್ಲಿ ಗೌರಿ-ಗಣಪತಿ ವಿಸರ್ಜನೆಗೆ ಅವಕಾಶವನ್ನು ಕಲ್ಪಿಸಲಾಗಿತ್ತು.  

                
ಇಲ್ಲಿಯೂ ಪೂಜೆಯ ನಂತರ, ಗೌರಿ ಗಣಪತಿಯ ಅಂತಿಮ ವಿದಾಯವನ್ನು ಮಾಡಲಾಯಿತು. ಅದಕ್ಕಾಗಿ ಈಜು ವಿದ್ಯೆಯಲ್ಲಿ ಪರಿಣಿತರಾದ ಯುವಕರು ದಿನವಿಡೀ ಇದ್ದು , ಶ್ರದ್ಧಾಳುಗಳಿಗೆ ನೆರವಾಗುತ್ತಾರೆ. 

ಸಮುದ್ರ ತಟದಲ್ಲಿ  :  https://photos.app.goo.gl/qTCFt53gBqZpSvU9A

ಜೈ ಗಣೇಶ್ ಜೈ ಗಣೇಶ್ ಜೈಗಣೇಶ ದೇವಾ ಮಾತಾ ....https://photos.app.goo.gl/tqo9PqZmQkXDCLBB8






Friends meeting after a long time. Atleast during Ganeshotsav time.

Shri. K. Manjunathaiah and Shri. Venkatesh.

                                        
                                            Smt. Kamala kantaraj with youth members.

                      
Dr. B.R.Manjunath with Smt/Shri. Ravi, Dr. Ganapathy shankaralinga, Shri Radhesh and Chi. Saumya.



'ಕನ್ನಡ ನಾಟಕ ಪ್ರಪಿತಾಮಹ, ಕೈಲಾಸಂ' ನೆನೆಪಿನ ಕಾರ್ಯಕ್ರಮವನ್ನು ಅಸೋಸಿಯೇಷನ್ ನಲ್ಲಿ ೨೮, ಆಗಸ್ಟ್, ರವಿವಾರ, ೨೦೨೨ ರ ಸಾಯಂಕಾಲದಂದು ಆಯೋಜಿಸಲಾಗಿತ್ತು. ಆ ದಿನದಂದು ಮುಂಬಯಿ ಕನ್ನಡ ನಾಟಕರಂಗದ ಉತ್ಕೃಷ್ಟ ತಾರೆಯಲ್ಲೊಬ್ಬರಾದ ಶ್ರೀಮತಿ ಅಹಲ್ಯಾ ಬಲ್ಲಾಳ್, "ಅವಳ ಕಾಗದ"ವೆಂಬ ಗುರುವರ್ಯ ಶ್ರೀ. ರವೀಂದ್ರನಾಥ ಠಾಕೂರರ ಬಂಗಾಳಿ ಭಾಷೆಯಲ್ಲಿ ರಚಿಸಿದ ಕನ್ನಡ ರೂಪಾಂತರವನ್ನು ಏಕಪಾತ್ರಾಭಿನಯದಿಂದ ಸುಂದರವಾಗಿ ಪ್ರಸ್ತುತಪಡಿಸಿದರು. 

ನಾಟಕ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ದೀಪ ಪ್ರಜ್ವಲನ  : ಶ್ರೀ ಪಾರ್ಥಸಾರಥಿ, (ಏನ್. ಕೆ. ಐ. ಎಸ್) ಶ್ರೀಮತಿ ಕಮಲಾ ಕಾಂತರಾಜ್, (ಅಧ್ಯಕ್ಷೆ, ಮೈ.ಅಸೋ) ಡಾ. ಭರತ್ ಕುಮಾರ್ ಪೊಲಿಪು (ಕರ್ನಾಟಕ ಸಂಘ, ಮುಂಬೈ) ಅವರುಗಳಿಂದ. 



                
  ಪಾರ್ಥಸಾರಥಿಯವರು ಸುಪ್ರಸಿದ್ಧ ನಾಟಕ ಕರ್ತಾ ಕೈಲಾಸಂ. ಬಗ್ಗೆ ತಮ್ಮ ನೆನಪುಗಳನ್ನು ಸಭಿಕರ ಜತೆ ಹಂಚಿಕೊಳ್ಳುತ್ತಿರುವುದು.  


"ಅವಳ ಕಾಗದ" (ಗುರುದೇವ ರವೀಂದ್ರನಾಥ ಠಾಕೂರ್ ರವರ ಸಣ್ಣಕತೆಗಳ ಆಧಾರದಮೇಲೆ ಅಳವಡಿಸಿದ ಏಕಪತ್ರಾಭಿನಯದ ಕಾರ್ಯಕ್ರಮ. 


ಶ್ರೀಮತಿ ಅಹಲ್ಯ ಬಲ್ಲಾಳ್ ನಾಟಕಕ್ಕೆ ಮೊದಲು ..
 

ಸಂಗೀತ ವಿದುಷಿ, ಶ್ರೀಮತಿ. ಶ್ಯಾಮಲಾ ರಾಧೇಶ್ ಪ್ರಾರ್ಥನಾ ಗೀತೆ, ಹಾಡುತ್ತಿರುವುದು 

                                                             
                                                             ಶ್ರೀಮತಿ/ಶ್ರೀ ದೇಸಾಯಿ ದಂಪತಿಗಳು 

                                                                                                                            
           ಅಸೋಸಿಯೇಷನ್ ನ ಸದಸ್ಯರು  ಶ್ರೀಮತಿ/ದೇಸಾಯಿಯವರ ಜತೆಗೆ  ಕಾರ್ಯಕ್ರಮ ವೀಕ್ಷಿಸುತ್ತಿರುವುದು. 


ಮುಂಬಯಿ ಕನ್ನಡ  ರಂಗಭೂಮಿಯ ನುರಿತ ನಾಟಕ ಕಲಾವಿದರಾದ ಶ್ರೀ. ಅವಿನಾಶ ಕಾಮತ್, ಶ್ರೀ. ಮಾರ್ನಾಡ್, ಶ್ರೀ.  ಗಣಪತಿ ಶಂಕರಲಿಂಗ, ಶ್ರೀ. ಶಶಿಕಾಂತ ದೇಸಾಯಿಯವರು  ಕಾರ್ಯಕ್ರಮವನ್ನು ವೀಕ್ಷಿಸುತ್ತಿರುವುದು. 

            
                 ಶ್ರೀ ರಂಗನಾಥ್, ಅಸೋಸಿಯೇಷನ್ ನ ಒಬ್ಬ ಅತ್ಯಂತ ಹೆಸರಾಂತ ನಾಟಕಕಾರ, ಶ್ರೀ. ಮಂಜು ಜೊತೆಗೆ 

                           
                          ಹಿರಿಯ ಸದಸ್ಯ ಶ್ರೀ. ಅನಂತರಾಮಯ್ಯ ರವಿ, ಮತ್ತು ಅಸೋಸಿಯೇಷನ್ ಸದಸ್ಯರು. 

   
  "ಅವಳ ಕಾಗದ"- ಏಕಾಂಕ ನಾಟಕ. 

                                                              
                                                         ಶ್ರೀಮತಿ/ಶ್ರೀ ವೆಂಕಟೇಶ್ ಮತ್ತು ಸದಸ್ಯೆ. 


ಶ್ರೀಮತಿ ಅಹಲ್ಯ ಬಲ್ಲಾಳರು ಅಭಿನಯಿಸಿದ  ಏಕಪಾತ್ರಾಭಿನಯದ ನಾಟಕದ  ಹಲವು ಭಂಗಿಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿಯುವ ಪ್ರಯತ್ನದಲ್ಲಿ...   











ಶ್ರೀಮತಿ ಕಮಲಾ ಕಾಂತರಾಜ್, (ಮೈ.ಅಸೋ.ಅಧ್ಯಕ್ಷೆ) ಶ್ರೀಮತಿ ಬಲ್ಲಾಳರಿಗೆ ತುಳಸಿಗಿಡವನ್ನು ಬಹುಮಾನವಾಗಿ ನೀಡುತ್ತಿರುವುದು.  


ಶ್ರೀಮತಿ ಕಮಲಾ ಕಾಂತರಾಜ್, (ಮೈ.ಅಸೋ.ಅಧ್ಯಕ್ಷೆ) ಶ್ರೀಮತಿ. ಲಕ್ಷ್ಮೀ ಸೀತಾರಾಮ್, (ಹಿರಿಯ ಅಜೀವ ಸದಸ್ಯೆ) ಶ್ರೀಮತಿ. ಅಹಲ್ಯ ಬಲ್ಲಾಳ್, ಸಂಭ್ರಮಿಸುತ್ತಿರುವುದು.  


                           Link of the youtube :   https://youtu.be/One1CKKT0lM.  
The Wife's Letter (Streer Patra) by Rabindranath Tagore. A discussion in English.

ಮೈಸೂರು ಅಸೋಸಿಯೇಷನ್ ನಲ್ಲಿ ೨೮, ಆಗಸ್ಟ್, ೨೦೨೨ ರಂದು ಏರ್ಪಡಿಸಿದ್ದ ಏಕವ್ಯಕ್ತಿ ಪ್ರದರ್ಶಿತ ನಾಟಕ :

ಗುರುದೇವ ರವೀಂದ್ರನಾಥ ಟ್ಯಾಗೋರ್ ಅವರ ಪ್ರಸಿದ್ಧ ಸಣ್ಣ ಕಥೆಗಳಲ್ಲಿ , 'ಸ್ಟ್ರೀರ್ ಪತ್ರ', (೧೯೧೩ ರಲ್ಲಿ ಬರೆದದ್ದು) ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಎದುರಿಸಬೇಕಾದ ಸಂಕಟ, ಅವಮಾನ ಮತ್ತು ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ. ಅದನ್ನೇ ಈಗ ನಾವು 'ಅವಳ ಕಾಗದ'ವೆಂದು ೨೦೨೨ ರಲ್ಲಿ  ಅನುವಾದಮಾಡಿ ನಾಟಕ ಮಾಡಿನೋಡುತ್ತಿದ್ದೇವೆ.) 

ಮೈಸೂರು ಅಸೋಸಿಯೇಷನ್ ನಲ್ಲಿ 'ಕೈಲಾಸಂ ನೆನಪು' ಎನ್ನುವ ಕಾರ್ಯಕ್ರಮ ಪ್ರತಿವರ್ಷವೂ ಆಚರಿಸಲಾಗುತ್ತದೆ.  ಹಿಂದೆ ಟಿ. ಪಿ. ಕೈಲಾಸಂ ಬೊಂಬಾಯಿಗೆ ಬಂದು ಮೈಸೂರು ಅಸೋಸಿಯೇಷನ್ ನಲ್ಲಿ ವಾರಗಟ್ಟಲೆ ಇರುತ್ತಿದ್ದರು. ಆಗ ಊಟದ ವ್ಯವಸ್ಥೆಯೂ ಅಸೋಸಿಯೇಷನ್ ನಲ್ಲಿತ್ತು. ಭೂಗರ್ಭ ಶಾಸ್ತ್ರದಲ್ಲಿ ಪ್ರಶಿಕ್ಷಣಕ್ಕಾಗಿ ಇಂಗ್ಲೆಂಡ್ ಗೆ ಹೋಗಿ ಡಿಗ್ರಿ ಪಡೆದು ಬಂದರು. ಆಗ ಅವರಿಗೆ ಕೋಲಾರದ ಚಿನ್ನದ ಗಣಿಯಲ್ಲಿ ಇಂಜಿನಿಯರ್ ಹುದ್ದೆಯನ್ನು ಮಹಾರಾಜರು ದಯಪಾಲಿಸಿದರು. ಆ ಕಾಲಘಟ್ಟದಲ್ಲಿ  ಮೈಸೂರಿನ ದಿವಾನರಾಗಿದ್ದ ಶೇಷಾದ್ರಿ ಅಯ್ಯರ್ ಕೈಲಾಸಂರ ಹೆಸರನ್ನು ಮೈಸೂರು ಅರಸರಿಗೆ ಶಿಫಾರಿಸ್ ಮಾಡಿ ಇಂಗ್ಲೆಂಡ್ ಗೆ  ಕಳಿಸಲು ಸಹಾಯಮಾಡಿದರು. ಆದರೆ ಆ ಕೆಲಸವನ್ನು ಮಧ್ಯದಲ್ಲೇ ಬಿಟ್ಟು ಕೈಲಾಸಂ ನಾಟಕ ಬರೆಯುವುದರಲ್ಲಿ ವ್ಯಸ್ಥರಾಗಿರುತ್ತಿದ್ದರು.  ಯಾವ ನೌಕರಿಯನ್ನೂ ಮಾಡುತ್ತಿರಲಿಲ್ಲ.

'ಕೈಲಾಸಂ ಸ್ಮರಣಾದಿನ' ದಂದು ಯಾವಾಗಲೂ ಅವರೇ ರಚಿಸಿದ ಸ್ತ್ರೀ ಶೋಷಿತ ಸಮಾಜದ ಕೊಂಕುಗಳನ್ನು ತೋರಿಸುವ ನಾಟಕಗಳನ್ನು ಆಡಿಸುವ ಪರಿಪಾಠವಿತ್ತು. ಈ ಬಾರಿ ಅದೇ ತತ್ವದ ೯ ದಶಕಗಳ  ಹಿಂದಿನ ನಾಟಕವನ್ನು ಮುಂಬಯಿ ಕನ್ನಡ ರಂಗಭೂಮಿಯ ಹೆಸರಾಂತ ಅಭಿನೇತ್ರಿ,  ಶ್ರೀಮತಿ ಅಹಲ್ಯ ಬಲ್ಲಾಳ್ ರಂಗ ಭೂಮಿಗೆ ತಂದಿದ್ದಾರೆ.  ಆಕೆಯ ಮಾವ, ಶ್ರೀಪತಿ ಬಲ್ಲಾಳ್ ಒಳ್ಳೆಯ ರಂಗ ನಟ, ಚಲನಚಿತ್ರದಲ್ಲೂ ಅಭಿನಯಿಸಿದ್ದಾರೆ. ಅವರ ಅತ್ತೆ ಶ್ರೀಮತಿ. ಕಿಶೋರಿ ಬಲ್ಲಾಳ್, ಸುಪ್ರಸಿದ್ಧ ರಂಗನಟಿ ಮತ್ತು ಹಿಂದಿ ಚಿತ್ರ 'ಮೇರಾ ದೇಸ್' ಎಂಬ ಚಿತ್ರದಲ್ಲಿ ಶಾರುಖ್ ಖಾನನ ತಾಯಿ ಪಾತ್ರಮಾಡಿ ನಮ್ಮನ್ನೆಲ್ಲಾ ರಂಜಿಸಿದ್ದರು. (ಕಾವೇರಿಯಮ್ಮ. ಆಕೆಯ ಮಾವ, ಶ್ರೀ ವ್ಯಾಸರಾಯ ಬಲ್ಲಾಳ್,  'ವಾತ್ಸಲ್ಯ ಪಥ' ಮೊದಲಾದ ಅನೇಕ  ಕಾದಂಬರಿಯನ್ನು ರಚಿಸಿದವರು.

ಇವತ್ತಿನ ನಾಟಕದ  ಅಭಿನೇತ್ರಿ, ಅಹಲ್ಯಾ ಬಲ್ಲಾಳ್  ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಆಕೆಯ ಪತಿ ಸಂತೋಷ್ ಬಲ್ಲಾಳ್ ನಿಧನರಾದರು. ಅತಿ ಚಿಕ್ಕ ವಯಸ್ಸಿನಲ್ಲೇ ವಿಧವೆಯ ಜೀವನದ ಅನುಭವ ಅವರನ್ನು ಒಬ್ಬ ರಂಗನಟಿಯಾಗಿ ಪರಿವರ್ತಿಸಲು ಅನುಕೂಲವಾಗಿರಬಹುದು. ಪತಿಯ ನೆರವಿನಿಂದ ಏನೇನೋ ಸಾಧಿಸಲು, ಗಳಿಸಲು ಅವರು ಕನಸು ಕಂಡಿದ್ದರು. ಇದು ಆಕೆಯ ಒಂದು ಸ್ಥೂಲ ಪರಿಚಯ. 

'ಅವಳ ಕಾಗದ', ನಾಟಕ : (ನಾನು ಅರ್ಥಮಾಡಿಕೊಂಡ ರೀತಿ)

'ಮೃಣಾಲ್'  ಎಂಬ  ಕಲ್ಕತ್ತಾನಗರದ ಹಣವಂತ  ಜಮೀನ್ದಾರನ  ಗೃಹಿಣಿ, ತನ್ನ ಗಂಡನಿಗೆ ಪತ್ರಬರೆಯುತ್ತಿದ್ದಾಳೆ. ಅದರಲ್ಲಿ ಇದುವರೆಗೂ ತಾನು ತನ್ನ ಪತಿಯ ಹತ್ತಿರ ಹೇಳಲಾಗದ, ಮನಸ್ಸಿನಲ್ಲೇ ಅನುಭವಿಸುತ್ತಿದ್ದ ತೊಳಲಾಟಗಳನ್ನು  ತನ್ನ ಪತ್ರದ ಮೂಲಕ  ತಿಳಿಸುತ್ತಾಳೆ. ಈಗ ಅವಳು ತನ್ನ ಮನೆಯಿಂದ ದೂರಬಂದುಬಿಟ್ಟಿದ್ದಾಳೆ. ಪುರಿನಗರಿಯ ಸಮುದ್ರತೀರದಲ್ಲಿ ಮರಳಿನಮೇಲೆ ಅವಳು ಕುಳಿತಿದ್ದಾಳೆ.  ನಮ್ಮ ಸಮಾಜದಲ್ಲಿ ಪತ್ನಿಯಾದವಳು ಪತಿಯ ನೆರಳಿನಂತೆ ಆತನ ಬೇಕು-ಬೇಡಗಳು, ಮತ್ತು ಮನೆಯ ಎಲ್ಲರ ಯೋಗಕ್ಷೇಮದ ಬಗ್ಗೆ ಗಮನವಿಡಬೇಕು. ಆಕೆಗೆ ಯಾವುದೇ ಸಮಯದಲ್ಲಿ ಸ್ವತಂತ್ರವಾಗಿ ನಿರ್ಧಾರಕೈಗೊಳ್ಳುವ ಅಧಿಕಾರವಿಲ್ಲ. ಮನೆಯ ಹಿರಿಯರನ್ನು ಒಲಿಸುವುದಲ್ಲದೆ ಪತಿಯ ಆಜ್ಞಾಕಾರಿಯಾಗಿ ವರ್ತಿಸಬೇಕಷ್ಟೆ. ಚಕಾರವೆತ್ತದೆ ಹೇಳಿದಷ್ಟು ಕೆಲಸಮಾಡಿಕೊಂಡು ಮನೆಯಲ್ಲಿ ಇರುವ ಜೀತದಾಳಿನ ತರಹದ ವ್ಯಕ್ತಿಯಾಗಿ; ಆಕೆಯ ಸ್ವಂತ ಭಾವನೆಗಳಿಗೆ ಎಲ್ಲೂ ಜಾಗವಿಲ್ಲ. 'ಇಂತಹ ಸ್ತ್ರೀಯನ್ನು ಒಳ್ಳೆಯ ಹೆಂಡತಿ' ಎಂದು ಆಗಿನಕಾಲದ ಜನ ನಿರ್ಣಯಿಸುತ್ತಿದ್ದದು.  ಗಂಡನ ಮಾತಿಗೆ ಎದುರು ಜವಾಬುಕೊಡುವ, ಇಲ್ಲವೇ ಆತನ ಆಶಯಗಳಿಗೆ  ಸ್ಪಂದಿಸದ ಹೆಂಡತಿ ಒಬ್ಬ ಕೆಟ್ಟ ಹೆಂಡತಿಯ ಉದಾಹರಣೆಯಾಗಿರುತ್ತಿತ್ತು. ಇದು ೧೯ ನೆಯ ಶತಮಾನದ ಮಧ್ಯಮ ವರ್ಗದ ಬಂಗಾಳಿ ಮನೆತನದ  ಸೊಸೆಯಾಗಿ ಬಂದವಳ ಪರಿಸ್ಥಿತಿ. ಇಲ್ಲಿ ಮೃಣಾಲ್  ಎಂದು ಕರೆಯಲಾಗುವ ಸ್ತ್ರೀಯ ವ್ಯಕ್ತಿತ್ವ, ಕಮಲದ   ಹೂವನ್ನು ಹೊತ್ತ ಚಿಕ್ಕ ಕಾಂಡದ ತರಹ. ಹೆಸರಿಗೆ ತಕ್ಕಂತೆ ಅದು ಸುಂದರವಾದ ಕಮಲದ ಹೂವನ್ನು ಎತ್ತಿಹಿಡಿದು ತೋರಿಸಲು ನೆರವಾಗುತ್ತದೆ; ಅದರಂತೆ ಎಲ್ಲರಿಗೂ ನೆರವಾಗುವ ಆಶಯಗಳನ್ನೂ ಆಕೆ ಹೊಂದಿದ್ದಳು. ಮಾನವೀಯತೆಯ ದೃಷ್ಟಿಯಿಂದ ಮೃಣಾಲ್, ಒಬ್ಬ ಮದುವೆಯಾದ 'ಬಿಂದು' ಎನ್ನುವ ಹೆಸರಿನ  ಹುಡುಗಿಗೆ ತನ್ನ ಮನೆಯಲ್ಲಿ ಇರಲು ಆಶ್ರಯಕೊಡುತ್ತಾಳೆ. ಆಕೆಯೇನು ಯಾರೋ ಹೊಸಬಳಲ್ಲ. 'ಬಿಂದು' ತನ್ನ ಅತ್ತಿಗೆಯ ಸ್ವಂತ ತಂಗಿ. ಆಕೆಯನ್ನು ಅನಾಥೆ ಎಂದು  ಕರೆಯಬಹುದು. ತಂದೆ-ತಾಯಿ ಇರದ ಅಷ್ಟೇನೂ ರೂಪವತಿ ಎಂದು ಹೇಳಲಾಗದ ಮದುವೆಗೆ ವಯಸ್ಸುಮೀರಿದ ಬಿಂದು ಯಾರಿಗೂ ಬೇಡವಾದ ಹೆಣ್ಣು. ಅಂದರೆ ಆಕೆಗೆ ತನ್ನ ಮನೆಯಲ್ಲಿ ಆಶ್ರಯ ಕೊಡುವ ತೀರ್ಮಾನ, ಮನೆಯಲ್ಲಿ ತನ್ನ ಪತಿಯನ್ನಾಗಲೀ ಹಿರಿಯರ ಒಪ್ಪಿಗೆ ಪಡೆಯದೇ ಮಾಡಿದ ಆಕೆಯದೇ ನಿರ್ಧಾರವಾಗಿರುತ್ತದೆ.  ಹೇಗೋ ಆಕೆಗೆ ಮದುವೆಯಾಗುತ್ತದೆ. ಅದೂ ಒಬ್ಬ ಹೆಂಡಗುಡುಕ ವ್ಯಕ್ತಿಯ ಜತೆ. ಕ್ರೂರಿಯಾದ ಗಂಡನ ಕೆಟ್ಟ ಆಚರಣೆಗಳನ್ನು  ಸಹಿಸಲಾರದೆ, ಆಕೆ ತನ್ನ ಮನೆಯಿಂದ ಓಡಿಬಂದು ಮೃಣಾಲ್ ಸಹಾಯವನ್ನು ಕೋರುತ್ತಾಳೆ. ಬಿಂದುವಿನ ಈ ಹೀನ ಅವಸ್ಥೆಯನ್ನು ನೋಡಲಾರದೆ ದುಃಖಿತಳಾದ ಮೃಣಾಲ್ ಆಶ್ರಕೊಡುವುದಾದರೂ ಹೇಗೆ ? ಮನೆಯಸದಸ್ಯರು  ಆಕೆಯನ್ನು ಇಟ್ಟುಕೊಳ್ಳಲು ಸುತರಾಂ ನಿರಾಕರಿಸುತ್ತಿದ್ದಾರೆ. ಆಗ ಮೃಣಾಲ್ ಗೆ ಗಮನಕ್ಕೆ ಬಂದದ್ದು ಅವರ ಮನೆಯ ಹಸುಗಳ ಕೊಟ್ಟಿಗೆಯಲ್ಲಿ  ಹೇಗೋ ಇದ್ದು ಕಾಲ ನೂಕಲು ಅನುವುಮಾಡಿಕೊಡುತ್ತಾಳೆ. ಈ ಮಧ್ಯೆ ಇಂತಹ ಸಂಘರ್ಷಮಯ ಜೀವನವನ್ನು ಎದುರಿಸಲಾರದೆ ಬಿಂದು ಅಲ್ಲಿಂದ ಓಡಿಹೋಗಿ  ಒಂದು ದಿನ 'ಆತ್ಮ ಹತ್ಯೆ' ಮಾಡಿಕೊಳ್ಳುತ್ತಾಳೆ. ಇವೆಲ್ಲಾ ಅಮಾನವೀಯ ಬೆಳವಣಿಗೆಗಳಿಂದ ಕರಗಿ ನೊಂದ ಮೃಣಾಲ್ ಬಹಳ ವ್ಯಥೆ ಪಡುತ್ತಾಳೆ. ತನ್ನ ಸಂಕಟವನ್ನು ಹೇಳಿಕೊಳ್ಳುವುದು ಯಾರ ಬಳಿ ? ಮದುವೆಯಾದ ಗಂಡ ತನ್ನ ಯಾವುದೇ ಅಭಿವ್ಯಕ್ತಿಯನ್ನು ಕೇಳಲು ತಯಾರಿಲ್ಲ. ಇನ್ನು ಮನೆಯವರೋ ಪ್ರತಿಬಾರಿಯೂ ಅವಳ ಮೇಲೆ ಸಿಡಿದು ಬೀಳುತ್ತಾರೆ. ಕೊನೆಗೆ ದಾರಿಕಾಣದೆ, ಕಲ್ಕತ್ತಾದಿಂದ ಪುರಿ ನಗರಕ್ಕೆ ಜಗನ್ನಾಥ ಸ್ವಾಮಿಯ  ಚರಣದಡಿಯಲ್ಲಿ  ತನ್ನ ಮುಂದಿನ ಜೀವನವನ್ನು ಕಳೆಯಲು  ಹೊರಟು ಹೋಗುತ್ತಾಳೆ. (ಓಡಿಹೋಗುತ್ತಾಳೆ)

ಪುರಿನಗರಿಯ ಸಮುದ್ರತೀರದಲ್ಲಿ ಕುಳಿತು, ಮೃಣಾಲ್,  ತನ್ನ ಪತಿಗೆ ಒಂದು ಪತ್ರ ಬರೆಯುತ್ತಾಳೆ. ಬಾಯಿನಿಂದ ಹೇಳಲಾಗದ, ವಿವರಿಸಲಾಗದ ತನ್ನ ಜೀವನದ ವಿಷಮ ಪರಿಸ್ಥಿತಿಗಳನ್ನು ಕಾಗದದ ಮೇಲೆ  ಬರೆದಿಡುವ ಪ್ರಯತ್ನ ಮಾಡುತ್ತಾಳೆ. "ಮದುವೆಯಾಗಿ ೧೫ ವರ್ಷಗಳಾದರೂ ನನ್ನ ಬಗ್ಗೆ ನಿಮಗಾಗಲೀ ನಿಮ್ಮ ಮನೆಯವರಿಗಾಗಲೀ  ಏನೂ ತಿಳಿಯದು. ನಿಮ್ಮ ಅತ್ತಿಗೆಗಿಂತ ನಾನು ನೋಡಲು ಲಕ್ಷಣವಾಗಿದ್ದೇನೆಂದು ನಿಮ್ಮ ಮನೆಯವರು ನನ್ನನ್ನು ನಿಮಗೆ ಚುನಾಯಿಸಿದರು. ನನ್ನ ತಂದೆ ತಾಯಿಗಳು ಸ್ಥತಿವಂತರಲ್ಲ.  ನಾನು ಓದಬಲ್ಲೆ, ಬರೆಯಬಲ್ಲೆ. ಅವಕಾಶಸಿಕ್ಕರೆ ನಿಮ್ಮ ಖಾಸಗಿ ಕೆಲಸಗಳಲ್ಲೂ ನನ್ನ ಕಾರ್ಯಕ್ಷಮತೆಯ ಆಧಾರದಿಂದ  ಸಹಾಯಮಾಡಬಲ್ಲೆ. ಬಿಂದು ಬಗ್ಗೆ ನಿಮಗೆ ಈ ಪತ್ರದಲ್ಲಿ ತಿಳಿಸಿದಮೇಲಾದರೂ ಅವಳ ಅಸಹಾಯಕತೆಗೆ ಮರುಗುವೆರೆಂದು ನಾನು ನಂಬುವವಳಲ್ಲ. ಏಕೆಂದರೆ ನೀವು ಸ್ವಲ್ಪವಾದರೂ ಬದಲಾವಣೆಗಳಿಗೆ ಮತ್ತು ನೈಜತೆಗೆ ನಿಮ್ಮನ್ನು ಒಳಪಡಿಸಿಕೊಳ್ಳುವುದೇ ಇಲ್ಲ. ಬಿಂದು ನಿಮ್ಮ ಅತ್ತಿಗೆಯ ತಂಗಿಯೆಂದು ತಿಳಿದಮೇಲೂ ಆಕೆಯ  ಜೀವನದಲ್ಲಾದ ಕ್ರೂರವಾದ  ಬದಲಾವನೆಗಳ್ಯಾವುವೂ ನಿಮ್ಮ ಮೇಲೆ ಪರಿಣಾಮ ಬೀರಲಿಲ್ಲ. ಅಥವಾ ಆದರೆ ಬಗ್ಗೆ ಕನಿಕರಿಸಿ ತಲೆಕೆಡಸಿಕೊಳ್ಳುವಷ್ಟೂ  ನಿಮಗೆ ವ್ಯವಧಾನವಿಲ್ಲ. ಇಂತಹ ಸಂದಿಘ್ದ ಪರಿಸ್ಥಿತಿಗಳನ್ನು ಎದುರಿಸಿದ ನನಗೆ ಇಂದು ನನ್ನ ಜೀವನದ ಬಗ್ಗೆ ಮರುಕ ಇಲ್ಲವೇ  ಅಳು ಸಹಿತಾ ಬರುವುದಿಲ್ಲ. ನಾನು ಇಲ್ಲಿ ಕಡಲಿನ ಬಳಿ ವೇಗವಾಗಿ ಬೀಸುತ್ತಿರುವ ಮಾರುತದಲ್ಲಿ  ಸ್ವಚ್ಛಂದವಾಗಿ ಉಸಿರಾಡುತ್ತಿದ್ದೇನೆ. ಇಲ್ಲಿ ನನಗೆ ಯಾವ  ಆಮಿಷಗಳೂ ಇಲ್ಲ." 

ಕಮಲದಹೂವನ್ನು ಎಲ್ಲರಿಗೂ  ಕಾಣಿಸುವಂತೆ ಎತ್ತಿ ಹಿಡಿಯುವ  ಚಿಕ್ಕ ಕಾಂಡದ ತರಹದ ದೊಡ್ಡ ಗುಣ, ಮೃಣಾಲ್ ದ್ದು.    ಬಹುಶಃ ಅದೇ ಮೃಣಾಲ್ ಗಿರುವ ಜೀವನದ ಸಾರ್ಥಕ್ಯತೆ  ! ಸ್ತ್ರೀ ಸ್ವಾತಂತ್ರ್ಯವಾದ ಸಮಾಜದಲ್ಲಿ  ಮುಖ್ಯ. ಅದು ಒಂದು ಕುಟುಂಬದ ನೆಮ್ಮದಿಗೆ  ಬಹಳ ಮಹತ್ವದ ಪಾತ್ರ ವಹಿಸುತ್ತದೆ.  






Comments

In a time slot of 45 + minutes the protagonist, Smt. Ahalya ballal, captured the minds & hearts of viewers, in the drama written by Shri. Ravindranatha Tagore, written around 1913. The kannada version of the said drama, played was "Avala kaagada"

Popular posts from this blog

ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ' !

Mysore association, Mumbai, Swarna Gauri & Ganesh pujotsav (2023) !

Shri Subraya chokkadi, spoke at the kannada division of Mumbai university Kalina campus, Mumbai !